ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಕುರಿತು ಮಾನ್ಯ ಶಿಕ್ಷಣ ಸಚಿವರಾದ ಶ್ರೀಮಾನ್ಯ ಬಿ.ಸಿ.ನಾಗೇಶ್ ರವರಿಗೆ ಮನವಿ ಸಲ್ಲಿಸಲಾಯಿತು
ಪ್ರಮುಖ ಬೇಡಿಕೆಗಳು
🌀ಶೇ.60.ರಷ್ಟು ಸೇವಾ ನೀರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಪರೀಕ್ಷೆ ಯಿಲ್ಲದೇ 6-8 ಕ್ಕೆ ಪರಿಗಣಿಸುವ ಕುರಿತು*
🌀ಮಾರ್ಚ್ ತಿಂಗಳಲ್ಲಿ ಜರುಗಲಿರುವ ಅಧಿವೇಶನದಲ್ಲಿ ಶಿಕ್ಷಕರ ವರ್ಗಾವಣೆ ಕಾಯ್ದೆ-2020 ಕ್ಕೆ ಸೂಕ್ತ ತಿದ್ದುಪಡಿ ತರುವ ಕುರಿತು
🌀6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಪದೋನ್ನತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಕಾಲಮಿತಿ ಬಡ್ತಿ,ಸ್ವಯಂ ಚಾಲಿತ ಬಡ್ತಿ,20,25,30 ವರ್ಷಗಳ ಸೌಲಭ್ಯ ನೀಡುವ ಕುರಿತು
🌀ಸುಪ್ರೀಂಕೋರ್ಟ್ ನಲ್ಲಿರುವ ಗ್ರಾಮೀಣ ಕ್ರಪಾಂಕ ರಹಿತ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ಕುರಿತು
🌀150 ಕ್ಕಿಂತ ಹೆಚ್ಚು ಮಕ್ಕಳಿರುವ ಪ್ರಾಥಮಿಕ ಶಾಲೆಗಳಿಗೆ ಪದವೀಧರರೇತರ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ನೀಡುವ ಕುರಿತು
🌀ಶಿಕ್ಷಕರ ಅನುಪಾತವನ್ನು ಪುನರ್ ನಿಗದಿಗೊಳಿಸುವ ಕುರಿತು
🌀ರಾಜ್ಯದಲ್ಲಿನ ನೂತನ 52 ತಾಲ್ಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಪ್ರಾರಂಭಿಸುವದು ಅಗತ್ಯ ಸಿಬ್ಬಂದಿ ಮಂಜೂರಾತಿಗಾಗಿ ಬಜೆಟ್ ಅಧಿವೇಶನದಲ್ಲಿ ಒದಗಿಸುವ ಕುರಿತು
🌀ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಎಲ್ಲಾ ರೀತಿಯ ಬಡ್ತಿ ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ಪೂರ್ಣಗೊಳಿಸುವಂತೆ ವಿಭಾಗದ ಎಲ್ಲಾ ಉಪನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡುವ ಕುರಿತು
🌀ರಾಜ್ಯಾದ್ಯಂತ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಬಿಲ್ಲುಗಳಿಗೆ ವಿನಾಯಿತಿ ನೀಡುವ ಕುರಿತು
ಶ್ರೀ ಶಂಭುಲಿಂಗನಗೌಡ ಪಾಟೀಲ
ರಾಜ್ಯಾಧ್ಯಕ್ಷರು
ಶೀ ಚಂದ್ರಶೇಖರ್ ನುಗ್ಗಲಿಪ್ರಧಾನ ಕಾರ್ಯದರ್ಶಿ
ರಾಜ್ಯ ಪದಾಧಿಕಾರಿಗಳು
ಕ.ರಾ.ಪ್ರಾ.ಶಾ.ಶಿ.ಸಂಘ ಬೆಂಗಳೂರು