LPG ಗ್ಯಾಸ್ ಅಡುಗೆ ಅನಿಲ ಸಂಪರ್ಕ (ಎಲ್.ಪಿ.ಜಿ ಗ್ಯಾಸ್) ಹೊಂದಿರುವ ಫಲಾನುಭವಿಗಳಿಗೆ ಎಲ್.ಪಿ.ಜಿಏಜನ್ಸಿಗಳಲ್ಲಿ ಇ-ಕೆವೈಸಿ ಮಾಡಿಸುವ ಕುರಿತು ಸ್ಪಷ್ಟೀಕರಣ ಇಲ್ಲಿದೆ

ಅಡುಗೆ ಅನಿಲ ಸಂಪರ್ಕ (ಎಲ್.ಪಿ.ಜಿ ಗ್ಯಾಸ್) ಹೊಂದಿರುವ ಫಲಾನುಭವಿಗಳಿಗೆ ಎಲ್.ಪಿ.ಜಿ
ಏಜನ್ಸಿಗಳಲ್ಲಿ ಇ-ಕೆವೈಸಿ ಮಾಡಿಸುವ ಕುರಿತು ಸ್ಪಷ್ಟನೆ ನೀಡುವ ಬಗ್ಗೆ

ದಿನಾಂಕ 31.12.2023 ರ ಒಳಗಾಗಿ ಗ್ಯಾಸ್ ಏಜನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಿದರೆ ಮಾತ್ರ
ಸಬ್ಸಿಡಿ ಸಿಗುತ್ತದೆ ಮತ್ತು ಸಿಲೆಂಡರ್ ಸರಬರಾಜು ಮಾಡಲಾಗುತ್ತದೆ ಎನ್ನುವ ವದಂತಿಗಳಿಗೆ ಸಂಬಂದಿಸಿದಂತೆ
ಈ ಕೆಳಕಂಡಂತೆ ಸ್ಪಷ್ಟಿಕರಣವನ್ನು ನೀಡಲಾಗಿದೆ:

  1. ಇ-ಕೆವೈಸಿ ಮಾಡಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ ಮತ್ತು ಸಾರ್ವಜನಿಕರು
    ತಮ್ಮ ಬಿಡುವಿನ ಸಮಯದಲ್ಲಿ ಇ-ಕೆವೈಸಿ ಮಾಡಿಸಬಹುದಾಗಿರುತ್ತದೆ.

  1. ಇ-ಕೆವೈಸಿ ಪ್ರಕ್ರಿಯೆಯು ಉಚಿತವಾಗಿರುತ್ತದೆ.

ಆದ್ದರಿಂದ ದಿನಾಂಕ 31.12.2023 ರ ಒಳಗಾಗಿ ಗ್ಯಾಸ್ ಏಜನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಬೇಕು
ಎನ್ನುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು
ಕಿವಿಗೊಡಬಾರದೆಂದು ತಿಳುವಳಿಕೆಗಾಗಿ ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

1000706811
Sharing Is Caring:

Leave a Comment