ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ

ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

IMG 20210630 WA0000 11zon

ಪ್ರತಿಯೊಬ್ಬರ ಜೀವನದಲ್ಲೂ ಗುರಿ ಹಾಗೂ ಗುರು ಬಹುಮುಖ್ಯವಾದುದು. ಹಲವರ ಜೀವನಗಳಲ್ಲಿ ತಮ್ಮ ಪ್ರಭಾವವನ್ನು ಬೀರಿ ಅವರಿಗೆ ಹೊಸ ಜೀವನದ ದಿಕ್ಕನ್ನು ತೋರಿಸಿ ಸಾರ್ಥಕ್ಯವನ್ನು ಪಡೆದು ಈ ತಿಂಗಳು ನಿವೃತ್ತರಾಗುತ್ತಿರುವ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡುತ್ತಿದ್ದೇವೆ.

ಶ್ರೀ ವಿನಯ ಕುಮಾರ್
ಸ.ಮಾ.ಹಿ.ಪ್ರಾ ಶಾಲೆ ಕಲ್ಲಬೆಟ್ಟು
ಮೂಡಬಿದ್ರೆ ತಾಲೂಕು

ಸ.ಹಿ.ಪ್ರಾ ಶಾಲೆ ಬೆಳುವಾಯಿ ಉರ್ದು ಇಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿ ಸ.ಹಿ.ಪ್ರಾ ಶಾಲೆ
ಕಲ್ಲ ಮುಂಡ್ಕೂರು ಇಲ್ಲಿ ಪದವಿಧರೇತರ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗುತ್ತಿದ್ದಾರೆ. ಶಿಕ್ಷಣ ಸಂಯೋಜಕರಾಗಿಯೂ ಕರ್ತವ್ಯ ನಿರ್ವಹಿಸಿರುವ ಇವರು ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀಮತಿ ಪಾರ್ವತಿ
ಸ.ಹಿ.ಪ್ರಾ ಶಾಲೆ ಮೇಗಿನಪೇಟೆ ಬಂಟ್ವಾಳ ತಾಲೂಕು

ಮಂಗಳೂರಿನವರಾದ ಪಾರ್ವತಿ ಇವರು 1998 ರಲ್ಲಿ ಸರಕಾರಿ ಶಾಲೆ ಕಂಬಳಬೆಟ್ಟುವಿನಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಮುಂದಕ್ಕೆ ಸ.ಹಿ.ಪ್ರಾ ಶಾಲೆ ಮೇಗಿನಪೇಟೆಗೆ ವರ್ಗಾವಣೆಗೊಂಡು ಇದೀಗ ಅಲ್ಲೇ ನಿವೃತ್ತರಾಗುತ್ತಿದ್ದಾರೆ. ಪತಿ ವಸಂತ ಸಾಲಿಯಾನ್, ಮಗಳಾದ ಆಶ್ರಿತಾ ಸಾಲಿಯಾನ್ ರೊಂದಿಗಿನ ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀ ವಿಷ್ಣುಮೂರ್ತಿ
ಸ.ಉ.ಪ್ರಾ ಶಾಲೆ ಮಾವಿನಕಟ್ಟೆ ಬೆಳ್ತಂಗಡಿ ತಾಲೂಕು

12-6-1961 ರಲ್ಲಿ ಜನಿಸಿದ ಶ್ರೀಯುತರು 27-6-1991ರಲ್ಲಿ ಸ.ಕಿ.ಪ್ರಾ.ಶಾಲೆ ಮಿಯಾರು ಇಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ ಶಾಲೆ ಮಂಗಳತೇರುವಿನಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸ.ಕಿ.ಪ್ರಾ ಶಾಲೆ ಹೊಸ ಪಟ್ಟಣದಲ್ಲಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಭಡ್ತಿಗೊಂಡು ಸ.ಉ.ಪ್ರಾ ಶಾಲೆ ಮಾವಿನಕಟ್ಟೆಯಲ್ಲಿ ಮುಖ್ಯ ಶಿಕ್ಷಕರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ತಮ್ಮ 30 ವರ್ಷಗಳ ಸುದೀರ್ಘ ವೃತ್ತಿ ಬದುಕಿನಲ್ಲಿ ನಿರಂತರವಾಗಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ಸ್ಟ್ಯಾನಿ ಸ್ಲಾಸ್ ಪಿಂಟೊ
ಸ.ಉ.ಪ್ರಾ.ಶಾಲೆ ನಾರಾವಿ
ಬೆಳ್ತಂಗಡಿ ತಾಲೂಕು

ಇವರು 1991 ರಲ್ಲಿ ಬೆಳ್ತಂಗಡಿ ತಾಲೂಕಿನ ಕೇಳದಪೇಟೆ ಶಾಲೆಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ನಂತರ ನಾರಾವಿ, ಅಂಡಿಂಜೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ 2011-2015 ವರೆಗೆ ಮೂಡುಬಿದಿರೆ ತಾಲೂಕಿನ ಸ.ಕಿ.ಪ್ರಾ ಶಾಲೆ ಮಕ್ಕಿಯಲ್ಲಿ ಕರ್ತವ್ಯ ನಿರ್ವಹಿಸಿ, 2020 ಫೆಬ್ರವರಿಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿಗೊಂಡು ಸ.ಉ.ಪ್ರಾ ಶಾಲೆ ನಾರಾವಿಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗುತ್ತಿದ್ದಾರೆ. 2000-2001 ನೇ ಸಾಲಿನಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದ ಇವರು ಕ್ಯಾಥೋಲಿಕ್ ಸಭಾದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಶಿರ್ತಾಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿಯೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀಮತಿ ಯಮುನಾ
ಸ.ಹಿ.ಪ್ರಾ ಶಾಲೆ ಏನೇಕಲ್ಲು
ಸುಳ್ಯ ತಾಲೂಕು

26-8-1991 ರಲ್ಲಿ ಬೆಳ್ತಂಗಡಿ ತಾಲೂಕಿನ ಸರಳಿಕಟ್ಟೆ ಶಾಲೆಯಲ್ಲಿ ಸೇವೆಯನ್ನು ಆರಂಭಿಸಿದ ಇವರು 1995-2009 ರವರೆಗೆ ಪುತ್ತೂರು ತಾಲೂಕಿನ ಸವಣೂರು ಮೊಗರು ಶಾಲೆಯಲ್ಲಿ ಸೇವೆ ಸಲ್ಲಿಸಿ, 2010-2021 ರವರೆಗೆ ಸುಳ್ಯದ ಏನೇಕಲ್ಲು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ 30 ವರ್ಷಗಳ ವೃತ್ತಿ ಬದುಕಿನಿಂದ ನಿವೃತ್ತರಾಗುತ್ತಿದ್ದಾರೆ. ಪುತ್ರಿ ಆಶಾ ಹಾಗೂ ಪುತ್ರ ಅಶ್ವಿನ್ ರೊಂದಿಗಿನ ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀಮತಿ ಶಶಿಕಲಾ
ಸ.ಕಿ.ಪ್ರಾ ಶಾಲೆ ಕಲ್ಮಡ್ಕ
ಸುಳ್ಯ ತಾಲೂಕು

1991-1994 ರವರೆಗೆ ಪುತ್ತೂರು ತಾಲೂಕಿನ ಕುದ್ಮಾರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ,1995-1998 ರವರೆಗೆ ಸುಳ್ಯ ತಾಲೂಕಿನ ಅಯ್ಯನಕಟ್ಟೆ ಶಾಲೆಯಲ್ಲಿ ಸೇವೆ ಸಲ್ಲಿಸಿದರು. 1998 ಜೂನ್
ನಿಂದ ಸುಳ್ಯ ತಾಲೂಕಿನ ಕಲ್ಮಡ್ಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ತಮ್ಮ ಸೇವಾವಧಿಯಲ್ಲಿ ಶಾಲೆಯ ಅಭಿವೃದ್ಧಿಗಾಗಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡವರು. ಸ್ಕೌಟ್ ಗೈಡ್ ಶಿಕ್ಷಕಿಯಾಗಿರುವ ಇವರು ಸಾಹಿತ್ಯ, ನಾಟಕ, ಕೃಷಿ ಇತ್ಯಾದಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. 30 ವರ್ಷಗಳ ತಮ್ಮ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ.

ಶ್ರೀಮತಿ ಜಾಹ್ನವಿ
ಸ.ಹಿ.ಪ್ರಾ ಶಾಲೆ ಬೆಂಗ್ರೆ ಕಸಬ ಮಂಗಳೂರು ಉತ್ತರ

07-06-1961 ರಲ್ಲಿ ಜನಿಸಿದ ಜಾಹ್ನವಿಯವರು 21-02-1996 ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಳೆಬಾಗಿಲು ಇಲ್ಲಿ ಸೇವೆಗೆ ಸೇರಿದರು. ಮುಂದೆ ಸ.ಹಿ.ಪ್ರಾ ಶಾಲೆ ಮಾಡೂರು ಇಲ್ಲಿ ಕರ್ತವ್ಯ ನಿರ್ವಹಿಸಿದರು. ಅಂಗರಗುಂಡಿಯ ಸಿ.ಆರ್.ಪಿ ಯಾಗಿ ಶಿಕ್ಷಕರ ಮನ ಗೆದ್ದವರು. ಪ್ರಸ್ತುತ ಸ.ಹಿ.ಪ್ರಾ ಶಾಲೆ ಬೆಂಗ್ರೆ ಕಸಬದಲ್ಲಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀಮತಿ ರತ್ನಾ
ಸ.ಮಾ.ಹಿ.ಪ್ರಾ ಶಾಲೆ ಕಾವೂರು
ಮಂಗಳೂರು ಉತ್ತರ

12-06-1961 ರಲ್ಲಿ ಜನಿಸಿದ ರತ್ನಾರವರು 12-02-1996 ರಲ್ಲಿ ಸೇವೆಗೆ ಸೇರಿದರು. ಸ.ಹಿ‌.ಪ್ರಾ ಶಾಲೆ ಮಿಜಾರು, ಪಂಜಿಮೊಗರು ಇಲ್ಲಿ ಕರ್ತವ್ಯ ನಿರ್ವಹಿಸಿ ಈಗ ಸ.ಮಾ.ಹಿ.ಪ್ರಾ ಶಾಲೆ ಕಾವೂರು ಇಲ್ಲಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ.

ಶ್ರೀಮತಿ ಹರಿಣಾಕ್ಷಿ
ಸ.ಹಿ.ಪ್ರಾ. ಶಾಲೆ ತಣ್ಣೀರುಬಾವಿ ಮಂಗಳೂರು ಉತ್ತರ

15-06-1961 ರಲ್ಲಿ ಜನಿಸಿದ ಹರಿಣಾಕ್ಷಿಯವರು 27-06-1991 ರಲ್ಲಿ ಬಂಟ್ವಾಳದ ಮೂಡ ಶಾಲೆಯಲ್ಲಿ ಸೇವೆಗೆ ಸೇರಿದರು. ಮುಂದೆ ಸ.ಹಿ.ಪ್ರಾ ಶಾಲೆ ಕಾಟಿಪಳ್ಳದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸ.ಕಿ.ಪ್ರಾ ಶಾಲೆ ತಣ್ಣೀರು ಬಾವಿ ಇಲ್ಲಿ ಈ ತಿಂಗಳು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀಮತಿ ಪುಷ್ಪ ಪಿ
ಸ. ಹಿ.ಪ್ರಾ ಶಾಲೆ ಕರ್ನಿರೆ
ಮಂಗಳೂರು ಉತ್ತರ

01-07-1961 ರಲ್ಲಿ ಜನಿಸಿದ ಇವರು 24-08-1991 ರಲ್ಲಿ ಮೂಡುಬಿದಿರೆಯ ಇರುವೈಲು ಶಾಲೆಯಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ನಂತರದಲ್ಲಿ ಸ.ಮಾ.ಹಿ.ಪ್ರಾ ಶಾಲೆ ಜೋಕಟ್ಟೆ, ಸ.ಹಿ.ಪ್ರಾ ಶಾಲೆ ಕೆಂಜಾರಿನಲ್ಲಿ ಸೇವೆ ಸಲ್ಲಿಸಿ, ಈಗ ಸ.ಹಿ.ಪ್ರಾ ಶಾಲೆ ಕರ್ನಿರೆ ಇಲ್ಲಿ 30 ವರ್ಷಗಳ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ.

ಶ್ರೀಮತಿ ರಾಜೀವಿ ಐಲ್
ಸ.ಹಿ.ಪ್ರಾ ಶಾಲೆ ಬಬ್ಬುಕಟ್ಟೆ
ಮಂಗಳೂರು ದಕ್ಷಿಣ

21-06-1961 ರಲ್ಲಿ ಜನಿಸಿದ ಇವರು 01-07-1991 ರಲ್ಲಿ ಸೇವೆಗೆ ಸೇರಿ ತಮ್ಮ 30 ವರ್ಷಗಳ ಸುದೀರ್ಘ ವೃತ್ತಿ ಬದುಕಿನಿಂದ ಸ.ಹಿ.ಪ್ರಾ ಶಾಲೆ ಬಬ್ಬುಕಟ್ಟೆ ಇಲ್ಲಿ ಈ ತಿಂಗಳು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀಮತಿ ಕ್ರಿಸ್ತಿನ ಸಂತನೇಜ್
ಸ.ಹಿ.ಪ್ರಾ ಶಾಲೆ ಮಂಜನಾಡಿ
ಮಂಗಳೂರು ದಕ್ಷಿಣ

ಅಂಬ್ರೋಜ್ ಸಂತನೇಜ್ ಮತ್ತು ನತಾಲಿಯಾ ಡಿಸೋಜ ಇವರ ಪುತ್ರಿಯಾಗಿ 08-06-1961 ರಂದು ಜನಿಸಿದ ಇವರು ದಿನಾಂಕ 05-08-1998 ರಂದು ಶಿಕ್ಷಕ ವೃತ್ತಿಗೆ ಪಾದಾರ್ಪಣೆಗೈದರು. ಪಾವೂರು ಉಳಿಯ ಶಾಲೆಯಲ್ಲಿ ಏಳು ವರ್ಷ, ಸುಳ್ಯದ ಎಡಮಂಗಲದಲ್ಲಿ ಮೂರು ವರ್ಷ ಹಾಗೂ ತಮ್ಮ ಸೇವಾವಧಿಯ ಕೊನೆಯ ಒಂದು ವರ್ಷ ಎಂಟು ತಿಂಗಳನ್ನು ಸ.ಹಿ.ಪ್ರಾ ಶಾಲೆ ಮಂಜನಾಡಿಯಲ್ಲಿ ಪೂರೈಸಿ ಇದೀಗ ನಿವೃತ್ತರಾಗುತ್ತಿದ್ದಾರೆ. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ, ವೃತ್ತಿಬಾಂಧವರೊಂದಿಗೆ ಸಹಕಾರದಿಂದ ಆತ್ಮೀಯರಾಗಿ ಕಳೆದ ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀಮತಿ ಮೇರಿ ವಾಸ್
ಸ.ಹಿ.ಪ್ರಾ ಶಾಲೆ ಕಲ್ಲಾಡಿ
ಮಂಗಳೂರು ದಕ್ಷಿಣ

20-06-1961 ರಲ್ಲಿ ಜನಿಸಿದ ಇವರು 25-10-1982 ರಲ್ಲಿ ನಡುಕೆಂಜಿಲ ಶಾಲೆಯಲ್ಲಿ ಸೇವೆಗೆ ಸೇರಿದರು. ನಂತರ ಸ.ಹಿ.ಪ್ರಾ ಶಾಲೆ ಕೊಳವೂರು, ಬೊಳಿಯದಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಸ.ಹಿ.ಪ್ರಾ ಶಾಲೆ ಕಲ್ಲಾಡಿಯಲ್ಲಿ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

   ವಿದ್ಯಾರ್ಥಿಗಳ ಬಾಳನ್ನು ಬೆಳಗಲು ಅವಿರತ ಶ್ರಮಿಸಿದ ತಮ್ಮ ಸೇವೆಯನ್ನು ಅತ್ಯಂತ ಗೌರವದಿಂದ ಗುರುತಿಸಿ ತಮಗೆಲ್ಲರಿಗೂ ಭಗವಂತನು ಆಯುರಾರೋಗ್ಯ ಐಶ್ವರ್ಯ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಿದ್ದೇವೆ.
Sharing Is Caring:

2 thoughts on “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ”

  1. ಸರ್
    4&5 ತರಗತಿಗಳ ಪರಿಸರ ಅಧ್ಯಯನ ಸೇತುಬಂಧ ಅಭ್ಯಾಸ ಹಾಳೆಗಳು ಇಲ್ಲಿ ನೀಡಿದ ಲಿಂಕ್ ಲ್ಲಿ ಇಲ್ಲ
    ಸಮಸ್ಯೆ ????

    Reply

Leave a Comment