ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ

ಗುರುಭ್ಯೋ ನಮಃ

WhatsApp Group Join Now
Telegram Group Join Now

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

IMG 20220131 WA0017 min

ಅಕ್ಷರ ದೀಪದ ಬೆಳಕನ್ನಿತ್ತು ದಶಕಗಳ ವೃತ್ತಿ ಬದುಕಿನ ಸಾರ್ಥಕ ಸೇವೆಯಿಂದ ಈ ತಿಂಗಳು ವಿರಮಿಸುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯ ತಮ್ಮ ಮುಂದಿಡುತ್ತಿದ್ದೇವೆ

IMG 20220131 WA0004 min

ಶ್ರೀಮತಿ ಪಾವನಾ ಕೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪಿಕಾಡು
ಮಂಗಳೂರು ಉತ್ತರ

09-01-1962 ರಂದು ಜನಿಸಿದ ತಾವು 08-01-1986 ರಲ್ಲಿ ಪುತ್ತೂರು ತಾಲೂಕಿನ ಬಂಗಾರಡ್ಕದಲ್ಲಿ ಸೇವೆಗೆ ಸೇರಿದಿರಿ. ನಂತರ ತಲಪಾಡಿ ಪಟ್ನ, ದೇವಸ್ಯ ಮುಡೂರು ಶಾಲೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಕಾಪಿಕಾಡು ಶಾಲೆಯಲ್ಲಿ ನಿವೃತ್ತರಾಗುತ್ತಿದ್ದೀರಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತಿದ್ದೇವೆ.

IMG 20220131 WA0005 min

ಶ್ರೀಮತಿ ಆಶಾರಾಣಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ. ಮಂಗಳೂರು ದಕ್ಷಿಣ

ನರಸಿಂಹ ಚಂದಾವರ ಹಾಗೂ ಕೃಷ್ಣವೇಣಿ ಅವರ ಮಗಳಾಗಿ 20.01.1962 ರಲ್ಲಿ ಜನಿಸಿದ ಇವರು ಉಡುಪಿ, ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿ, ಸೈಂಟ್ ಆನ್ಸ್ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ಶಿಕ್ಷಣ ಪೂರೈಸಿ 27.11.1998 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ-1 ಬೆಳ್ತಂಗಡಿಯಲ್ಲಿ ಸೇವೆಗೆ ಸೇರಿದರು. ಮುಂದೆ ವರ್ಗಾವಣೆಗೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳಕ್ಕೆ ಬಂದು ಇದೀಗ ಇಲ್ಲಿ 23 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಪತಿ ಪ್ರಕಾಶರೊಂದಿಗಿನ ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20220131 WA0006 min

ಶ್ರೀಮತಿ ರತ್ನಮ್ಮ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆ
ಬೆಳ್ತಂಗಡಿ ತಾಲೂಕು

24-01-1962 ರಲ್ಲಿ ಜನಿಸಿದ ತಾವು 09-03-2000 ದಲ್ಲಿ ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಬ್ಬಡ್ಕದಲ್ಲಿ ಸೇವೆಗೆ ಸೇರಿದಿರಿ. ನಂತರ 2006 ರಿಂದ 2014 ರವರೆಗೆ ಪಡಂಗಡಿಯಲ್ಲಿ ಸೇವೆ ಸಲ್ಲಿಸಿ, 2014 ರಿಂದ ಇಲ್ಲಿಯವರೆಗೆ ಪೆರಿಂಜೆಯಲ್ಲಿ ಕರ್ತವ್ಯ ನಿರ್ವಹಿಸಿ 21 ವರ್ಷ 10 ತಿಂಗಳ ದೀರ್ಘ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿರುವ ತಮಗೆ ನಿವೃತ್ತ ಜೀವನದ ಶುಭಾಶಯಗಳು

IMG 20220131 WA0007 min

ಶ್ರೀಮತಿ ಆಶಾವೇಣಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕೊಣಾಜೆ ಮೂಡಬಿದ್ರೆ ತಾಲೂಕು

08.01.1962 ರಲ್ಲಿ ಜನಿಸಿದ ಇವರು 08.04.1996 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರೂರಿನಲ್ಲಿ ಸೇವೆಗೆ ಸೇರಿದರು. ಮುಂದೆ ಹೊಸಂಗಡಿ, ಕೋಟೆಬಾಗಿಲು, ಜನರಲ್, ಎಡಮಂಗಿಲ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕೊಣಾಜೆಯಲ್ಲಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220131 WA0008 min

ಶ್ರೀಯುತ ಅನಂತಪದ್ಮನಾಭ ಜೆನ್ನಿ. ಕೆ. ಆರ್
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಡಂದಲೆ ಪಿ. ಬಿ
ಮೂಡುಬಿದಿರೆ ತಾಲೂಕು

ಉಡುಪಿ ಜಿಲ್ಲೆ ಕಾಪು ತಾಲೂಕು ಎಲ್ಲೂರು ಗ್ರಾಮದ ಕೆಮುಂಡೇಲು ಎಂಬಲ್ಲಿ ಜೆನ್ನಿ ಕೆ ರಾಮರಾವ್ ಮತ್ತು ಶ್ರೀಮತಿ ರತ್ನಾವತಿ ಇವರ ಸುಪುತ್ರರಾಗಿ ದಿನಾಂಕ 07-01-1962 ರಲ್ಲಿ ಜನಿಸಿ ಕೆಮುಂಡೇಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿಯೊಂದಿಗೆ ಇಂಟರ್ನ್ಶಿಪ್ ಕೋರ್ಸನ್ನು ಪೂರೈಸಿರುವಿರಿ. ಪ್ರಾಥಮಿಕ ಶಿಕ್ಷಣದ ಜೊತೆಗೆ ಯಕ್ಷಗಾನ ಅಭ್ಯಸಿಸಿ ವೇಷಧಾರಿಯಾಗಿ ಯಕ್ಷಗಾನದಲ್ಲಿ ಮಿಂಚಿದವರು ತಾವು.
ದಿನಾಂಕ 16-01-1999 ರಂದು ಪುತ್ತೂರು ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂರ್ಬಡ್ಕ ಇಲ್ಲಿ ಶಿಕ್ಷಕ ವೃತ್ತಿ ಜೀವನಕ್ಕೆ ಕಾಲಿರಿಸಿದಿರಿ. ಹನ್ನೊಂದು ವರ್ಷಗಳ ಸುದೀರ್ಘ ಅವಧಿಯಲ್ಲಿ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಾಲಾ ವಾರ್ಷಿಕೋತ್ಸವಕ್ಕೆ ಮಕ್ಕಳಿಗೆ ಯಕ್ಷಗಾನ ಕಲಿಸಿ ಮಕ್ಕಳ ಯಕ್ಷಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿರುವಿರಿ. ನಂತರ 2011ರಲ್ಲಿ ಮೂಡಬಿದಿರೆ ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಚ್ಚೇರಿಕಟ್ಟೆ ಇಲ್ಲಿಗೆ ವರ್ಗಾವಣೆಗೊಂಡು ನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡಿ ಶಾಲಾ ವಾರ್ಷಿಕೋತ್ಸವ ಇತ್ಯಾದಿ ಕಾರ್ಯಕ್ರಮಗಳಿಗೆ ಮಕ್ಕಳು ಯಕ್ಷಗಾನ ಪ್ರದರ್ಶನಗಳನ್ನು ನೀಡುವರೆ ಕಾರಣೀಕರ್ತರಾಗಿರುತ್ತೀರಿ. 30-07-2014 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಡಂದಲೆ ಇಲ್ಲಿಗೆ ವರ್ಗಾವಣೆಗೊಂಡು ಏಳು ವರ್ಷಗಳ ಸುದೀರ್ಘಾವಧಿಯಲ್ಲಿ ಕರ್ತವ್ಯ ನಿರ್ವಹಿಸಿರುವಿರಿ. ತಮ್ಮ ಸೇವೆಯನ್ನು ಗುರುತಿಸಿ ಇಲಾಖೆಯು ತಮಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಸಂತಸದ ವಿಚಾರ. ಸುದೀರ್ಘ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿರುವ ತಮಗೆ ನಿವೃತ್ತ ಜೀವನದ ಶುಭಾಶಯಗಳು

IMG 20220131 WA0010 min

ಶ್ರೀಮತಿ ಜಯಲಕ್ಷ್ಮಿ ಪಿ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಟ್ಟಿಗಾರು
ಸುಳ್ಯ ತಾಲೂಕು

1994 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಕಾರ, ಪುತ್ತೂರು ತಾಲೂಕು ಇಲ್ಲಿ ಸೇವೆಗೆ ಸೇರಿದ ಜಯಲಕ್ಷ್ಮಿ ಇವರು 1998 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗ್ರ ಸುಳ್ಯ ತಾಲೂಕಿಗೆ ವರ್ಗಾವಣೆಗೊಂಡರು. ಮುಂದೆ 2003 ರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಟ್ಟಿಗಾರು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ತಮ್ಮ ಸುದೀರ್ಘ 27 ವರ್ಷದ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

IMG 20220131 WA0018 min

ಶ್ರೀಮತಿ ಎ.ಎ.ವಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲೆಟ್ಟಿನಳ್ಳ
ಸುಳ್ಯ ತಾಲೂಕು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ 1996 ರಲ್ಲಿ ಸೇವೆಗೆ ಸೇರಿದ ಇವರು ಮುಂದಕ್ಕೆ 1998 ರಿಂದ 2003 ರವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ, 2003 ರಿಂದ ಸುಳ್ಯ ಶಾಲೆ ಹಾಗೂ 2019 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿಯಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ತಮ್ಮ ಸುದೀರ್ಘವಾದ 26 ವರ್ಷಗಳ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತಜೀವನದ ಶುಭಾಶಯಗಳು.

IMG 20220131 WA0009 min

ಶ್ರೀಮತಿ ಲಕ್ಷ್ಮಿ ಟಿ.ಡಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ
ಬಂಟ್ವಾಳ ತಾಲೂಕು

ದಿವಾಕರ ಶಾಸ್ತ್ರಿ, ಪಾರ್ವತಿ ಅಮ್ಮನವರ ಸುಪುತ್ರಿಯಾಗಿ ಬಂಟ್ವಾಳ ತಾಲೂಕಿನ ಕನ್ಯಾನದಲ್ಲಿ 15.01.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಮಿತ್ತನಡ್ಕ ಹಾಗೂ ಪ್ರೌಢಶಿಕ್ಷಣವನ್ನು ಕನ್ಯಾನದಲ್ಲಿ ಪೂರೈಸಿ, ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಬಲ್ಮಠ ಮಂಗಳೂರು ಇಲ್ಲಿ ಶಿಕ್ಷಕ ತರಬೇತಿಯನ್ನು ಪೂರೈಸಿ 10.01.1996 ರಲ್ಲಿ ಬಂಟ್ವಾಳ ತಾಲೂಕಿನ ಒಡಿಯೂರಿನಲ್ಲಿ ಸೇವೆಗೆ ಸೇರಿದರು. ಅಲ್ಲಿಂದ ಮುಂದಕ್ಕೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜಕ್ಕೆ ವರ್ಗಾವಣೆಗೊಂಡು 25 ವರ್ಷಗಳ ಸುದೀರ್ಘ ಸೇವೆಯ ನಂತರ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20220131 WA0011 min

ಶ್ರೀಮತಿ ವಾರಿಜ ಕೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪನ್ಯಗುರಿಯಡ್ಕ
ಕಡಬ ತಾಲೂಕು

ಸುಳ್ಯ ತಾಲೂಕು ಕೊಡಿಯಾಲ ಗ್ರಾಮ ಕೆಡೆಂಜಿಮೊಗ್ರು ಮಾಯಿಲಪ್ಪ ರೈ ಮತ್ತು ವಾಸಮ್ಮ ದಂಪತಿಗಳ ಪ್ರಥಮ ಪುತ್ರಿಯಾಗಿ ಜನಿಸಿದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಿರಿಯ ಪ್ರಾಥಮಿಕ ಶಾಲೆ ಕಲ್ಪತಬೈಲು ಕೊಡಿಯಾಲ ಗ್ರಾಮ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯದಲ್ಲಿ 1976 ರಲ್ಲಿ ಮುಗಿಸಿರುತ್ತಾರೆ. ನಂತರ ಪ್ರೌಢಶಿಕ್ಷಣವನ್ನು ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ ಮುಗಿಸಿ ಪದವಿ ಪೂರ್ವ ಶಿಕ್ಷಣವನ್ನು ಸಬ್ ಜೂನಿಯರ್ ಕಾಲೇಜು ಬೆಳ್ಳಾರೆಯಲ್ಲಿ ಪಡೆದಿರುತ್ತಾರೆ.
ನಂತರ 1981 ರಲ್ಲಿ ಶಿಕ್ಷಕರ ತರಬೇತಿಯನ್ನು ಹೆಣ್ಣುಮಕ್ಕಳ ಸರಕಾರಿ ಶಿಕ್ಷಕರ ತರಬೇತಿ ಕೇಂದ್ರ ಬಲ್ಮಠ ಮಂಗಳೂರು ಇಲ್ಲಿ ಪಡೆದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ ದಲ್ಲಿ 08.06.1983 ರಿಂದ 01.10.1984 ರವರೆಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ನಿರ್ವಹಿಸಿರುತ್ತಾರೆ.
1986ನೇ ನವೆಂಬರ್ ನಲ್ಲಿ ಜಗನ್ನಾಥ ರೈ ದೋಳ ಬಂಟ್ರ ಮರ್ದಾಳ ಇವರೊಂದಿಗೆ ವಿವಾಹವಾಗಿರುತ್ತಾರೆ.
ಇವರು 04.08.1998 ರಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಬದಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ.
29.05.2011 ರವರೆಗೆ ಇಲ್ಲಿ ಕರ್ತವ್ಯ ನಿರ್ವಹಿಸಿ ಇದರ ಮಧ್ಯದಲ್ಲಿ ಎರಡು ವರ್ಷ ಸರಕಾರಿ ಪ್ರಾಥಮಿಕ ಶಾಲೆ ಪಾಲೆತ್ತಡ್ಕದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.
30.05.2011ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರಿಯಡ್ಕ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿ ನಂತರ 14.12.2021 ರಿಂದ 18.01.2022 ರವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಿಜಕಳದಲ್ಲಿ ನಿಯೋಜನೆಗೊಂಡು ಉತ್ತಮ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಈ ತಿಂಗಳಲ್ಲಿ ನಿವೃತ್ತರಾಗುತ್ತಿದ್ದಾರೆ. ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ

ಶಿಕ್ಷಣ ಇಲಾಖೆಗೆ ದೀರ್ಘಾವಧಿಯ ಸೇವೆಯನ್ನು ನೀಡಿ ಅನೇಕ ವಿದ್ಯಾರ್ಥಿಗಳ ಬಾಳನ್ನು ಬೆಳಗಿ ಇಂದು ನಿವೃತ್ತ ಜೀವನಕ್ಕೆ ಕಾಲಿಡುತ್ತಿರುವ ತಮ್ಮ ಮುಂದಿನ ಜೀವನ ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.

WhatsApp Group Join Now
Telegram Group Join Now
Sharing Is Caring:

Leave a Comment