ಎಂಟನೇ ದಿನ ಕವಿತೆ ಕಟ್ಟೋಣ ಹಾಡು ಹಾಡೋಣ ಹಾಡುಗಳನ್ನು ಹಾಡುವುದು ಮತ್ತು ಕಲಿಸುವುದೆಂದರೆ ಮಕ್ಕಳಿಗಂತೂ ಪಂಚಪ್ರಾಣ, ಹಾಡು,ಮಕ್ಕಳನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತದೆ. ‘ಕವಿತೆ ಕಟ್ಟೋಣ ಹಾಡು ಹಾಡೋಣ’ ಇದರ ಪರಮ ಗುರಿ ಮಕ್ಕಳಲಿ ಆನಂದವನ್ನು ಉಂಟುಮಾಡುವುದು, ಇದರ ತತ್ಪಲವಾಗಿ ಮಕ್ಕಳು ಹಾಡುತ್ತಾರೆ ಆನಂದಿಸಿ ನಲಿಯುತ್ತಾರೆ. ಕೊಟ್ಟಂತಹ ಸನ್ನಿವೇಶ ಹಾಗೂ ಪದಗಳ ಜೋಡಣೆಯೊಂದಿಗೆ ತಮ್ಮದೇ ಆದ ಕವಿತೆ ರಚಿಸುತ್ತಾರೆಮತ್ತು ತಮಗಿಷ್ಟವಾದ ರಾಗದೊಂದಿಗೆ ಹಾಡುತ್ತಾರೆ. ಒಟ್ಟಾರೆಯಾಗಿ ಮಕ್ಕಳು ಸಂತಸದಾಯಕವಾಗಿ ಹಾಡಿನ ರಸ ಸಾದನೆಯನ್ನು ಮಾಡುವುದು ಮತ್ತು ಸೃಜನ ಶೀಲತೆಯನ್ನು ಬೆಳೆಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ.
1. ಕವಿತೆ ಕಟೋಣ
ಚಟುವಟಿಕೆಗಳು
ಮಕ್ಕಳಿಗೆ ಯಾವುದಾದರೂ ನಿದರ್ಶನವನ್ನು ನೀಡುವುದು ಚಿತ್ರ ಪ್ರದರ್ಶನ ಮಾಡುವುದು, ಅಥವಾ ಯಾವುದಾದರೂ ಒಂದು ವಾಕ್ಯವನ್ನು ಹೇಳುವುದು, ಮಕ್ಕಳು ಅದಕ್ಕೆ ಪೂರಕವಾಗಿ ಆಲೋಚಿಸಿ ಐದಾರು ಸಾಲುಗಳ ಕವಿತೆ ಕಟ್ಟುತ್ತಾರೆ. ಇದು ಯಾವುದೇ ವ್ಯಕ್ತಿ, ಪರಿಸರ, ಪ್ರಾಣಿ-ಪಕ್ಷಿಯ ಕುರಿತಾಗಿ ಇರಲಿ, ನಂತರ ಒಂದೊಂದು ಸಾಲುಗಳನ್ನು ಕತ್ತರಿಸಿ ಹರಡಿ ಇಡುತ್ತಾರೆ. ಪ್ರತಿ ವಿದ್ಯಾರ್ಥಿಯೂ ತನಗೆ ಇಷ್ಟವಾದ ಒಂದೊಂದು ಸಾಲುಗಳನ್ನು ಆಯ್ಕೆ ಮಾಡಿ ಪದ್ಧವಾಗಿ ಜೋಡಿಸುತ್ತಾರೆ, ನಂತರ ಅದನ್ನು ವಾಚಿಸಲು ಹೇಳುವುದು. ಹೀಗೆ ಪ್ರತಿ ಮಕ್ಕಳ ಕವಿತೆ ಭಿನ್ನಭಿನ್ನವಾಗಿರುತ್ತದೆ. ಇಲಿ, ವಿದ್ಯಾರ್ಥಿಗಳ ಸೃಜನಶೀಲತೆಗೆ ಹೆಚ್ಚಿನ ಅವಕಾಶ ಇರುವಂತೆ ಅನುಕೂಲಿಸೋಣ.
2.ಚಿತ್ರ ನೋಡು ಕವಿತೆಕಟ್ಟು,
●ಮಕ್ಕಳ ಗುಂಪುಗಳನ್ನು ಮಾಡಿ, ಒಂದುಗುಂಪಿಗೆ ಪ್ರಾಣಿ, ಪಕ್ಷಿ, ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳನ್ನು ತೋರಿಸಿ,ಅದರ ಬಗ್ಗೆ ಕವಿತೆ ರಚಿಸಲಿ, ಇನ್ನೊಂದು ಗುಂಪಿನವರು ಮೊದಲನೇ ಗುಂಪಿನವರ ಕವಿತೆಗೆ ಹಾಡಿನ ರೂಪ ನೀಡಿರಾಗಬದ್ಧವಾಗಿ ಹಾಡಲಿ.
●ಮಕ್ಕಳಿಗೆ ಪಠ್ಯಪುಸ್ತಕದ ಕೆಲವು ಪರಿಕಲ್ಪನೆಗಳಿಗೆ ಪೂರಕವಾದ ಪದಗಳನ್ನು ನೀಡುವುದು, ಆ ಪದಗಳಿಗೆಸಂಬಂಧ ಕಲ್ಪಿಸಿ ನಾಲೆದು ಸಾಲುಗಳ ಕವಿತೆ ಬರೆದು ಅದನ್ನು ಹಾಡಲಿ
●ವಿದ್ಯಾರ್ಥಿಗಳನ್ನು ವೃತ್ತಾಕಾರದಲ್ಲಿ, ನಿಲಿಸಿ ಮೊದಲನೆಯವರು ತಮಗೆ ತಿಳಿದಿರುವ ಯಾವುದಾದರೂ ಪದ್ಯದಸಾಲನ್ನು ಹೇಳುವುದು, ಮುಂದುವರೆದು ಮೊದಲನೇ ವಿದ್ಯಾರ್ಥಿಯ ಸಾಲಿಗೆ ಪೂರಕವಾಗಿ ಎರಡನೇವಿದ್ಯಾರ್ಥಿಯು ತನ್ನದೇ ಆದ ಸಾಲುಗಳನ್ನು ಸೇರಿಸುತ್ತಾ ಚಟುವಟಿಕೆಯ ಕೊನೆಯಲ್ಲಿ ಮೂಲ ಪದಕ್ಕಿಂತಭಿನ್ನವಾದ ಪದ್ಯವನ್ನು ರಚಿಸಲಿ. ಇತ.. ವಿದ್ಯಾರ್ಥಿಗಳ ಸೃಜನಶೀಲತೆಗೆ ಅವಕಾಶವಿರುವಂತೆನೋಡಿಕೊಳ್ಳುವುದು
●ರಟ್ಟಿನ ಪೆಟ್ಟಿಗೆಯಲ್ಲಿರುವ ಪ್ರಾಸ ಪದಗಳ ಚೀಟಿಗಳನ್ನು ಆರಿಸಿಕೊಂಡು ಮಗುವು ತನಗೆ ಬೀದಚೀಟಿಯಲ್ಲಿರುವ ಪ್ರಾಸಪದಗಳಿಗೆ ಅನುಗುಣವಾಗಿ ಪದ್ಯ ರಚಿಸಲಿ.
ಹಾಡುಹಾಡೋಣ
ಚಟುವಟಿಕೆಗಳು,
● ಮಕ್ಕಳಿಗೆ ಈಗಾಗಲೇ ತಿಳಿದಿರುವ ಅಥವಾ ಅವರಿಗೆ ಇಷ್ಟವಾಗಿರುವ ಗೀತೆಗಳನ್ನು ಹಾಡಲಿ, ಇಲಿಶಿಶುಗೀತೆ
ಜನಪದಗೀತೆ, ದೇಶಭಕ್ತಿಗೀತೆ, ಪರಿಸರಗೀತೆ ಮುಂತಾದ ಪ್ರಕಾರಗಳನ್ನು ಬಳಸಿಕೊಳ್ಳಬಹುದು.
ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿ ಹಾಡಲಿ,
ಸ್ಥಳೀಯ
ಜನಪದಗೀತೆಗಳು,
ಕುಟುವಪದ,
ಗೀಗಿಪದ, ಸೋಬಾನೆ, ಭತ್ತ,
ಲಾವಣಿ,ಜೋಗುಳ(ಲಾಲಿ ಹಾಡು ಬೀಸುಕಲಿನ ಹಾಡು ಮುಂತಾದ ವೈವಿಧ್ಯಮಯ ಹಾಡಿನ ಗುಚ್ಛಗಳನ್ನು
ಬಳಸಿಕೊಂಡು ಸಂತಸದಾಯಕವಾಗಿ ತಮ್ಮ ಪ್ರಾದೇಶಿಕ ಕಲೆಗಳಿಗೆ ಒತ್ತು ನೀಡಲಿ.
● ಅಂತಾಕ್ಷರಿ’-ಮಕ್ಕಳಿಗೆ ತಮಗೆ ಗೊತ್ತಿರುವ ಹಾಡಿನ ಸಾಲನ್ನು ಹಾಡಲು ಹೇಳಿ ಅದರ ಕೊನೆಯ ಅಕ್ಷರದಿಂದ
ಆರಂಭವಾಗುವ ಇನ್ನೊಂದು ಹಾಡನ್ನು ಹೇಳಲು ಪ್ರೇರೇಪಿಸುತ್ತಾ ಚಟುವಟಿಕೆ ಮುಂದುವರೆಯಲಿ.
ತರಗತಿ ಕೋಣೆಯಲ್ಲಿ ಸಿಗುವ ಸಂಪನ್ಮೂಲಗಳನ್ನು ಹಾಗೂ ಸ್ಥಳೀಯವಾಗಿ ಲಭ್ಯವಿರುವ
ಸಂಗೀತ ವಾದ್ಯಗಳನ್ನು ಹಾಡಿನ ಜೊತೆಗೆ ಹಿಮ್ಮೇಳಕಾಗಿ ಬಳಸಲಿ, ಉದಾಹರಣೆ : ಮೇಜು, ಕೊಡ, ಕೋಲು,
ತೆಂಗಿನಗೆರಟೆ (ಚಿಪ್ಪು) ಇತ್ಯಾದಿ.
● ಒಂದು ಹಾಡನ್ನು ನೀಡಿ ಆಹಾಡಿನ ಭಾವಕೆ ಅನುಗುಣವಾಗಿ ಮಕ್ಕಳು ಅಭಿನಯಿಸಲಿ, ನಂತರ ಇನ್ನೊಂದು
ಗುಂಪಿನವರು ಅಭಿನಯವನ್ನು ನೋಡಿ ಹಾಡನ್ನು ಗುರುತಿಸಲಿ.
● ವಿದ್ಯಾರ್ಥಿಗಳು ಪಠ್ಯದಲ್ಲಿರುವ ಯಾವುದೇ ಹಾಡನ್ನು ತಮ್ಮದೇ ರಾಗದಲ್ಲಿ ಹಾಡುವ ಚಟುವಟಿಕೆಯನ್ನು
ಮಾಡಲಿ, ವಿಜ್ಞಾನದ ಪರಿಕಲ್ಪನೆಗಳನ್ನು ಗಣಿತದ ಸೂತ್ರಗಳನ್ನು ತಮಗಿಷ್ಟವಾದ ರಾಗದೊಂದಿಗೆ ಹಾಡಲಿ.
. 4 ರಿಂದ 8 ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ
.
ಮಳೆಬಿಲ್ಲು ಸುತ್ತೋಲೆ
ಚಟುವಟಿಕೆ