ಪ್ರಾಥಮಿಕ ಶಾಲಾ ಶಿಕ್ಷಕರ ವಿದ್ಯಾರ್ಹತೆ ವಿವರಗಳನ್ನುEEDS ನಲ್ಲಿ ಇಂದೀಕರಿಸುವ ಬಗ್ಗೆ ಮಾಹಿತಿ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಗಳ ಕುರಿತು ಪರಿಶೀಲನೆ ವರದಿ ನೀಡಲು ದಿನಾಂಕ 23.09.2024ರ ಆದೇಶದಲ್ಲಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ದಿನಾಂಕ 16.10.2024ರಂದು ಸಮಿತಿಯ ಅಧ್ಯಕ್ಷರಾದ ಮಾನ್ಯ ಆಯುಕ್ತರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೇಡಿಕೆಗಳ ಕುರಿತು ಸಮಿತಿ ಸದಸ್ಯರೊಂದಿಗೆ ಚರ್ಚಿಸಿರುತ್ತಾರೆ. ಸದರಿ ಸಂದರ್ಭದಲ್ಲಿ 2017ಕ್ಕಿಂತ ಹಿಂದೆ ನೇಮಕವಾದ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವಿದ್ಯಾರ್ಹತೆ ಮಾಹಿತಿಗಳನ್ನು ಮತ್ತು ಸಂಬಂಧಿತ ಅಂಕಿ ಅಂಶಗಳನ್ನು ಮುಂದಿನ ಸಭೆಯಲ್ಲಿ ಚರ್ಚೆಗೆ ಪ್ರಸ್ತುತ ಪಡಿಸಲು ಸೂಚನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವಿದ್ಯಾರ್ಹತೆ ಕುರಿತಾದ ಪೂರ್ಣ ಮಾಹಿತಿಯನ್ನು ಇಂದೀಕರಿಸಲು ಸಂಬಂಧಿಸಿದ ಡಿಡಿಓಗಳಿಗೆ ಉಲ್ಲೇಖ -3ರಲ್ಲಿ ಸೂಚಿಸಲಾಗಿತ್ತು ಆದರೆ ಇದುವರೆಗೆ ಯಾವುದೇ ಮಾಹಿತಿ ಸ್ವೀಕೃತಿ ಆಗಿರುವುದಿಲ್ಲ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಪದವಿ ವಿದ್ಯಾರ್ಥಿ ಹೊಂದಿದ್ದಲ್ಲಿ ಆ ಬಗ್ಗೆ ಪೂರ್ಣ ವಿವರಗಳನ್ನು ಅಂದರೆ ಯಾವ ಪದವಿ, ಪದವಿಯ ಅವಧಿ, ಪದವಿ ಪಡೆದ ವರ್ಷ, ಯಾವ ವಿಶ್ವವಿದ್ಯಾಲಯದಿಂದ ನಡೆದಿದೆ, ಅಭ್ಯಾಸಿಸಿರುವ ವಿಷಯದ ಮಾಹಿತಿ, ಇತ್ಯಾದಿ ಸಂಪೂರ್ಣ ಮಾಹಿತಿಗಳನ್ನು ಇಂದೀಕರಿಸತಕ್ಕದ್ದು ಹಾಗೆ ಸದರಿ ಪದವಿಯ ಕುರಿತಾದ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಇದಕ್ಕಾಗಿ ದಿನಾಂಕ 14.11.2024ರ ವರೆಗೆ ಅವಧಿಯನ್ನು ಅಂತಿಮವಾಗಿ ನಿಗದಿಪಡಿಸಲಾಗಿದೆ. ಆಯಾ ಜಿಲ್ಲಾ ಉಪನಿರ್ದೇಶಕರು ಮೇಲಿನಂತೆ ವಿವರಗಳನ್ನು ಅತಿ ತುರ್ತಾಗಿ ಇಇಡಿಎಸ್ ನಲ್ಲಿ ಎಲ್ಲಾ ಶಿಕ್ಷಕರ ಮಾಹಿತಿಯನ್ನು ಡಿಡಿಓ ರವರು ಇಂದೀಕರಿಸಿರುವ ಬಗ್ಗೆ ಮೇಲುಸ್ತುವಾರಿವಹಿಸಲು ಸೂಚಿಸಿದೆ. ದಿನಾಂಕ 14.11.2024ರ ಒಳಗಾಗಿ ಉಪ ನಿರ್ದೇಶಕರುಗಳು ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಿಕ್ಷಕರ ವಿದ್ಯಾರ್ಥಿಗಳನ್ನು ವಿವರಗಳನ್ನು ಇಂದೀಕರಿಸಿರುವ ಬಗ್ಗೆ ವ್ಯಾಪ್ತಿಯ ಬಿಇಓ ಕಚೇರಿಗಳಿಂದ ವರದಿ ಮಾಹಿತಿಯನ್ನು ಪಡೆದು ದೃಢೀಕರಣವನ್ನು ಒದಗಿಸುವ ಜೊತೆಗೆ ಕೆಳಗಿನ ಮಾಹಿತಿಯನ್ನು ಸಹ ದೃಢೀಕರಿಸಿ ಸಲ್ಲಿಸತಕ್ಕದ್ದು. ಒಂದು ವೇಳೆ ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ಸಲ್ಲಿಸದಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ಉಪ ನಿರ್ದೇಶಕರುಗಳೇ ನೇರ ಜವಾಬ್ದಾರರೆಂದು ಸಹ ಸ್ಪಷ್ಟಪಡಿಸಿದೆ. ದಿನಾಂಕ 14.11.2024ರ ನಂತರ ತಂತ್ರಾಂಶದಲ್ಲಿ ಮಾಹಿತಿಯನ್ನು ಇಂದೀಕರಿಸಲು ಅವಕಾಶ ಇರುವುದಿಲ್ಲ.

ಸಲ್ಲಿಸಬೇಕಾದ ಮಾಹಿತಿ:-

  • ಜಿಲ್ಲಾ ವ್ಯಾಪ್ತಿಯ ಒಟ್ಟಾರೆ ಇರುವ ಜಿಪಿಟಿ ಹುದ್ದೆಗಳ ಸಂಖ್ಯೆ.
  • ವಿಷಯವಾರು ಜಿಲ್ಲೆಯಲ್ಲಿ ಒಟ್ಟಾರೆ ಜಿಪಿಟಿ ಖಾಲಿ ಹುದ್ದೆಗಳ ಸಂಖ್ಯೆ.
    *ವಿಷಯವಾರು ಪಿಎಸ್‌ಟಿ ವೃಂದದಿಂದ ಜಿಪಿಟಿ ವೃಂದಕ್ಕೆ ಬಡ್ತಿ ಕೋಟದಲ್ಲಿರುವ ವಿಷಯವಾರು ಖಾಲಿ ಹುದ್ದೆಗಳ ಮಾಹಿತಿ/ ಅಂಕಿ ಅಂಶ.
  • ಹಾಗೆಯೇ ಪ್ರಸ್ತುತ ಪದವೀಧರ ಶಿಕ್ಷಕರ ನೇಮಕಾತಿಗೆ ಇರುವ ವಿಷಯವಾರು ಖಾಲಿ ಹುದ್ದೆಗಳ ಮಾಹಿತಿ .
  • ಪಿಎಸ್ ಟಿ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡಲು ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿ/ಸಂಖ್ಯೆ ವಿಷಯವಾರು.
    *ವ್ಯಾಪ್ತಿಯಲ್ಲಿನ ಸೇವಾ ನಿರತ ಶಿಕ್ಷಕರ ಪೈಕಿ ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕರಲ್ಲಿ ಮುಂದಿನ ವರ್ಷಗಳಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಅಂಕಿ ಅಂಶ.
1001012131
WhatsApp Group Join Now
Telegram Group Join Now
Sharing Is Caring:

Leave a Comment