ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ನಿವೃತ್ತರಾದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ

ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

1000793827

ಶ್ರೀಮತಿ ಜೆಸಿಂತಾ ಸಿಂಥಿಯಾ ಡಿಮೆಲ್ಲೋ
ಸ. ಹಿ. ಪ್ರಾಥಮಿಕ ಶಾಲೆ ಬೇಂಗಿಲ ಬೆಳ್ತಂಗಡಿ ತಾಲೂಕು

ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

1000793825

ಶ್ರೀಮತಿ ಸುಜಾತ ರೈ. ವೈ
ಸಹ ಶಿಕ್ಷಕಿ
ಸ.ಕಿ.ಪ್ರಾ.ಶಾಲೆ ಸಿದ್ಧವನ ಉಜಿರೆ.
ಬೆಳ್ತಂಗಡಿ ತಾಲೂಕು

ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಚಂದಳಿಕೆ ವಿಟ್ಲ ಹಾಗೂ ಪ್ರೌಢ ಶಿಕ್ಷಣವನ್ನು ವಿಠಲ ಬಾಲಿಕಾ ಪ್ರೌಢಶಾಲೆ ವಿಟ್ಲ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಸ್ವತಿ ಶಿಕ್ಷಕ ಶಿಕ್ಷಣ ಸಂಸ್ಥೆ ಮಡಿಕೇರಿ ಮಡಿಕೇರಿಯಲ್ಲಿ ಪೂರೈಸಿದ ಇವರು ದಿನಾಂಕ 17.01.1996 ರಲ್ಲಿ ಸ.ಕಿ.ಪ್ರಾ.ಶಾಲೆ ಪಟ್ರಮೆ ‘ಬಿ’ ಇಲ್ಲಿ ಸಹ ಶಿಕ್ಷಕಿಯಾಗಿ ಸೇವೆಗೆ ಸೇರಿದ ಇವರು ನಂತರ ನಿಯೋಜನೆಯ ಆಧಾರದಲ್ಲಿ ಸ.ಕಿ.ಪ್ರಾ.ಶಾಲೆ ಸೌತಡ್ಕ ಹಾಗೂ ಸ.ಕಿ.ಪ್ರಾ.ಶಾಲೆ ಗಾಂಧಿ ನಗರ ಉಜಿರೆ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 19.01.2000 ರಲ್ಲಿ ಸ.ಕಿ.ಪ್ರಾ.ಶಾಲೆ ಸಿದ್ಧವನ ಉಜಿರೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

1000793808

ಶ್ರೀಮತಿ ವೈಲೆಟ್ ಶಾಂತಿ ಬ್ಲೆಸಿಲ್ಲಾ ಡಿಸೋಜ
ದ.ಕ.ಜಿ.ಪಂ.ಸ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳಪದವು ಬಂಟ್ವಾಳ ತಾಲೂಕು

ಮೊಡಂಕಾಪು ಶ್ರೀ ಜೆ.ಎಂ.ಡಿಸೋಜ ಹಾಗೂ ಶ್ರೀಮತಿ ಕ್ಯಾತರಿನ್ ದಂಪತಿಗಳ ಪುತ್ರಿಯಾಗಿ ದಿನಾಂಕ 22.01.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಇನ್ಫೆಂಟ್ ಜೀಸಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೊಡಂಕಾಪು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ ಮೊಡಂಕಾಪು ಇಲ್ಲಿ ಪೂರೈಸಿ ಕಾಲೇಜು ಶಿಕ್ಷಣವನ್ನು ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಬಂಟ್ವಾಳ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಕಪಿತಾನಿಯೋ ಶಿಕ್ಷಕ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿದ ಇವರು ದಿನಾಂಕ 29.07.1994 ರಲ್ಲಿ ದ.ಕ.ಜಿ.ಪಂ.ಸ.ಉ.ಹಿ.ಪ್ರಾ.ಶಾಲೆ ಚೆನ್ನೈತ್ತೋಡಿ ವಾಮದಪದವು ಇಲ್ಲಿ ಸೇವೆಗೆ ಸೇರಿದ ಇವರು ನಂತರ ಸ.ಉ.ಹಿ.ಪ್ರಾ.ಶಾಲೆ ನಲ್ಕೆಮಾರ್ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 01.09.2015 ರಲ್ಲಿ ಸ.ಉ.ಹಿ.ಪ್ರಾ.ಶಾಲೆ ಎರ್ಮಾಳ ಪದವು ಇಲ್ಲಿಗೆ ಹೆಚ್ಚುವರಿಯಾಗಿ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

1000793829

ಶ್ರೀಮತಿ ಪದ್ಮಿನಿ ಕುಮಾರಿ
ಕೆ. ಪಿ. ಎಸ್ ಸ್ಕೂಲ್ ಮಿಜಾರು ಮೂಡಬಿದ್ರಿ ತಾಲೂಕು

ಶ್ರೀ ವಾಸುದೇವ ಐತಾಳ ಮತ್ತು ಶ್ರೀಮತಿ ಶಾರದಮ್ಮ ದಂಪತಿಗಳ ಪುತ್ರಿಯಾಗಿ ದಿನಾಂಕ 27.01.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ರೋಸಾ ಮಿಸ್ತಿಕಾ ಹೈಸ್ಕೂಲ್ ನಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆಯಲ್ಲಿ ಪೂರೈಸಿ, ದಿನಾಂಕ 05.08.1998 ರಲ್ಲಿ ಸ.ಹಿ.ಪ್ರಾ.ಶಾಲೆ ಕಿಲೆಂಜಾರು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 20.06.2012 ರಲ್ಲಿ ಕೆ.ಪಿ.ಎಸ್ ಸ್ಕೂಲ್ ಮಿಜಾರು ಮೂಡುಬಿದಿರೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

1000793819

ಶ್ರೀಮತಿ ಶುಭಲತಾ ಹಾರಾಡಿ
ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ
ಪುತ್ತೂರು ತಾಲೂಕು

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರು

ಶ್ರೀಮತಿ ಶುಭ ಲತಾ ಇವರು ಶ್ರೀ ನೊಣಯ್ಯ ಹಾಗೂ ಗುಲಾಬಿ ದಂಪತಿಗಳ ಪುತ್ರಿ.
ಪ್ರಾಥಮಿಕ ಶಿಕ್ಷಣ ವನ್ನು ಮೂಡಬಿದ್ರೆ ಪ್ರೌಢ ಶಿಕ್ಷಣವನ್ನು ನಾರಾವಿ ಮತ್ತು ವೃತ್ತಿಪರ ಶಿಕ್ಷಣವನ್ನು ಕಪಿತಾನಿಯೋ ಶಿಕ್ಷಣ ಸಂಸ್ಥೆ ಮಂಗಳೂರು ಇಲ್ಲಿ ಪಡೆದುಕೊಂಡಿರುತ್ತಾರೆ.
ಸರಕಾರಿ ಪ್ರಾಥಮಿಕ ಶಾಲೆ ಕೊಯಿಲ ಬಂಟ್ವಾಳ ಇಲ್ಲಿ ಉಚಿತ ಸೇವೆಯನ್ನು ಸಲ್ಲಿಸಿ ಮುಂದೆಸರಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು ಕಾರ್ಕಳ ತಾಲೂಕಿನ ದುರ್ಗಾ ತೆಳ್ಳಾರ್ ಇಲ್ಲಿ ವೃತ್ತಿ ಜೀವನ ಆರಂಭಿಸಿ, ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಾಯ ಇಲ್ಲಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇಲ್ಲಿ 27 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಅವಧಿಯಲ್ಲಿ ಹಾರಾಡಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಉತ್ತಮ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡು ಅಪಾರ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸವನ್ನು ಗಳಿಸಿರುತ್ತಾರೆ. ತಾನು ಕಲಿಸಿದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರುವುದೇ, ಒಳ್ಳೆಯ ಪ್ರಜೆಯಾಗಿ ಬಾಳುವುದೇ ತನಗೆ ಸಲ್ಲುವ ಗೌರವ ಎಂದು ಭಾವಿಸಿ ಕೆಲಸ ಮಾಡಿದ್ದಾರೆ.

ಬಳಿಕ ಸುಳ್ಯ ತಾಲೂಕಿನ ಮುರೂರು ಶಾಲೆಯಲ್ಲಿ ಸೇವೆ ಸಲ್ಲಿಸಿ ಭಡ್ತಿ ಹೊಂದಿ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಪುತ್ತೂರು ಇಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪುತ್ತೂರು ತಾಲೂಕಿನ ಹಾರಾಡಿಯ ಶ್ರೀ ಹರೀಶ್ ಹಾರಾಡಿ ಎಂಬವರನ್ನು ವಿವಾಹವಾಗಿ ಸಂತೃಪ್ತ ಜೀವನವನ್ನು ನಡೆಸಿದ್ದಾರೆ. ಇವರ ಮಗ ಸೊಸೆ, ಮಗಳು ಅಳಿಯ ಇಂಜಿನಿಯರ್ ಗಳಾಗಿದ್ದು ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇವರು ತಮ್ಮ ಮಗ ವಿಕ್ರಮ್ ಎಚ್ ಹಾಗೂ ಮಗಳು ವಿನುತಾ ಎಚ್ ಇವರಿಗೆ ಪುತ್ತೂರಿನ ಸರಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ನೀಡಿರುತ್ತಾರೆ.
ಸುಮಾರು 38 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಇವರು ತಾವು ಕರ್ತವ್ಯ ನಿರ್ವಹಿಸಿದ ಶಾಲೆಗಳಲ್ಲಿ ತನ್ನ ಕರ್ತವ್ಯದ ಮೂಲಕ ಎಲ್ಲರ ಪ್ರೀತಿ ಗೌರವವನ್ನು ಪಡೆದುಕೊಂಡಿದ್ದಾರೆ. ಉತ್ತಮ ತರಗತಿ ಶಿಕ್ಷಕಿಯಾಗಿ ಅಪಾರ ಸಂಖ್ಯೆಯ ಶಿಷ್ಯ ವೃಂದವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರಲ್ಲಿ ಶಿಕ್ಷಣ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿರುವುದು ಅವರ ವೃತ್ತಿ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.
ಇವರ ಸೇವಾ ಅವಧಿಯಲ್ಲಿ ಆನಡ್ಕ ಶಾಲೆಗೆ ಉತ್ತಮ ನಲಿ-ಕಲಿ ಪ್ರಶಸ್ತಿ, ಉತ್ತಮ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿ ಪ್ರಶಸ್ತಿ, ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಪ್ರಶಸ್ತಿ.. ಮೊದಲಾದ ಪ್ರಶಸ್ತಿಗಳು ಬಂದಿರುತ್ತವೆ.
ಸಂಘ ಸಂಸ್ಥೆಗಳು ಇವರನ್ನು ಗುರುತಿಸಿವೆ.
ಕಾರ್ಯಕ್ರಮ ನಿರೂಪಕರಾಗಿ, ಮಕ್ಕಳಿಗಾಗಿ ರೂಪಕಗಳ ರಚನಕಾರರಾಗಿ, ತಾಲೂಕು ಜಿಲ್ಲಾ ಮಟ್ಟದ ತೀರ್ಪುಗಾರರಾಗಿ, ಭಾಷಣಕಾರರಾಗಿ, ಸಮರ್ಥ ಸಂಘಟಕರಾಗಿ, ಗುರುತಿಸಿಕೊಂಡಿದ್ದಾರೆ.

ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಶಿಕ್ಷಕರ ಪ್ರೀತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಪುತ್ತೂರು ಇಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಾಲೆಯ ಸರ್ವಾಂಗೀಣ ಪ್ರಗತಿಗಾಗಿ ದಾನಿಗಳ ನೆರವಿನೊಂದಿಗೆ Campus to community ಯವರ” School Bell ” ಯೋಜನೆಯಲ್ಲಿ ಶಾಲಾ ಸೌಂದರೀಕರಣ, ಇನ್ಫೋಸಿಸ್ ಮುಡಿಪು ಇವರಿಂದ ಕಂಪ್ಯೂಟರ್ ಗಳು, ಶಿಕ್ಷಕರು, ಪೋಷಕರು ಹಾಗೂ ದಾನಿಗಳ ನೆರವಿನೊಂದಿಗೆ ನಲಿಕಲಿ ತರಗತಿಗೆ ಬೇಬಿ ಚೇರ್ಸ್ ಮತ್ತು ಟೇಬಲ್, ಪ್ರತಿಬಿಂಬ ಟ್ರಸ್ಟ್ ಬೆಂಗಳೂರು ಮೂಲಕ ನೀರಿನ ಟ್ಯಾಂಕ್ ಮತ್ತು ಒರಗು ಬೆಂಚುಗಳು ಹಾಗೂ ಕಂಪ್ಯೂಟರ್ ಟೇಬಲ್ ಗಳು, ಶಾಲಾಕಚೇರಿಗೆ ಬೇಕಾದ ಪೀಠೋಪಕರಣಗಳು..ಹೀಗೆ ಶಾಲೆಗೆ ಬೇಕಾದ ಭೌತಿಕ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಿದ್ದಾರೆ. ದಾನಿಯಾಗಿರುವ ಇವರು ತನ್ನ ಕಡೆಯಿಂದ ವರ್ಷಕ್ಕೊಂದು ಕೊಡುಗೆಯನ್ನು ಶಾಲೆಗೆ ನೀಡುತ್ತಾರೆ. ರೋಟರಿ ಕ್ಲಬ್ ಪುತ್ತೂರು ಇವರಿಂದ ವಾಟರ್ ಪ್ಯೂರಿಫೈಯರ್, ದಾನಿಗಳಿಂದ ಪ್ರಿಂಟರ್, ಟಿಲ್ಟಿಂಗ್ ಗ್ರೈಂಡರ್, ಇನ್ ಮರ್ಟರ್ ಇತ್ಯಾದಿ ಅನೇಕ ಕೊಡುಗೆಗಳನ್ನು ನೀಡುವಲ್ಲಿ ತನ್ನ ತಂಡದೊಂದಿಗೆ ಶ್ರಮಿಸಿದ್ದಾರೆ.
ಶಾಲಾ ಸಮೀಪದ ಗುಡ್ಡವನ್ನು ತೆರವುಗೊಳಿಸಿ ಆಟದ ಮೈದಾನವನ್ನು ವಿಸ್ತರಿಸಿ ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸಿದ್ದಾರೆ.
ತಾಲೂಕು ಮಟ್ಟದ ಇಲಾಖಾ ಕಾರ್ಯಕ್ರಮಗಳಾದ.. ದೇಸಿ ವೈಭವ ತರಬೇತಿ, ಕಲಿಕಾ ಹಬ್ಬ, ವಲಯ ಮಟ್ಟದ ಪಂದ್ಯಾಟಗಳು ಇತ್ಯಾದಿಗಳನ್ನು ಗುರುವೃಂದ ಹಾಗೂ ಪೋಷಕ ವೃಂದದ ನೆರವಿನೊಂದಿಗೆ ಆಯೋಜಿಸಿ ಮೆಚ್ಚುಗೆ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮಕ್ಕಳಿಗೆ ಪಾಠದೊಂದಿಗೆ ಗುರು ಮುಖೇನ ಯೋಗ, ಧ್ಯಾನ, ಬೇಸಿಗೆ ಶಿಬಿರ, ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಹಾಗೂ ವಿವಿಧ ಕ್ಲಬ್ ಗಳ ಮೂಲಕ, ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿಕ್ಷಕರ ಹಾಗೂ ಪೋಷಕರ ನೆರವಿನೊಂದಿಗೆ ಶಾಲೆಯನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಿದ್ದಾರೆ.
ಇವರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಪ್ರೀತಿಯ ಮಾತುಗಳು ಇವರನ್ನು ಈ ಪ್ರಶಸ್ತಿಯತ್ತ ಮುನ್ನಡೆಸಿದೆ.
38 ವರ್ಷಗಳ ಸುದೀರ್ಘ ಸೇವೆ ಹಾಗೂ ಕಾರ್ಯಚಟುವಟಿಕೆಯನ್ನು ಗುರುತಿಸಿ ಶಿಕ್ಷಣ ಇಲಾಖೆ 2023-2024 ನೇ ಸಾಲಿನಲ್ಲಿ ಇವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಶಿಕ್ಷಕರ ದಿನಾಚರಣೆಯ ದಿನ ನೀಡಿ ಗೌರವಿಸಿದೆ.
ಇಂದು ನಿವೃತ್ತಿ ಹೊಂದುತ್ತಿರುವ ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.

1000793813

ಶ್ರೀಮತಿ ಯುಮುನಾ ಬಿ
ಸಹಶಿಕ್ಷಕಿ ಸ.ಉ.ಪ್ರಾ.ಶಾಲೆ ಹಾರಾಡಿ ಪುತ್ತೂರು ತಾಲೂಕು.

ಜನನ: 11-01-1964
ತಂದೆ: ಕುಂಞಪ್ಪ ನಾಯ್ಕ ಬಿ
ತಾಯಿ: ಗಿರಿಜಾ
ಪ್ರಾಥಮಿಕ ಶಿಕ್ಷಣವನ್ನು ಸ.ಉ.ಹಿ.ಪ್ರಾ.ಶಾಲೆ ಪಾಣಾಜೆ ಹಾಗೂ ಪ್ರೌಢ ಶಿಕ್ಷಣವನ್ನು ಸುಬೋಧ ಪ್ರೌಢಶಾಲೆ ಆರ್ಲಪದವು ಮತ್ತು ಸರ್ಕಾರಿ ಮಹಿಳಾ ತರಬೇತಿ ಸಂಸ್ಥೆ ಬಲ್ಮಠ ಮಂಗಳೂರು ಇಲ್ಲಿ ಶಿಕ್ಷಕ ತರಬೇತಿ ಪೂರೈಸಿರುವರು.
ಸರ್ಕಾರಿ ಶಿಕ್ಷಕ ವೃತ್ತಿಯನ್ನು 25-08-1992ರಲ್ಲಿ ಸ.ಹಿ.ಪ್ರಾ.ಶಾ.ಬಡಗಕಾರಂದೂರು ಬೆಳ್ತಂಗಡಿ ತಾಲೂಕಿನ ಪ್ರಾರಂಭಿಸಿದರು. ನಂತರ ವರ್ಗಾವಣೆ ಹೊಂದಿ ಪುತ್ತೂರು ತಾಲೂಕಿನ ಕಬಕ ಬಂದರು.ಅಲ್ಲಿಂದ ಮತ್ತೆ ವರ್ಗಾವಣೆ ಹೊಂದಿ 2015ರಲ್ಲಿ ಹಾರಾಡಿ ಶಾಲೆಗೆ ಬಂದು ಇದೀಗ ಅಲ್ಲಿ 9 ವರ್ಷಗಳ ಕಾಲ ದುಡಿದು ಒಟ್ಟು ಸುಮಾರು 32 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಪತಿ ಶ್ರೀಯುತ ಐತ್ತಪ್ಪ ನಾಯ್ಕ ನಿವೃತ್ತ ಸರ್ಕಾರಿ ನೌಕರು ಉಪವಲಯ ಅರಣ್ಯಾಧಿಕಾರಿಯಾಗಿದ್ದರು. ಪ್ರಸ್ತುತ ಇಬ್ಬರು ಮಕ್ಕಳೊಂದಿಗೆ ಕೊಂಬೆಟ್ಟು ಇಲ್ಲಿ ವಾಸವಾಗಿದ್ದಾರೆ. ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.

1000793816

ಶ್ರೀಮತಿ ಮೋಹಿನಿ ಅಮೀನ
ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಲ್ಯಪದವು ಶಕ್ತಿನಗರ ಮಂಗಳೂರು ದಕ್ಷಿಣ

ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

1000793810

ಶ್ರೀಮತಿ ಭಾರತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುನ್ನೂರು
ಮಂಗಳೂರು ದಕ್ಷಿಣ

ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

1000793822

ಶ್ರೀಮತಿ ನಾಗವೇಣಿ
ಸ.ಹಿ.ಪ್ರಾ. ಶಾಲೆ ಕುಂಪಲ
ಮಂಗಳೂರು ದಕ್ಷಿಣ

ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

Sharing Is Caring:

Leave a Comment