2023-24 ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳು ಉನ್ನತ ವ್ಯಾಸಂಗಕ್ಕೆ online ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ

WhatsApp Group Join Now
Telegram Group Join Now

ಪ್ರತಿಭಾವಂತ ವಿದ್ಯಾರ್ಥಿ ವೇತನದ ಧನಸಹಾಯಕ್ಕಾಗಿ ಬರುವ ಭೌತಿಕ ಅರ್ಜಿಗಳನ್ನು ಈ ಕಛೇರಿಯಲ್ಲಿ
ಪರಿಗಣಿಸಲಾಗುವುದಿಲ್ಲ. ಶಿಕ್ಷಕರ ಕಲ್ಯಾಣ ನಿಧಿಯ ಜಾಲತಾಣ kstbfonline.karnataka.gov.in URL
ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಲತಾಣ www.schooleducation.kar.nic.in ರಲ್ಲಿನ
TBF SWF ONLINE SERVICES ಲಿಂಕ್‌ನ ಮೂಲಕ ಅಜೀವ ಸದಸ್ಯತ್ವದ ಹೊಸ ಕಾರ್ಡ್ ಸಂಖ್ಯೆ ಪಡೆದವರು ಮಾತ್ರ ಪ್ರತಿಭಾವಂತ ವಿದ್ಯಾರ್ಥಿ ವೇತನದ ಧನಸಹಾಯದ ಅರ್ಜಿಯನ್ನು ONLINE ಮೂಲಕ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 05/01/2024
1 ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಗೆ ONLINE ಮೂಲಕ O5-01-2024
ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವಾಗಿದೆ.

ಅಂತಿಮ ದಿನಾಂಕದ ನಂತರ ONLINEನಲ್ಲಿ ಸಲ್ಲಿಸುವ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಸೂಚನೆ: ಶಿಕ್ಷಕರ ಕಲ್ಯಾಣ ಕಛೇರಿಯ ಎಲ್ಲಾ ಸೌಲಭ್ಯಗಳನ್ನು ಇನ್ನು ಮುಂದೆ ONLINE
ಮೂಲಕವೇ ಒದಗಿಸಲಾಗುವುದು. ಈಗಾಗಲೇ ಭೌತಿಕ ಆಜೀವ ಸದಸ್ಯತ್ವ ಕಾರ್ಡ್‌ನ್ನು ಹೊಂದಿರುವವರೂ ಸಹ
ಆಜೀವ ಸದಸ್ಯತ್ವ ವಿವರಗಳನ್ನು ಗಣಕೀಕರಿಸಿ, ಹೊಸ ಸದಸ್ಯತ್ವ ಸಂಖ್ಯೆಯನ್ನು ಪಡೆದ ನಂತರವೇ ಸದರಿ
ಧನಸಹಾಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ
ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ಆನ್ಲೈನ್
ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅರ್ಹ ಶಿಕ್ಷಕರು/ ನಿವೃತ್ತ ಶಿಕ್ಷಕರು/ಉಪನ್ಯಾಸಕರು/ ನಿವೃತ್ತ ಉಪನ್ಯಾಸಕರು/ ಪ್ರಾಂಶುಪಾಲರು ONLINE ಮೂಲಕವೇ ಕಡ್ಡಾಯವಾಗಿ
ಅರ್ಜಿಯನ್ನು ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಕಛೇರಿ ವತಿಯಿಂದ ಒದಗಿಸಲಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ONLINE ಸೇವೆಗೆ ಒಳಪಡಿಸಲಾಗಿದ್ದು, ಪ್ರಥಮ ಹಂತವಾಗಿ ಅಜೀವ ಸದಸ್ಯತ್ವ ONLINE ನೋಂದಣಿ ಕಾರ್ಯವನ್ನು ದಿನಾಂಕ: 13-10-2022ರಿಂದ ಲೋಕಾರ್ಪಣೆಗೊಳಿಸಲಾಗಿದೆ. ಇನ್ನು ಮುಂದೆ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯಲ್ಲಿ ಅಜೀವ ಸದಸ್ಯತ್ವ ನೋಂದಣಿ ಪಡೆಯಲು ಇಚ್ಚಿಸುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ವ್ಯಾಪ್ತಿಯ ಶಿಕ್ಷಕರು/ ನಿವೃತ್ತ ಉಪನ್ಯಾಸಕರು/ ನಿವೃತ್ತ ಶಿಕ್ಷಕರು/ ಉಪನ್ಯಾಸಕರು/ ಪ್ರಾಂಶುಪಾಲರು ಹಾಗೂ ಈಗಾಗಲೇ ಭೌತಿಕ ಕಾರ್ಡ್ ಹೊಂದಿರುವವರೂ ಸಹ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಈಗಾಗಲೇ ನಿಧಿ ಕಛೇರಿಯಿಂದ ಆನ್‌ಲೈನ್‌ನಲ್ಲಿ ಆಜೀವ ಸದಸ್ಯತ್ವದ ಹೊಸ ನೋಂದಣಿ ಸಂಖ್ಯೆ ಪಡೆದ ಶಿಕ್ಷಕರು/ ಉಪನ್ಯಾಸಕರು/ ನಿವೃತ್ತಿ ಹೊಂದಿರುವ ಶಿಕ್ಷಕರು/ ಉಪನ್ಯಾಸಕರು ಮಾತ್ರ ತಮ್ಮ ಮಗುವಿನ ವಿವರಗಳನ್ನು ಸಂಬಂಧಿಸಿದ ONLINE PORTAL ನಲ್ಲಿ ಗಣಕೀಕರಿಸುವಂತೆ ಈ ಮೂಲಕ ಸೂಚಿಸಿದೆ.

ಉನ್ನತ ವ್ಯಾಸಂಗದ ಧನಸಹಾಯಕ್ಕಾಗಿ ಬರುವ ಭೌತಿಕ ಅರ್ಜಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ. ಶಿಕ್ಷಕರ ಕಲ್ಯಾಣ ನಿಧಿಯ ಜಾಲತಾಣ kstbfonline.karnataka.gov.in URL ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಲತಾಣ www.schooleducation.kar.nic.in ಅಲ್ಲಿನ TBF SWF ONLINE SERVICES ಲಿಂಕ್ ನ ಮೂಲಕ ಅಜೀವ ಸದಸ್ಯತ್ವದ ಹೊಸ ಕಾರ್ಡ್ ಸಂಖ್ಯೆ, ಪಡೆದವರು ಮಾತ್ರ ಉನ್ನತ ವ್ಯಾಸಂಗ ಧನಸಹಾಯದ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ಕುಟುಂಬಕ್ಕೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ನೀಡಲಾಗುವುದು, ವಿದ್ಯಾರ್ಥಿಯ ತಂದೆ/ತಾಯಿ ಇಬ್ಬರೂ ಶಿಕ್ಷಕರು/ಉಪನ್ಯಾಸಕರಾಗಿದ್ದಲ್ಲಿ ಕುಟುಂಬಕ್ಕೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಕೆಳಕಂಡ ನ್ಯೂನ್ಯತೆಗಳನ್ನೊಳಗೊಂಡ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

 1. ನಿಯಂತ್ರಣಾಧಿಕಾರಿಗಳ ಸಹಿ ಇಲ್ಲದೆ ನೇರವಾಗಿ ಸೇವೆಯಲ್ಲಿರುವ ಶಿಕ್ಷಕರು ಸಲ್ಲಿಸಿದ ಅರ್ಜಿಗಳು (ನಿವೃತ್ತ ಶಿಕ್ಷಕರನ್ನು ಹೊರತು ಪಡಿಸಿ).
 2. ಅರ್ಜಿಯಲ್ಲಿ ನಮೂದಾಗದೇ ಇರುವ ಕೋರ್ಸುಗಳು.
 3. CA, PHD ಕೋರ್ಸ್‌ಗಳಿಗೆ ಧನಸಹಾಯ ನೀಡಲಾಗುವುದಿಲ್ಲ.
 4. ಶಿಕ್ಷಕರ ಸಹಿ ಇಲ್ಲದ ಅರ್ಜಿಗಳು.
 5. ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅವಕಾಶ ಇರುವುದಿಲ್ಲ.
 6. ನಿವೃತ್ತ ಶಿಕ್ಷಕರ ಪಿಂಚಣಿ ಪತ್ರ ಇಲ್ಲದಿರುವ ಅರ್ಜಿಗಳು.
 7. ಪತಿ/ಪತ್ನಿ ಇಬ್ಬರೂ ಅರ್ಜಿ ಸಲ್ಲಿಸಿದ್ದಲ್ಲಿ ಒಂದು ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.
 8. ತಿದ್ದುಪಡಿಗಳನ್ನು ಹೊಂದಿರುವ ಅರ್ಜಿಗಳು(TAMPERED APPLICATION)
 9. ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಮಕ್ಕಳು ವ್ಯಾಸಂಗ ಮಾಡದೇ ಇದ್ದರೂ ಧನಸಹಾಯಕ್ಕೆ ಸಲ್ಲಿಸಿದ ಅರ್ಜಿಗಳು.
 10. ಅನುತ್ತೀರ್ಣ/ ಸಂಜೆ ಕಾಲೇಜು ವ್ಯಾಸಂಗದ/ ಖಾಸಗಿ/ ಬಾಹ್ಯ/ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ
  ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಲ್ಲಿಸಿದ ಅರ್ಜಿಗಳು.
 11. ದಿನಾಂಕ.31/12/2023 ರ ನಂತರ ಬಂದ ಅರ್ಜಿಗಳು
 12. ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸದ ಅರ್ಜಿಗಳು.
 13. ರಾಷ್ಟ್ರೀಯ ಬ್ಯಾಂಕುಗಳು ವಿಲೀನಗೊಂಡಿರುವುದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ (ರಾಷ್ಟ್ರೀಕೃತ) BANK ACCOUNT NUMBER ಮತ್ತು IFSC CODE ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸುವುದು.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಗೆ ONLINE ಮೂಲಕ ಅರ್ಜಿ ಆಹ್ವಾನಿಸಿರುವ ದಿನಾಂಕ
01-12-2023

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಗೆ ONLINE ಮೂಲಕ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ 31-12-2023

ಅಂತಿಮ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಈ ಸುತ್ತೋಲೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಕಟಣಾ ಫಲಕದ ಮೇಲೆ ಕಡ್ಡಾಯವಾಗಿ ಪ್ರಕಟಿಸುವಂತೆ ಹಾಗೂ ಈ ಬಗ್ಗೆ ಶಿಕ್ಷಕರಿಗೆ ವ್ಯಾಪಕ ಪ್ರಚಾರ ಮಾಡುವಂತೆ ತಿಳಿಸಿದೆ.

WhatsApp Group Join Now
Telegram Group Join Now
Sharing Is Caring:

Leave a Comment