‘ಚಿತ್ರ ಜಗತ್ತು’
ಕಲಿಕೆಯ ಪ್ರಾರಂಭಿಕ ಹಂತದಿಂದ ಮಗು ಚಿತ್ರರಚನೆಯ ಮೂಲಕ ತನ್ನ ಕೌಶಲಗಳನ್ನು
ವೃದ್ಧಿಗೊಳಿಸಿಕೊಳ್ಳುತ್ತದೆ, “ಚಿತ್ರಕಲೆಯು ಮಗುವಿನ ಕಲಿಕೆಯ ಮೊದಲ ಮೆಟ್ಟಿಲಾಗಿದೆ. ಅನುಕರಣೆ ಎನ್ನುವುದು
ಮಾನವನ ಸಹಜಪ್ರವೃತ್ತಿ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿದಂತೆಲ್ಲಾ ಚಿತ್ರಕಲೆಯ ಕೌಶಲಗಳನ್ನು
ಕಲಿಯುವುದು ಅವಶ್ಯಕ. ನಮ್ಮಲಿರುವ ಭಾವನೆ, ವಿಚಾರಗಳನ್ನು ಸೃಜನಾತ್ಮಕವಾಗಿ ಹಾಗೂ ಕಲಾತ್ಮಕವಾಗಿ
ಅಭಿವ್ಯಕ್ತ ಪಡಿಸುವ ಪರಿಣಾಮಕಾರಿ ಮಾಧ್ಯಮವೇ ‘ಚಿತ್ರಕಲೆ.
ಬೇಕಾದ ಪರಿಕರಗಳು :
ಡ್ರಾಯಿಂಗ್ ಹಾಳೆಗಳು, ಬ್ರಶ್, ಬಣಗಳು, ಕ್ರೇಯಾನ್ಸ್, ಚಾಕು, ಅಂಟು ಇತ್ಯಾದಿ
ಸೂಚನೆಗಳು :
ಮಕ್ಕಳು ಲವಲವಿಕೆಯಿಂದ ಪಾಲ್ಗೊಳ್ಳಲು ಪ್ರೇರಣೆ ನೀಡುವುದು,
• ಚಿತ್ರಕಲಾ ವಿಷಯ, ವಸ್ತುಗಳ ಆಯ್ಕೆ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿರಲಿ
ಉದಾಹರಣೆ: ಸಾಮಾನ್ಯವಾಗಿ ಮಕ್ಕಳ ಮನಸ್ಸಿಗೆ ಮುದ ನೀಡುವ ಕಾರ್ಟೂನು ಆಕೃತಿಯ ಚಿತ್ರಗಳು,
ಬುದ್ಧಿಮಟ್ಟ ಹೆಚ್ಚಾದಂತೆಲ್ಲಾ ವಸ್ತುಗಳ ನೇರ ವೀಕ್ಷಣೆ ಮತ್ತು ರಚನೆಯ ಮೂಲಕ ತಮ್ಮದೇ
ಶೈಲಿಯಲ್ಲಿ ನೈಜವಾಗಿ ರಚಿಸುವ ಉತ್ಸಾಹ ಪಡೆಯುತ್ತಾರೆ, ಬೆಳಗಿನ ಸೂರ್ಯೋದಯ ವೀಕ್ಷಣೆ,
ಸೂರ್ಯಾಸ್ತಮಾನದ ಬಣ್ಣ ವೀಕ್ಷಣೆ, ಕೋಳಿ ಕೂಗುವುದು, ಪ್ರಾಣಿ-ಪಕ್ಷಿಗಳು, ನನ್ನ ಶಾಲೆ, ಪರಿಸರ ಇತ್ಯಾದಿ
ವಿದ್ಯಾರ್ಥಿಯ ಆಲೋಚನೆಗೆ ಸ್ಪಂದಿಸುವುದು,
ಬಣಗಳನ್ನು ಕೈ ಬೆರಳಿನ ತುದಿಯಿಂದ ಆದಿ ಮರ, ಹೂವಿನ ಆಕಾರಗಳು, ಚಿಟ್ಟೆ, ಪ್ರಾಣಿ-ಪಕ್ಷಿಗಳ
ಆಕಾರದೊಂದಿಗೆ ವಿವಿಧ ಚಿತ್ರ ರಚನೆ ಮಾಡಲಿ,
•ಪ್ರಕೃತಿಯ ವಿವಿಧ ವಿನ್ಯಾಸದ ಎಲೆಗಳನ್ನು ತಂದು ಪೇಪರಿಗೆ ಅಂಟಿಸಿ ವಿನ್ಯಾಸಗೊಳಿಸಲಿ,
ರಂಗೋಲೆರಚನೆ,
. ಆವೆ ಮಣಿನ ವಿವಿಧ ಆಕೃತಿಗಳ ರಚನೆ,
‘ ಸಣ ಸಣ್ಣ ಕಲ್ಲು ಗಳನ್ನು ಅಂಟಿಸಿ ವಿವಿಧ ಹಾಸಭಂಗಿಯಮುಖಿ, ಗೊಂಬೆಗಳಮವಿಶ್ವಾಸ ತಯಾರಿಸಲಿ,
ನೂಲಿನ ಸಹಾಯದಿಂದ ಸಮಮಿತಿಚಿತ್ರ, ಹಾಳೆಯ ಮೇಲೆ ಬಣ ಹರಡಿ ಸಮಮಿತಿಚಿತ್ರ, ಬೋಪ್ರೈಂಟ್
ಗಳನ್ನು ರಚಿಸಲಿ.
• 1ರಿಂದ9ನೇ ತರಗತಿಯ ಮಕ್ಕಳು ಈ ಚಟುವಟಿಕೆಯಲ್ಲಿ ಭಾಗವಹಿಸಲಿ
ಮಗುವು ಸೂಕ್ಷ್ಮವಾಗಿ ಗಮನಿಸಿ, ಅನುಕರಿಸಿ ಕಲಾತ್ಮಕತೆಯನ್ನು ಮೈಗೂಡಿಸಿ ಕೊಳ್ಳುವುದರಿಂದ
ಸಹಜವಾಗಿಯೇ ಚಿತ್ರಕಲೆಯ ಬಗ್ಗೆ ಹೆಚ್ಚು ಒಲವು ಹೊಂದಿರುತ್ತದೆ, ಹೀಗಾಗಿ ಇಲ್ಲಿ ಕಲಾ ಕೌಶಲದ ಕ್ರಿಯಾತ್ಮಕ
ಚಟುವಟಿಕೆಗಳನ್ನು ಮಗುವಿನಲ್ಲಿ ನಿರೀಕ್ಷಿಸಬಹುದು,
ಚಿತ್ರಕಲಾ ರಚನೆ ಹಾಗೂ ಚಟುವಟಿಕೆಗಳಿಗೆ ಬೇಕಾಗಿರುವ ಪರಿಕರಗಳು
ಜಲವರ್ಣ, ಅಕ್ರಿಲಿಕ್, ಕ್ರೇಯಾನ್ಸ್, ಎನಾಮಲ್ ಪೈಂಟ್ಸ್, ಕತ್ತರಿ, ಅಂಟು, ನ್ಯೂಸ್ ಪೇಪರ್, ಡ್ರಾಯಿಂಗ್
ಶೀಟ್ ಇತ್ಯಾದಿ ಸಾಮಗ್ರಿಗಳು
ಮೇಲಿನ ಬಣ್ಣಕ್ಕೆ ಪೂರಕವಾಗಿ ಸ್ಥಳೀಯವಾಗಿ ಸಿಗುವ ವಸ್ತುಗಳಿಂದಲೂ ಕೂಡ ಬಣಗಳನ್ನು
ಸಿದ್ಧಪಡಿಸಿಕೊಳ್ಳಬಹುದು. ಉದಾಹರಣೆ ಕಲ್ಲುಗಳು, ಹೂ ಹಣ್ಣು, ಮಸಿ
ಮಣ್ಣು ಇತ್ಯಾದಿ.ಸಾಮಗ್ರಿಗಳು ಚಿತ್ರಕಲಾ ರಚನೆಗೆ ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಗೆ ಮುಕ್ತ ಅವಕಾಶವಿರಲಿ,
ಉದಾಹರಣೆ: ಶಾಲಾ ಪರಿಸರ, ಕೈತೋಟ, ಪೌರಾಣಿಕ, ಚಾರಿತ್ರಿಕ, ವೈಜ್ಞಾನಿಕ ಹಿನ್ನೆಲೆ ದೃಶ್ಯಗಳು, ನಿತ್ಯ ಬದುಕಿನಲ್ಲಿ ಎದುರಾಗುತ್ತಿರುವ
ಸಮಸ್ಯೆಗಳು…… ಇತ್ಯಾದಿ
* ಡ್ರಾಯಿಂಗ್ ಹಾಳೆಯಲ್ಲಿ ಮಗು ತನಗೆ ಬೇಕಾದ ಪರಿಸರ, ವಿವಿಧ ಪ್ರಾಣಿ, ಪಕ್ಷಿ ಇತ್ಯಾದಿ ಯಾವುದೇ ಚಿತ್ರಗಳ ಔಟ್-ಲೈನ್ ವಿನ್ಯಾಸ ರಚಿಸಿಕೊಂಡು, ಬೇಕಾದ ಬಣಗಳಿರುವ ಯಾವುದೇ ಮುದ್ರಿತ ಮಾಗಜಿನ್,ದಿನಪತ್ರಿಕೆ ಇತ್ಯಾದಿಗಳನ್ನು ಕತ್ತರಿಸಿಕೊಂಡು ಬೆಳಕು, ನೆರಳು ವಿನ್ಯಾಸದ ಕಲ್ಪನೆಗೆ ತಕ್ಕಂತೆ ಅಂಟಿಸಿ, ಸುಂದರ ಕೊಲಾಜ್ ಚಿತ್ರರಚನೆ ಮಾಡಲಿ..
- ಬಲೂನ್ ಮೇಲೆ ನ್ಯೂಸ್ ಪೇಪರ್ ಅಂಟಿಸಿ ಮುಖವಾಡ ತಯಾರಿಸಲಿ..ಆವೆ ಮಣ್ಣಿನ ಮಾದರಿಗಳ ಕಲಾಕೃತಿ ರಚನೆ.
- ಮಕ್ಕಳು ಮುಖಗಳಿಗೆ ಮುಖವರ್ಣಿಕೆ ಮಾಡಿಕೊಳ್ಳಲಿ..
- ಎನಾಮಲ್ ಪೈಂಟ್ ಬಳಸಿ ಮಾರ್ಬಲ್ ಡಿಸೈನ್ ರೀತಿಯಲ್ಲಿ, ಗ್ರೀಟಿಂಗ್ ಕಾರ್ಡ್ ತಯಾರಿಸಲಿ, (ಬಕೆಟ್ನಲಿ ನೀರು ಹಾಕಿ ಪೈಂಟ್ ಡ್ರಾಪ್ಸ್ ಹಾಕಿ ಪೇಪರ್ ಮುಳುಗಿಸಿ ತೆಗೆಯುವುದು.)
- ಒಣ ಹುಲುಕಡ್ಡಿ ಅಂಟಿಸಿ ಗ್ರೀಟಿಂಗ್ ತಯಾರಿಸಲಿ .
- ಶಾಲೆಯ ಕಂಪ್ಯೂಟರ್ ಲ್ಯಾಬ್ ಇದ್ದಲಿ, ಚಿತ್ರ ರಚನೆ, ಇತ್ಯಾದಿ ವಿನ್ಯಾಸಗಳ ತಯಾರಿಸಲಿ.
- ಮಳೆಬಿಲು ಸೊಗನ್, ಕಾರ್ಯಕ್ರಮಗಳ ವಿವರಗಳನ್ನು ಪೋಸ್ಟರ್ (ಭಿತ್ತಿಪತ್ರ) ಮಾದರಿಯಲ್ಲಿ ಅಲ್ಲಲ್ಲಿಬರೆದು ಅಂಟಿಸಿ ಅಲಂಕರಿಸಲಿ.
- ಮೂಲ ಬಣ (ಕೆಂಪು, ನೀಲಿ, ಹಳದಿ) ಗಳ ಪ್ರದರ್ಶನ.
- ಕೆಂಪು+ನೀಲಿ=ನೇರಳೆ, ನೀಲಿ+ಹಳದಿ=ಹಸಿರು, ಹಳದಿ+ಕೆಂಪು=ಕೇಸರಿ ಇತ್ಯಾದಿ ಹೊಸಬಣ್ಣಗಳನ್ನು ಆವಿಷ್ಕರಿಸಿ ಆನಂದಿಸಲಿ.
- ಪ್ರಕೃತಿಯಲ್ಲಿ ಸಿಗುವ ನೈಸರ್ಗಿಕ ಬಣ, ಅಥವಾ ಸಂಬಂಧಪಟ್ಟ ಕಲರ್ ಪೇಪರ್ ಅಂಟಿಸಿ ಪ್ರದರ್ಶಿಸಲಿ
- ಇಲಿ ನೀಡಿದಚಟುವಟಿಕೆಗಳಿಗೆ ಸೀಮಿತಗೊಳ್ಳದೇ ವಿದ್ಯಾರ್ಥಿಗಳುತನ್ನವಿವಿಧಪ್ರಕಾರಗಳಿಂದ ಚಿತ್ರ ಚಿತ್ತಾರ’ಗಳನ್ನು ರಚಿಸಿಪ್ರದರ್ಶನಕ್ಕೆ ತಯಾರಿ ಮಾಡಲಿ ಒಟ್ಟಾರೆಯಾಗಿ “ ಕಲೆ” ನಿಂತನೀರಾಗದೆ ಕಲಾ ಸಮ್ಮಿಳಿತವಾಗಿ ಕಾಲ ಕಾಲಕ್ಕೆ ವೈಭವದ ವಾತಾವರಣ ಸೃಷ್ಟಿಯಾಗಲಿ,.6 ರಿಂದ 9 ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳನ್ನು ನಡೆಸಲಿ.
- 1 ರಿಂದ 5 ನೇ ತರಗತಿ ಮಕ್ಕಳು ಡ್ರಾಯಿಂಗ್ ಹಾಳೆಯಲ್ಲಿ ತಮಗೆ ಬೇಕಾದ ಪರಿಸರ, ವಿವಿಧ ಪ್ರಾಣಿ, ಪಕ್ಷಿ ಇತ್ಯಾದಿ ಯಾವುದೇ ಚಿತ್ರಗಳನ್ನು ಬರೆಯಲು ಪ್ರೇರೇಪಿಸುವುದು.