ಸರಕಾರಿ ಶಾಲೆಗಳಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಸ್ಥಾಪಿಸುವ ಕುರಿತು ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ
ಹಾಗೂ ವಾಟ್ಸಾಪ್ ಗ್ರೂಪ್ ರಚಿಸುವ ಬಗ್ಗೆ

ಸರ್ಕಾರದ ಎಲ್ಲಾ ಪ್ರಾಥಮಿಕ
ಮತ್ತು ಪ್ರೌಢಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪಿಸಲು ಹಾಗೂ ಅದಕ್ಕೆ
ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ಮಾಡಿ ಹಳೆಯ ವಿದ್ಯಾರ್ಥಿಗಳನ್ನು ಹೆಚ್ಚಿನ
ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಿಕೊಳ್ಳಲು ತಿಳಿಸಲಾಗಿತ್ತು. ಈಗಾಗಲೇ 25007 ಶಾಲೆಗಳು
ವಿದ್ಯಾರ್ಥಿಗಳ ಸಂಘ ಸ್ಥಾಪಿಸಿಕೊಂಡಿದ್ದು, ಅವುಗಳಲ್ಲಿ 15,170 ಶಾಲೆಗಳು ವಾಟ್ಸ್ ಆಪ್ ಗ್ರೂಪನ್ನು ರಚಿಸಿಕೊಂಡಿರುತ್ತವೆ. ಜಿಲ್ಲಾವಾರು ಮಾಹಿತಿಯನ್ನು ಲಗತ್ತಿಸಿದೆ. ಈಗಾಗಲೇ ಹಳೆ
ವಿದ್ಯಾರ್ಥಿಗಳ ಸಂಘ ಸ್ಥಾಪಿಸಿರುವ ಎಲ್ಲಾ ಶಾಲೆಗಳು ಕೂಡಲೇ ವಾಟ್ಸ್ ಆಪ್ ಗ್ರೂಪ್
ರಚಿಸಿಕೊಂಡು ಸದಸ್ಯರ ಸಂಖ್ಯೆ ಹೆಚ್ಚಿಸುವುದು ಹಾಗೂ ಇಲ್ಲಿಯವರೆಗೆ ಸಂಘ ರಚಿಸಿಕೊಳ್ಳದೇ
ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು 30/05/2024 ರಿಂದ ಒಂದು ವಾರದೊಳಗೆ
ಕಡ್ಡಾಯವಾಗಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು
ಕಛೇರಿಯಿಂದ ನೀಡಿರುವ ಗೂಗಲ್ ಫಾರ್ಮ್‌ನಲ್ಲಿ ಮಾಹಿತಿಯನ್ನು ಭರ್ತಿ ಮಾಡುವುದು.

ಎಲ್ಲಾ ಶಾಲೆಗಳು ಸಂಘ ಸ್ಥಾಪಿಸುವಂತೆ ಹಾಗೂ ವಾಟ್ಸ್ ಆಪ್ ಗ್ರೂಪ್ ರಚಿಸಿಕೊಳ್ಳುವಂತೆ
ಉಪನಿರ್ದೇಶಕರು (ಆಡಳಿತ) ಕ್ರಮ ಕೈಗೊಳ್ಳುವುದು.

IMG 20240316 WA0005
IMG 20240316 WA0006
IMG 20240316 WA0484

” ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದಡಿ ರಾಜ್ಯದ ಸರ್ಕಾರಿ ಶಾಲೆಗಳ
ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾ ಹಳೆ ವಿದ್ಯಾರ್ಥಿಗಳ ಸಂಘ (ALUMNI
ASSOCIATION) ರಚಿಸುವ ಬಗ್ಗೆ.

ರಾಜ್ಯದ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಶಾಲೆಗಳನ್ನು
ಬಲವರ್ಧನೆಗೊಳಿಸುವ ಉದ್ದೇಶದಿಂದ ಸರ್ಕಾರವು ಈಗಾಗಲೇ
ಯೋಜನೆಗಳನ್ನು ರೂಪಿಸಿದೆ. ಸದರಿ ಯೋಜನೆಗಳ ಅನುಷ್ಠಾನದ ಪ್ರಕ್ರಿಯೆಗಳಲ್ಲಿ
ಸರ್ಕಾರದೊಂದಿಗೆ ಸಮುದಾಯದ ಸಹಭಾಗಿತ್ವದಿಂದ ವೈಯಕ್ತಿಕ/ಸಾಮೂಹಿಕ ಬೆಂಬಲ
ಮತ್ತು ಸಂಪನ್ಮೂಲಗಳು ದೊರಕಿದರೆ ಸರ್ಕಾರಿ ಶಾಲೆಗಳನ್ನು ಮತ್ತಷ್ಟು
ಬಲವರ್ಧನೆಗೊಳಿಸಬಹುದಾಗಿದೆ ಎಂಬುದು ಸರ್ಕಾರದ ಆಶಯವಾಗಿದೆ. ಈ ಹಿನ್ನಲೆಯಲ್ಲಿ
‘ ನಮ್ಮ ಶಾಲೆ ನಮ್ಮ ಜವಬ್ದಾರಿ ” ಎಂಬ ಕಾರ್ಯಕ್ರಮವನ್ನು ಪ್ರಸ್ತುತ ಸಾಲಿನಿಂದ ರೂಪಿಸಿ,
ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಹಿಂದೆ ವ್ಯಾಸಂಗ ಮಾಡಿರುವ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲೆಯ ಪಾರಂಪರಿಕ
ಹಿನ್ನೆಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ರಾಜ್ಯದ ಎಲ್ಲಾ ಸರ್ಕಾರಿ
ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ (ALUMNI ASSOCIATION)ವನ್ನು ದಿನಾಂಕ:
31-ಮಾರ್ಚ್-2024 ರ ಅಂತ್ಯದೊಳಗಾಗಿ ರಚಿಸುವುದು. ಈ ಮುಖೇನ ಶಾಲೆಯನ್ನು
ಶೈಕ್ಷಣಿಕವಾಗಿ ಮತ್ತಷ್ಟು ಬಲವರ್ಧನೆಗೊಳಿಸಲು ಅಗತ್ಯವಿರುವ ಗ್ರಂಥಾಲಯ,
ಪ್ರಯೋಗಾಲಯ, ಕ್ರೀಡಾಲಯ, ಪೀಠೋಪಕರಣಗಳು, ಪಾಠೋಪಕರಣಗಳು, ವಿಜ್ಞಾನ
ಉಪಕರಣಗಳು, SMART CLASS ಇ-ಕಲಿಕಾ ಕೇಂದ್ರ ಸ್ಥಾಪನೆಯಂತಹ
ಪರಿಣಾಮಕಾರಿ ಸೌಲಭ್ಯಗಳ ಪೂರೈಕೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು
ಅವಶ್ಯಕತೆಗನುಗುಣವಾಗಿ ಆದ್ಯತಾನುಸಾರ ಸದರಿ ದಾನಿಗಳ (ಹಳೆ ವಿದ್ಯಾರ್ಥಿಗಳ ಸಂಘದ)
ಸಹಕಾರದಿಂದ ಪೂರೈಸಿಕೊಳ್ಳಲು ಅನುವಾಗುವಂತೆ ಕ್ರಿಯಾ ಯೋಜನೆಯನ್ನು
ರೂಪಿಸಿಕೊಂಡು ಮೇಲ್ಕಂಡಂತೆ ” ನಮ್ಮ ಶಾಲೆ ನಮ್ಮ ಜವಬ್ದಾರಿ ” ಕಾರ್ಯಕ್ರಮದಡಿ ಈ
ದಾನಿಗಳು ಕೊಡುಗೆಯಾಗಿ ನೀಡುವ ಸದರಿ ಸೌಲಭ್ಯಗಳನ್ನು ಸರ್ಕಾರದ ಮತ್ತು ಈ
ಕಛೇರಿಯ ಉಲ್ಲೇಖಿತ ಪತ್ರಗಳಂತೆ ನಿಯಮಾನುಸಾರ ಸ್ವೀಕರಿಸಿ ಯಶಸ್ವಿ ಅನುಷ್ಠಾನಕ್ಕೆ
ಮುಖ್ಯಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ರವರು ಅಗತ್ಯ ಕ್ರಮವಹಿಸಿ ಅನುಪಾಲನೆ
ಮಾಡುವುದು.

ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರನ್ನು ಒಳಗೊಂಡ ತಂಡ ಹಾಗೂ
ಶಾಲೆಯೊಂದಿಗೆ ಆನ್‌ಲೈನ್‌ನಲ್ಲಿ ಸಂಪರ್ಕಿಸಲು ಸಹಾಯವಾಗುವಂತೆ ವಾಟ್ಸ್ ಆಪ್ ಗ್ರೂಪ್
ರಚನೆ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಾಲಾ ಅಭಿವೃದ್ಧಿಗೆ ಕಾರ್ಯೋನ್ಮುಖರಾಗುವುದು.

ಹಳೇ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆಯಿಂದಾಗಿ ಉನ್ನತ ಹುದ್ದೆ/ಸ್ಥಾನದಲ್ಲಿ
ಇರುವವರನ್ನು ವಿಶೇಷವಾಗಿ ಗುರುತಿಸಿ, ಅವರ ಸಾಧನೆಗಳನ್ನು ಪ್ರತಿ ಬಿಂಬಿಸುವ
ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳು ಹೆಚ್ಚು ಪ್ರಭಾವಿತರಾಗುವಂತೆ
ಸಂಘಟಿಸುವುದರೊಂದಿಗೆ ಅವರ ಸಂಪೂರ್ಣ ಸಹಕಾರವನ್ನು ಶಾಲೆಗೆ ಪಡೆದುಕೊಳ್ಳುವುದು
ಹಾಗೂ ಈ ಮೂಲಕ ಇತರೆ ಸಾರ್ವಜನಿಕರು, ಪೋಷಕರು ಹಾಗೂ ಸಮುದಾಯ ಹೆಚ್ಚು
ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ
ಶ್ರಮಿಸುವಂತೆ ಸದರಿ ಸಂಘಕ್ಕೆ ಸಹಕರಿಸಲು ಶಾಲಾ ಎಸ್.ಡಿ.ಎಂ.ಸಿ ಮತ್ತು ಮುಖ್ಯಶಿಕ್ಷಕರು
ಕ್ರಮವಹಿಸಲು ತಿಳಿಸಿದೆ ಹಾಗೂ ಕಾಲಕಾಲಕ್ಕೆ ಶಾಲಾ ವಿಶೇಷತೆಗಳ ಬಗ್ಗೆ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಕಛೇರಿಗೆ ಕ್ರೋಢಿಕೃತ ವರದಿಯನ್ನು ಸಲ್ಲಿಸಲು ಸೂಚಿಸಿದೆ.

WhatsApp Group Join Now
Telegram Group Join Now
Sharing Is Caring:

Leave a Comment