ಶಿಕ್ಷಕರನ್ನು ಬಿಇಒ ಕಚೇರಿ ,ಡಿಡಿಪಿಐ ಕಚೇರಿ,ಇಲಾಖೆಯ ಕಚೇರಿಗಳಲ್ಲಿ ಗೌರವದಿಂದ ನಡೆಸಿ ಕೊಳ್ಳಿ ಸದನದಲ್ಲಿ ಮೊಳಗಿತು ಶಿಕ್ಷಕರ ಪರ ಧ್ವನಿ

WhatsApp Group Join Now
Telegram Group Join Now

ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಶಿಕ್ಷಣ ಸಚಿವರಿಗೆ ಮನವಿ.

IMG 20211224 WA0001 min

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯೂ ಸೇರಿದಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಛೇರಿಗಳಲ್ಲಿ ಕೂಡ ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತಿಲ್ಲ‌ ಅನ್ನುವ ಆರೋಪಗಳು ಕೇಳಿ ಬರುತ್ತಿವೆ. ಶಿಕ್ಷಣಾಧಿಕಾರಿಗಳ ಕಛೇರಿಗೆ ಶಿಕ್ಷಕರು ಹೋದಾಗ ಕುರ್ಚಿ ಹಾಕಿ ಕುಳ್ಳಿರಿಸಿ ಮಾತನಾಡಿಸುವ ಸೌಜನ್ಯವೂ ಇರುವುದಿಲ್ಲ. ಅಪರಿಚಿತರಂತೆ ಅಥವಾ ಭಯದಿಂದಲೇ ವ್ಯವಹರಿಸುವ ದಯನೀಯ ಸ್ಥಿತಿ ಶಿಕ್ಷಕರದ್ದಾಗಿದೆ. ಕಛೇರಿಗಳಲ್ಲಿರುವ ಇತರೇ ಸಿಬ್ಬಂದಿಗಳು ಕೂಡ ಶಿಕ್ಷಕರ ಜೊತೆ ಗೌರವದಿಂದ ವರ್ತಿಸುತ್ತಿಲ್ಲ. ಕ್ಲರ್ಕ್, ಅಟೆಂಡರ್ ಅಥವಾ ಡಿ ದರ್ಜೆಯ ಸಿಬ್ಬಂದಿಗಳ ಎದುರು ಕೂಡ ಶಿಕ್ಷಕರು ನಿಂತುಕೊಂಡೇ ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೇ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿರುವ ಶೌಚಾಲಯದಲ್ಲಿ ಸಿಬ್ಬಂದಿಗಳಿಗೆ ಮಾತ್ರ ಅನ್ನುವ ನಾಮಫಲಕ ಅಳವಡಿಸಿರುತ್ತಾರೆ. ಹಾಗಾದರೆ ಕಛೇರಿ ಕೆಲಸಕ್ಕೆ ಬರುವ ಮಹಿಳಾ ಶಿಕ್ಷಕರು ಯಾವ ಶೌಚಾಲಯವನ್ನು ಬಳಸಬೇಕು? ಶಿಕ್ಷಕರಿಗೆ ಸಂಬಂಧಿಸಿದ ಅರ್ಜಿ ದಾಖಲೆಗಳನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡದೆ ಹಲವಾರು ದಿನಗಳ ಕಾಲ ತರಗತಿಯ ಅವಧಿಯಲ್ಲೇ ಕಛೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಇದಕ್ಕಾಗಿ ಆನ್ಲೈನ್ ಮೂಲಕವೇ ಕಛೇರಿ ವ್ಯವಹಾರ ಮಾಡುವ ವ್ಯವಸ್ಥೆ ಮಾಡಿಕೊಡಬೇಕು.

IMG 20211225 WA0002

ಇಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಬೇಡಿಕೆಗಳನ್ನು ಮುಂದಿರಿಸಿಕೊಂಡು ವಿಧಾನ ಪರಿಷತ್ ಸದಸ್ಯರಾದ ಡಾ. ತಳವಾರ ಸಾಬಣ್ಣ ಅವರು ಮಾನ್ಯ ಸಭಾಪತಿಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿರುತ್ತಾರೆ

IMG 20211223 WA0005 min
WhatsApp Group Join Now
Telegram Group Join Now
Sharing Is Caring:

Leave a Comment