ಪ್ರತಿಭಾ ಕಾರಂಜಿ/ಕಲೋತ್ಸವ 2022-23 ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರತಿಭಾ ಕಾರಂಜಿ Revised rules

ಪ್ರತಿಭಾ ಕಾರಂಜಿ ಪ್ರಾಥಮಿಕ ಶಾಲೆ ಕ್ಲಸ್ಟರ್ ಹಂತಕ್ಕೆ ಬಳಸಬಹುದಾದ ನಮೂನೆಗಳು

ಪ್ರತಿಭಾ ಕಾರಂಜಿ ಪ್ರೌಢ ಶಾಲೆ ಕ್ಲಸ್ಟರ್ ಹಂತಕ್ಕೆ ಬಳಸಬಹುದಾದ ನಮೂನೆಗಳು

WhatsApp Group Join Now
Telegram Group Join Now

ಪ್ರತಿಭಾ ಕಾರಂಜಿ /ಕಲೋತ್ಸವ 2022-23.

ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು 2002 ನೇ ಸಾಲಿನಿಂದ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ರಮವು
ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ,
ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ.

ಉಲ್ಲೇಖಿತ ಆದೇಶ/ಪತ್ರಗಳಂತೆ 2022-23 ನೇ ಸಾಲಿನಲ್ಲಿ ರಾಜ್ಯ ವಲಯದ ಮುಂದುವರೆದ
ಯೋಜನಾ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಮಕ್ಕಳಿಗೆ
(1 ರಿಂದ 10 ನೇ ತರಗತಿ) ಏಕರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಸರ್ಧೆಗಳು ಮತ್ತು 08 ರಿಂದ 12 ನೇ ತರಗತಿಯ
ವಿದ್ಯಾರ್ಥಿಗಳಿಗೆ, ಕಲೋತ್ಸವ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಸ್ಪರ್ಧೆಗಳನ್ನು
ನಡೆಸುವ ವಿಧಾನ ಕುರಿತಂತೆ ಜ್ಞಾಪನದಲ್ಲಿ ನಮೂದಿಸಿರುವ ಅನುಬಂಧ-1,2,3 ಹಾಗೂ 4ರಲ್ಲಿ
ವಿವರಿಸಲಾಗಿದ್ದು, ಅದರಂತೆ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು
ಹಾಗೂ ಎಲ್ಲಾ ಹಂತದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮುದಾಯದ ಸಹಕಾರದೊಂದಿಗೆ ಸ್ಥಳೀಯ
ಹಬ್ಬದ ರೀತಿಯಲ್ಲಿ ಉತ್ತಮವಾಗಿ ಆಚರಿಸಲು ಸೂಚಿಸಿದೆ.

👉🏻 ಸ್ಪರ್ಧೆಗಳ ಆಯೋಜನೆ ಮತ್ತು ಸ್ಪರ್ಧಾ ನಿಯಮಗಳು:

🔴 ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರು
ವುದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.

🔴 1 ರಿಂದ 7 ನೇ ತರಗತಿವರೆಗಿನ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಯಾವುದಾದರೂ 2 ವಿಷಯಗಳಲ್ಲಿ ಮಾತ್ರ ಮತ್ತು ಸಾಮೂಹಿಕ ವಿಭಾಗದಲ್ಲಿ ಯಾವುದಾದರೂ, 1 ವಿಷಯಗಳಲ್ಲಿ
ಮಾತ್ರ ಭಾಗವಹಿಸಲು ಅವಕಾಶವಿದೆ.

🔴 ಪ್ರೌಢಶಾಲಾ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಯಾವುದಾದರೂ 1 ವಿಷಯದಲ್ಲಿ ಮಾತ್ರ
ಭಾಗವಹಿಸಲು ಅವಕಾಶವಿದೆ.

🔴 ಯಾವುದೇ ವೈಯಕ್ತಿಕ ಸ್ಪರ್ಧಾ ವಿಷಯದಲ್ಲಿ ಕನಿಷ್ಠ 5 ವಿದ್ಯಾರ್ಥಿಗಳು, ಸಾಮೂಹಿಕ ವಿಭಾಗದಲ್ಲಿ
ಕನಿಷ್ಠ 5 ಗುಂಪು ಭಾಗವಹಿಸಲೇಬೇಕು. ಇಲ್ಲವಾದಲ್ಲಿ ಅಂತಹ ಸ್ಪರ್ಧೆಗಳನ್ನು ರದ್ದುಪಡಿಸಿ,
ಬಹುಮಾನದ ಹಾಗೂ ತೀರ್ಪುಗಾರರ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ
ಮಾಡುವುದು. ಇದು ಎಲ್ಲಾ ವಿಭಾಗಗಳ ಸ್ಪರ್ಧೆಗಳಿಗೂ ಅನ್ವಯಿಸುತ್ತದೆ.

🔴 ಚಿತ್ರಕಲಾ ಸ್ಪರ್ಧೆಗೆ ಸಂಬಂಧಿಸಿದಂತೆ ಬಣ್ಣ, ಬ್ರಷ್ ಮುಂತಾದವುಗಳನ್ನು ಸ್ಪರ್ಧಾಳುಗಳ
ತರಬೇಕು.ಆದರೆ, ಸಂಘಟಕರು ಕಡ್ಡಾಯವಾಗಿ ಸ್ಪರ್ಧಿಗಳಿಗೆ ಒಂದೇ ಅಳತೆ ಡ್ರಾಯಿಂಗ್ ಶೀಟ್
ನೀಡುವುದು.

🔴 ಜಾನಪದ ನೃತ್ಯಕ್ಕೆ ಉಡುಪು, ವರ್ಣಾಲಂಕಾರ, ಪಕ್ಕವಾದ, ಹಾಡುಗಾರಿಕೆ ಇವುಗಳನ್ನು
ಸ್ಪರ್ಧಾರ್ಥಿಗಳೇ ಒದಗಿಸಿಕೊಳ್ಳಬೇಕು.

🔴 ಲಘುಸಂಗೀತ ಸ್ಪರ್ಧೆಗೆ ಕನ್ನಡ ಕವಿಗಳಿಂದ ರಚಿಸಲ್ಪಟ್ಟ ಗೀತೆಗಳನ್ನು ಮಾತ್ರ ಹಾಡಬೇಕು.

🔴 ಕ್ಲೇ ಮಾಡಲಿಂಗ್ ಗಾಗಿ ಜೇಡಿಮಣ್ಣನ್ನು ಸ್ಪರ್ಧಾ ಸಮಿತಿ ಒದಗಿಸಬೇಕು.

🔴 ರಂಗೋಲಿ ಸ್ಪರ್ಧೆಗೆ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು.

🔴 ಸ್ಪರ್ಧೆಗಳ ದಿನಾಂಕ ಮತ್ತು ಇನ್ನಿತರ ವಿವರಗಳನ್ನು ನಿಗಧಿಪಡಿಸಿರುವಂತೆ ಎಲ್ಲಾ ಶಾಲೆಗಳಿಗೂ
ಸಾಕಷ್ಟು ಮುಂಚಿತವಾಗಿ ಸುತ್ತೋಲೆಗಳನ್ನು ಕಳುಹಿಸಿ, ಅರ್ಹ ವಿದ್ಯಾರ್ಥಿಗಳು ಈ ಅವಕಾಶದಿಂದ
ವಂಚಿತರಾಗದಂತೆ ಎಚ್ಚರವಹಿಸಬೇಕು.

🔴 ಸ್ಪರ್ಧೆಗಳನ್ನು ನಡೆಸಿದ ಕೂಡಲೇ ಮುಂದಿನ ಹಂತದ ಸ್ಪರ್ಧೆಗೆ ಸಹಾಯವಾಗುವಂತೆ
ನಿಗಧಿಪಡಿಸಿದ ದಿನಾಂಕದೊಳಗೆ ವಿಜೇತರ ಪಟ್ಟಿಯನ್ನು ತಕ್ಷಣವೇ ಕ್ರೂಢೀಕರಿಸಿ
ಸಂಬಂಧಿಸಿದವರಿಗೆ ಕಳುಹಿಸಬೇಕು.

🔴 ಸಂಗೀತ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಶೃತಿವಾದ್ಯವನ್ನು ಹೊರತುಪಡಿಸಿ, ಯಾವುದೇ
ವಾದ್ಯಗಳನ್ನು ಬಳಸಲು ಅವಕಾಶವಿಲ್ಲ, ಶಾಸ್ತ್ರೀಯ ಸಂಗೀತದಲ್ಲಿ ತಾಳವನ್ನು ಕೈಯಿಂದ
ಹಾಕಬೇಕು.

🔴 ಜಾನಪದ ನೃತ್ಯದಲ್ಲಿ ಜಾನಪದ ಶೈಲಿಯ ನೃತ್ಯವನ್ನೇ ಪ್ರದರ್ಶಿಸಬೇಕು.
ಸಂಗೀತ, ನೃತ್ಯ, ಮತ್ತು ದೃಶ್ಯಕಲೆ ಈ ಸ್ಪರ್ಧೆಗಳಲ್ಲಿ ರಾಜ್ಯದ ಬುಡಕಟ್ಟು, ಜಾನಪದ ಮತ್ತು
ಪಾರಂಪರಿಕ ಕಲಾ ಪ್ರಕಾರಗಳನ್ನು ಒಳಗೊಂಡಂತೆ ಪ್ರದರ್ಶಿಸಬೇಕು.
ಉದಾ: ನಂದಿಕೋಲು ಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಗಾಂಜೀವಾ ಕಲೆ, ಯಕ್ಷಗಾನ ಕಲೆ,
ಗೊರವರ ಕುಣಿತ, ಐತಿಹಾಸಿಕ ನಾಟಕ, ವೀರಗಾಸೆ, ಬಯಲಾಟ, ಭೂತದ ಕೋಲು
ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.

🔴 ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ ತಂಡವನ್ನು
ಮುಂದಿನ ಸ್ಪರ್ಧೆಗೆ ಆಯ್ಕೆ ಮಾಡುವುದು. ಮೇಲಿನ ಎಲ್ಲಾ ನಿಯಮಗಳು ತಾಲ್ಲೂಕು ಮಟ್ಟದಿಂದ
ಜಿಲ್ಲಾ ಮಟ್ಟದವರೆಗೆ 3 ವಿಭಾಗಗಳಿಗೂ ಅನ್ವಯಿಸುತ್ತದೆ.

👉🏻 ಸಂಘಟನಾ ನಿಯಮಗಳು:

ಸಂಘಟನೆಯಲ್ಲಿ ಯಾವುದೇ ಲೋಪದೋಷ ಬಾರದಂತೆ ಎಚ್ಚರವಹಿಸಬೇಕು. ಜಿಲ್ಲಾ ಮಟ್ಟದ
ಸಮಿತಿಯಲ್ಲಿ ಸಂಸದರು/ಉಸ್ತುವಾರಿ ಮಂತ್ರಿ/ಜಿಲ್ಲಾ ಮಂತ್ರಿಯವರು ಹಾಗೂ ಬ್ಲಾಕ್ ಸಂಘಟನಾ
ಸಮಿತಿಯಲ್ಲಿ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುತ್ತಾರೆ. ರಾಜ್ಯ ಮಟ್ಟದ ಸಮಿತಿಯಲ್ಲಿ ಮಾನ್ಯಶಿಕ್ಷಣ
ಸಚಿವರು ಅಧ್ಯಕ್ಷರಾಗಿರುತ್ತಾರೆ ಆಯಾ ಹಂತದಲ್ಲಿನ ಪ್ರಧಾನ ಅಧಿಕಾರಿಗಳು, ಪ್ರತಿಷ್ಠಿತ ವ್ಯಕ್ತಿಗಳು
ಸದಸ್ಯರಾಗಿರುವ ಈ ಸಮಿತಿಗೆ ಬ್ಲಾಕ್ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರು, ಜಿಲ್ಲಾ ಮಟ್ಟದಲ್ಲಿ
ಉಪನಿರ್ದೇಶಕರು (ಆಡಳಿತ) ಹಾಗೂ ರಾಜ್ಯ ಮಟ್ಟದಲ್ಲಿ ನಿರ್ದೇಶಕರು, ಮೈನಾರಿಟಿ ಶಾಖೆ, ಆಯುಕ್ತರ
ಕಛೇರಿ ಬೆಂಗಳೂರು ರವರು ಕಾರ್ಯದರ್ಶಿಯಾಗಿರುತ್ತಾರೆ.

👉🏻 ವಿವಿಧ ಸಮಿತಿಗಳು:

ಸಂಘಟನಾ ಸಮಿತಿಯು ಈ ಕೆಳಕಂಡ ಸಮಿತಿಗಳನ್ನು ರಚಿಸಿ, ಆಯಾ ಕ್ಷೇತ್ರದಲ್ಲಿ ಅನುಭವವಿರುವ
ಕ್ರಿಯಾ ಶೀಲ ವ್ಯಕ್ತಿಗಳನ್ನೇ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಾಗಿ ನೇಮಕ ಮಾಡಬೇಕು.
ನಿರ್ದಿಷ್ಟ ಕಾರ್ಯಭಾರಗಳನ್ನು ವಹಿಸಿ, ಸಕಾಲದಲ್ಲಿ ಕಾರ್ಯಕ್ರಮವನ್ನು
ಸಮಿತಿಗಳಿಗೆ
ಯಶಸ್ವಿಗೊಳಿಸುವುದು.

🔹 ಸ್ವಾಗತ ಸಮಿತಿ
🔹 ಕ್ರಿಯಾ ಸಮಿತಿ
🔹 ಆಹಾರ ಸಮಿತಿ
🔹 ನೋಂದಣಿ ಸಮಿತಿ
🔹 ಮಕ್ಕಳ ಸುರಕ್ಷತೆ ಹಾಗೂ ರಕ್ಷಣಾ ಸಮಿತಿ
🔹 ಕಾನೂನು ಶಿಸ್ತುಪಾಲನಾ ಸಮಿತಿ
🔹 ಸಾರಿಗೆ ಸಮಿತಿ
🔹 ವಸತಿ ಸಮಿತಿ
🔹 ರಂಗವೇದಿಕೆ /ಸಭಾಂಗಣ ಸಮಿತಿ
🔹 ತೀರ್ಪುಗಾರರ ಮಂಡಳಿ ಸಮಿತಿ,
🔹 ಆರ್ಥಿಕ ಸಮಿತಿ
🔹 ಬೆಳಕು, ಧ್ವನಿವರ್ಧಕ, ತಾಂತ್ರಿಕ ನಿರ್ವಹಣಾ ಸಮಿತಿ,
🔹 ಪ್ರಚಾರ ಸಮಿತಿ,
🔹 ಇತರ ಅಗತ್ಯ ಸಮಿತಿಗಳು

👉🏻 ಪ್ರಚಾರ:

ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮದ ಬಗ್ಗೆ ದಿನಪತ್ರಿಕೆ, ಆಕಾಶವಾಣಿ ಮುಂತಾದ ಪ್ರಸಾರ
ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡುವುದು, ಈ ಹಿನ್ನಲೆಯಲ್ಲಿ ಕಾರ್ಯಕ್ರಮದ ಮಹತ್ವ
ಹಾಗೂ ಕಾರ್ಯಕ್ರಮ ನಡೆಯುವ ದಿನಾಂಕವನ್ನು, ಕಾರ್ಯಕ್ರಮ ನಡೆಸುವ ಹಿಂದಿನ ದಿನ ಸ್ಥಳೀಯ
ಮಕ್ಕಳಿಂದ ಮೆರವಣಿಗೆ ಏರ್ಪಡಿಸಿ ಸಾರ್ವಜನಿಕರ ಗಮನ ಸೆಳೆಯುವುದು. ಒಟ್ಟಾರೆ ಈ ಕಾರ್ಯಕ್ರಮವು
ಕರ್ನಾಟಕ ರಾಜ್ಯದಲ್ಲಿ “ಮಕ್ಕಳ ಹಬ್ಬವಾಗಿ ಆಚರಿಸುವಂತಹ ವಾತಾವರಣವನ್ನು ಪ್ರಚಾರದ ಮೂಲಕ
ಕಲ್ಪಿಸಬೇಕು. ಎಲ್ಲಾ ಹಂತದ ಎಲ್ಲಾ ಸ್ಪರ್ಧೆಗಳ ಬಗ್ಗೆ ವ್ಯಾಪಕ ಪ್ರಚಾರವನ್ನು ನೀಡಲು ಆಯಾ
ಹಂತದಲ್ಲಿನ ನೋಡಲ್ ಅಧಿಕಾರಿಗಳು ಅಗತ್ಯ ಕ್ರಮ ವಹಿಸುವುದು.

👉🏻 ತೀರ್ಪುಗಾರರ ನೇಮಕ:

🔸ತೀರ್ಪುಗಾರರ ನೇಮಕ ಒಂದು ವಿಶಿಷ್ಟವಾದುದು ಹಾಗೂ ಗಂಭೀರವಾದುದು. ಪ್ರತಿಭೆಗೆ ನ್ಯಾಯ ಒದಗಿಸುವ ಉತ್ಕೃಷ್ಟ ಮನೋಭಾವ ಮತ್ತು ಆಯಾ ಕ್ಷೇತ್ರಗಳಲ್ಲಿ ಜ್ಞಾನ, ಅನುಭವುಳ್ಳವರನ್ನು
ನೇಮಿಸಬೇಕು. ತೀರ್ಪುಗಾರರು ಸ್ಪರ್ಧಾರ್ಥಿಗಳ ಬಂಧುಗಳಾಗಿರಬಾರದು. ಅದೇ ಶಾಲೆಯ ಶಿಕ್ಷಕರಾಗಿರಬಾರದು. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಸಂಗೀತ, ನೃತ್ಯ ನಾಟಕ, ಚಿತ್ರಕಲೆ, ಕರಕೌಶಲ
ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನೇ ಕಡ್ಡಾಯವಾಗಿ ನೇಮಕ
ಮಾಡಿಕೊಳ್ಳುವುದು ಹಾಗು ಅಗತ್ಯ ಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ ವಿಷಯಕ್ಕೆ ಸಂಬಂಧಿಸಿದ ಸ್ಥಳೀಯ
ಕಲಾವಿದರು ಹಾಗೂ ನಿವೃತ್ತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು, ತೀರ್ಪುಗಾರರಿಂದ ತಮ್ಮ ಹತ್ತಿರದ
ಬಂಧುಗಳು/ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲವೆಂಬ ಘೋಷಣಾ ಪತ್ರ
ಪಡೆದುಕೊಳ್ಳಬೇಕು.

🔸ತೀರ್ಪುಗಾರರ ಸಮಿತಿ, ಸಭೆಗಳನ್ನು ನಡೆಸಿ ಎಲ್ಲರ ಅಭಿಪ್ರಾಯದೊಂದಿಗೆ “ಮಾರ್ಗಸೂಚಿ
ತಯಾರಿಸಿ, ಸ್ಪರ್ಧೆಗಳಲ್ಲಿ ಗಮನಿಸಬೇಕಾದ ಅಂಶಗಳನ್ನು ಹಾಗೂ ನೀಡಬೇಕಾದ ಅಂಕಗಳನ್ನು
ಪಟ್ಟಿ ಮಾಡಿ ಪ್ರತಿ ತೀರ್ಪುಗಾರರಿಗೆ ವಿತರಿಸುವುದು, ಅದರಂತೆ ತೀರ್ಪುಗಾರರು ಕ್ರಮ ವಹಿಸುವುದು,
ತೀರ್ಪುಗಾರಿಕೆಯು ಪಾರದರ್ಶಕವಾಗಿರಬೇಕು. ಎಲ್ಲಾ ವಿಷಯಗಳಲ್ಲಿಯೂ ಅಡಕವಾಗಿರುವ ಮಹತ್ವದ
ಅಂಶಗಳನ್ನು ಗಮನಿಸಿ ಅಂಕ ನೀಡಬೇಕು. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಒಂದು
ವರ್ಷದವರೆಗೆ ನಿರ್ವಹಿಸುವುದು.

ಉದಾ: ಸಂಗೀತದಲ್ಲಿ – ಭಾವ, ಮಾಧುರ್ಯ, ಲಯ, ತಾಳ, ಸಾಹಿತ್ಯ
ನೃತ್ಯದಲ್ಲಿ – ಲಯ, ಭಂಗಿ, ಭಾವ,
ನಾಟಕದಲ್ಲಿ – ರಂಗಸಜ್ಜಿಕೆ, ಬೆಳಕು, ವಾಚಕಾಭಿನಯ, ಆಂಗಿಕಾಭಿನಯ, ನಿಲುವು, ವಸ್ತ್ರಾಲಂಕಾರ,
ಪ್ರಸಾದನ.

🔸ಕಾರ್ಯಕ್ರಮ ಪೂರ್ಣಗೊಳ್ಳುವವರೆಗೂ ಆಯ್ಕೆ ಮಾಡಿರುವ ತೀರ್ಪುಗಾರರನ್ನು ಬದಲಾವಣೆ
ಮಾಡುವಂತಿಲ್ಲ. ಇಲಾಖಾ ಶಿಕ್ಷಕರು/ಅಧಿಕಾರಿಗಳು ತೀರ್ಪುಗಾರರಾಗಿದ್ದಲ್ಲಿ ಅವರಿಗೆ ಯಾವುದೇ ಭತ್ಯೆ
ನೀಡುವಂತಿಲ್ಲ.

🔸ಯಾವುದೇ ಸ್ಪರ್ಧೆಯ ತೀರ್ಪಿನ ಬಗ್ಗೆ ದೂರುಗಳು ಬಂದಲ್ಲಿ “ತೀರ್ಪುಗಾರರ ಮಂಡಳಿ ಸಮಿತಿ”
ದೂರಿನ ಬಗ್ಗೆ ಪರಿಶೀಲಿಸಿ ನ್ಯಾಯೋಚಿತ ನಿರ್ಣಯ ಕೈಗೊಳ್ಳುವುದು.

IMG 20220719 WA0032
IMG 20220719 WA0033
IMG 20220719 WA0034
WhatsApp Group Join Now
Telegram Group Join Now
Sharing Is Caring:

Leave a Comment