---Advertisement---

ಅಕ್ಷರದಾಸೋಹ ಶಾಲಾ ಅಡುಗೆ ಕೇಂದ್ರಗಳಲ್ಲಿಸೇವೆ ನಿರ್ವಹಿಸುತ್ತಿರುವಅಡುಗೆ ಸಿಬ್ಬಂದಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿಗಾಗಿ ತರಬೇತಿ

By kspstadk.com

Published On:

Follow Us
Mid day meal scheme
---Advertisement---
WhatsApp Group Join Now
Telegram Group Join Now

ಮಧ್ಯಾಹ್ನ ಉಪಾಹಾರ ಯೋಜನೆಯಡಿ ಅಡುಗೆ ಸಿಬ್ಬಂದಿ ಅನುಪಾಲನೆ ಮಾಡಬೇಕಾಗಿರುವ
ಪ್ರಾಮಾಣಿಕ ಕಾರ್ಯಕಾರಿ ವಿಧಾನಗಳು ( ಎಸ್.ಓ.ಪಿ.) ಹಾಗೂ ಸುರಕ್ಷತಾ ಕ್ರಮಗಳು

ಅಡುಗೆ ಪೂರ್ವ ಸಿದ್ಧತೆಯ ಪ್ರಮುಖ ಜವಾಬ್ದಾರಿಗಳು ಮತ್ತು ಮುನ್ನೆಚ್ಚರಿಕೆಗಳು :

  • ಅಡುಗೆ ಸಿದ್ಧಪಡಿಸುವಾಗ, ಸಿದ್ಧಪಡಿಸಿ ಬಡಿಸುವಾಗ ಪ್ರತಿಯೊಬ್ಬ ಅಡುಗೆ ಸಿಬ್ಬಂದಿ ಸುರಕ್ಷತೆಗಾಗಿ, ಸ್ವಚ್ಛತೆಯ
    ದೃಷ್ಟಿಯಿಂದ ಏಪ್ರಾನ್ ಮತ್ತು ತಲೆಗೆ ಟೋಪಿಯನ್ನು ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ
    ಧರಿಸುವುದು.
  • ಅವಧಿ ಮೀರದ ಆಹಾರ ಸಾಮಾಗ್ರಿಗಳನ್ನು ಅಡುಗೆಗೆ ಪಡೆದು ಬಳಸುವುದು.
  • ಖರೀದಿಸಿ ತಂದ, ಸರಬರಾಜು ಮಾಡಿರುವ ಆಹಾರ ಪದಾರ್ಥಗಳು, ಹಾಲಿನ ಪುಡಿ, ತರಕಾರಿ, ಅಡುಗೆ
    ಎಣ್ಣೆ, ಮಸಾಲೆ ಪದಾರ್ಥಗಳು ಇತ್ಯಾದಿ ಅವಧಿ ಮೀರುವ ಮುನ್ನವೇ ಖಾತ್ರಿಪಡಿಸಿಕೊಂಡು ಬಳಸುವುದು.
    ಇದಕ್ಕಾಗಿ FIFO, FEFO ಆಹಾರ ಪದಾರ್ಥಗಳ ಬಳಕೆಯ ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸುವುದು.
    ಆಹಾರ ಧಾನ್ಯಗಳ ಮೂಟೆಯ, ಪ್ಯಾಕ್ ಮೇಲೆ ದಾಸ್ತಾನಿಗೆ ಸ್ವೀಕರಿಸಿದ ದಿನಾಂಕವನ್ನು ಬರೆದಿಟ್ಟು ಮೊದಲು
    ಬಂದ ಪದಾರ್ಥವನ್ನು ಮೊದಲು ಬಳಸುವುದು.
  • ಮಾರುಕಟ್ಟೆ ಅಂಗಡಿಯಿಂದ ಖರೀದಿಸಿ ತರುವ ಆಹಾರ ಸಾಮಾಗ್ರಿಗಳ ಪ್ಯಾಕ್ ಮೇಲೆ ವಾಯಿದೆ ದಿನಾಂಕದೊಂದಿಗೆ ಗುಣಮಟ್ಟ ಮತ್ತು ಸುರಕ್ಷತೆಯ FSSAI , AG Mark, FPO, ISO Mark, F+
    (Fortified) ಇತ್ಯಾದಿ ಚಿಹ್ನೆಗಳಿರುವುದನ್ನು ನೋಡಿ ಖಾತ್ರಿ ಪಡಿಸಿಕೊಳ್ಳುವುದು, ಇಂತಹ ಗುಣಮಟ್ಟ
    ವಿಶ್ವಾಸಾರ್ಹ ಮತ್ತು ಸುರಕ್ಷತೆಯ ಪದಾರ್ಥಗಳನ್ನೇ ಅಡುಗೆಗೆ ಬಳಸುವುದು.
  • ಅಡುಗೆ ಕೋಣೆಯನ್ನು ಅಡುಗೆ ಮಾಡುವ
    ಪೂರ್ವದಲ್ಲಿ ನೆಲವನ್ನು ಗುಡಿಸಿ, ಸ್ವಚ್ಛ ನೀರಿನ ಒದ್ದೆ ಬಟ್ಟೆಯಿಂದ
    ಒರೆಸಿಕೊಂಡು ಸ್ವಚ್ಛಗೊಳಿಸಿಕೊಳ್ಳುವುದು. ಅಡುಗೆ ಪಾತ್ರೆಗಳನ್ನು ಸ್ವಚ್ಚ ನೀರಿನೆರೆದ / ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಬಳಸುವುದು
  • ಅಡುಗೆ ಕೋಣೆಯ ಒಳಗೋಡೆ, ನೆಲದ ಮೇಲೆ, ದಾಸ್ತಾನು ಕೊಠಡಿಯಲ್ಲಿ ಹಲ್ಲಿ, ಜಿರಲೆ, ನೊಣ, ಜೇಡ,
    ಇಲಿಗಳ ಸಂಚಾರ ಇಲ್ಲದಂತೆ ಪ್ರತಿ ದಿನ ಅಡುಗೆ ಮಾಡುವ ಪೂರ್ವದಲ್ಲಿ ನೋಡಿಕೊಳ್ಳುವುದು, ಸರಿಯಾದ ಕ್ರಮದಲ್ಲಿ ಗುಡಿಸಿ ಸ್ವಚ್ಛಗೊಳಿಸಿಕೊಳ್ಳುವುದು. ಕಿಟಕಿಗಳಿಗೆ ಮೆಶ್ ಹಾಕಿಸಿ ಒಳಗೆ ಬರದಂತೆ ತಡೆಗಟ್ಟುವುದು.
  • ಮಹಿಳಾ ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ಕೈಗೆ ತೊಟ್ಟಿರುವ ಕೈಬಳೆಗಳನ್ನು (ಗಾಜಿನ, ಲೋಹದ),
    ಉಂಗುರಗಳನ್ನು, ಮಣಿಸರ ಮುಂತಾದ ಆಭರಣಗಳನ್ನು ಅಡುಗೆ ಕೋಣೆಗೆ ಪ್ರವೇಶಿಸುವ ಪೂರ್ವದಲ್ಲಿ
    ತೆಗೆದಿಡಬೇಕು. ಕೈಬಳೆಗಳನ್ನು, ಉಂಗುರಗಳನ್ನು ಹಾಕಿಕೊಂಡು ಕೆಲಸ ಮಾಡಬಾರದು.
  • ರೇಷ್ಮೆ, ಪಾಲಿಯಿಸ್ಟರ್, ನೈಲಾನ್, ಸಿಂಥೆಟಿಕ್ ಸೀರೆಗಳನ್ನು ಉಟ್ಟು ಕೆಲಸಕ್ಕೆ ಹಾಜರಾಗಬಾರದು. ಇವುಗಳ ಬದಲಿಗೆ ಕಾಟನ್ (ಹತ್ತಿ) ಸೀರೆಗಳನ್ನು ಉಟ್ಟು ಅಡುಗೆ ಕೆಲಸದಲ್ಲಿ ತೊಡಗಬೇಕು, ಕಾರಣ ಬೆಂಕಿ ಅಪಘಾತಗಳನ್ನು ಇದರಿಂದ ತಡೆಯಲು ಸಾಧ್ಯವಾಗುತ್ತದೆ.
  • ಅಡುಗೆ ಸಿಬ್ಬಂದಿಯು ಬಾಯಿಯಲ್ಲಿ ಎಲೆ ಅಡಕೆ ಜಗಿಯುತ್ತಾ ಕೆಲಸ ಮಾಡುವುದು, ಎಲ್ಲೆಂದರಲ್ಲಿ ಉಗುಳುವುದು
    ತಂಬಾಕು ಸೇವನೆ, ಕಡ್ಡಿಪುಡಿ ಸೇವನೆ ಮುಂತಾದ ನಶೆ ವಸ್ತುಗಳನ್ನು ಸೇವಿಸುವುದು ಕಡ್ಡಾಯವಾಗಿ ನಿಷೇಧಿಸಿದೆ..
  • ಅಡುಗೆ ಕೆಲಸದ ಪೂರ್ವದಲ್ಲಿ ತಮ್ಮ ಎರಡೂ ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಸೋಪು/ಸಾಬೂನು ಬಳಸಿ
    ಕೈತೊಳೆದು ಕೊಂಡು ಅಡುಗೆ ಕೆಲಸ ಪ್ರಾರಂಭಿಸುವುದು. ಕೈಗಳಲ್ಲಿ ಉಗುರು ಬೆಳೆಸಿಕೊಂಡಿರಬಾರದು.
    ತಲೆಗೆ ಸರಿಯಾದ ಕ್ರಮದಲ್ಲಿ ತಲೆಗವಸು ಹಾಕಿಕೊಂಡ ಕೆಲಸ ಮಾಡಬೇಕು.
  • ಜ್ವರ, ಕೆಮ್ಮು, ಶೀತ ಮುಂತಾದ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ ರಜೆ ತೆಗೆದುಕೊಳ್ಳುವುದು ಹಾಗೂ ಬದಲಿ ವ್ಯವಸ್ಥೆ
    ಮಾಡಿಕೊಳ್ಳುವುದು.

ವರ್ಷದಲ್ಲಿ ಎರಡು ಬಾರಿ ಇಲ್ಲವೆ ಒಂದು ಬಾರಿ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಮಗ್ರ ತಪಾಸಣೆ ಮಾಡಿಸಿಕೊಂಡು
ವರದಿಯನ್ನು ಶಾಲಾ ಮುಖ್ಯಶಿಕ್ಷಕರಿಗೆ ಅಗತ್ಯ ಕ್ರಮಕ್ಕಾಗಿ ಸಲ್ಲಿಸುವುದು ಕಡ್ಡಾಯಗೊಳಿಸಿದೆ.

  • ಅಡುಗೆ ಕೋಣೆಯಲ್ಲಿ ಪಾತ್ರೆ ಹಿಡಿದುಕೊಳ್ಳುವ, ನೆಲ ಒರೆಸುವ ಮತ್ತು ಗಂಜಿ ಬಸೆಯುವ ಬಟ್ಟೆಗಳನ್ನು ಬಳಸಿದ ನಂತರ
    ಸಾಬೂನಿನಿಂದ ಶುದ್ಧ ನೀರಿನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಿ ಮರುಬಳಸುವುದು.
  • ಪ್ರತಿದಿನ ಅಡುಗೆ ಕೆಲಸಕ್ಕೆ ನಿಯಮಿತವಾಗಿ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಿ ಹಾಜರಾತಿ ಸಹಿಯೊಂದಿಗೆ
    ಬೆಳೆಗಿನ ಬಿಸಿಹಾಲು ಮತ್ತು ಮಧ್ಯಾಹ್ನದ ಬಿಸಿಯೂಟವನ್ನು ಸಿದ್ಧಪಡಿಸುವ ಪೂರ್ವ ಸಿದ್ಧತೆಯೊಂದಿಗೆ ಕೆಲಸ
    ನಿರ್ವಹಿಸುವುದು,
  • ಅಡುಗೆ ಕೋಣೆಗೆ ಮತ್ತು ಆಹಾರ ದಾಸ್ತಾನು ಕೊಠಡಿಗೆ ಶಾಲೆಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಎಸ್.ಡಿ.ಎಂ.ಸಿ.
    ಸದಸ್ಯರು, ತಾಯಂದಿರ ಸಮಿತಿ ಸದಸ್ಯರನ್ನು ಹೊರತು ಪಡಿಸಿ ಅಪರಿಚಿತರಿಗೆ ಪ್ರವೇಶವನ್ನು ನೀಡಬಾರದು.
  • ಅಡುಗೆ ಕೆಲಸದಲ್ಲಿ ಮತ್ತು ಸಿದ್ಧಪಡಿಸಿದ ಬಿಸಿಯೂಟ ವಿತರಣೆಯಲ್ಲಿ ಶಾಲಾ ಮಕ್ಕಳನ್ನು ಬಳಸಿಕೊಳ್ಳಬಾರದು.
  • ಆಹಾರ ಸಾಮಾಗ್ರಿಗಳಾದ ಅಕ್ಕಿ, ಗೋಧಿ, ತೊಗರಿ ಬೇಳೆ, ಕಾಳುಗಳು ಮುಂತಾದವುಗಳನ್ನು ವಾರದ ಮುಂಚೆ
    ಚೆನ್ನಾಗಿ ಸೂಸಿಕೊಂಡು ಕಲ್ಲು, ಮಣ್ಣು, ಕಡ್ಡಿ, ಲೋಹದ ತುಂಡುಗಳು ಇರದಂತೆ ಹಸನು ಮಾಡಿಕೊಳ್ಳುವುದು.
  • ಆಗಾಗ್ಗೆ ವಾರಕ್ಕೆ ಒಮ್ಮೆ ಇಲ್ಲವೇ ಹದಿನೈದು ದಿನಗಳಿಗೆ ಒಮ್ಮೆಯಾದರೂ ಮದ್ಯಾಹ್ನದ ಬಿಸಿಲಿನಲ್ಲಿ ಗೋಧಿ,
    ತೊಗರಿಬೇಳೆ, ಅಕ್ಕಿ, ಕಾಳುಗಳನ್ನು ಇತ್ಯಾದಿ ಒಣಹಾಕಿ ಹುಳಹಿಡಿಯದಂತೆ ನೋಡಿಕೊಂಡು ಅಡುಗೆಗೆ
    ಸಿದ್ಧಪಡಿಸಿಟ್ಟುಕೊಳ್ಳುವುದು, ಹುಳು ಹಿಡಿದ ಪದಾರ್ಥಗಳನ್ನು ಅಡುಗೆಗೆ ಬಳಸದಂತೆ ಎಚ್ಚರಿಕೆ ವಹಿಸುವುದು.
  • ತರಕಾರಿಗಳನ್ನು, ಕಾಯಿಪಲ್ಯ ಸೊಪ್ಪುಗಳನ್ನು ಶುದ್ಧವಾದ ನೀರಿನಿಂದ ( ಅರಿಶಿನ ಮತ್ತು ಉಪ್ಪು ಬೆರೆಸಿದ)
    ತೊಳೆದು, ಜರಡಿ ಹಿಡಿದು, ಸೂಸಿಕೊಂಡು, ಅಡುಗೆಗೆ ಹೆಚ್ಚಲು ತಯಾರಿ ಮಾಡಿಕೊಳ್ಳುವುದು. ಚೆನ್ನಾಗಿ
    ತೊಳೆದು ಒಣಗಿಸಿದ ಸ್ಟೀಲ್ ತಟ್ಟೆ, ಸ್ಟೀಲ್ ಹರಿವಾಣ ಅಥವಾ ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿಕೊಂಡ ತರಕಾರಿ-
    ಸೊಪ್ಪುಗಳ ತುಂಡುಗಳನ್ನು ಸಂಗ್ರಹಿಸಿಟ್ಟುಕೊಂಡು ಅಡುಗೆಗೆ ಬಳಸುವುದು. ಯಾವುದೇ ಕಾರಣಕ್ಕೂ ನೆಲದ
    ಮೇಲೆ ಹರಡಿಕೊಂಡು ನೆಲದ ಮೇಲೆ ಇಟ್ಟುಕೊಂಡು ಅಡುಗೆಗೆ ಬಳಸಬಾರದು. ತರಕಾರಿ ಹೆಚ್ಚುವ ಸ್ಟೀಲ್
    ಚಾಕು, ಮರದ / ಪ್ಲಾಸ್ಟಿಕ್ / ಸ್ಟೀಲ್ ಹಲಗೆಗಳನ್ನು ಬಿಸಿನೀರಿನಿಂದ ತೊಳೆದು ನಿರ್ವಹಿಸುವುದು.
  • ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಸುವ ಮುನ್ನ ವಾಸನೆ ಗ್ರಹಿಸುವುದು ಸೂಕ್ತ ಹಾಗೂ ಭೌತಿಕವಾಗಿ
    ಪರಿಶೀಲಿಸಿ ಕಳಪೆಯಾಗಿದೆಯೇ ? ಇಲ್ಲವೇ ಉತ್ತಮವಾಗಿದೆಯೇ ? ಎಂದು ನೋಡಿಪರೀಕ್ಷಿಸಿಕೊಳ್ಳುವುದು
    ಮುನ್ನೆಚ್ಚರಿಕೆಯ ಕ್ರಮವಾಗಿ ಒಳ್ಳೆಯದು.
  • ಒಂದು ವೇಳೆ ಕೊಳೆತುಹೋಗಿರುವ, ಕೆಟ್ಟ ವಾಸನೆ ಬರುತ್ತಿರುವ, ಬೂಸ್ಟ್ ಹಿಡಿದಿರುವ, ಯಾವುದೇ
    ರಾಸಾಯಿನಿಕದಿಂದ ಮಿಶ್ರಣಗೊಂಡು ಕೆಟ್ಟ ವಾಸನೆ ಬರುತ್ತಿರುವ ಸೊಪ್ಪು, ತರಕಾರಿಗಳಾಗಲಿ, ಹಣ್ಣುಗಳಾಗಲಿ,
    ಅಂಗಡಿಯಿಂದ ಖರೀದಿಸಿ ತಂದ ಯಾವುದೇ ಪದಾರ್ಥಗಳಾಗಲಿ, ಅಕ್ಕಿ, ಗೋಧಿ, ತೊಗರಿಬೇಳೆ, ಕಾಳುಗಳು,
    ಮೊಟ್ಟೆ , ಅಡುಗೆ ಎಣ್ಣೆ ಇತ್ಯಾದಿ ಪದಾರ್ಥಗಳನ್ನು ಅಡುಗೆಗೆ ಬಳಸಬಾರದು.
  • ಅಡುಗೆಗೆ ಶುದ್ಧವಾದ ನೀರನ್ನೇ ಬಳಸುವುದು. ಅಡುಗೆ ಪೂರ್ವದಲ್ಲಿ ಶುದ್ಧ ಸಿಹಿ ನೀರಿನ ಸಂಗ್ರಹಣೆ ಸ್ವಚ್ಛ
    ಪಾತ್ರೆಯಲ್ಲಿ ಮಾಡಿಕೊಳ್ಳುವುದು.
  • ಶಾಲಾ ಮಕ್ಕಳಿಗೆ ಶುದ್ಧವಾದ ಆರ್.ಓ. ನೀರನ್ನೇ ಕುಡಿಯಲು ಒದಗಿಸುವುದು
  • ಅಡುಗೆ ತಯಾರಿ ಮಾಡಿಕೊಳ್ಳುವ ಪೂರ್ವದಲ್ಲಿ ಆಡುಗೆ ಮನೆಯ ಕಿಟಕಿ, ಬಾಗಿಲುಗಳನ್ನು ತೆಗೆದು, ಶುದ್ಧ ಗಾಳಿ,ಬೆಳಕು ಬರುವಂತೆ ನೋಡಿಕೊಳ್ಳುವುದು.
  • ಒಂದು ವೇಳೆ ಅಡುಗೆ ಮಾಡುವ ಮುನ್ನವೇ, ಎಲ್.ಪಿ.ಜಿ. ಗ್ಯಾಸ್ ಲೀಕೇಜ್ ಆಗಿ ವಾಸನೆ ಬರುತ್ತಿದ್ದಲ್ಲಿ, ಕೂಡಲೇ ಸ್ಟವ್ ಹಚ್ಚದೇ, ಕೂಡಲೇ ಎಲ್.ಪಿ.ಜಿ. ಸಿಲಿಂಡರ್ ರೆಗ್ಯೂಲೇಟರ್ ಆಫ್ ಮಾಡುವುದು, ಹಾಗೂ ಸ್ಥಳೀಯ ಎಲ್.ಪಿ.ಜಿ. ವಿತರಕರನ್ನು ಸಂಪರ್ಕಿಸಿ ಶಾಲೆಗೆ ಬರುವಂತೆ ಮಾಡಿಕೊಂಡು ಪರಿಶೀಲನೆ ನಡೆಸಿ ರಿಪೇರಿ
    ಮಾಡಿಸಿಕೊಂಡು ನಂತರವೇ ಅಡುಗೆಗೆ ಗ್ಯಾಸ್ ಸ್ಟವನ್ನು ಹಚ್ಚಿ ಬಳಸುವುದು.
  • ಒಂದು ವೇಳೆ, ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ಅರ್ದದಲ್ಲಿಯೇ ಖಾಲಿಯಾದರೆ, ಕೂಡಲೇ ಸ್ಟವ್ ರೆಗ್ಯೂಲೇಟರ್
    ಆಫ್ ಮಾಡಿ ಸಿಲಿಂಡರ್‌ನ್ನು ಸ್ಪವ್ ನಿಂದ ಸುರಕ್ಷಿತವಾಗಿ ಸಹಾಯಕರ ನೆರವಿನಿಂದ ಬೇರ್ಪಡಿಸುವುದು. ಸ್ಟವ್ ಸ್ವಲ್ಪ
    ತಣ್ಣಗಾದ ಮೇಲೆ ಹೊಸ ಭರ್ತಿಸಿದ ಸಿಲಿಂಡರ್‌ನ್ನು ಅಳವಡಿಸಿಕೊಳ್ಳುವುದು. ಇದನ್ನು ಹೊರತು ಪಡಿಸಿ ಗ್ಯಾಸ್ ಸ್ಟವ್
    ಉರಿಯುತ್ತಿರುವಾಗಲೇ ಪೈಪ್ ಕಿತ್ತು ಹಾಕಿ ಖಾಲಿಯಾದ ಸಿಲಿಂಡರ್‌ನ್ನು ಬದಲಾಯಿಸುವ ಹಾಗೂ ಭರ್ತಿ ಮಾಡಿದ
    ಸಿಲಿಂಡರ್‌ನ್ನು ನೇರವಾಗಿ ಅಳವಡಿಸಿಕೊಳ್ಳುವ ಅಪಾಯಕಾರಿ ಕೆಲಸ ಎಂದಿಗೂ ಮಾಡಬಾರದು.
  • ಅಡುಗೆ ಕೋಣೆಯಲ್ಲಿ ಅಕಸ್ಮಿಕ ಬೆಂಕಿ ಅಫಘಾತಗಳು ಉಂಟಾದಲ್ಲಿ, ಸ್ಟವ್ ಬ್ಲಾಸ್ಟ್, ಕುಕರ್ ಬ್ಲಾಸ್ಟ್ ಆಗಿ, ಎಲ್.ಪಿ.ಜಿ.
    ಸಿಲಿಂಡರ್ ಸ್ಫೋಟವಾಗಿ, ಗ್ಯಾಸ್ ಪೈಪ್ ಲೈನ್ ಬೆಂಕಿ ಹತ್ತಿಕೊಳ್ಳುವುದು, ಇಲ್ಲವೇ ಅಡುಗೆ ಮಾಡುವಾಗ ಸೀರೆಗೆ
    ಬಟ್ಟೆಗೆ, ಜಡೆಗೆ ಬೆಂಕಿ ತಗುಲಿಕೊಂಡಾಗ, ಇಲ್ಲವೇ ಅಡುಗೆ ಮನೆಯಲ್ಲಿ ವಿದ್ಯುತ್ ಶಾರ್ಟ ಸರ್ಕೂಟ್ ಆಗಿ ಬೆಂಕಿ
    ಹತ್ತಿಕೊಂಡಲ್ಲಿ, ಬೆಂಕಿ ಶಮನ ಮಾಡಲು ಅಗ್ನಿ ನಂದಕ | FIRE EXTINGUISHER ವನ್ನು ಯಾವಾಗಲೂ
    ಸಿದ್ಧವಿರಿಸಿಟ್ಟುಕೊಂಡು ಕೂಡಲೇ ಅಪರೇಟ್ ಮಾಡಿ ಬೆಂಕಿ ಆರಿಸುವುದು. ಇದಕ್ಕಾಗಿ ಸೂಕ್ತ ತರಬೇತಿಯನ್ನು
    ಪ್ರತಿಯೊಬ್ಬ ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಹೊಂದಿರಬೇಕು. ಪ್ರತಿ ಅಡುಗೆ ಕೋಣೆಯಲ್ಲಿ ಈ ಬೆಂಕಿ ಸುರಕ್ಷಿತ
    ಉಪಕರಣ ಕಡ್ಡಾಯವಾಗಿ ಇರಬೇಕು.
  • ಅಗ್ನಿನಂದಕವನ್ನು ನೆಲದ ಹಂತದಿಂದ ಮೇಲಕ್ಕೆ 3 ರಿಂದ 4 ಅಡಿ ಎತ್ತರದಲ್ಲಿ ಗೋಡೆಯ ಮೇಲೆ
    ಅಳವಡಿಸಿರಬೇಕು. ಕೈಗೆ ಕೂಡಲೇ ಸಿಗುವಂತೆ ಅಡುಗೆ ಕೋಣೆಯಲ್ಲಿ ಇಟ್ಟು ನಿರ್ವಹಿಸಿರಬೇಕು. ಪ್ರತಿ 6
    ತಿಂಗಳಿಗೊಮ್ಮೆ ರೀಫಿಲ್ ಮಾಡಿಸಿ ಯಾವುದೇ ಕ್ಷಣದಲ್ಲಿ ಬಳಸುವಂತೆ ಸಿದ್ಧವಾಗಿಟ್ಟಿರಬೇಕು.
  • ಕುಕರ್ ಬಳಸುವಾಗ, ಗ್ಯಾಸ್ಕಟ್ ಉತ್ತಮ ಗುಣಮಟ್ಟದ್ದಾಗಿರಬೇಕು. ಕುಕರ್ ವಿಶಲ್ ನ್ನು ಸರಿಯಾಗಿ ಕೌಂಟ ಮಾಡಿಕೊಂಡು ಸೂಕ್ತ ಸಮಯದಲ್ಲಿ ಗ್ಯಾಸ್ ಸ್ಟವ್ ಬೆಂಕಿ ಆರಿಸಬೇಕು. ಕುಕರ್ ತಂಪಾದಾಗ ಮಾತ್ರವೇ ಕೆಳಗೆ ಇಳಿಸಿ ನಂತರ ಅದರ ಬಾಯಿನ್ನು ಮುಚ್ಚಳವನ್ನು ಓಪನ್ ಮಾಡಬೇಕು. ಅವಸರದಲ್ಲಿ ಕುಕರ್ ನೊಂದಿಗೆ ಕೆಲಸ ಮಾಡಬಾರದು. ಕುಕರ್‌ನಲ್ಲಿ ತೊಗರಿಬೇಳೆಯನ್ನು ಬೇಯಿಸಬಾರದು.

ಅಡುಗೆ ಮಾಡುವಾಗ ನಿರ್ವಹಿಸುವ ಪ್ರಮುಖ ಜವಾಬ್ದಾರಿಗಳು ಮತ್ತು ಮುನ್ನೆಚ್ಚರಿಕೆಗಳು :

  • ಅಡುಗೆ ಮಾಡುವಾಗ ತಾಜಾ ತರಕಾರಿಗಳನ್ನು ದೊಡ್ಡ ತುಣುಕುಗಳನ್ನಾಗಿ ಹೆಚ್ಚಿಕೊಂಡು ಬಳಸುವುದು.
  • ಸ್ವಚ್ಛಗೊಳಿಸಿದ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನೇ ಆಯಾ ದಿನದ ಮಕ್ಕಳ ಹಾಜರಾತಿ ಸಂಖ್ಯೆಗೆ
    ಅನುಗುಣವಾಗಿ ದಾಸ್ತಾನು ಕೊಠಡಿಯಿಂದ ಮುಖ್ಯಶಿಕ್ಷಕರಿಂದ ನಿಗದಿತ ಪ್ರಮಾಣದಲ್ಲಿ ಅಳತೆ ಮಾಡಿಸಿ ಪಡೆದು
    ಅಡುಗೆಗೆ ಬಳಸುವುದು.
  • ಕಡಿಮೆ ಪ್ರಮಾಣದಲ್ಲಿ ಆಹಾರ / ಬಿಸಿಯೂಟ / ಬಿಸಿ ಹಾಲು ತಯಾರಿಸಬಾರದು. ಮಕ್ಕಳ ಹಾಜರಾತಿಗೆ ನಿಗಧಿತ
    ಪ್ರಮಾಣದಲ್ಲಿ ಆಹಾರ ಸಿದ್ಧಪಡಿಸಿ ವಿತರಿಸುವುದು.
  • ವಾರದ ಮೆನುವಿನಂತೆ ಆಯಾ ದಿನದ ಆಹಾರ/ ಬಿಸಿಯೂಟ ಮಾದರಿಯನ್ನೇ ಉತ್ತಮವಾಗಿ ತಯಾರಿಸಿ ಶುಚಿ-ರುಚಿಯಿಂದ ಮಕ್ಕಳಿಗೆ ಬಡಿಸುವುದು. ವಾರದ ಎಲ್ಲಾ ದಿನಗಳಲ್ಲಿಯೂ ತೊಗರಿ ಬೇಳೆಯನ್ನು ಬಳಸಿ ಆಹಾರತಯಾರಿಸುವುದು. ವಾರದ ಕೊನೆಯ ದಿನವಾದ ಶನಿವಾರದಂದು ಗೋಧಿಯ ಆಹಾರವನ್ನು ಮೆನುವಿನಲ್ಲಿರುವಂತೆ ಸಿದ್ದಪಡಿಸಿ ವಿತರಿಸುವುದು.
  • ಮೊಟ್ಟೆ ಸ್ವೀಕರಿಸುವ ಮಕ್ಕಳಿಗೆ ಮೊಟ್ಟೆಯನ್ನು ( 50 ಗ್ರಾಂ ತೂಕದ) ಸರಿಯಾಗಿ ಶುದ್ಧ ನೀರಿನಲ್ಲಿ ಬೇಯಿಸಿ ವಿತರಿಸುವುದು. ಕಳಪೆ, ಕೊಳೆತೆ ಇಲ್ಲವೇ ಒಡೆದು ಹಾಳಾಗಿರುವ, ಇಲ್ಲವೇ ಅರ್ದ ಪ್ರಮಾಣದಲ್ಲಿ ಮೊಟ್ಟೆಯನ್ನು ಮಕ್ಕಳಿಗೆ ವಿತರಿಸಬಾರದು. ಸ್ವಚ್ಛ ಕೈಗಳಿಂದ ವಿತರಿಸಬೇಕು. ಮೊಟ್ಟೆ ಸ್ವೀಕರಿಸದೇ ಇರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಮಾಗಿದ ಬಾಳೆಹಣ್ಣು (2), ಇಲ್ಲವೇ ( 35-45 ಗ್ರಾಂ ತೂಕದ ) ಶೇಂಗಾ ಚಿಕ್ಕಿಯನ್ನು ವಿತರಿಸುವುದು.
  • ಪ್ರತಿ ದಿನದ ಆಹಾರ/ಬಿಸಿಯೂಟದಲ್ಲಿ ಸಾಂಬಾರಿನಲ್ಲಿ ಸಾಕಷ್ಟು ವಿವಿಧ ಬಗೆಯ ತಾಜಾ ತರಕಾರಿಗಳನ್ನು, ಸೊಪ್ಪುಗಳನ್ನು , ಒಣ ಕಾಳುಗಳನ್ನು ಉತ್ತಮ ಮಸಾಲೆಯ ಪದಾರ್ಥದೊಂದಿಗೆ ಬಳಸಿ ತಯಾರಿಸಿ ವಿತರಿಸುವುದು.
  • ಹೊರಗಿನ ಬೇಕರಿ, ಹೋಟೆಲ್ ನಿಂದಾಗಲಿ, ಬೇರೆ ಮೂಲದಿಂದಾಗಲಿ ಸಿಹಿ ತಿಂಡಿಗಳನ್ನು ಖರೀದಿಸಿ ಮಕ್ಕಳಿಗೆ ಹಂಚಲು ತರಬಾರದು. ಶಾಲಾ ಅಡುಗೆ ಕೇಂದ್ರದಲ್ಲಿಯೇ ಸಿಹಿ ತಿಂಡಿಗಳನ್ನು ( ಕೀರು, ಪಾಯಸ, ಹೋಳಿಗೆ, ಕೊಬ್ಬರಿ ಬೆಲ್ಲದ ಮಿಠಾಯಿ, ಸಜ್ಜುಕ, ಬೂಂದಿ, ಕ್ಯಾರೇಟ್ ಹಲ್ವ, ರವೆ ಉಂಡೆ, ಬೆಲ್ಲದ ಶೇಂಗಾ ಚಿಕ್ಕಿ, ಜಾಮೂನು ಇತ್ಯಾದಿ) ಸಿದ್ದಪಡಿಸಿ ಶಾಲಾ ಮಕ್ಕಳಿಗೆ ವಿತರಿಸುವುದು ಸೂಕ್ತವಾಗಿರುವುದು.
  • ಸ್ವಯಂ ಸೇವಾ ಸಂಸ್ಥೆಯ ( ಎನ್.ಜಿ.ಓ.)ವರಿಂದ ಸರಬರಾಜಾದ ಸಿದ್ಧಪಡಿಸಿದ ಆಹಾರ / ಬಿಸಿಯೂಟ
    ಆಯಾ ದಿನದ ಮೆನುವಿನಂತೆ ಇದೆಯೇ? ಶುಚಿ-ರುಚಿ ಉತ್ತಮವಾಗಿದೆಯೇ? ಅಂದಿನ ದಿನದ ಮಕ್ಕಳ
    ಹಾಜರಾತಿಗೆ ತಕ್ಕಂತೆ, ನಿಗಧಿಪಡಿಸಿದ ಪ್ರಮಾಣಕ್ಕೆ ಅನುಗುಣವಾಗಿ ಆಹಾರ
    ಸರಬರಾಜಾಗಿದೆಯೇ? ಸುರಕ್ಷಿತ ಕ್ರಮದಲ್ಲಿ ಕ್ಲೋಸ್ ಸ್ಟೀಲ್ ಕಂಟೈನರ್ ನಲ್ಲಿ ಸರಬರಾಜು
    ಮಾಡಿರುವರೇ? ಶಾಲೆಗೆ ತಲುಪಿಸಿದ ಸಮಯ, ಹಾಗೂ ಶಾಲೆಗೆ ತಲುಪಿಸಿದ ಸಮಯದಲ್ಲಿ
    ಬಿಸಿಯೂಟದ ತಾಪಮಾನ 65 ಡಿಗ್ರಿ ಸೆಲ್ಸಿಯಸ್ ಇದೆಯೇ? ಎಂಬುದನ್ನು ಥರ್ಮಾಮೀಟರ್ ಇಟ್ಟು
    ಪರೀಕ್ಷಿಸಿಕೊಂಡು ಸುರಕ್ಷತೆ, ತಾಪಮಾನ, ಪ್ರಮಾಣ, ಗುಣಮಟ್ಟದ ಬಗ್ಗೆ ತಪ್ಪದೇ ಖಾತ್ರಿ ಪಡಿಸಿಕೊಳ್ಳುವುದು.
  • ಪ್ರತಿ ದಿನ ಸ್ವಯಂ ಸೇವಾ ಸಂಸ್ಥೆಯವರಿಂದ ಶಾಲೆಗೆ ಸರಬರಾಜಾಗಿರುವ ಆಹಾರ ಸಿದ್ಧಪಡಿಸಿದ
    ಬಿಸಿಯೂಟದ ಕುರಿತು ಶಾಲೆಯಲ್ಲಿ ನಿರ್ವಹಿಸಿರುವ ರಿಜಿಸ್ಟರ್‌ನಲ್ಲಿ ನಮೂದಿಸಿ, ತಲುಪಿಸಿದ ಸಮಯ,
    ದಿನಾಂಕ, ಮತ್ತು ಸ್ವೀಕರಿಸಿದ ಮುಖ್ಯ ಅಡುಗೆ/ಸಹಾಯಕ ಅಡುಗೆಯ ಸಿಬ್ಬಂದಿಯ ಹೆಸರು,ಸಹಿಯೊಂದಿಗೆ ಮುಖ್ಯಶಿಕ್ಷಕರು ದಾಖಲೆ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಮುಖ್ಯಶಿಕ್ಷಕರ ಸದರಿ ಕ್ರಮಗಳಿಗೆ ತಪ್ಪದೇ ಸಹಕರಿಸುವುದು.
  • ಪ್ರತಿ ನಿತ್ಯ ಶಾಲಾ ಅಡುಗೆ ಕೆಂದ್ರದಲ್ಲಿ ಇಲ್ಲವೇ ಸ್ವಯಂ ಸೇವಾ ಸಂಸ್ಥೆಯಿಂದ ಸರಬರಾಜಾಗಿರುವ
    ಸಿದ್ಧಪಡಿಸಿದ ಆಹಾರ / ಬಿಸಿಯೂಟವನ್ನು ಶಾಲಾ ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿಯೇ ಮುಖ್ಯ
    ಅಡುಗೆಯವರು ಇಲ್ಲವೇ ಸಹಾಯಕ ಅಡುಗೆಯವರು ಕಡ್ಡಾಯವಾಗಿ ಊಟ ಮಾಡಿ ಆಹಾರದ
    ಶುಚಿ – ರುಚಿಯನ್ನು ಪರೀಕ್ಷಿಸಿ ಖಾತ್ರಿಪಡಿಸಿಕೊಂಡು ಶುಚಿ ರುಚಿ ದಾಖಲೆಯವಹಿಯಲ್ಲಿ
    ಅಭಿಪ್ರಾಯದೊಂದಿಗೆ ನಮೂದಿಸಿ ಸಹಿ ಮಾಡುವುದು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು,
    ಮೇಲ್ವಿಚಾರಕ ಅಧಿಕಾರಿಗಳು, ಸಿ.ಆರ್.ಪಿ.ಯವರು, ವಿಷಯ ಪರಿವೀಕ್ಷಕರು, ಅಕರ ದಾಸೋಹ
    ಅಧಿಕಾರಿಗಳು ಪರಿವೀಕ್ಷಣೆಗೆ ಶಾಲೆಗೆ ಬಂದಾಗ ಪರಿಶೀಲನೆಗೆ ಹಾಜರುಪಡಿಸುವುದು ಕಡ್ಡಾಯಗೊಳಿಸಿದೆ.
  • ತಾಯಂದಿರ ಸಮಿತಿಯ ಸದಸ್ಯರಿಗೆ ಎಸ್.ಡಿ.ಎಂ.ಸಿ. ಸದಸ್ಯರಿಗೆ, ಪೋಷಕರಿಗೆ ಪರಿಶೀಲನೆಗೆ ಶಾಲೆಗೆ
    ಭೇಟಿ ನೀಡಿದಾಗ ಅಡುಗೆ ಕೇಂದ್ರದ, ಆಹಾರ ದಾಸ್ತಾನು ಕೊಠಡಿಯ ಸ್ವಚ್ಛತೆ, ಸುರಕ್ಷತೆ, ಅಡುಗೆ
    ಸಿದ್ದಪಡಿಸಿ ವಿತರಿಸುವ ಬಗ್ಗೆ ತೆಗೆದುಕೊಂಡಿರುವ ಸ್ವಚ್ಛತೆ, ಗುಣಮಟ್ಟ, ಸುರಕ್ಷತೆಯ ಕ್ರಮಗಳ ಬಗ್ಗೆ
    ಮುಖ್ಯಆಡುಗೆಯವರು ಸ್ಥಳದಲ್ಲಿಯೇ ಮಾಹಿತಿಯನ್ನು
    ನೀಡುವುದು.
EEDS update
EEDS update
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment