---Advertisement---

ಕಲಿಕಾ ಹಬ್ಬದಲ್ಲಿ 7 ಚಟುವಟಿಕೆಗಳಿಗೆ ನಿರ್ದಿಷ್ಟವಾಗಿ ನೀಡಬಹುದಾದ FLN ಚಟುವಟಿಕೆಗಳು

By kspstadk.com

Published On:

Follow Us
Kalika habba
---Advertisement---
WhatsApp Group Join Now
Telegram Group Join Now

ಕಲಿಕಾ ಹಬ್ಬದಲ್ಲಿ 7 ಚಟುವಟಿಕೆಗಳಿಗೆ ನಿರ್ದಿಷ್ಟವಾಗಿ ನೀಡಬಹುದಾದ FLN ಚಟುವಟಿಕೆಗಳು

  • ಗಟ್ಟಿ ಓದು ಕೊಠಡಿಯಲ್ಲಿ ಓದಿನ ಮೂಲೆ ನಿರ್ಮಿಸುವುದು. ತರಗತಿಗಳಿಗೆ ಅನುಗುಣವಾದ ಕಥೆ ಪುಸ್ತಕಗಳನ್ನು ಜೋಡಿಸುವುದು.
  • ದೊಡ್ಡ ಗಾತ್ರದ ಚಿತ್ರ ಹೊಂದಿರುವ ಪುಸ್ತಕಗಳು, ಆಕರ್ಷಕ ಕಥಾ ಪುಸ್ತಕಗಳು, ಕನ್ನಡ ಮತ್ತು ಇಂಗ್ಲಿಷ್ ವಾರ್ತಾ ಪತ್ರಿಕೆಗಳು, ಓದಿಗೆ ಸಂಬಂಧಿಸಿದ ಚಾರ್ಟ್ ಚಿತ್ರಪಟಗಳು, TLM ಗಳ ಪ್ರದರ್ಶನ ಮತ್ತು ಜೋಡಣೆ ಚಟುವಟಿಕೆಗಳ ವಿವರ :
  • ಗೋಡೆ ಬರಹ ಗಟ್ಟಿಯಾಗಿ ಓದಿಸುವುದು (ಮುದ್ರಿಸಿ ಗೋಡೆಗೆ ಹಾಕಬಹುದು)
  • ಒತ್ತಕ್ಷರ ಪದಗಳನ್ನು Tray ನಲ್ಲಿ ಸಂಗ್ರಹಿಸಿ ಸಜಾತಿಯ, ವಿಜಾತಿಯ ಒತ್ತಕ್ಷರಗಳ ವಿಂಗಡನೆ ಮಾಡಿಸುವುದು.
  • ಲೇಖನ ಚಿಹ್ನೆ, ಇರುವ ವಿವಿಧ ರೀತಿಯ ವಾಕ್ಯ / ಪ್ಯಾರಾ ಬಳಸಿ ಓದಿಸುವುದು.
  • ಓದಿ ಅರ್ಥ ತಿಳಿಸುವುದು (ಮಕ್ಕಳ ಹಂತದ ಕಥೆ ಪುಸ್ತಕಗಳನ್ನು ಓದಿಸುವುದರ ಮೂಲಕ)
  • ಸಣ್ಣ ಕವನ /ಪದ್ಯ/ ಚುಟುಕು ಓದಿಸುವುದು ಅಥವಾ ವಾಚಿಸುವುದು.
  • Flash Cards / Sight Words ಗಳನ್ನು ಓದಿಸುವುದು
  • ಆಂಗ್ಲ ಭಾಷೆಗೆ ಸಂಬಂಧಿಸಿದ ಸಣ್ಣ ವಾಕ್ಯಗಳನ್ನು ಓದಿಸುವುದು.
  • ವಾಕ್ಯ/ಪದ /ಪ್ಯಾರಗಳ Flash Card ನೀಡಿ ಓದಿಸುವುದು
  • ಗಾದೆ ಮಾತು, ನಾಣ್ಣುಡಿ, ಉಕ್ತಿಗಳನ್ನು ನೀಡಿ ಓದಿಸುವುದು. ಗಮನಿಸಬೇಕಾದ ಅಂಶಗಳು :
  • ಸರಿಯಾದ ಉಚ್ಚಾರ ಹಾವ ಭಾವ, ಸ್ವರ ಏರಿಳಿತ, ನಿರರ್ಗಳತೆ, ತಪ್ಪುಗಳಿಲ್ಲದೆ ಓದುವುದು.
  • ಶಿಕ್ಷಕರೇ ಕಥೆಯನ್ನು ಹೇಳುವುದು.
  • ಮಕ್ಕಳ ಹಂತಕ್ಕೆ ಅನುಗುಣವಾದ ಸಣ್ಣ ಕಥೆಯ ತುಣುಕುಗಳನ್ನು ನೀಡಿ ಕಥೆ ಜೋಡಿಸುವುದು.
  • ಶಿಕ್ಷಕರು / ವಿದ್ಯಾರ್ಥಿಗಳು Props ಬಳಸಿ ಕಥೆ ಹೇಳುವುದು.
  • Story Cubes: Dise ನಲ್ಲಿ ಪದಗಳನ್ನು ಬರೆದು ಕಥೆ ಕಟ್ಟಲು ಹೇಳುವುದು.
  • ಕಥೆ ಬೆಳೆಸುವುದು (Story Chain)
  • ನಶೀರ್ಷಿಕೆ / ಕಥೆಯ ಮುಂದಿನ ಭಾಗ ಊಹಿಸಿ ಹೇಳುವುದು.
  • ಆಲಿಸಿದ ಕಥೆಯ ಪ್ರಶ್ನೆಗಳನ್ನು ಕೇಳುವುದು
  • ನಲಿ ಕಲಿ ಕಥೆ ಪುಸ್ತಕವನ್ನು ಬಳಸುವುದು.
  • ಚಿತ್ರ ನೋಡಿ ಕಥೆ ಹೇಳುವುದು (ಕಥೆಗಳ ಸೆಟ್ ನೀಡಿ) ಚಿತ್ರಪಟ ಬಳಸುವುದು.
  • Animation ಕಥೆಗಳನ್ನು ತೋರಿಸುವುದು. (Smart TV ಇದ್ದಲ್ಲಿ)

ಗಮನಿಸಬೇಕಾದ ಅಂಶಗಳು :

  • ಪದಗಳ ಬಳಕೆ, ವಾಕ್ಯ ಬಳಕೆ, ಧ್ವನಿ ಏರಿಳಿತ, ಹಾವಭಾವ, ಅಭಿನಯ.
  • ಸಣ್ಣ ಕಥೆಗಳನ್ನು ಆಲಿಸಿ, ಅದನ್ನು ಬರೆಯಲು ಹೇಳುವುದು.
  • ನೀಡಿದ ವಾಕ್ಯ / ಪದವನ್ನು ತಪ್ಪಿಲ್ಲದೆ ಅಂದವಾಗಿ ಬರೆಸುವುದು.
  • ಕ್ಯಾಲಿಗ್ರಫಿ ಬಳಸಿ, ತಮ್ಮ ಹೆಸರನ್ನು ಅಂದವಾಗಿ ಬರಿಸುವುದು (ಬಣ್ಣ ಬಳಸಬಹುದು).
  • 3D Writing ವಿದ್ಯಾರ್ಥಿಗಳಿಗೆ ಕಲಿಸಿಕೊಡಬಹುದು.
  • Posterಗಳನ್ನು ಬರೆಸುವುದು.
  • ಕ್ಯಾಲಿಗ್ರಫಿ ಪದಗಳ ಪ್ರದರ್ಶನ
  • Italic Writing 4 ಗೆರೆಗಳಲ್ಲಿ ಬರೆಸುವುದು.
  • ಮೂರು ನಾಲ್ಕು ಅಕ್ಷರಗಳಿರುವ ಪದಗಳನ್ನು ಬರೆದು ಕಾಳುಗಳನ್ನು ಅಂಟಿಸುವುದು. ಗಮನಿಸಬೇಕಾದ ಅಂಶಗಳು :

ಆಕಾರ/ ಶುದ್ಧತೆ /ಸುಂದರ/ ಪದ ಮತ್ತು ವಾಕ್ಯಗಳ ಅಂತರ.

  • ಆಕೃತಿ ಗುರುತಿಸುವುದು ಅಥವಾ ಹೇಳಿದ ಆಕೃತಿ ಬಿಡಿಸುವುದು.
  • ಮಿಂಚು ಪಟ್ಟಿಗಳ ಸಹಾಯದಿಂದ ಬೆಸ, ಸಮ ಸಂಖ್ಯೆ ಚಿಕ್ಕದು, ದೊಡ್ಡದು ಸಂಖ್ಯೆ ಏರಿಕೆ, ಇಳಿಕೆ ಸಂಕಲನ, ವ್ಯವಕಲನಗಳನ್ನು ಮಾಡಿಸುವುದು.
  • ನೀಡಿದ ಸಂಖ್ಯೆಯನ್ನು ಸ್ಥಾನಬೆಲೆಗೆ ಅನುಗುಣವಾಗಿ ಅಬಾಕಸ್ ನಲ್ಲಿ ಮಣಿಗಳನ್ನು ಜೋಡಿಸುವುದು.
  • ಗಡಿಯಾರದಲ್ಲಿ ಗಂಟೆ ಹೇಳಿಸುವುದು.
  • ವಸ್ತುಗಳನ್ನು ಭಾಗ ಮಾಡಿ ಭಿನ್ನರಾಶಿಯಲ್ಲಿ ಹೇಳಿಸುವುದು.
  • ನೋಟುಗಳ ಸಹಾಯದಿಂದ ಭಾಗಾಕಾರ
  • ಮಗ್ಗಿ, ಕೋಷ್ಟಕ ರಚನೆ / ಸುಲಭ ಮಗ್ಗಿ ಬರೆಯುವ ವಿಧಾನ ತಿಳಿಸುವುದು
  • ಗೇಣು, ಮೊಳ, ಮಾರು ಇತ್ಯಾದಿಗಳಿಂದ ಅಳತೆ ಮಾಡಿಸುವುದು.
  • ಮೂಲ ಕ್ರಿಯೆಗೆ ಸಂಬಂಧಿಸಿದ Puzzel ನೀಡುವುದು.
  • ಹಣದ ಲೆಕ್ಕಚಾರ ಮಾಡಿಸುವುದು.
  • ಸುಡುಕು ಬಿಡಿಸುವುದು.
  • Tangram ಬಳಸಿ ವಿವಿಧ ಆಕೃತಿಗಳ ಸಹಾಯದಿಂದ ಚಿತ್ರ ಬಿಡಿಸುವುದು ಅಥವಾ ಅಂಟಿಸುವುದು ಮತ್ತು ಅದನ್ನು ಪ್ರದರ್ಶಿಸುವುದು.
  • ಬೆಂಕಿ ಕಡ್ಡಿ / Straw ಬಳಸಿ ಆಕೃತಿಗಳನ್ನು ರಚಿಸುವುದು.
  • KIMS Game :ವಸ್ತುಗಳನ್ನು (ತರಕಾರಿ, ಹಣ್ಣು ಲೇಖನ ಸಾಮಾಗ್ರಿ, ಬಣ್ಣ ಇತ್ಯಾದಿ.)
  • ಒಂದು ನಿಮಿಷ ತೋರಿಸಿ ಅವುಗಳನ್ನು ಪಟ್ಟಿ ಮಾಡಿಸುವುದು.
  • Picture Recall: ಚಿತ್ರ ತೋರಿಸಿ ಒಂದು ನಿಮಿಷದ ನಂತರ ಪ್ರಶ್ನೆ ಕೇಳುವುದು.

ಎಷ್ಟು ಮರ ಇದೆ?
ಎಷ್ಟು ಮನೆ ಇದೆ?
ಏನೆಲ್ಲಾ ಇದೆ? ಇತ್ಯಾದಿ

  • Riddles ಮತ್ತು ಒಗಟು ಬಿಡಿಸುವುದು.
  • ಪದಗಳನ್ನು ಜೋಡಿಸುತ್ತಾ ವಾಕ್ಯದೊಡ್ಡದು ಮಾಡುವುದು. (ನಾನು ಪೇಟೆಗೆ ಹೋದೆ.ಅಲ್ಲಿಂದ ಬರುವಾಗ ಮೀನು ತಂದೆ. . . . . Ballon ತಂದೆ. . . . . . ಕಿತ್ತಳೆ ತಂದೆ (ಗುಂಪು ಚಟುವಟಿಕೆ))
  • ಅಕ್ಷರ ಜ್ಞಾನ
  • ಸಂಖ್ಯಾ ಜ್ಞಾನ
  • ಪರಿಸರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು

  • ಕಥೆ ಬೆಳೆಸುವುದು
  • ಹಗ್ಗ ಜಗ್ಗಾಟ
  • ಆನೆಗೆ ಬಾಲ ಬಿಡಿಸುವುದು.
  • ಬಕೆಟ್ ಗೆ ಬಾಲ್ ಹಾಕುವುದು.
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment