ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀ ರಘುಪತಿ. ಕೆ.ರಾವ್
ಸ.ಹಿ.ಪ್ರಾ ಶಾಲೆ ಕುದ್ರಡ್ಕ
ಬೆಳ್ತಂಗಡಿ ತಾಲೂಕು
ಬೆಳ್ತಂಗಡಿ ತಾಲೂಕಿನ ಸ.ಹಿ.ಪ್ರಾ ಶಾಲೆ ಕುದ್ರಡ್ಕದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ರಘುಪತಿ. ಕೆ.ರಾವ್. ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಕುಂದಾಪುರದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು 5 ವರ್ಷಗಳ ನಂತರ ಬೆಳಾಲ್ ಮಾಯಕ್ಕೆ ವರ್ಗಾವಣೆಗೊಂಡರು, ನಂತರ ಸೋಣoದೂರು ಶಾಲೆಯಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಸ.ಹಿ.ಪ್ರಾ ಶಾಲೆ ಕುದ್ರಡ್ಕದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಶ್ರೀಯುತರು 20 ವರ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕರಿಗೆ ಅನೇಕ ವಿಧದ ಸಹಕಾರ ನೀಡಿದವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಸರಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವರು. crp ಯಾಗಿಯೂ ಕರ್ತವ್ಯ ನಿರ್ವಹಿಸಿ, ಮಕ್ಕಳ, ಪೋಷಕರ ಶಿಕ್ಷಕರ ಪ್ರೀತಿಗೆ ಪಾತ್ರರಾದವರು. ತಮ್ಮ ಸುದೀರ್ಘ ಸೇವೆಯಿಂದ ನಿವೃತ್ತರಾಗುತ್ತಿರುವ ತಮಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಸಂಜೀವ ಎಚ್
ಮುಖ್ಯ ಶಿಕ್ಷಕರು
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೊಳಂತಿಮೊಗರು
ವಿಟ್ಲ, ಬಂಟ್ವಾಳ ತಾಲೂಕು.
ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಎಂಬಲ್ಲಿ ಶ್ರೀಯುತ ಕಿನ್ನಿ ನಾಯ್ಕ ಹಾಗೂ ಶ್ರೀಮತಿ ದೇವಕಿ ದಂಪತಿಗಳ ಪುತ್ರನಾಗಿ ದಿನಾಂಕ 01.07.1964 ರಲ್ಲಿ ಜನಿಸಿದ ಇವರು, ದಿನಾಂಕ 08.09.1990 ರಂದು ಸ.ಕಿ.ಪ್ರಾ.ಶಾಲೆ ಪಡ್ಯ ಕಾರ್ಕಳ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 14.11.1991 ರಂದು ಸ.ಹಿ.ಪ್ರಾ.ಶಾಲೆ ಕೆದಿಲ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಕೆದಿಲ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ಇವರು 2008 ರಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೊಳಂತಿಮೊಗರು ಇಲ್ಲಿ ಸೇವೆಗೆ ಸೇರಿದ ಇವರು ಸದ್ರಿ ಶಾಲೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮ ವಹಿಸಿದ್ದಾರೆ. ಇವರು ಕೈಗೊಂಡ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2013-2014 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ 2016-2017 ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀಯುತರು ಶಾಲೆಯಲ್ಲಿ ಉತ್ತಮ ಕ್ರೀಡಾಂಗಣದ ವ್ಯವಸ್ಥೆ , ಎಮ್ಆರ್ಪಿಎಲ್ ಸಂಸ್ಥೆಯಿಂದ ರಂಗ ಮಂದಿರ ಹಾಗೂ 2 ಕೊಠಡಿಗಳ ಕೊಡುಗೆ ಕುಡಿಯುವ ನೀರಿನ ವ್ಯವಸ್ಥೆ ತೆಂಗಿನ ಗಿಡ ಹಾಗೂ ಅಡಿಕೆ ತೋಟ ಹಾಗೂ ತರಕಾರಿ ತೋಟ ನಿರ್ಮಾಣ ಇನ್ಫೋಸಿಸ್ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ ಹಾಗೂ ಶಾಲೆಯ ಅವಶ್ಯಕತೆಗೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್ ಗೆ ಪ್ರೊಜೆಕ್ಟರ್ ಮತ್ತು ಸಿಸಿ ಕ್ಯಾಮೆರಾ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ . ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಪ್ರಮೀಳಾ ಕುಮಾರಿ
ದ.ಕ.ಜಿ.ಪಂ.ಉ.ಪ್ರಾ.ಶಾಲೆ
ಹೂಹಾಕುವ ಕಲ್ಲು ಬಾಳೆ ಪುಣಿ.
ಬಂಟ್ವಾಳ ತಾಲೂಕು
ಪಂಪ್ ವೆಲ್ ಮಂಗಳೂರು ಇಲ್ಲಿ ಶ್ರೀಯುತ ಕೃಷ್ಣ ಗಟ್ಟಿ ಹಾಗೂ ಶ್ರೀಮತಿ ಲಲಿತಾ ದಂಪತಿಗಳ ಪುತ್ರಿಯಾಗಿ ದಿನಾಂಕ 01.07.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಪಿತಾನಿಯೋ ಕನ್ನಡ ಮಾಧ್ಯಮ ಶಾಲೆ ಮಂಗಳೂರು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸೈಂಟ್ ಆನ್ಸ್ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 12.01.1996 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಭ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 15.10.1999 ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಹೂ ಹಾಕುವ ಕಲ್ಲು ಬಾಳೆ ಪುಣಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಸೇವಾದಳದ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ದೇವಕಿ ಹೆಚ್
ಮುಖ್ಯ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಮೋತಿಮಾರು
ಬಂಟ್ವಾಳ ತಾಲೂಕು
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹೊಸಬೆಟ್ಟುವಿನ ಶ್ರೀಯುತ ದಿ.ಕುಂಞಣ್ಣ ಶೆಟ್ಟಿ ಹಾಗೂ ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರಿಯಾಗಿ ದಿನಾಂಕ 06.06.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹಿ.ಪ್ರಾ.ಶಾಲೆ ನೂಜಿಬೈಲು, ಪ್ರೌಢ ಶಿಕ್ಷಣವನ್ನು ಸ.ಪ್ರೌಢ.ಶಾಲೆ ಮಂಚಿ ಕೊಳ್ನಾಡು ಇಲ್ಲಿ ಪೂರೈಸಿ ಪದವಿ ಶಿಕ್ಷಣ ಬಿ.ಎ ಮುಕ್ತ ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ ಮೈಸೂರು ಇಲ್ಲಿ ಪೂರೈಸಿ ,ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆ ಕಿನ್ನಿಕಂಬಳ ಇಲ್ಲಿ ಪೂರೈಸಿ ,ದಿನಾಂಕ 09.02.1990 ರಲ್ಲಿ ಸ.ಕಿ.ಪ್ರಾ.ಶಾಲೆ ಕಜೆ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕುಕ್ಕಾಜೆ ಇಲ್ಲಿ ಸೇವೆ ಸಲ್ಲಿಸಿ ನಂತರ ಸಿ.ಆರ್.ಪಿ ಯಾಗಿ ಬಂಟ್ವಾಳ ಮೂಡ ಇಲ್ಲಿ 6 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ದಿನಾಂಕ 02.10.2014 ರಂದು ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಮೋತಿಮಾರು ಇಲ್ಲಿ ಸೇವೆ ಸಲ್ಲಿಸಿದ ಇವರು ದಾನಿಗಳ ಹಾಗೂ ಜನ ಪ್ರತಿನಿಧಿಗಳ ಸಹಾಯದಿಂದ ಧ್ವನಿ ವರ್ಧಕದ ವ್ಯವಸ್ಥೆ ಶಾಲಾ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆ,ತರಗತಿ ಕೊಠಡಿ, ಎಂ.ಆರ್.ಪಿ.ಎಲ್ ,
ಸಿ.ಎಸ್.ಆರ್ ವತಿಯಿಂದ 5.50 ಲಕ್ಷ ವೆಚ್ಚದ ಮೇಲ್ಚಾವಣಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಿಂದ ನೂತನ ಸಭಾಂಗಣ ನಿರ್ಮಾಣ, ಯುವ ಜನ ಸಬಲೀಕರಣ ಕ್ರೀಡಾ ವತಿಯಿಂದ ಬಯಲು ರಂಗ ಮಂದಿರ ನಿರ್ಮಾಣ, ಟಿ.ವಿ , ಪೀಠೋಪಕರಣಗಳ ಖರೀದಿ ಹಾಗೂ ತನ್ನ ಸ್ವಂತ ಕೊಡುಗೆಯಿಂದ ಮಕ್ಕಳಿಗೆ ಉಚಿತ ಬ್ಯಾಗ್ ಕೊಡೆ ಹಾಗೂ ಗೌರವ ಧನದ ಕೊಡುಗೆ ಹೀಗೆ ಅನೇಕ ರೀತಿಯಲ್ಲಿ ಶಾಲೆಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಹಕಾರ ನೀಡಿದ ಇವರು, ಭಾರತ ಸ್ಕೌಟ್ಸ್ ಗೈಡ್ಸ್ ನಲ್ಲಿ ಹಿಮಾಲಯ ವುಡ್ ಬ್ಯಾಚ್
2001-2002 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, 2001-2002 ರಲ್ಲಿ ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ, 2006-2007 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಹಾಗೂ ರಾಜ್ಯ, ಜಿಲ್ಲಾ, ತಾಲೂಕು, ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ತರಬೇತಿ ನೀಡಿಕೆ, 2022-2023 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ, ಬಂಟ್ವಾಳ ತಾಲೂಕು ಮುಖ್ಯ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಯಾಗಿ ಕರ್ತವ್ಯ ನಿರ್ವಹಿಸಿರುವ ಇವರು ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಸದಸ್ಯತ್ವ , 2023-2024 ರಲ್ಲಿ ಅಂಬಿಕಾ ಮಿತ್ರ ಮಂಡಳಿ ಮೋಂತಿಮಾರು ಇವರಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಹಾಗೂ ಸ.ಪ್ರೌ.ಶಾಲೆ ಮಂಚಿ ಕೊಳ್ನಾಡು ಇದರ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಎಸ್ ಶಶಿಕಲಾ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾಟಿಪಳ್ಳ 2 ನೇ ವಿಭಾಗ ಮಂಗಳೂರು ಉತ್ತರ
ದಿನಾಂಕ 20.02.1991 ರಲ್ಲಿ ಸೇವೆಗೆ ಸೇರಿದ ಇವರು ಸ.ಕಿ.ಪ್ರಾ.ಶಾಲೆ ಕೆಮ್ಮಾನು ಪಲ್ಕೆ ಬಂಟ್ವಾಳ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಸುಜೀರು ಬಂಟ್ವಾಳ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕಾಟಿಪಳ್ಳ 2 ನೇ ವಿಭಾಗ ಮಂಗಳೂರು ಉತ್ತರ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ . ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಬೊಮ್ಮಿ ಸುವರ್ಣ
ಸ.ಹಿ.ಪ್ರಾ ಶಾಲೆ ಬೆಳುವಾಯಿ
ಮೂಡುಬಿದಿರೆ ತಾಲೂಕು
ಜನನ ದಿನಾಂಕ: 05-06-1964ತಂದೆ ನೋನಯ್ಯ ಪೂಜಾರಿ ತಾಯಿ ವೀರಮ್ಮರ 3 ನೇ ಪುತ್ರಿಯಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಅಳಿಯೂರು ಹಾಗೂ ಹೋಲಿ ಏಂಜಲ್ ಶಿರ್ತಾಡಿಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು S.V.T ಕಾರ್ಕಳ ಹಾಗೂ ಜವಾಹರಲಾಲ್ ನೆಹರು ಪ್ರೌಢ ಶಾಲೆ ಮಕ್ಕಿಯಲ್ಲಿ ಮುಗಿಸಿರುತ್ತಾರೆ.T.C.H ತರಭೇತಿಯನ್ನು ಕುಮುದ ಉಮಾಶಂಕರ ಕಾಲೇಜು ಕೊಕ್ಕರ್ಣೆಯಲ್ಲಿ ಮಾಡಿರುತ್ತಾರೆ.
ಉದ್ಯೋಗ ಸಿಗುವ ಮೊದಲು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ವಯಸ್ಕರ ಶಿಕ್ಷಣ ತರಭೇತಿಯನ್ನು ಪಡೆದು ಸ.ಹಿ.ಪ್ರಾ.ಶಾಲೆ ಕರಿಯಣ್ಣಂಗಡಿಯಲ್ಲಿ 30-35 ವಿದ್ಯಾರ್ಥಿಗಳಿಗೆ ವಯಸ್ಕರ ಶಿಕ್ಷಣವನ್ನು ನೀಡಿದವರು. ಕರಿಯಣ್ಣಂಗಡಿಯಲ್ಲಿ ಮಹಿಳಾ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸವನ್ನು ನಿರ್ವಹಿಸಿ ಹಲವಾರು ಮಹಿಳೆಯರಿಗೆ ಹೊಲಿಗೆ ಕೇಂದ್ರವನ್ನು ತೆರೆದು
ಸ್ವ ಉದ್ಯೋಗವನ್ನು ಕಲ್ಪಿಸಿಕೊಡಲಾಗಿದೆ. ಸಾಕ್ಷರತಾ ಆಂದೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಹಲವು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
16-01-1996 ರಲ್ಲಿ D.L.R.C ಯಲ್ಲಿ ಆಯ್ಕೆಯಾಗಿ ಸ.ಹಿ.ಪ್ರಾ.ಶಾಲೆ ದರೆಗುಡ್ಡೆಯಲ್ಲಿ ಶಿಕ್ಷಣ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
15-10-1999 ರಂದು ವರ್ಗಾವಣೆಯಾಗಿ ಸ.ಹಿ.ಪ್ರಾ.ಶಾಲೆ ಬೆಳುವಾಯಿ (ಚರ್ಚ್ ಬಳಿ) ಇಲ್ಲಿ ವೃತ್ತಿಯನ್ನು ಮುಂದುವರಿಸಿದರು. ಎಲ್ಲಾ ಶಿಕ್ಷಕ ವೃಂದದವರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಎಲ್ಲಾ ಮಕ್ಕಳ ಹಾಗೂ ಪೋಷಕರ ಪ್ರೀತಿಗೆ ಪಾತ್ರರಾಗಿ ಶಾಲೆಯ ಎಲ್ಲ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಕೊಟ್ಟು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿರುತ್ತಾರೆ. ಗಂಡ ರಾಘು ಸುವರ್ಣರೊಂದಿಗಿನ ದಾಂಪತ್ಯದಲ್ಲಿ ಇವರಿಗೆ 3 ಮಕ್ಕಳು 2 ಗಂಡು 1 ಹೆಣ್ಣು. 2 ಗಂಡು ಮಕ್ಕಳಲ್ಲಿ ಹಿರಿಯ ಮಗ MBA ಪದವಿ ಹಾಗೂ ಕಿರಿಯ ಮಗ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಉದ್ಯೋಗದಲ್ಲಿರುತ್ತಾರೆ. ಮಗಳು ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿರುತ್ತಾರೆ. ಇಬ್ಬರು ಮಕ್ಕಳಿಗೆ ಮದುವೆಮಾಡಿ ಅವರೊಂದಿಗೆ ಸುಖಿ ಯಾಗಿರುವ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಕೆ ತಾರಾ ಎಸ್
ಮುಖ್ಯಗುರುಗಳು
ಸ.ಹಿ.ಪ್ರಾ.ಶಾ.ಕಟ್ಟಾತ್ತಾರು ಪುತ್ತೂರು ತಾಲೂಕು ದ.ಕ.
ತಂದೆ: ವೆಂಕಪ್ಪ ಗೌಡ
ತಾಯಿ: ಸಾವಿತ್ರಿ
ಜನನ ದಿನಾಂಕ: 01-07-1964
ಸೇವೆಗೆ ಸೇರಿದ ದಿನಾಂಕ: 01-12-1988
ಸೇವೆ ಸಲ್ಲಿಸಿದ ಶಾಲೆಗಳು: ಸ.ಕಿ.ಪ್ರಾ.ಶಾಲೆ ಆಲಂತಾಯ
ಸ.ಮಾ.ಹಿ.ಪ್ರಾ.ಶಾ. ಹಿರಿಯಡ್ಕ ಉಡುಪಿ
ಸ.ಹಿ.ಪ್ರಾ.ಶಾ ಇಡ್ಯೊಟ್ಟು
ಸ.ಹಿ.ಪ್ರಾ.ಶಾ.ಅರಿಯಡ್ಕ
ಭಡ್ತಿ: ಮುಖ್ಯಗುರುಗಳಾಗಿ 07-10-2014 ರಂದು ಭಡ್ತಿ ಗೊಂಡು ಸ.ಹಿ.ಪ್ರಾ.ಶಾ.ನನ್ಯ ತದನಂತರ 2016ರಲ್ಲಿ ವರ್ಗಾವಣೆಗೊಂಡು ಸ.ಹಿ.ಪ್ರಾ.ಶಾಲೆ ಕಟ್ಟಾತ್ತಾರು ಇಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸುಮಾರು 35 ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಂದು ನಿವೃತ್ತರಾಗುತ್ತಿರುವಿರಿ. ಆರ್ಯಾಪು ಸ್ವಾತಿ ನಿಲಯದಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ತಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನ ಸುಖಮಯವಾಗಿರಲಿ ದೇವರು ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.