ಸರಕಾರಿ ನೌಕರರ ಹೆಸರು ಬದಲಾವಣೆ ಮತ್ತು ವಿವಾಹ ನಂತರ ಮಹಿಳಾ ನೌಕರರ ಹೆಸರು ಬದಲಾವಣೆ ಮಾಡುವುದು ಹೇಗೆ?

ಸರ್ಕಾರಿ ನೌಕರರ ಹೆಸರು ಬದಲಾವಣೆ ಮತ್ತು ವಿವಾಹ ನಂತರ ಮಹಿಳಾ ನೌಕರರ ಹೆಸರು ಬದಲಾವಣೆ ನಮೂನೆಗಳು ಮತ್ತು ಕಾರ್ಯ ವಿಧಾನ.

  1. ಹೆಸರು ಬದಲಾಯಿಸಲು ಇಚ್ಛಿಸುವ ನೌಕರನು/ಳು ತಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿ, ತಮ್ಮ ಈಗಿನ ಹೆಸರು, ಬದಲಾಯಿಸಿಕೊಳ್ಳಲು ಉದ್ದೇಶಿಸಿರುವ ಹೆಸರು, ಹೆಸರು ಬದಲಾವಣೆಯ ಉದ್ದೇಶವನ್ನು ಸ್ಪಷ್ಟಪಡಿಸಿ, ಪೂರ್ವಾನುಮತಿಯನ್ನು ಪಡೆದುಕೊಳ್ಳುವುದು.
  2. ಹೆಸರು ಬದಲಾವಣೆಯ ಅರ್ಜಿಯ ಜತೆಗೆ ಹೆಸರಿನ ಇಂಗ್ಲಿಷ್‌ ಸ್ಪೆಲ್ಲಿಂಗ್‌ ನ್ನು ಸ್ಪಷ್ಟವಾಗಿ ನಮೂದಿಸಿ, ಖಾಯಂ ವಿಳಾಸದ ದಾಖಲೆಯೊಂದಿಗೆ ʼಖಜಾನೆಗೆ 15 ರೂಪಾಯಿʼ ಪಾವತಿಸಿದ ಚಲನ್‌ ಅನ್ನು ಲಗತ್ತಿಸಬೇಕು.
  3. ಚಲನ್‌ ಅನ್ನು ಖಜಾನೆ ಶೀರ್ಷಿಕೆ “XLV, Printing and stationary, fees for changing name” ಶೀರ್ಷಿಕೆಯಡಿ ತೆಗೆಯಬೇಕು.
  4. ನೇಮಕಾತಿ ಪ್ರಾಧಿಕಾರಕ್ಕೆ ಹೆಸರು ಬದಲಾವಣೆಯ ಉದ್ದೇಶ ಒಪ್ಪಿತವಾಗಿ, ಅನುಮತಿ ನೀಡಿದರೆ, ಸದ್ರಿ ನೇಮಕಾತಿ ಪ್ರಾಧಿಕಾರವು ಈ ಬಗ್ಗೆ ಹೆಸರು ಬದಲಾವಣೆ ನಿಯಮಗಳ ನಮೂನೆ-1 ರಲ್ಲಿ ವಿವರಗಳನ್ನು ಡೈರೆಕ್ಟರ್‌ ಆಫ್‌ ಪ್ರಿಂಟಿಂಗ್‌ ಮತ್ತು ಸ್ಟೇಷನರಿ ಮೈಸೂರು ಇವರಿಗೆ ಕಳುಹಿಸುತ್ತಾರೆ.
  5. ಡೈರೆಕ್ಟರ್‌ ಆಫ್‌ ಪ್ರಿಂಟಿಂಗ್‌ ಮತ್ತು ಸ್ಟೇಷನರಿ ಮೈಸೂರು ಇವರು ಹೆಸರು ಬದಲಾವಣೆಯನ್ನು ಕರ್ನಾಟಕದ ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಿ ಇದರ ಹತ್ತು ಮೂಲ ಪ್ರತಿಗಳನ್ನು ಮುದ್ರಿಸಿ 5 ಪ್ರತಿಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ಹಾಗೂ 5 ಪ್ರತಿಗಳನ್ನು ನೌಕರನಿಗೆ ಕಳುಹಿಸಿಕೊಡುತ್ತಾರೆ.
  6. ಸದ್ರಿ ರಾಜ್ಯಪತ್ರದ ಜತೆಗೆ ನೌಕರನು ದ್ವಿಪ್ರತಿಯಲ್ಲಿ ನಿಯಮ 11 ರ ಘೋಷಣೆಯನ್ನು ಮತ್ತು ನಿಯಮ 12 ರಲ್ಲಿನ ಘೊಷಣೆಯನ್ನು ನೇಮಕಾತಿ ಪ್ರಾದಿಕಾರಕ್ಕೆ ಸಲ್ಲಿಸಿದ ನಂತರ, ನೌಕರನು ಅಧಿಕೃತವಾಗಿ ಹೊಸ ಹೆಸರನ್ನು ಬಳಸಲು ಅವಕಾಶ ಪಡೆಯುತ್ತಾನೆ/ಳೆ.

(ಅದಾಗ್ಯೂ, ನೇಮಕಾತಿ ಪ್ರಾಧಿಕಾರವು ಸಕಾರಣದಿಂದ ಅನುಮತಿಯನ್ನು ನಿರಾಕರಿಸಿದರೆ, ನೌಕರನು ಇದರ ಬಗ್ಗೆ ಮೇಲ್ಮನವಿ / ಮರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.)

ಬೇಕಾಗುವ ಅರ್ಜಿ ನಮೂನೆಗಳು

Sharing Is Caring:

Leave a Comment