ಸೆಪ್ಟೆಂಬರ್ ಮೂರರಿಂದ 21 ದಿನಗಳ ಕಾಲ ” ಓದುವ ಚಟುವಟಿಕೆಗಳ ಅಭಿಯಾನ” ಕಾರ್ಯಕ್ರಮ ನಡೆಯುತ್ತಿದ್ದು, ಮೊದಲ ದಿನವಾದ ಸೆಪ್ಟೆಂಬರ್ 3 ಮಂಗಳವಾರದಂದು “ರೀಡ್-ಎ-ಥಾನ್ ” ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ.ಬಿ. ಕಾವೇರಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನನ್ನ ಶಾಲಾ ಗ್ರಂಥಾಲಯ ಶೀರ್ಷಿಕೆಯಡಿಯಲ್ಲಿ ನಡೆಯುವ “ರೀಡ್-ಎ-ಥಾನ್” ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ರಂದು ರಾಜ್ಯಾದ್ಯಂತ ಪೂರ್ವಾಹ್ನ 11.00 ಗಂಟೆಯಿಂದ 11.30ರ ನಡುವೆ 30 ನಿಮಿಷಗಳ ಕಾಲ ತಮಗೆ ಇಷ್ಟವಾದ ಪುಸ್ತಕ/ಲೇಖನ/ ಪಠ್ಯವನ್ನು ಓದುವಂತೆ ತಿಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಮುಖ್ಯಗುರುಗಳು, ಬಿ.ಇ.ಒಗಳು ಕಡ್ಡಾಯವಾಗಿ ಭಾಗವಹಿಸುವಂತೆ ಕೋರಿದೆ.
21 ದಿನಗಳ ಚಟುವಟಿಕೆಗಳನ್ನು ಈ ಕೆಳಗಿನಂತೆ ನಡೆಸುವುದು
ವಾರ 1
ನನ್ನ ಶಾಲಾ ಗ್ರಂಥಾಲಯ
ಸೆಪ್ಟೆಂಬರ್ 3 : ರೀಡ್-ಎ-ಥಾನ್
ಸೆಪ್ಟೆಂಬರ್ 4 : ಗ್ರಂಥಾಲಯ/ಓದುವ ಮೂಲೆಯನ್ನು ಪುನರ್ ಸ್ಥಾಪಿಸಿ
ಸೆಪ್ಟೆಂಬರ್ 5 : ಕಥೆ ಗಟ್ಟಿಯಾಗಿ ಓದುವುದು
ಸೆಪ್ಟೆಂಬರ್ 6 : ಕಾಮಿಕ್ ಕಥೆಗಳನ್ನು ಓದುವುದು
ಸೆಪ್ಟೆಂಬರ್ 7 : ರಜಾದಿನ- ಗಣೇಶ ಚತುರ್ಥಿ ( QR ಕೋಡ್ ಬಳಸಿ ಹಬ್ಬದ ಬಗ್ಗೆ ಓದುವುದು)
ಸೆಪ್ಟೆಂಬರ್ 8 : ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ
ವಾರ 2
ನನ್ನ ಸಮುದಾಯ
ಸೆಪ್ಟೆಂಬರ್ 9 : ಅಜ್ಜಿ ತಾತನಿಗೋಸ್ಕರ ಓದುವುದು
ಸೆಪ್ಟೆಂಬರ್ 10 : ಮನೆಯಲ್ಲಿ ಓದುವ ಮೂಲೆ ಮಾಡುವುದು
ಸೆಪ್ಟೆಂಬರ್ 11 : ಪುಸ್ತಕ ದೇಣಿಗೆ ದಿನ
ಸೆಪ್ಟೆಂಬರ್ 12 : ಪೋಷಕರಿಂದ ಕಥೆ ಹೇಳುವುದು
ಸೆಪ್ಟೆಂಬರ್ 13 : ಜಾಥಾ
ಸೆಪ್ಟೆಂಬರ್ 14 : ಪುಸ್ತಕ ಸ್ನೇಹಮಯಿ ಕಾರ್ಯಕ್ರಮ
ಸೆಪ್ಟೆಂಬರ್ 15 : ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ
ವಾರ : 3
ನನ್ನ ಶಾಲಾ ಹಬ್ಬ
ಸೆಪ್ಟೆಂಬರ್ 16 : ರಜಾದಿನ ಈದ್ ಮಿಲಾದ್ ( QR code ಬಳಸಿ ಹಬ್ಬದ ಬಗ್ಗೆ ಓದುವುದು)
ಸೆಪ್ಟೆಂಬರ್ 17 : ಓದುವುದನ್ನು ಅಭಿವ್ಯಕ್ತಿ ಪಡಿಸುವುದು/ಅಭಿನಯಿಸುವುದು
ಸೆಪ್ಟೆಂಬರ್ 18 : ಅರ್ಥಗ್ರಹಿಕೆ / ಚಿತ್ರಕಲೆ
ಸೆಪ್ಟೆಂಬರ್ 26 : ರಸಪ್ರಶ್ನೆ
ಸೆಪ್ಟೆಂಬರ್ 27 : ಮಕ್ಕಳು ಸ್ವಂತ ಕಥೆ ರಚಿಸುವುದು
ಸೆಪ್ಟೆಂಬರ್ 28 : ಪದ ಕಟ್ಟುವುದು
ಸೆಪ್ಟೆಂಬರ್ 29 : ಪಾತ್ರದ ಅನುಕರಣೆ
ಸೆಪ್ಟೆಂಬರ್ 30 : ಮಕ್ಕಳು ಓದಿದ ಕಥೆಯನ್ನು ಅಭಿನಯಿಸುವುದು.
ಕಾರ್ಯಕ್ರಮದ ವಿವರ