2024-24 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟಕ್ಕೆ ಬಳಸಬಹುದಾದ ನಮೂನೆಗಳು
2024-24 ಪ್ರೌಢ ಶಾಲೆಗಳ ವಲಯ / ಹೋಬಳಿ ಮಟ್ಟಕ್ಕೆ ಬಳಸಬಹುದಾದ ನಮೂನೆಗಳು
2023-24 ನೇ ಸಾಲಿನ ಪ್ರತಿಭಾಕಾರಂಜಿ/ಕಲೋತ್ಸವ ಕಾರ್ಯಕ್ರಮ
ಅನುಷ್ಠಾನಗೊಳಿಸುವ ಬಗ್ಗೆ:-
ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು 2002ನೇ ಸಾಲಿನಿಂದ ಹಮ್ಮಿಕೊಳ್ಳಲಾಗುತ್ತಿದ್ದು,
ಈ ಕಾರ್ಯಕ್ರಮವು ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ
ಕಲಾತ್ಮಕ ಪ್ರತಿಭೆಯನ್ನು, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ.
ಉಲ್ಲೇಖಿತ ಆದೇಶ/ಪತ್ರಗಳಂತೆ 2023-24ನೇ ಸಾಲಿನಲ್ಲಿ ರಾಜ್ಯವಲಯದ ಮುಂದುವರೆದ
ಯೋಜನಾ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ
ಶಾಲಾಮಕ್ಕಳಿಗೆ (1 ರಿಂದ 10ನೇ ತರಗತಿ) ಏಕ ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳನ್ನು ಮತ್ತು 08
ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ, ಕಲೋತ್ಸವ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಲಗತ್ತಿಸಿರುವ ಅನುಬಂಧ-1,2,3 ಹಾಗೂ 4 ರಲ್ಲಿ ವಿವರಿಸಲಾಗಿದ್ದು, ಅದರಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ),
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಹಂತದ ಅಧಿಕಾರಿಗಳು ಸಮುದಾಯದ ಸಹಕಾರದೊಂದಿಗೆ
ಸ್ಥಳೀಯ ಹಬ್ಬದ ರೀತಿಯಲ್ಲಿ ಉತ್ತಮವಾಗಿ ಆಯೋಜಿಸಲು ಸೂಚಿಸಿದೆ.
ಸ್ಪರ್ಧೆಗಳ ಆಯೋಜನೆ ಮತ್ತು ಸ್ಪರ್ಧಾ ನಿಯಮಗಳು:
🔮 ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವುದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.
🔮 1 ರಿಂದ 7 ನೇ ತರಗತಿವರೆಗಿನ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಯಾವುದಾದರೂ 2ವಿಷಯಗಳಲ್ಲಿ ಮಾತ್ರ ಮತ್ತು ಸಾಮೂಹಿಕ ವಿಭಾಗದಲ್ಲಿ ಯಾವುದಾದರೂ1 ವಿಷಯದಲ್ಲಿ ಮಾತ್ರ
ಭಾಗವಹಿಸಲು ಅವಕಾಶವಿದೆ. ಪ್ರೌಢಶಾಲಾ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ
ಯಾವುದಾದರೂ 1 ವಿಷಯದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.
Photo ಕೃಪೆ : ಅಂತರ್ಜಾಲ
🔮 ಯಾವುದೇ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದ ಸ್ಪರ್ಧಾ ವಿಷಯದಲ್ಲಿ ಕನಿಷ್ಠ 5
ವಿದ್ಯಾರ್ಥಿಗಳು/ 5 ಗುಂಪುಗಳು ಭಾಗವಹಿಸಬೇಕು. ಭಾಷಾ ಅಲ್ಪ ಸಂಖ್ಯಾತ ಸ್ಪರ್ಧೆಗಳಲ್ಲಿ ಕನಿಷ್ಠ 3 ವಿದ್ಯಾರ್ಥಿಗಳು ಭಾಗವಹಿಸಬೇಕು. ಇಲ್ಲವಾದಲ್ಲಿ ಅಂತಹ ಸ್ಪರ್ಧೆಗಳನ್ನು ರದ್ದುಪಡಿಸಿ,
ಬಹುಮಾನದ ಹಾಗೂ ತೀರ್ಪುಗಾರರ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವುದು. ಇದು ಎಲ್ಲಾ ಹಂತದ /ವಿಭಾಗಗಳ ಸ್ಪರ್ಧೆಗಳಿಗೂ ಅನ್ವಯಿಸುತ್ತದೆ.
ಚಿತ್ರಕಲಾ ಸ್ಪರ್ಧೆಗೆ ಸಂಬಂಧಿಸಿದಂತೆ ಬಣ್ಣ, ಬ್ರಷ್ ಇತ್ಯಾದಿಗಳನ್ನು ಸ್ಪರ್ಧಾಳುಗಳೇ ತರಬೇಕು.
ಆದರೆ,ಸಂಘಟಕರು ಕಡ್ಡಾಯವಾಗಿ ಸ್ಪರ್ಧಿಗಳಿಗೆ ಒಂದೇ ಅಳತೆಯ ಡ್ರಾಯಿಂಗ್ ಶೀಟ್ ನೀಡುವುದು.
🔮 ಜಾನಪದ ನೃತ್ಯ ಕೋಲಾಟ ಇವುಗಳಿಗೆ ಉಡುವು, ವರ್ಣಾಲಂಕಾರ, ಪಕ್ಕವಾದ್ಯ, ಹಾಡುಗಾರಿಕೆ
ಇವುಗಳನ್ನು ಸ್ಪರ್ಧಾರ್ಥಿಗಳೇ ಒದಗಿಸಿಕೊಳ್ಳಬೇಕು.
Photo ಕೃಪೆ : ಅಂತರ್ಜಾಲ
🔮 ಲಘು ಸಂಗೀತ ಸ್ಪರ್ಧೆಗೆ ಕನ್ನಡ ಕವಿಗಳಿಂದ ರಚಿಸಲ್ಪಟ್ಟ, ಗೀತೆಗಳನ್ನು ಮಾತ್ರ ಹಾಡಬೇಕು.
🔮 ಕ್ಲೇ ಮಾಡಲಿಂಗ್ ಗೆ ಜೇಡಿ ಮಣ್ಣನ್ನು ಸ್ಪರ್ಧಾ ಸಮಿತಿ ಒದಗಿಸಬೇಕು.
🔮 ರಂಗೋಲಿ ಸ್ಪರ್ಧೆಗೆ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು.
🔮 ಸ್ಪರ್ಧೆಗಳ ದಿನಾಂಕ ಮತ್ತು ಇನ್ನಿತರ ವಿವರಗಳನ್ನು ನಿಗಧಿ ಪಡಿಸಿರುವಂತೆ ಎಲ್ಲಾ ಶಾಲೆಗಳಿಗೂ
ಸಾಕಷ್ಟು ಮುಂಚಿತವಾಗಿ ಸುತ್ತೋಲೆಗಳನ್ನು ಕಳುಹಿಸಿ, ಅರ್ಹ ವಿದ್ಯಾರ್ಥಿಗಳು ಈ ಅವಕಾಶದಿಂದ
ವಂಚಿತರಾಗದಂತೆ ಎಚ್ಚರ ವಹಿಸಬೇಕು.
🔮 ಸ್ಪರ್ಧೆಗಳನ್ನು ನಡೆಸಿದ ಕೂಡಲೇ ಮುಂದಿನ ಹಂತದ ಸ್ಪರ್ಧೆಗೆ ಸಹಾಯವಾಗುವಂತೆ
ನಿಗಧಿಪಡಿಸಿದ ದಿನಾಂಕದೊಳಗೆ ವಿಜೇತರ ಪಟ್ಟಿಯನ್ನು ತಕ್ಷಣವೇ ಕ್ರೋಢೀಕರಿಸಿ
ಸಂಬಂಧಿಸಿದವರಿಗೆ ಕಳುಹಿಸಬೇಕು.
🔮 ಸಂಗೀತ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಶೃತಿ ವಾದ್ಯವನ್ನು ಹೊರತುಪಡಿಸಿ, ಯಾವುದೇ ವಾದ್ಯ
ಗಳನ್ನು ಬಳಸಲು ಅವಕಾಶವಿಲ್ಲ. ಶಾಸ್ತ್ರೀಯ ಸಂಗೀತದಲ್ಲಿ ತಾಳವನ್ನು ಕೈಯಿಂದ ಹಾಕಬೇಕು.
Photo ಕೃಪೆ : ಅಂತರ್ಜಾಲ
🔮 ಜಾನಪದ ನೃತ್ಯದಲ್ಲಿ ಜಾನಪದ ಶೈಲಿಯ ನೃತ್ಯವನ್ನೇ ಪ್ರದರ್ಶಿಸಬೇಕು. ಸಂಗೀತ, ನೃತ್ಯ ಮತ್ತು
ದೃಶ್ಯಕಲೆ ಈ ಸ್ಪರ್ಧೆಗಳಲ್ಲಿ ರಾಜ್ಯದ ಬುಡಕಟ್ಟು, ಜಾನಪದ ಮತ್ತು ಪಾರಂಪರಿಕ ಕಲಾ
ಪ್ರಕಾರಗಳನ್ನು ಒಳಗೊಂಡಂತೆ ಪ್ರದರ್ಶಿಸಬೇಕು.
ಉದಾ:- ನಂದಿಕೋಲು ಕುಣಿತ, ಪೂಜಾ ಕುಣಿತ,
ಡೊಳ್ಳು ಕುಣಿತ, ಗಾಂಜೀಪಾ ಕಲೆ, ಯಕ್ಷಗಾನ ಕಲೆ, ಗೊರವರ ಕುಣಿತ, ಐತಿಹಾಸಿಕ ನಾಟಕ, ವೀರಗಾಸೆ,
ಬಯಲಾಟ, ಭೂತದ ಕೋಲು ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.
🔮 ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಪಥಮ ಸ್ಥಾನ ಪಡೆದ ವಿದ್ಯಾರ್ಥಿ/ತಂಡವನ್ನು
ಮುಂದಿನ ಸ್ಪರ್ಧೆಗೆ ಆಯ್ಕೆ ಮಾಡುವುದು. ಮೇಲಿನ ಎಲ್ಲಾ ನಿಯಮಗಳು ತಾಲ್ಲೂಕು ಮಟ್ಟದಿಂದ
ಜಿಲ್ಲಾ ಮಟ್ಟದವರೆಗೆ ಹಾಗೂ 3 ವಿಭಾಗಗಳಿಗೂ ಅನ್ವಯಿಸುತ್ತದೆ.
Photo ಕೃಪೆ : ಅಂತರ್ಜಾಲ
ಪ್ರಚಾರ:-
👉🏻 ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮದ ಬಗ್ಗೆ ದಿನಪತ್ರಿಕೆ, ಆಕಾಶವಾಣಿ ಮುಂತಾದ ಪ್ರಸಾರ
ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡುವುದು.
👉🏻 ಕಾರ್ಯಕ್ರಮದ ಮಹತ್ವ ಹಾಗೂ ಕಾರ್ಯಕ್ರಮ ನಡೆಯುವ ದಿನಾಂಕವನ್ನು, ಕಾರ್ಯಕ್ರಮ ನಡೆಸುವ
ಹಿಂದಿನ ದಿನ ಸ್ಥಳೀಯ ಮಕ್ಕಳಿಂದ ಮೆರವಣಿಗೆ ಏರ್ಪಡಿಸಿ ಸಾರ್ವಜನಿಕರ ಗಮನ ಸೆಳೆಯುವುದು.
👉🏻 ಈ ಕಾರ್ಯಕ್ರಮವು ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಹಬ್ಬವಾಗಿ ಆಚರಿಸುವಂತಹ ವಾತಾವರಣವನ್ನು
ಪ್ರಚಾರದ ಮೂಲಕ ಕಲ್ಪಿಸಬೇಕು. ಎಲ್ಲಾ ಹಂತದ ಎಲ್ಲಾ ಸ್ಪರ್ಧೆಗಳ ಬಗ್ಗೆ ವ್ಯಾಪಕ ಪ್ರಚಾರವನ್ನು
ನೀಡಲು ಆಯಾ ಹಂತದಲ್ಲಿನ ನೋಡಲ್ ಅಧಿಕಾರಿಗಳು ಅಗತ್ಯ ಕ್ರಮವಹಿಸುವುದು.
ತೀರ್ಪುಗಾರರ ನೇಮಕ:-
👆🏻 ತೀರ್ಪುಗಾರರ ನೇಮಕ ಒಂದು ವಿಶಿಷ್ಟವಾದುದು ಹಾಗೂ ಗಂಭೀರವಾದುದು. ಪ್ರತಿಭೆಗೆ ನ್ಯಾಯ
ಒದಗಿಸುವ ಉತ್ಕೃಷ್ಟ ಮನೋಭಾವ ಮತ್ತು ಆಯಾ ಕ್ಷೇತ್ರಗಳಲ್ಲಿ ಜ್ಞಾನ, ಅನುಭವವುಳ್ಳವರನ್ನು
ನೇಮಿಸಬೇಕು.
👆🏻 ತೀರ್ಪುಗಾರರು ಸ್ಪರ್ಧಾರ್ಥಿಗಳ ಬಂಧುಗಳಾಗಿರಬಾರದು. ಅದೇ ಶಾಲೆಯ ಶಿಕ್ಷಕರಾಗಿರಬಾರದು.
👆🏻 ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಸಂಗೀತ, ನೃತ್ಯ, ನಾಟಕ, ಚಿತ್ರಕಲೆ, ಕರಕೌಶಲ ವಿಷಯಕ್ಕೆ
ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನೇ ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವುದು
👆🏻 ಅಂತಹ ಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ ವಿಷಯಕ್ಕೆ ಸಂಬಂಧಿಸಿದ ಸ್ಥಳೀಯ ಕಲಾವಿದರು *ಹಾಗೂ ನಿವೃತ್ತ*
ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು.
👆🏻 ತೀರ್ಪುಗಾರರಿಂದ ತಮ್ಮ ಹತ್ತಿರದ ಬಂಧುಗಳು/ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ.
ಎಂಬ ಘೋಷಣಾ ಪತ್ರ ಪಡೆದುಕೊಳ್ಳಬೇಕು.
👆🏻 ತೀರ್ಪುಗಾರರ ಸಮಿತಿ ಸಭೆಗಳನ್ನು ನಡೆಸಿ ಎಲ್ಲರ ಅಭಿಪ್ರಾಯದೊಂದಿಗೆ ಮಾರ್ಗಸೂಚಿ ತಯಾರಿಸಿ,
ಸ್ಪರ್ಧೆಗಳಲ್ಲಿ ಗಮನಿಸಬೇಕಾದ ಅಂಶಗಳನ್ನು ಹಾಗೂ ನೀಡಬೇಕಾದ ಅಂಕಗಳನ್ನು *ಪಟ್ಟಿ ಮಾಡಿ ಪ್ರತಿ*
ತೀರ್ಪುಗಾರರಿಗೆ ವಿತರಿಸುವುದು
👆🏻 ಅದರಂತೆ ತೀರ್ಪುಗಾರರು ಕ್ರಮವಹಿಸುವುದು, ತೀರ್ಪುಗಾರಿಕೆಯು ಪಾರದರ್ಶಕವಾಗಿರಬೇಕು. ಎಲ್ಲಾ
ವಿಷಯಗಳಲ್ಲಿಯೂ ಅಡಕವಾಗಿರುವ ಮಹತ್ವದ ಅಂಶಗಳನ್ನು ಗಮನಿಸಿ ಅಂಕ ನೀಡಬೇಕು.
ಉದಾ: ಸಂಗೀತದಲ್ಲಿ – ಭಾವ, ಮಾಧುರ್ಯ, ಲಯ, ತಾಳ, ಸಾಹಿತ್ಯ, ನೃತ್ಯದಲ್ಲಿ – ಲಯ, ಭಂಗಿ, ಭಾವ,
ನಾಟಕದಲ್ಲಿ – ರಂಗಸಜ್ಜಿಕ, ಬೆಳಕು, ವಾಚಕಾಭಿನಯ, ಆಂಗಿಕಾಭಿನಯ, *ನಿಲುವು,* ವಸ್ತ್ರಾಲಂಕಾರ,
ಪ್ರಸಾದನ.
👆🏻 ಕಾರ್ಯಕ್ರಮ ಪೂರ್ಣಗೊಳ್ಳುವವರೆಗೂ ಆಯ್ಕೆಮಾಡಿರುವ
👆🏻 ತೀರ್ಪುಗಾರರ ಬದಲಾವಣೆ
ಮಾಡುವಂತಿಲ್ಲ
👆🏻 ಯಾವುದೇ ಸ್ಪರ್ಧೆಯ ತೀರ್ಪಿನ ಬಗ್ಗೆ ದೂರುಗಳು ಬಂದಲ್ಲಿ ತೀರ್ಪುಗಾರರ ಮಂಡಳಿ ಸಮಿತಿ ದೂರಿನ
ಬಗ್ಗೆ, ಪರಿಶೀಲಿಸಿ ನ್ಯಾಯೋಚಿತ ನಿರ್ಣಯ ಕೈಗೊಳ್ಳುವುದು.