ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇದರ ಎರಡನೆಯ ಜಿಲ್ಲಾ ಕಾರ್ಯಕಾರಿಣಿ ಸಭೆಯ ಪ್ರಮುಖ ನಿರ್ಣಯಗಳು

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇದರ ಎರಡನೆಯ ಜಿಲ್ಲಾ ಕಾರ್ಯಕಾರಿಣಿ ಸಭೆಯ ಪ್ರಮುಖ ನಿರ್ಣಯಗಳು

IMG 20210709 WA0042
ಜಿಲ್ಲಾ ಅಧ್ಯಕ್ಷರು

ದಿನಾಂಕ 07-07-2021 ನೇ ಬುಧವಾರ ಸರ್ಕಾರಿ ನೌಕರರ ಭವನ ಬಿ ಸಿ ರೋಡ್ ಇಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ,ಜಿಲ್ಲಾ ಘಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ದ್ವಿತೀಯ ಕಾರ್ಯಕಾರಣಿ ಸಮಿತಿ ಸಭೆಯ ಪ್ರಮುಖ ನಿರ್ಣಯಗಳು ಈ ಕೆಳಗಿನಂತಿದೆ.

IMG 20210709 WA0039 11zon 1

1.ಪದವೀಧರ ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ C& R ತಿದ್ದುಪಡಿಗಾಗಿ ರಾಜ್ಯ ಸಂಘದಿಂದ 02/06/21 ರಂದು ನೀಡಿರುವ ಮನವಿಗೆ ಪೂರಕವಾಗಿ ಜಿಲ್ಲಾ ಹಂತದಲ್ಲಿ
???? ಜಿಲ್ಲೆ ಮತ್ತು ತಾಲೂಕು ಸಂಘದಿಂದ ಜನಪ್ರತಿನಿಧಿಗಳಿಗೆ ಮನವಿ
???? ಶಿಕ್ಷಕರಿಂದ ಸಂಘದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಉಪನಿರ್ದೇಶಕರಿಗೆ ಮನವಿ

???? ಮುಂದೆ ತಿಳಿಸಲಾಗುವ ದಿನದಂದು ಜಿಲ್ಲೆಯಾದ್ಯಂತ ಶಿಕ್ಷಕರಿಂದ ಎಸ್.ಡಿ.ಎಂ.ಸಿ ಗೆ ಮನವಿ ಸಲ್ಲಿಸಲಾಗುವುದು

???? ಪತ್ರಿಕಾಗೋಷ್ಠಿ ನಡೆಸುವುದು

IMG 20210709 WA0040 11zon

ಎನ್ನುವ ನಾಲ್ಕು ಹಂತದ ಹೋರಾಟ ಸಂಘಟಿಸುವುದು ಎಂದು ತೀರ್ಮಾನಿಸಲಾಯಿತು

  1. ವರ್ಗಾವಣಾ ಪ್ರಕ್ರಿಯೆಯ ಕುರಿತು ಶಿಕ್ಷಕರಿಗೆ ಇಲಾಖೆಯ ಸಹಕಾರದೊಂದಿಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ online ಮಾಹಿತಿ ಕಾರ್ಯಾಗಾರ ಏರ್ಪಡಿಸುವುದು ಎಂದು ತೀರ್ಮಾನಿಸಲಾಯಿತು.
  2. ಈಗಾಗಲೇ ನಡೆಯುತ್ತಿರುವ ಗುರುಭ್ಯೋನಮಃ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ನಿವೃತ್ತ ಶಿಕ್ಷಕರಿಗೆ ಸಕಾಲದಲ್ಲಿ ಎಲ್ಲಾ ಸೌಲಭ್ಯಗಳು ದೊರಕುವಂತೆ ಜಿಲ್ಲಾ ಸಂಘ ಹಾಗೂ ತಾಲೂಕು ಸಂಘ ಮುತುವರ್ಜಿ ವಹಿಸುವುದು ಎಂದು ನಿರ್ಣಯಿಸಲಾಯಿತು.
  3. ಯಾವುದೇ ಮಾಹಿತಿಯನ್ನು ಶಾಲೆಯಿಂದ ನೀಡಲು ಸೂಕ್ತ ಸಮಯಾವಕಾಶವನ್ನು ನೀಡಿ ಮುಖ್ಯಗುರುಗಳ ಒತ್ತಡ ಕಡಿಮೆ ಮಾಡಲು ಇಲಾಖೆಗೆ ಮನವಿ ಸಲ್ಲಿಸುವುದು ಎಂದು ತೀರ್ಮಾನಿಸಲಾಯಿತು.
  4. ಜಿಲ್ಲೆಯಲ್ಲಿರುವ ಜೀರೋ ನೆಟ್ವರ್ಕ್ ಶಾಲೆಗಳ ಮಾಹಿತಿಯನ್ನು ಸಂಗ್ರಹಿಸಿ ನೆಟ್ವರ್ಕ್ ಸಮಸ್ಯೆಯ ಪರಿಹಾರಕ್ಕೆ ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ ನೀಡುವುದೆಂದು ತೀರ್ಮಾನಿಸಲಾಯಿತು.
  5. ಸೇತುಬಂಧ ಚಟುವಟಿಕೆಗಳು ಈಗಾಗಲೇ ಆರಂಭವಾಗಿದ್ದು ಕಲಿಕಾ ಕಾಡುಗಳನ್ನು ಮಕ್ಕಳಿಗೆ ಜೆರಾಕ್ಸ್ ಮಾಡಿಕೊಡುವಂತೆ ತಿಳಿಸಲಾಗಿದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಶಾಲಾನುದಾನದಿಂದ ಭರಿಸಲು ತಿಳಿಸಿರುತ್ತಾರೆ. ಈ ಕುರಿತು ಸ್ಪಷ್ಟ ಆದೇಶ ಹೊರಡಿಸುವಂತೆ ಹಾಗೂ ಅನುದಾನ ಇಲ್ಲದ ಶಾಲೆಗಳಲ್ಲಿ ಯಾವ ರೀತಿ ಈ ಖರ್ಚನ್ನು ಭರಿಸುವುದೆಂದು ಸೂಕ್ತ ಮಾರ್ಗದರ್ಶನ ನೀಡುವಂತೆ ಮಾನ್ಯ ಉಪನಿರ್ದೇಶಕರಿಗೆ ಮನವಿ ನೀಡುವುದೆಂದು ತೀರ್ಮಾನಿಸಲಾಯಿತು.
  6. ಶಿಕ್ಷಕರ ಕೊರತೆಯನ್ನು ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅತೀ ತುರ್ತಾಗಿ ಇಲಾಖಾಧಿಕಾರಿಗಳಿಗೆ ಮನವಿ ನೀಡುವುದೆಂದು ತೀರ್ಮಾನಿಸಲಾಯಿತು.
  7. ಈಗಾಗಲೇ ಘೋಷಣೆ ಯಾಗಿರುವ ಖಾಸಗಿ ಶಾಲಾ ಶಿಕ್ಷಕರ ಪ್ಯಾಕೇಜನ್ನು ಸರಕಾರಿ ಶಾಲೆಯ ಅತಿಥಿ ಶಿಕ್ಷಕರಿಗೂ ವಿಸ್ತರಿಸುವಂತೆ ಸರಕಾರಕ್ಕೆ ಒತ್ತಾಯಿಸುವಂತೆ ರಾಜ್ಯ ಸಂಘಕ್ಕೆ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು.
  8. ಕೋವಿಡ್ ಕರ್ತವ್ಯದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವಂತೆ ಮಾನ್ಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸುವುದು ಎಂದು ನಿರ್ಣಯಿಸಲಾಯಿತು.
  9. ಜ್ಯೋತಿ ಸಂಜೀವಿನಿ/ ಗುರುತಿನ ಚೀಟಿಯನ್ನು ಎಲ್ಲಾ ಶಿಕ್ಷಕರಿಗೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಎಂದು ತೀರ್ಮಾನಿಸಲಾಯಿತು.
  10. ಸಹ ಶಿಕ್ಷಕರಿಂದ ಮುಖ್ಯ ಗುರುಗಳಿಗೆ ಪದೋನ್ನತಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸುವಂತೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು.
  11. ಹಾಜರಿ ಪುಸ್ತಕದಲ್ಲಿ ದೈಹಿಕ ಶಿಕ್ಷಕರ ಹೆಸರನ್ನು ನಮೂದಿಸುವ ವಿಚಾರದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ದೈಹಿಕ ಶಿಕ್ಷಕರ ಗೌರವಕ್ಕೆ ಯಾವುದೇ ಚ್ಯುತಿ ಬರದಂತೆ ರಾಜ್ಯ ಹಂತದಿಂದ ಸ್ಪಷ್ಟ ಆದೇಶ ನೀಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸಂಘಕ್ಕೆ ಒತ್ತಾಯಿಸುವುದೆಂದು ತೀರ್ಮಾನಿಸಲಾಯಿತು.
  12. KAT ಆದೇಶದಿಂದ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಭಡ್ತಿ ಹೊಂದಿದ ಶಿಕ್ಷಕರಿಗೆ ಯಾವುದೇ ತೊಂದರೆ ಆಗದಂತೆ ಭಡ್ತಿ ಶಿಕ್ಷಕರ ಹೋರಾಟಗಳಿಗೆ ಬೆಂಬಲ ನೀಡುವುದೆಂದು ತೀರ್ಮಾನಿಸಲಾಯಿತು.
IMG 20210709 WA0044

ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದ ಜಿಲ್ಲಾ ಪದಾಧಿಕಾರಿಗಳಿಗೆ ,ಎಲ್ಲಾ ತಾಲೂಕು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ, ರಾಜ್ಯ ಸಂಘ ಹಾಗೂ ಜಿಲ್ಲಾ ಸಂಘದ ಪ್ರತಿನಿಧಿಗಳಿಗೆ ಆತ್ಮೀಯ ವಂದನೆಗಳು.

WhatsApp Group Join Now
Telegram Group Join Now
Sharing Is Caring:

Leave a Comment