ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಹಚ್ಚಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ..
ಶ್ರೀಮತಿ ಸುಮನಾಜಿ
ಸ.ಉ.ಹಿ.ಪ್ರಾ.ಶಾಲೆ ಕುತ್ಲೂರು.
ಬೆಳ್ತಂಗಡಿ ತಾಲೂಕು
ಮೂಡುಬಿದಿರೆ ಸಮೀಪದ ಪುಚ್ಚಮೊಗರು ಎಂಬಲ್ಲಿ ಶ್ರೀ ಅರ್ಕಕೀರ್ತಿ ಬಂಗ ಹಾಗೂ ಶ್ರೀಮತಿ ಎಂ.ಲೀಲಾವತಿ ದಂಪತಿಗಳ ಪುತ್ರಿಯಾಗಿ ದಿನಾಂಕ 06.07.1963 ರಲ್ಲಿ ಜನಿಸಿದ ಇವರು, ದಿನಾಂಕ 17.08.1992 ರಲ್ಲಿ ಸ.ಉ.ಪ್ರಾ.ಶಾಲೆ ಪಿಲ್ಯ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಕಿ.ಪ್ರಾ.ಶಾಲೆ ಕಾಪಿನಡ್ಕ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ಕುತ್ಲೂರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಗಾಯತ್ರಿ ದೇವಿ
ಸ.ಹಿ.ಪ್ರಾ.ಶಾಲೆ ಕೆಲಿಂಜ ವೀರಕಂಭ ಬಂಟ್ವಾಳ ತಾಲೂಕು.
ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ದೋಟ ಶ್ರೀ ದಿ.ಬಾಬು ಪೂಜಾರಿ ಮತ್ತು ಶ್ರೀಮತಿ ಕಮಲ ದಂಪತಿಗಳ ಪುತ್ರಿಯಾಗಿ ದಿನಾಂಕ 20.07.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಮಚ್ಚಿನ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ ಅನುದಾನಿತ ಶಾಲೆ ಮಡಂತ್ಯಾರು ಹಾಗೂ ಪ್ರೌಢ ಶಿಕ್ಷಣವನ್ನು ಸ.ಶಾಲೆ ಪುಂಜಾಲಕಟ್ಟೆ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಕೆ.ಯು.ಟಿ.ಟಿ.ಐ ಕೊಕ್ಕರ್ಣೆ ಇಲ್ಲಿ ಪೂರೈಸಿ, ದಿನಾಂಕ 19.02.1996 ರಲ್ಲಿ ಸ.ಹಿ.ಪ್ರಾ.ಶಾಲೆ ಸಜಿಪ ಮೂಡ ಬಂಟ್ವಾಳ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಮಾ.ಹಿ.ಪ್ರಾ.ಶಾಲೆ ಕಲ್ಲಡ್ಕ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಹೆಚ್ಚುವರಿಯಾಗಿ ಸ.ಹಿ.ಪ್ರಾ.ಶಾಲೆ ಕುರುವೇಲು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕೆಲಿಂಜ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಶಿವರಾಮ ಭಟ್
ಸ.ಹಿ.ಪ್ರಾ.ಶಾಲೆ ಮಿತ್ತನಡ್ಕ ಬಂಟ್ವಾಳ.
ಬಂಟ್ವಾಳ ತಾಲೂಕಿನ ಪೆರುವಾಯಿ
ಗ್ರಾಮದ ಶ್ರೀ ಎಸ್ ನರಸಿಂಹ ಭಟ್ ಹಾಗೂ ಶ್ರೀಮತಿ ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು ದಿನಾಂಕ 30.07.1993 ರಂದು ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಸ.ಕಿ.ಪ್ರಾ.ಶಾಲೆ ಪುಣ್ಕೆದಡಿ ಇಲ್ಲಿ ಸೇವೆಗೆ ಸೇರಿ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 19.03.1996 ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಕನ್ಯಾನ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 06.03.2002 ರಿಂದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾಗಿ ಸಮೂಹ ಸಂಪನ್ಮೂಲ ಕೇಂದ್ರ ಕಲ್ಲಡ್ಕದಲ್ಲಿ ಕರ್ತವ್ಯ ನಿರ್ವಹಿಸಿ ನಂತರ 31.01.2006 ರಲ್ಲಿ ಸ.ಹಿ.ಪ್ರಾ.ಶಾಲೆ ಕಣಿಯೂರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ 2013 ರಿಂದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸಮೂಹ ಸಂಪನ್ಮೂಲ ಕೇಂದ್ರ ವಿಟ್ಲ ಇಲ್ಲಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 01.06.2017 ರಿಂದ ಸ.ಹಿ.ಪ್ರಾ.ಶಾಲೆ ಕಡೇಶ್ವಾಲ್ಯ ಇಲ್ಲಿಗೆ ವರ್ಗಾವಣೆ ಗೊಂಡು ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ದಿನಾಂಕ 20.02.2020 ರಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಸ.ಹಿ.ಪ್ರಿ.ಶಾಲೆ ಮಿತ್ತನಡ್ಕ ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಅಂಚೆ ಚೀಟಿ ಗಳು ಸಂಗ್ರಹ ಪ್ರಥಮ ದಿನದ ಅಂಚೆ ಲಕೋಟೆಗಳ ಸಂಗ್ರಹ ನಾಣ್ಯಗಳ ಸಂಗ್ರಹ ಪೇಪರ್ ಕರೆನ್ಸಿ ಗಳ ಸಂಗ್ರಹ ಮತ್ತು ಪ್ರದರ್ಶನಗಳನ್ನು ಏರ್ಪಡಿಸಿದ್ದ ಇವರು ಶಿಕ್ಷಕರಿಗೆ ಅನೇಕ ತರಬೇತಿಗಳು ರಸ ಪ್ರಶ್ನೆ ಕಾರ್ಯಕ್ರಮ ಹಾಗೂ ಗಿಡಮೂಲಿಕೆಗಳ ಪರಿಚಯ ಹಾಗೂ ವಿಟ್ಲ ಮಾದರಿ ಶಾಲೆಯ ನಾವು- ನೀವು ಯೋಜನೆಗೆ ಶ್ರಮಿಸಿರುವ ಇವರು ಹಲವಾರು ಶಾಲೆಗಳ ವಾಚನಾಲಯ ಅಭಿವೃದ್ಧಿ ಯಲ್ಲಿ ಶ್ರಮಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಗ್ರೇಸಿ ಡೇಸ
15-07-1963 ರಂದು ಜನಿಸಿದ ಇವರು ಸೇವೆಗೆ ಸೇರಿದ ದಿನಾಂಕ 16-01-1996ರಂದು ದ.ಕ ಜಿ.ಪಂ.ಹಿ.ಪ್ರಾ.ಶಾಲೆ. ಮೋಂತಿಮಾರು. ಬಂಟ್ವಾಳ ತಾಲೂಕು. ದ.ಕ.ಜಿ.ಪಂ.ಹಿ.ಪ್ರಾ.ಶಾಲೆ. ಬೊಕ್ಕಪಟ್ಟಣ-6 ಹಾಗೂ ಬೊಕ್ಕಪಟ್ಟಣ-3 .ಸಿ ಆರ್.ಪಿ ಹಾಗೂ ಬಿ.ಆರ್. ಪಿ ಯಾಗಿ ಸೇವೆ ಸಲ್ಲಿಸಿರುವರು. ಸರಕಾರಿ ಹೆಣ್ಣು ಮಕ್ಕಳ ತರಬೇತಿ ಸಂಸ್ಥೆ ಬಲ್ಮಠ ಅಲ್ಲಿಂದ ವರ್ಗಾವಣೆಗೊಂಡು ದ.ಕ ಜಿ.ಪಂ.ಹಿ.ಪ್ರಾ.ಶಾಲೆ. ಅತ್ತಾವರ ಶಾಲೆಯಲ್ಲಿ 01-10-2019 ರಂದು ಸೇವೆಗೆ ಸೇರಿ 29 ವರ್ಷ 6 ತಿಂಗಳುಗಳ ಸೇವೆ ಸಲ್ಲಿಸಿ 31-07-2023 ನಿವೃತ್ತಿ ಹೊಂದಿರುವರು.
ಶ್ರೀಮತಿ ರೂಪ್ಲಿನ್ ಕ್ಲೋಟಿ ಕುವೆಲ್ಲೊ
ದೈಹಿಕ ಶಿಕ್ಷಕರು.
ದ.ಕ.ಜಿ.ಪಂ.ಮಾ.ಉನ್ನತೀಕರಿಸಿದ ಶಾಲೆ ಕೆ.ಎಸ್.ರಾವ್ ನಗರ ಕಾರ್ನಾಡ್ ಮೂಲ್ಕಿ.
ಮಂಗಳೂರು ಉತ್ತರ
ದಿನಾಂಕ 16.01.1996 ರಲ್ಲಿ ಸ.ಹಿ.ಪ್ರಾ.ಶಾಲೆ ಪಡುಕೋಣಾಜೆ ಮೂಡುಬಿದಿರೆ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಚೆಳ್ಯಾರು ಮಂಗಳೂರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ಕೆ.ಎಸ್.ರಾವ್ ನಗರ ಕಾರ್ನಾಡ್ ಮೂಲ್ಕಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ದೇವಕಿ
ಸ.ಹಿ.ಪ್ರಾ.ಶಾಲೆ ಬಡಗ ಎಕ್ಕಾರು.
ಮಂಗಳೂರು ಉತ್ತರ
ದಿನಾಂಕ 05.08.1985 ರಲ್ಲಿ ಸೇವೆಗೆ ಸೇರಿದ ಇವರು ಸ.ಹಿ.ಪ್ರಾ.ಶಾಲೆ ಕಣಿಯೂರು ಪದ್ಮುಂಜ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಗುರು ಕಂಬಳ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕಾಪಿಕಾಡು,ಸ.ಹಿ.ಪ್ರಾ.ಶಾಲೆ ಕಾವೂರು,ಸ.ಕಿ.ಪ್ರಾ.ಶಾಲೆ ಕಿಲೆಂಜೂರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಬಡಗ ಎಕ್ಕಾರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಕುಂಞ ಬಾಬು ಎ
ಸ.ಹಿ.ಪ್ರಾ.ಶಾಲೆ ರಾಜಗುಡ್ಡ.
ಮಂಗಳೂರು ದಕ್ಷಿಣ
ದಿನಾಂಕ 04.07.1963 ರಲ್ಲಿ ಜನಿಸಿದ ಇವರು, ದಿನಾಂಕ 05.12.2000 ರಲ್ಲಿ ಸ.ಹಿ.ಪ್ರಾ.ಶಾಲೆ ರಾಜಗುಡ್ಡ ಇಲ್ಲಿ ಸೇವೆಗೆ ಸೇರಿದ ಇವರು ನಂತರ ತಾಳಿತ್ತನೂಜಿ ಶಾಲೆಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ನರಿಂಗಾನ ಶಾಲೆಗೆ ವರ್ಗಾವಣೆ ಗೊಂಡು ಇಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ರಾಜಗುಡ್ಡ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಬಹುಮುಖಿ ಪ್ರತಿಭೆ ಆಗಿದ್ದು ಯಕ್ಷಗಾನ ನಾಟಕ ಕಲಾವಿದರಾಗಿದ್ದು ಜೊತೆಗೆ ಗಾಯನ ಚಿತ್ರಕಲೆ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು ಸರಕಾರಿ ನೌಕರರಿಗಾಗಿ ನಡೆಯುವ ಕಿರು ನಾಟಕ ಸ್ಪರ್ಧೆಯಲ್ಲಿ ಸತತ ಐದು ಬಾರಿ ಆಯ್ಕೆಯಾದ ಪ್ರತಿಭಾನ್ವಿತರು. ಇನ್ಫೋಸಿಸ್ ಸಂಸ್ಥೆಯಿಂದ ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ ಮೈಸೂರು ಎಲೆಕ್ಟ್ರಿಕಲ್ ಸಂಸ್ಥೆಯಿಂದ ಒಂದು ಲಕ್ಷ ರೂಪಾಯಿಗಳ ಅನುದಾನ ತರುವಲ್ಲಿ ಅಪರಿಮಿತ ಸಾಧನೆ ಮಾಡಿರುವ ಇವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು ದಕ್ಷಿಣ ವಲಯದ ಶಾಲಾ ಸಹಶಿಕ್ಷಕರ ಪ್ರತಿನಿಧಿಯಾಗಿ ಶಿಕ್ಷಕರ ಧ್ವನಿಯಾಗಿಯೂ ಕೆಲಸ ನಿರ್ವಹಿಸಿದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದು, ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾವಿರಾರು ಮಕ್ಕಳ ಬಾಳಿಗೆ ಬೇಳಕಾಗಿರುತ್ತಾರೆ. ಇವರ ಸಾಧನೆಯನ್ನು ಗುರುತಿಸಿ ರೋಟರಿ ಕ್ಲಬ್ ದೇರಳಕಟ್ಟೆ ವತಿಯಿಂದ ನೇಷನ್ ಬಿಲ್ಡರ್ ಪ್ರಶಸ್ತಿ ಹಾಗೂ 2022 ನೇ ಸಾಲಿನ “ಜೆಸಿ ಉತ್ತಮ ಶಿಕ್ಷಕ ಪ್ರಶಸ್ತಿ” ಪಡೆದಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಸುರೇಶ್ ಕುಮಾರ್
ದೈಹಿಕ ಶಿಕ್ಷಕರು
ಸ.ಉ.ಹಿ.ಪ್ರಾ.ಶಾಲೆ ಕುದ್ಮಾರು.
ಪುತ್ತೂರು ತಾಲೂಕಿನ ಪಾಲ್ತಾಡಿ ದೊಡ್ಡ ಮನೆ ಶ್ರೀ ಮುಂಡಪ್ಪ ಗೌಡ ಹಾಗೂ ಶ್ರೀಮತಿ ತಂಗಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಇವರು ದಿನಾಂಕ 15.05.1985 ರಲ್ಲಿ ಸ.ಹಿ.ಪ್ರಾ.ಶಾಲೆ ಇನ್ನಾ ಕಾರ್ಕಳ ತಾಲೂಕು ಇಲ್ಲಿ ದೈಹಿಕ ಶಿಕ್ಷಕರಾಗಿ ಸೇವೆಗೆ ಸೇರಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 1990 ರಲ್ಲಿ ಮಾ.ಹಿ.ಪ್ರಾ.ಶಾಲೆ ಕಡಬ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 3 ವರ್ಷ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಪೆರ್ಲಂಪಾಡಿ ಇಲ್ಲಿಗೆ ವರ್ಗಾವಣೆ ಗೊಂಡು 16 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಮುಕ್ವೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 10.11.2016 ರಂದು ಸ.ಉ.ಹಿ.ಪ್ರಾ.ಶಾಲೆ ಕುದ್ಮಾರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ವಿವಿಧ ಸಂಘಟನೆಗಳಲ್ಲಿಯೂ ಸಕ್ರಿಯರಾಗಿದ್ದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಫೆಲ್ಸಿ ಡಯಾಸ್
ಹುದ್ದೆ:- ಮುಖ್ಯಗುರುಗಳು
ಸ.ಹಿ.ಪ್ರಾ.ಶಾಲೆ ಹೊಸಗದ್ದೆ ಪುತ್ತೂರು ತಾಲೂಕು.
ಸೇವೆಗೆ ಸೇರಿದ ದಿನಾಂಕ:- 01/11/1993
ಸೇವೆ ಸಲ್ಲಿಸಿದ ಶಾಲೆಗಳ ವಿವರ
1993 ನವೆಂಬರ್ 11ರಂದು ಸ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ ಮಠ ಇಲ್ಲಿ ಸರ್ಕಾರಿ ಸೇವೆಗೆ ಸೇರಿದರು.ಇಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು.ತದನಂತರ ಸ.ಹಿ.ಪ್ರಾ.ಶಾಲೆ ಹಿರೆಬಂಡಾಡಿ ಇಲ್ಲಿಗೆ ವರ್ಗಾವಣೆ ಗೊಂಡು ಎಂಟು ವರ್ಷಗಳ ಸೇವೆ. 2022-23ನೇ ಶೈಕ್ಷಣಿಕ ವರ್ಷದಲ್ಲಿ ಮುಖ್ಯಗುರುಗಳಾಗಿ ಭಡ್ತಿ ಹೊಂದಿ ಈ ಶಾಲೆಗೆ ಎಂದರೆ ಸ.ಹಿ.ಪ್ರಾ.ಶಾಲೆ ಹೊಸಗದ್ದೆ ಇಲ್ಲಿ ಇದುವರೆಗೆ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವಿರಿ. ಇದೀಗ ಒಟ್ಟು 29ವರ್ಷ 8ತಿಂಗಳು ಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವಿರಿ. ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.
ಶ್ರೀಮತಿ ಮೀನಾಕ್ಷಿ ಚಂದ್ರಶೇಖರ ನರಿಯೂರು
ದೈಹಿಕ ಶಿಕ್ಷಣ ಶಿಕ್ಷಕಿ
ಸ.ಹಿ.ಪ್ರಾ ಶಾಲೆ ಆಲಂತಡ್ಕ
ಪುತ್ತೂರು ತಾಲೂಕು
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಆಲಂತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೀನಾಕ್ಷಿ ನರಿಯೂರುರವರು ಸುಧೀರ್ಘ 29 ವರ್ಷಗಳ ಸೇವೆಯಿಂದ ಇಂದು (ಜು. 31ರಂದು) ನಿವೃತ್ತರಾಗಲಿದ್ದಾರೆ.
1994ರಲ್ಲಿ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಸರಕಾರಿ ಶಾಲೆಯಲ್ಲಿ ದೈ.ಶಿ. ಶಿಕ್ಷಕಿಯಾಗಿ ಸೇವೆ ಆರಂಭಿಸಿದ ಇವರು ಅಲ್ಲಿ ಸುಮಾರು 4 ವರ್ಷಗಳ ಸೇವೆ ಸಲ್ಲಿಸಿ, ಬಳಿಕ ಐವರ್ನಾಡು ಶಾಲೆಯಲ್ಲಿ 5 ವರ್ಷ, ಪರ್ಪುಂಜ ಶಾಲೆಯಲ್ಲಿ 6 ವರ್ಷ ಸೇವೆಸಲ್ಲಿಸಿದ್ದಾರೆ.
ಆಲಂತ್ತಡ್ಕ ಶಾಲೆಯಲ್ಲಿ ಸುಮಾರು 14 ವರ್ಷ ಸೇವೆಯಲ್ಲಿದ್ದ ಅವರು ಇಂದು ನಿವೃತ್ತರಾಗುತ್ತಿದ್ದಾರೆ.
ಅನೇಕ ವಿದ್ಯಾರ್ಥಿಗಳನ್ನು ಕ್ರೀಡಾ ಕ್ಷೇತ್ರಗಳಲ್ಲಿ ಪಳಗಿಸಿದ ಕೀರ್ತಿ ಇವರದ್ದು.
ಮೂಲತಃ ಕನಕಮಜಲು ಗ್ರಾಮದ ನರಿಯೂರಿನ ದಿ. ಚಂದ್ರಶೇಖರರವರ ಪತ್ನಿಯಾಗಿರುವ ಇವರು ಪ್ರಸ್ತುತ ಈಶ್ವರಮಂಗಲದ ಪುಂಡಿಕಾಯಲ್ಲಿ ನೆಲೆಸಿದ್ದಾರೆ. ಹಿರಿಯ ಪುತ್ರ ಗೌತಮ್ ಉಡುಪಿಯ ಆಕಾಶ್ ಬಿಜ್ಯುಶ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಸೊಸೆ ಶ್ರೀಮತಿ ಸೌಮ್ಯ.
ಕಿರಿಯ ಪುತ್ರ ಗೌರವ್ ಪೆರ್ನಾಜೆ ಗೌತಮ್ ಪ್ರಿಂಟರ್‍ಸ್ ಹಾಗೂ ಕಾವುನಲ್ಲಿ ಮೆಡಿಫ್ಲೆಕ್ಸ್ ಲ್ಯಾಬ್ ನಡೆಸುತ್ತಿದ್ದಾರೆ.
ಶ್ರೀಮತಿ ಮೀನಾಕ್ಷಿಯವರು ಕೋಲ್ಚಾರಿನ ದಿ. ಕೊರಗಪ್ಪ ಮತ್ತು ದಿ. ಸೀತಮ್ಮ ದಂಪತಿಯ ಪುತ್ರಿ.
ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.
ಶ್ರೀಮತಿ ಪುಷ್ಪಾವತಿ ಬಿ
ಹುದ್ದೆ:- ಮುಖ್ಯಗುರುಗಳು
ಸ.ಹಿ.ಪ್ರಾ.ಶಾಲೆ ಜಡೆಕಲ್ಲು ಪುತ್ತೂರು ತಾಲೂಕು.
ಸೇವೆಗೆ ಸೇರಿದ ದಿನಾಂಕ:- 01/09/1993
ಸೇವೆ ಸಲ್ಲಿಸಿದ ಶಾಲೆಗಳ ವಿವರ
ಇವರು ಬೆಳ್ತಂಗಡಿ ತಾಲೂಕಿನ ಸ.ಹಿಪ್ರಾ.ಶಾ. ಸೂರ್ಯತ್ತಾವು ಇಲ್ಲಿ ಪ್ರಥಮವಾಗಿ ಸೇವೆಗೆ ಸೇರಿದ್ದು ,ಇಲ್ಲಿ ಸುಮಾರು 5 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ,ತದನಂತರ ಪುತ್ತೂರು ತಾಲೂಕಿನ ಸ.ಹಿ.ಪ್ರಾ.ಶಾಲೆ ಸವಣೂರು ಇಲ್ಲಿಗೆ ವರ್ಗಾವಣೆ ಗೊಂಡು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ.ಶಾ. ನಾಟೆಕಲ್ಲು ಇಲ್ಲಿ ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಮುಖ್ಯಗುರುಗಳಾಗಿ ಭಡ್ತಿ ಹೊಂದಿ ಪುತ್ತೂರು ತಾಲೂಕು ಸ.ಹಿ.ಪ್ರಾ.ಶಾಲೆ ಜಡೆಕಲ್ಲು ಇಲ್ಲಿಗೆ ಬಂದು 1ವರ್ಷ2ತಿಂಗಳುಗಳ ಸೇವೆ ಸಲ್ಲಿಸಿರುತ್ತಾರೆ. ಇದೀಗ ಒಟ್ಟು 29ವರ್ಷ 10ತಿಂಗಳು ಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವಿರಿ. ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.
ಶ್ರೀಮತಿ ಶಾರದಾ ಕೆ
ಹುದ್ದೆ:- ಸಹಶಿಕ್ಷಕಿ
ಸ.ಉ.ಹಿ.ಪ್ರಾ.ಶಾಲೆ ನರಿಮೊಗರು ಪುತ್ತೂರು ತಾಲೂಕು.
ಸೇವೆಗೆ ಸೇರಿದ ದಿನಾಂಕ:- 03/09/1993
ಇವರು ಬೆಳ್ತಂಗಡಿ ತಾಲೂಕಿನ ಸ.ಕಿ.ಪ್ರಾ.ಶಾಲೆ ಮುಂಡೂರು. ಇಲ್ಲಿ ಪ್ರಥಮವಾಗಿ ಸೇವೆಗೆ ಸೇರಿದ್ದು ,ಇಲ್ಲಿ ಸುಮಾರು ಒಂಬತ್ತೂವರೆ ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ,ತದನಂತರ 2012 ರಲ್ಲಿ ಪುತ್ತೂರು ತಾಲೂಕಿಗೆ ವರ್ಗಾವಣೆ ಗೊಂಡಿರುತ್ತಾರೆ. ನಂತರ ಪುತ್ತೂರು ತಾಲೂಕಿನ ಏಕತಡ್ಕ ದಲ್ಲಿ ಸುಮಾರು 13ವರ್ಷಗಳ ಕಾಲ ,ಸ.ಹಿ.ಪ್ರಾ.ಶಾಲೆ.ನಿಡ್ಪಳ್ಳಿ ಇಲ್ಲಿ ಸುಮಾರು ಐದೂವರೆ ವರ್ಷಗಳ ಕಾಲ ಹಾಗೂ ಸ.ಉ.ಹಿ.ಪ್ರಾ.ಶಾಲೆ ನರಿಮೊಗರು ಇಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಒಟ್ಟು 29ವರ್ಷ 10ತಿಂಗಳು ಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವಿರಿ.
ಶ್ರೀ ಶಿವರಾಮ ಗೌಡ ಕೆ
ಮುಖ್ಯ ಶಿಕ್ಷಕರು
ಸ.ಉ.ಹಿ.ಪ್ರಾ.ಶಾಲೆ ಮುಳ್ಯ ಅಟ್ಲೂರು.
ಶ್ರೀ ಕೆ.ಕೊರಗಪ್ಪ ಗೌಡ ಹಾಗೂ ಶ್ರೀಮತಿ ಲಲಿತಾ ಕೆ ದಂಪತಿಗಳ ಪುತ್ರನಾಗಿ ದಿನಾಂಕ 20.07.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಕೇರಳದ ಪಂಜಿಕಲ್ಲು ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಜಿ.ಜೆ.ಸಿ ಸುಳ್ಯ ಮತ್ತು ಸೀತಾ ರಾಘವ ಹೈಸ್ಕೂಲ್ ಪೆರ್ನಾಜೆ ಇಲ್ಲಿ ಪೂರೈಸಿ ,ಶಿಕ್ಷಕ ತರಬೇತಿಯನ್ನು ಸರಸ್ವತಿ ಶಿಕ್ಷಕ ತರಬೇತಿ ಕೇಂದ್ರ ಮಡಿಕೇರಿಯಲ್ಲಿ ಪೂರೈಸಿ, ದಿನಾಂಕ 01.12.1988 ರಲ್ಲಿ ಸ.ಕಿ.ಪ್ರಾ.ಶಾಲೆ ಕಳುಬೈಲು ಆರಂತೋಡು ಇಲ್ಲಿ ಸೇವೆಗೆ ಸೇರಿದ ಇವರು ನಂತರ ಸ.ಕಿ.ಪ್ರಾ.ಶಾಲೆ ಇರುವಂಬಳ್ಳ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ಪೇರಾಲು ಇಲ್ಲಿ ಸೇವೆ ಸಲ್ಲಿಸಿ ನಂತರ ಸಿ.ಆರ್.ಪಿ ಯಾಗಿ ಸುಳ್ಯ 6 ಸಿ.ಆರ್.ಸಿ ಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಸ.ಮಾ.ಹಿ.ಪ್ರಾ.ಶಾಲೆ ಸುಳ್ಯ ಇಲ್ಲಿ ಸೇವೆ ಸಲ್ಲಿಸಿ ನಂತರ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಸ.ಉ.ಹಿ.ಪ್ರಾ.ಶಾಲೆ ಪೇರಾಲು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ಮುಳ್ಯ ಅಟ್ಲೂರು ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಪ್ರಮೀಳ
ಸ.ಕಿ.ಪ್ರಾ.ಶಾಲೆ ಕನ್ಯಾನ ಮಂಡೆಕೋಲು.
ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಕಾಡುಹಿತ್ಲು ಶ್ರೀ ಪುರುಷೋತ್ತಮ ಹೆಬ್ಬಾರ್ ಹಾಗೂ ಶ್ರೀಮತಿ ಜಾನಕಿಯವರ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸ.ಪ್ರೌ.ಶಾಲೆ ಅರಸಿನಮಕ್ಕಿಯಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಬಲ್ಮಠ ಸರಕಾರಿ ಹೆಣ್ಣು ಮಕ್ಕಳ ತರಬೇತಿ ಸಂಸ್ಥೆಯಲ್ಲಿ ಪೂರೈಸಿ, ಗಮಕ ಸಾಹಿತ್ಯ ಪರೀಕ್ಷೆ ಹಾಗೂ ಹಿಂದಿ ಪ್ರವೀಣ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ದಿನಾಂಕ 27.091990 ರಲ್ಲಿ ಸ.ಕಿ.ಪ್ರಾ.ಶಾಲೆ ಗೊಂದಿಬಸವನಹಳ್ಳಿ, ಸೋಮವಾರ ಪೇಟೆ ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 09.09.1994 ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಪೆರಾಜೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 01.11.1995 ರಲ್ಲಿ ಸ.ಹಿ.ಪ್ರಾ.ಶಾಲೆ ಕನ್ಯಾನ ಮಂಡೆಕೋಲು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು 2000-2001 ನೇ ಶೈಕ್ಷಣಿಕ ವರ್ಷದಲ್ಲಿ ಇನ್ನರ್ ವೀಲ್ ಕ್ಲಬ್ ಸುಳ್ಯ ಇವರಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಹಾಗೂ 2001-2002 ರಲ್ಲಿ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪಡೆದ ಇವರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನ ಸುಖಮಯವಾಗಿರಲಿ ದೇವರು ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.