ಕಲಿಕಾ ಚೇತರಿಕೆ ,ವಿದ್ಯಾ ಪ್ರವೇಶ
ಮೌಲ್ಯಮಾಪನ ಹಾಗೂ ಇತರ ಪ್ರಮುಖ ಮಾಹಿತಿ ಇಲ್ಲಿದೆ

IMG 20220704 WA0018 1
WhatsApp Group Join Now
Telegram Group Join Now

ಮೌಲ್ಯಮಾಪನ ಅನುಷ್ಠಾನದ ಕ್ರಮಗಳು (01 ರಿಂದ 03ನೇ ತರಗತಿ)

1. ವಿದ್ಯಾ ಪ್ರವೇಶ ಕಾರ್ಯಕ್ರಮದಲ್ಲಿನ ಮೌಲ್ಯಮಾಪನ ವಿಧಾನಗಳು:

ವಿದ್ಯಾಪ್ರವೇಶ ಕಾರ್ಯಕ್ರಮದಲ್ಲಿ ಎರಡು ವಿಧವಾದ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲಾಗುವುದು.
ಒಂದನೆಯದು ಪ್ರತಿ ಹದಿನೈದು ದಿನಗಳಿಗೊಮ್ಮೆ ನಡೆಸುವ ‘ನನ್ನ ಸಾಧನೆ’ ಎಂಬ ಪ್ರಕ್ರಿಯೆ. ಹದಿನೈದು ದಿನಗಳ ಕಾಲ
ಮಕ್ಕಳು ಮಾಡಿದ ಚಟುವಟಿಕೆಯನ್ನು ಆಧರಿಸಿ ಇದನ್ನು ಮಾಡಲಾಗುವುದು. ಪ್ರತೀ ಮಗುವಿಗೂ ವೈಯಕ್ತಿಕವಾಗಿ
ಪ್ರತ್ಯೇಕ ಹಾಳೆಯ ಮೂಲಕ ದಾಖಲೆಯನ್ನು ನಿರ್ವಹಿಸಬೇಕು ಮತ್ತು ಮಗುವಿನ ಬೋರ್ಟ್ ಪೋಲಿಯೋದಲ್ಲಿ
ಸಂಗ್ರಹಿಸಿಡಬೇಕು.

ಇನ್ನೊಂದು ವಿಧವಾದ ಮೌಲ್ಯಮಾಪನ ಎಂದರೆ, ಪ್ರತೀ ತಿಂಗಳಿಗೊಮ್ಮೆ 03 ತಿಂಗಳು ಕಾಲ ನಡೆಸುವ ‘ಸಮಗ್ರ’
ಮೌಲ್ಯಮಾಪನವಾಗಿರುತ್ತದೆ. ಇದನ್ನು ಸಹ ಪ್ರತಿ ಮಗುವಿಗೆ ಪ್ರತ್ಯೇಕವಾದ ಹಾಳೆಯ ಮೂಲಕ ದಾಖಲಿಸಿ,
ಪೋಷಕರಿಂದಲೂ ಸಹಿ ಪಡೆಯಬೇಕು ನಂತರ ಈ ಹಾಳೆಗಳನ್ನು ಪೋರ್ಟ್ ಪೋಲಿಯೋದಲ್ಲಿ ಸಂಗ್ರಹಿಸಿಡಬೇಕು
ಮತ್ತು ಕ್ರೂಡೀಕರಣ ವಹಿಯಲ್ಲಿಯೂ ದಾಖಲಿಸಿಟ್ಟುಕೊಳ್ಳಬೇಕು.

2. ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿನ ಮೌಲ್ಯಮಾಪನ ವಿಧಾನಗಳು :

ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಟಾನ ಸಂದರ್ಭದಲ್ಲಿ ನಡೆಸುವ ಮೌಲ್ಯಮಾಪನವನ್ನು ಈ ಹಿಂದಿನ ವರ್ಷಗಳಲ್ಲಿ
ನಡೆಸುತ್ತಿದ್ದಂತೆ ನಿಗದಿಪಡಿಸಿದ ತಿಂಗಳ ಅಂತ್ಯಕ್ಕೆ ಗುರಿ ಮತ್ತು ಮಕ್ಕಳ ಸಾಧನೆಯನ್ನು ಆಧರಿಸಿ ಶೇಕಡಾವನ್ನು
ಕಂಡುಹಿಡಿದು ನಂತರ ಶ್ರೇಣಿಗೆ ಪರಿವರ್ತಿಸಿ ದಾಖಲೆಗಳಲ್ಲಿ ನಮೂದಿಸುವುದು.

3. ನಲಿಕಲಿ ತರಗತಿಗಳಲ್ಲಿ ಅನುಷ್ಠಾನಗೊಳಿಸಬೇಕಾದ ಮೌಲ್ಯಮಾಪನದ ವೇಳಾಪಟ್ಟಿ

ಮೌಲ್ಯಮಾಪನ ವಿಧಗಳು
ರೂಪಣಾತ್ಮಕ ಮೌಲ್ಯಮಾಪನ – FA – 01
ಅನುಷ್ಠಾನದ ತಿಂಗಳುಗಳು
ಅಕ್ಟೋಬರ್-22

ರೂಪಣಾತ್ಮಕ ಮೌಲ್ಯಮಾಪನ – FA – 02
ನವೆಂಬರ್-22

ರೂಪಣಾತ್ಮಕ ಮೌಲ್ಯಮಾಪನ – SA-01
ಡಿಸೆಂಬರ್-22

ರೂಪಕಾತ್ಮಕ ಮೌಲ್ಯಮಾಪನ – FA – 03

ಜನವರಿ-23

ಫೆಬ್ರವರಿ-23
ರೂಪಣಾತ್ಮಕ ಮೌಲ್ಯಮಾಪನ – FA – 04
ರೂಪಣಾತ್ಮಕ ಮೌಲ್ಯಮಾಪನ – SA – 02
ಮಾರ್ಚ್-23

ಸೂಚನೆ : 2022-23ನೇ ಸಾಲಿನ ಕಲಿಕಾ ಚೇತರಿಕ ಕಾರ್ಯಕ್ರಮದ ಅನುಷ್ಟಾನಕ್ಕಾಗಿ ಮಾರ್ಪಡಿಸಿದ ಕಲಿಕಾ
ಏಣಿಯನ್ನು ನೀಡಲಾಗಿದೆ. ಅದರಂತೆಯೇ, ಮಕ್ಕಳ ಪ್ರಗತಿ ನೋಟವನ್ನು ಸಹ ಶಿಕ್ಷಕರು ಮಾರ್ಪಡಿಸಿಕೊಳ್ಳಬೇಕು.
ಮಕ್ಕಳ ಪ್ರಗತಿ ನೋಟದಲ್ಲಿ ಈ ಹಿಂದಿನಂತೆ ಪ್ರಗತಿಯನ್ನು ದಾಖಲಿಸುವುದು ಕಡ್ಡಾಯ. ಶಿಕ್ಷಕರು ಪ್ರತೀ ದಿನ
ನಿರ್ವಹಿಸುವ ಚಟುವಟಿಕೆಗಳ ದಾಖಲೆಗಾಗಿ ದಿನಚರಿ ಪ್ರಕ್ರಿಯೆಯನ್ನು ಯಥಾವತ್ತು ಮುಂದುವರೆಸುವುದು.

ನೈದಾನಿಕ ಅವಲೋಕನ ಮತ್ತು ಪ್ರಗತಿ ದಾಖಲು:ಪ್ರಸ್ತುತ ಸಾಲಿನಲ್ಲಿ ನೈದಾನಿಕಲಿಖಿತ ಪರೀಕ್ಷೆ ಇರುವುದಿಲ್ಲ. ಗ ನೈದಾನಿಕಚರ್ಚೆ, ಓದು, ಬರಹದಮೂಲಕ ಮೊದಲ ವಾರದಲ್ಲಿ ಮಕ್ಕಳ ಪ್ರಗತಿಯನ್ನುಗಮನಿಸಿ, ಈ ನೈದಾನಿಕ ಅವಲೋಕನದ ಮೂಲಕಮಕ್ಕಳ ಪ್ರಗತಿಯನ್ನು ದಾಖಲಿಸಿಕೊಳ್ಳಿ, ಭಾಷೆಮತ್ತು ಗಣಿತದಲ್ಲಿ ಅವರ ಮೂಲಭೂತ ಕಲಿಕಾಪ್ರಗತಿಯ ಅವಲೋಕನಕ್ಕೆ ಹೆಚ್ಚು ಒತ್ತು ನೀಡಿರಿ.ಕಲಿಕಾ ನಷ್ಟ ಅಥವಾ ಅಂತರದ ಕಾರಣಕ್ಕಾಗಿಯೇಹಾಳೆಗಳನ್ನು ಮಾಡಲಾಗಿರುವುದರಿಂದನೈದಾನಿಕ ಅವಲೋಕನಕ್ಕಾಗಿ ಮೊದಲ ಒಂದು ವಾರಕಲಿಕೆಯ ಮೂಲಭೂತ ಅಂಶಗಳ ಪುನರ್ಬಲನದಕೆಲಸ, ಮಕ್ಕಳ ಮನ ಗೆಲ್ಲುವ ಮತ್ತು ಮಾನಸಿಕ,ಭಾವನಾತ್ಮಕ ಸುರಕ್ಷತೆ ನೀಡುವ ಕೆಲಸನಿರ್ವಹಿಸಬೇಕಾಗುತ್ತದೆ.

*ರೂಪಣಾತ್ಮಕ ಮೌಲ್ಯಾಂಕನ -1

* ಮೊದಲನೇ FA-ಆಯಾ ತರಗತಿಗೆ ನಿಗದಿಗೊಳಿಸಿದ,ವಿಷಯವಾರು LO (ಕಲಿಕಾ ಫಲಗಳ) ಶೇ25ರಷ್ಟನ್ನುಪರಿಗಣಿಸುವುದು.ಕಲಿಕಾ ಹಾಳೆಗಳು ಮೌಲ್ಯಾಂಕನದ ಆಕರಗಳಾಗಿಬಳಸುವಂತೆ ತಯಾರಿಸಿದೆ. ಹಾಗೆಯೇ ಕೃತಿ ಸಂಪುಟಕ್ಕೆಅವುಗಳನ್ನು ನೇರವಾಗಿ ಸಂಗ್ರಹಿಸುವಂತೆಯೂತಯಾರಿಸಿದೆ. ಅವುಗಳನ್ನು ಸಂಗ್ರಹಿಸಿ ಅವಲೋಕಿಸಿ 15ಅಂಕಗಳಿಗೆ ದತ್ತಾಂಶಗಳನ್ನು ಕ್ರೋಢೀಕರಿಸಿರಿ, ಮಕ್ಕಳಪ್ರಗತಿಗೆ ಆಧಾರಾಂಶಗಳು ಕಲಿಕಾಹಾಳೆಗಳಚಟುವಟಿಕೆಗಳು ಆಗಿರುತ್ತವೆ. 9 ನೇ ತರಗತಿಗೆಅಗತ್ಯ ವೆನಿಸಿದಲ್ಲಿ ಪುಟ್ಟ ಲಿಖಿತ ಪರೀಕ್ಷೆಯನ್ನೂ(ರೂಪಣಾತ್ಮಕ ಮೌಲ್ಯಾಂಕನದಭಾಗವಾಗಿಮಾಡಬಹುದು.

ರೂಪಣಾತ್ಮಕ ಮೌಲ್ಯಾಂಕನ -2

ಮೊದಲನೇ FAಮಾದರಿಯಲ್ಲಿಯೇಎರಡನೇ FA – ಆಯಾ ತರಗತಿಗೆ ನಿಗದಿಗೊಳಿಸಿದ,ವಿಷಯವಾರು LO (ಕಲಿಕಾಫಲಗಳ) ಶೇ25ರಷ್ಟನ್ನು ಪರಿಗಣಿಸುವುದು.ಕಲಿಕಾ ಹಾಳೆಗಳು ಮೌಲ್ಯಾಂಕನದ ಆಕರಗಳಾಗಿಬಳಸುವಂತೆ ತಯಾರಿಸಿದೆ. ಹಾಗೆಯೇ ಕೃತಿಸಂಪುಟಕಅವುಗಳನ್ನು ನೇರ ಸಂಗ್ರಹಿಸುವಂತೆಯೂ ತಯಾರಿಸಿದೆ.ಅವುಗಳನ್ನು ಸಂಗ್ರಹಿಸಿ, ಅವಲೋಕಿಸಿ 15 ಅಂಕಗಳಿಗೆದತ್ತಾಂಶಗಳನ್ನು ಕ್ರೋಢೀಕರಿಸಿರಿ, ಅಗತ್ಯವೆನಿಸಿದಲ್ಲಿಪುಟ ಲಿಖಿತ ಪರೀಕ್ಷೆಯನ್ನು ರೂಪಣಾತ್ಮಕಮೌಲ್ಯಾಂಕನದ ಭಾಗವಾಗಿ ಮಾಡಬಹುದು.

ಸಂಕಲನಾತ್ಮಕ ಮೌಲ್ಯಮಾಪನ -1

ಈ ವರ್ಷ ಕಲಿಕಾ ಹಾಳೆಗಳಲ್ಲಿ ನಿಗದಿಪಡಿಸಿದ ಒಟ್ಟುಕಲಿವಿನ ಫಲದ ಸಂಖ್ಯೆಗಳ50 ರಷ್ಟುಕಲಿಕಾಫಲಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸುವುದು.ಲಿಖಿತ ಪರೀಕ್ಷೆಯ ಪಶ್ನೆಗಳು ಸಾಮರ್ಥ್ಯ/ಕಲಿಕಾಫಲಗಳಗಳಿಕ ಪರೀಕ್ಷಿಸುವಂತಿರಬೇಕೇವಿಷಯ/ಘಟಕ ಅಂಶವನ್ನಲ್ಲ.1 ರಿಂದ 5ನೇ ತರಗತಿಗಳಿಗೆ: 20 ಲಿಖಿತ +20 ಮೌಖಿಕ40 ಅಂಕಗಳಿಗೆ ಪರೀಕ್ಷೆ ನಡೆಸಿ ಇಂಗ್ಲೀಷ್ ಭಾಷೆಗೆ 10ಲಿಖಿತ 30 ಮೌಖಿಕ 40 ಅಂಕಗಳಿಗೆ ಪರೀಕ್ಷೆ20 ಅಂಕಗಳಿಗೆನಡೆಸುವುದು. ಹಾಗೂಪರಿವರ್ತಿಸುವುದು.

6 ರಿಂದ 8 ನೇ ತರಗತಿಗಳಿಗೆ: 30 ಲಿಖಿತ+10 ಮೌಖಿಕ=40ಹೊರತುಅಂಕಗಳಿಗೆ ಪರೀಕ್ಷೆ ನಡೆಸುವುದು.9 ನೇತರಗತಿಗೆ ಹತ್ತನೆಯ ತರಗತಿಯ ಮಾದರಿಯಲ್ಲಿವೈಟೇಜ್ ನೀಡಿ ಪರೀಕ್ಷೆ ನಡೆಸುವುದು.ಮೊದಲನೆಯ ಸಂಕಲನಾತ್ಮಕ ಪರೀಕ್ಷೆಯಲ್ಲಿ ಎರಡುಹಂತದಪ್ರಶ್ನೆ ತಯಾರಿಸಿಕೊಳ್ಳಬಹುದಾಗಿದೆ.ಮೊದಲ ಹಂತದಲ್ಲಿ ಚುರುಕಾಗಿ ಕಲಿಕಾ ಫಲಗಳನ್ನುಗಳಿಸಿದ ಮಕ್ಕಳಿಗೆ ಅನ್ವಯಿಸುವ ಪ್ರಶ್ನೆ ಪತ್ರಿಕೆ * ನಂತರದ ಹಂತದಲ್ಲಿ ಕಲಿಕಾಫಲಗಳನ್ನು ಗಳಿಸಲುಸಮಸ್ಯೆಯಾದ ತೀರ ಹಿಂದುಳಿದ ಮಕ್ಕಳಿಗೆ ಪ್ರತ್ಯೇಕಪ್ರಶ್ನೆ ಪತ್ರಿಕೆಯಲ್ಲಿ ಮೌಲ್ಯಾಂಕನ ಮಾಡಿ ಅವರಮಾನಸಿಕ ಸುರಕ್ಷತೆಯನ್ನು ಕಾಪಾಡುವುದು.

ರೂಪನಾತ್ಮಕ ಮೌಲ್ಯಾಂಕನ -3

ರೂಪಣಾತ್ಮಕ ಮೌಲ್ಯಾಂಕನ -1ರಲ್ಲಿ ಹೇಳಿದಂತೆಕ್ರಮವಹಿಸಿರಿ

ರೂಪಣಾತ್ಮಕ ಮೌಲ್ಯಾಂಕನ 4

ರೂಪಣಾತ್ಮಕ ಮೌಲ್ಯಾಂಕನ -2ರಲ್ಲಿ ಹೇಳಿದಂತೆ ಕ್ರಮವಹಿಸಿರಿ.

ಸಂಕಲನಾತ್ಮಕ ಮೌಲ್ಯಮಾಪನ 2

  • ಈ ವರ್ಷ ಕಲಿಕಾ ಹಾಳೆಗಳಲ್ಲಿ ನಿಗದಿಪಡಿಸಿದ ಒಟ್ಟುಕಲಿವಿನ ಫಲದ ಸಂಖ್ಯೆಗಳ ಶೇ 50 ರಷ್ಟು ಕಲಿಕಾಫಲಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸುವುದು. ಮೊದಲಸ. ಮೌ. ಅಡಿ ಶೇ 50 ರ ಪರೀಕ್ಷೆಯಾಗಿರುತ್ತದೆ.ಲಿಖಿತ ಪರೀಕ್ಷೆಯ ಪ್ರಶ್ನೆಗಳು ಸಾಮರ್ಥ್ಯ/ಕಲಿಕಾಫಲಗಳ ಗಳಿಕೆ ಪರೀಕ್ಷಿಸುವಂತಿರಬೇಕೇ ಹೊರತು ವಿಷಯ/ ಘಟಕಾಂಶವನ್ನಲ್ಲ.1 ರಿಂದ 5 ನೇ ತರಗತಿಗಳಿಗೆ: 20 ಲಿಖಿತ +20 ಮೌಖಿಕ40 ಅಂಕಗಳಿಗೆ ಪರೀಕ್ಷೆ ನಡೆಸಿ ಇಂಗ್ಲೀಷ್ ಭಾಷೆಗೆ 10ಲಿಖಿತ+30 ಮೌಖಿಕ 40 ಅಂಕಗಳಿಗೆ ಪರೀಕ್ಷೆನಡೆಸುವುದು. ಹಾಗೂ 20 ಅಂಕಗಳಿಗೆಪರಿವರ್ತಿಸುವುದು.6 ರಿಂದ 8ನೇ ತರಗತಿಗಳಿಗೆ: 30 ಲಿಖಿತ+10 ಮೌಖಿಕ=40ಅಂಕಗಳಿಗೆ ಪರೀಕ್ಷೆ ನಡೆಸುವುದು.9 ನೇತರಗತಿಗೆ ಹತ್ತನೆಯ ತರಗತಿಯ ಮಾದರಿಯಲ್ಲಿವೈಟೇಜ್ ಯ ನೀಡಿ ಪರೀಕ್ಷೆ ನಡೆಸುವುದು.

ಈ ಮಾಹಿತಿಯನ್ನು WhatsApp ಮೂಲದಿಂದ ಸಂಗ್ರಹಿಸಲಾಗಿದೆ. . ಇಲಾಖೆಯು ಕಾಲ ಕಾಲ ಹೊರಡಿಸುವ ಸುತ್ತೋಲೆಯಂತೆ ಕ್ರಮವಹಿಸುವುದು

WhatsApp Group Join Now
Telegram Group Join Now
Sharing Is Caring:

Leave a Comment