* ಶಾಲಾ ಹಂತದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಅಥವಾ ಶೇಂಗಾಚಿಕ್ಕಿ ಖರೀದಿ ಮತ್ತು ವಿತರಣೆ ಕೈಗೊಳ್ಳುವ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲು ಖರೀದಿ ಸಮಿತಿ ರಚಿಸಿಕೊಳ್ಳುವಂತೆ ಸೂಚಿಸಿದೆ.ಶಾಲೆಯ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರು ಖರೀದಿಸಮಿತಿಯ ಅಧ್ಯಕ್ತರಾಗಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಶಾಲೆಯ ಮುಖ್ಯಶಿಕ್ಷಕರು, ಸದಸ್ಯರಾಗಿ ಇಬ್ಬರು ಪೋಷಕರು, ಒಬ್ಬ ಹಿರಿಯ ಶಿಕ್ಷಕರು,ಇಬ್ಬರು ತಾಯಂದಿರು ಒಳಗೊಂಡಂತೆ ಸಮಿತಿಯನ್ನು ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರೇ ರಚಿಸುವುದು.ಈ ಖರೀದಿ ಸಮಿತಿಯ ಸಭೆ ನಡೆಸಿ ಇಲಾಖೆಯ ಮಾರ್ಗಸೂಚಿಯಂತೆ ಚರ್ಚಿಸಿ, ಸಲಹೆ ಸೂಚನೆ ನೀಡಿನಡೆವಳಿ ಮಾಡಿ ಖರೀದಿ ಪ್ರಕ್ರಿಯೆ ಕೈಗೊಳ್ಳಬೇಕು. ಸದರಿ ಸಮಿತಿಯು ಪ್ರತಿ ತಿಂಗಳು ಶಾಲಾ ಹಂತದಲ್ಲಿಸಭೆ ನಡೆಸಿ ಖರೀದಿ ಪ್ರಕ್ರಿಯೆ, ಪದಾರ್ಥಗಳ ಗುಣಮಟ್ಟ, ವಿತರಣೆಯ ಪುಮಾಣ, ತರಗತಿವಾರು / ವಿದ್ಯಾರ್ಥಿವಾರು ಫಲಾನುಭವಿಗಳ ಹಾಜರಾತಿ ಸಂಖ್ಯೆ ವಿತರಣೆಯ ಕ್ರಮ ಹಾಗೂ ಖರೀದಿ ಬಿಲ್ಲು-ವೋಚರ್ ಗಳನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಂಡು ದೃಢೀಕರಿಸಿ ನಡಾವಳಿಯೊಂದಿಗೆ ವರದಿಯನ್ನುತಾಲ್ಲೂಕು ಪಂಚಾಯತ್ ಅಕ್ಷರದಾಸೋಹ ಕಛೇರಿಗೆ ತಪ್ಪದೇ ಸಲ್ಲಿಸಬೇಕು. ವಿತರಣೆಯ ದಿನಗಳನ್ನುಸ್ಥಳೀಯ ಆಹಾರ ಪದ್ಧತಿಯನ್ನು ಗಮನದಲ್ಲಿರಿಸಿಕೊಂಡು ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ನಿಗಧಿಪಡಿಸಿಕೊಳ್ಳುವುದು. ಈ ಬಗ್ಗೆ ನಿಗಧಿತ ವಿತರಣಾ ದಿನಗಳನ್ನು ಶಾಲೆಯ ಸೂಚನಾಫಲಕದಲ್ಲಿ ಮಕ್ಕಳಿಗೆ ತಿಳಿಯಪಡಿಸುವುದು.
- ಒಂದು ವಾರಕ್ಕೆ ಬೇಕಾಗುವಷ್ಟು ಅಗತ್ಯ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಮೊಟ್ಟೆ, ಮೊಟ್ಟೆಸೇವಿಸದ ಮಕ್ಕಳಿಗೆ ಬಾಳೆಹಣ್ಣನ್ನು (ಬಾಳೆಹಣ್ಣಿನ ಬದಲಾಗಿ ಉತ್ತಮ ಗುಣಮಟ್ಟದಲ್ಲಿ ಸಿದ್ಧಪಡಿಸಿದಶೇಂಗಾ ಚಿಕ್ಕಿ) ಖರೀದಿಸಿ ಶಾಲೆಯಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಸಂಗ್ರಹಿಸಿಟ್ಟು, ಮಕ್ಕಳಿಗೆನಿಗದಿತ ದಿನಗಳಂದು ವಿತರಿಸುವುದು. ಈ ಸಂಬಂಧ ಸುರಕ್ಷಿತ ಸಂಗ್ರಹಣೆ ಮತ್ತು ವಿತರಣೆಯ ಕ್ರಮಕ್ಕಾಗಿಮುಖ್ಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರು ಖರೀದಿ ಸಮಿತಿಯೊಂದಿಗೆ ಸಮಾಲೋಚಿಸಿ ಸೂಕ್ತವಿಧಾನದಲ್ಲಿ ತಮ್ಮ ವಿವೇಚನೆಯಂತೆ ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಮುಖ್ಯ ಶಿಕ್ಷಕರುಅಗತ್ಯ ಕ್ರಮಕೈಗೊಳ್ಳುವುದು
- ಮೊಟ್ಟೆ ಮತ್ತು ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಸೂಕ್ತ ವಿಧಾನದಲ್ಲಿ ಸಂರಕ್ಷಿಸಿಡಲುಖರೀದಿಸಿದ ಪ್ರಮಾಣಕ್ಕೆ ಅನುಗುಣವಾಗಿ ಪ್ಲಾಸ್ಟಿಕ್ ಎಗ್ ಟ್ರೇ, ಫ್ರೂಟ್ ಟ್ರೇಗಳನ್ನು, ಪ್ಲಾಸ್ಟಿಕ್ ಬಾಕ್ಸ್ /ಡಬ್ಬಿಗಳನ್ನು ಶಾಲಾ ಅಡುಗೆ ಅನುದಾನ ಸಂಚಿತ ನಿಧಿಯಿಂದ ಖರೀದಿಸಲು ಅನುಮತಿ ನೀಡಿದೆ. ಇಲ್ಲವೇಖರೀದಿಸುವ ಅಂಗಡಿಯವರಿಂದ/ಸ್ಥಳೀಯ ದಾನಿಗಳ ನೆರವಿನಿಂದ ಪಡೆದು ಇದರಲ್ಲಿ ಸುರಕ್ಷಿತವಾಗಿದಾಸ್ತಾನು ಗೊಳಿಸಿ ಹಾಳಾಗದಂತೆ ಸಂರಕ್ಷಿಸಿ ನಿರ್ವಹಿಸುವುದು.
- ಯಾವುದೇ ಕಾರಣಕ್ಕೂ ಕ್ಲಸ್ಟರ್ / ಬ್ಲಾಕ್ / ಜಿಲ್ಲಾ ಹಂತದಲ್ಲಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಖರೀದಿಪ್ರಕ್ರಿಯೆ ಮಾಡುವಂತಿಲ್ಲ. ಪ್ರತಿ ಶಾಲೆಯು ಪ್ರತ್ಯೇಕವಾಗಿ ಆಯಾ ಶಾಲೆಯ ಖರೀದಿ ಸಮಿತಿಯಮಾರ್ಗದರ್ಶನದಲ್ಲಿ ಅಗತ್ಯ ಪ್ರಮಾಣದಲ್ಲಿ ಹಾಗೂ ಸಕಾಲದಲ್ಲಿ ಸರ್ಕಾರದ ಪಾರದರ್ಶಕ ಖರೀದಿನಿಯಮಗಳನ್ನು ಪಾಲಿಸಿ, ಖರೀದಿಸಿ, ತಮ್ಮ ಶಾಲಾ ಹಂತದಲ್ಲಿ ಪ್ರತ್ಯೇಕ ಅಧಿಕೃತ ಬಿಲ್ಲು-ವೋಚರ್ಲೆಕ್ಕಪತ್ರಗಳನ್ನು ದೃಢೀಕರಣದೊಂದಿಗೆ ಇಟ್ಟು ನಿರ್ವಹಿಸತಕ್ಕದ್ದು. ಒಂದಕ್ಕಿಂತ ಹೆಚ್ಚು, ಶಾಲೆಗಳುಒಟ್ಟಾಗಿ ಅಥವಾ ಅಕ್ಕಪಕ್ಕದ ಶಾಲೆಗಳು ಜಂಟಿಯಾಗಿ ಖರೀದಿಸುವಂತಿಲ್ಲ. ಆಹಾರ ಪದಾರ್ಥಗಳಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಿ ಉತ್ತಮವಾಗಿರುವುದನ್ನು ಖಚಿತಪಡಿಸಿಕೊಂಡು ಆಹಾರಸುರಕ್ಷತೆಯ ಪಾಲಿಸಬೇಕು
3. ಮೊಟ್ಟೆ /ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಣೆಯ ವಿಧಾನ
ಮೇಲ್ಕಂಡ ವೇಳಾಪಟ್ಟಿಯಂತೆ ಪ್ರತಿ ಮಾಹೆಯಲ್ಲಿ ಮೊಟ್ಟೆಯನ್ನು ವಿತರಿಸುವಾಗ ಸ್ಥಳೀಯ ಜನರಆಹಾರ ಪದ್ಧತಿಯಂತೆ, ವಾರದಲ್ಲಿ ಮೊಟ್ಟೆ ವಿತರಿಸುವ ದಿನಗಳನ್ನು ನಿಗದಿಪಡಿಸಿ ಬಿಸಿಯೂಟದೊಂದಿಗೆವಿತರಣೆ ಮಾಡಲು ಅಗತ್ಯ ನಿರ್ಧಾರವನ್ನು ತೆಗೆದುಕೊಳ್ಳುವಂತೆ ವಿಶೇಷ ಜವಾಬ್ದಾರಿಯನ್ನು ಮುಖ್ಯಶಿಕ್ಷಕರಿಗೆ ನೀಡಿದ್ದು, ಅಗತ್ಯ ಕ್ರಮಕ್ಕಾಗಿ ಸೂಚಿಸಿದೆ. ಇದರಂತೆ ವಾರದಲ್ಲಿ ಗೊತ್ತುಪಡಿಸಿದ ಮೊಟ್ಟೆವಿತರಿಸುವ ದಿನದಂದೇ (ಪ್ರತಿ ವಾರದಲ್ಲಿ ಸಾಮಾನ್ಯವಾಗಿ ಮಂಗಳವಾರ, ಶುಕ್ರವಾರ) ಮೊಟ್ಟೆ ತಿನ್ನುವವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ 50 ಗ್ರಾಂ. ತೂಕಕ್ಕೆ ಕಡಿಮೆ ಇಲ್ಲದ ತಾಜಾ ಮೊಟ್ಟೆ ವಿತರಿಸುವುದು(ಪ್ರಮಾಣ -1) ಹಾಗೂ ಅದೇ ದಿನದಂದು ಮೊಟ್ಟೆ, ಸ್ವೀಕರಿಸದೇ ಇರುವ ಮಕ್ಕಳಿಗೆ ತಪ್ಪದೇ ಮಾಗಿದಉತ್ತಮ ಗುಣಮಟ್ಟದ ರುಚಿಯಾದ ಬಾಳೆಹಣ್ಣನ್ನು (ಪ್ರಮಾಣ 2) ವಿತರಿಸುವುದು, ಬಾಳೆಹಣ್ಣುಸ್ವೀಕರಿಸದೇ ಇರುವ ಇಲ್ಲವೇ ಬಾಳೆಹಣ್ಣಿನ ಬದಲಾಗಿ ಸೇವಿಸಲು ಇಚ್ಚಿಸುವ ಮಕ್ಕಳಿಗೆ ಶೇಂಗಾ-ಬೆಲ್ಲ-ಏಲಕ್ಕಿ ಪುಡಿ ಬೆರೆಸಿ ಸಿದ್ಧಪಡಿಸಿದ ಉತ್ತಮ ಗುಣಮಟ್ಟದ ರುಚಿಯಾದ ಶೇಂಗಾ ಚಿಕ್ಕಿಯನ್ನು (ಪ್ರಮಾಣ -1, 35ಗ್ರಾಂ. ನಿಂದ 40 ಗ್ರಾಂ ನವರಗೆ) ವಿತರಿಸುವ ಕ್ರಮವಹಿಸಲು ಸೂಚಿಸಿದೆ. ಸಾಧ್ಯವಾದರೆ ಶೇಂಗಾಚಿಕ್ಕಿಯನ್ನು ಶಾಲೆಯಲ್ಲಿಯೇ ಅಡುಗೆ ಸಿಬ್ಬಂದಿಯಿಂದ ತಯಾರಿಸಿ ವಿತರಿಸಬಹುದು. ಮಾರುಕಟ್ಟೆಯಲ್ಲಿಖರೀದಿಸುವುದಾದರೆ, ಸ್ಥಳೀಯ ಸ್ತ್ರೀ ಶಕ್ತಿ ಕೇಂದ್ರ ಗೃಹ ಉದ್ಯೋಗ್ ಕೇಂದ್ರಗಳಿಂದ, ಅಂಗನವಾಡಿ-ಶಿಶುವಿಹಾರ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಸರಬರಾಜು ದಾರರಿಂದ ಶುಚಿ-ರುಚಿ, ಸುರಕ್ಷತೆ,ಪ್ರಮಾಣ ಮತ್ತು ಉತ್ತಮ ಆರೋಗ್ಯಕರವಾಗಿ ತಯಾರಿಸಿ ಪ್ಯಾಕ್ ಮಾಡಿರುವ, ಉತ್ತಮ ಗುಣಮಟ್ಟ ಖಾತ್ರಿಪಡಿಸಿಕೊಂಡು ರೂ.6-00 ರ ಘಟಕ ವೆಚ್ಚಕ್ಕೆ ಮೀರದಂತೆ ಖರೀದಿಸಿ ಶಾಲಾ ಮಕ್ಕಳಿಗೆ ವಿತರಿಸುವಕ್ರಮವಹಿಸುವುದು.
- ಮೊಟ್ಟೆ ಮತ್ತು ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ಖರೀದಿಸುವಾಗ ಗುಣಮಟ್ಟವನ್ನು ಪರಿಶೀಲಿಸಿಖಾತ್ರಿಪಡಿಸಿಕೊಂಡು ನಿಗಧಿತ ಪ್ರಮಾಣದಲ್ಲಿ ಖರೀದಿಸಬೇಕು ಹಾಗೂ ವಿತರಿಸಬೇಕು. ಯಾವುದೇದೂರುಗಳಿಗೆ, ಆರೋಪಗಳಿಗೆ ಅವಕಾಶ ನೀಡಬಾರದು ಹಾಗೂ ಅನುದಾನ ದುರ್ಬಳಕೆಯಾಗಬಾರದು.ತರಗತಿವಾರು ಮಕ್ಕಳ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಮೊಟ್ಟೆ ಮತ್ತು ಬಾಳೆಹಣ್ಣು ಅಥವಾಶೇಂಗಾ ಚಿಕ್ಕಿಯನ್ನು ಖರೀದಿಸಿ ವಾರದಲ್ಲಿ ನಿಗದಿಪಡಿಸಿರುವ ದಿನದಂದು ಮಧ್ಯಾಹ್ನದಬಿಸಿಯೂಟದೊಂದಿಗೆ ತರಗತಿಗೆ ಹಾಜರಾದ ವಿದ್ಯಾರ್ಥಿ ಫಲಾನುಭವಿಗಳಿಗೆ ವಿತರಿಸಬೇಕು. ವಾರದಲ್ಲಿಸರಾಸರಿ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಲೆಕ್ಕ ಮಾಡಿ ಖರೀದಿಸಿ ವಿತರಿಸಬೇಕೆ ಹೊರತು ಮಕ್ಕಳದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಖರೀದಿಸಬಾರದು ಹಾಗೂ ಯಾವುದೇ ಅಪವ್ಯಯಕ್ಕೆ ಅವಕಾಶನೀಡಬಾರದು.• ಮೊಟ್ಟೆ ತಿನ್ನುವ ಫಲಾನುಭವಿಗಳಿಗೆ ಬೇಯಿಸಿದ ಹಾಗೂ ಸಿಪ್ಪೆ ಸುಲಿದಿರುವ ಗುಣಮಟ್ಟದತಾಜಾ ಒಂದು ಮೊಟ್ಟೆಯನ್ನು ಹಾಗೂ ಮೊಟ್ಟೆಯನ್ನು ಸೇವಿಸದೇ ಇರುವ ವಿದ್ಯಾರ್ಥಿ ಫಲಾನುಭವಿಗಳಿಗೆಗುಣಮಟ್ಟದ ಒಂದು ಅಥವಾ ಎರಡು ರುಚಿಯಿರುವ ತಾಜಾ ಬಾಳೆಹಣ್ಣನ್ನು (ಸೇವಿಸಲು ಸಿದ್ಧವಾಗಿರುವಮಾಗಿರುವ) ಬಾಳೆಹಣ್ಣನ್ನು ಬದಲಿಗೆ ಶೇಂಗಾ ಚಿಕ್ಕಿಯನ್ನು ಸೇವಿಸುವ ಮಕ್ಕಳಿಗೆ 1 ಬಿಲ್ಲೆ (35 ಗ್ರಾಂ-40ಗ್ರಾಂ) ರೂ. 6.00ರ ಘಟಕ ವೆಚ್ಚಕ್ಕೆ ಮೀರದಂತೆ ಖರೀದಿಸಿ ನಿಗದಿತ ಪ್ರಮಾಣಕ್ಕೆ ಅನುಗುಣವಾಗಿವಿತರಿಸತಕ್ಕದ್ದು. ವಿತರಣೆಯ ನಿಗದಿತ ದಿನದಂದು ಹಾಜರಾದ ವಿದ್ಯಾರ್ಥಿ ಫಲಾನುಭವಿಗಳಿಗೆ ಯಾವುದೇಕಾರಣಕ್ಕೂ ಕೊರತೆ ಆಗದಂತೆ ಮುಖ್ಯಶಿಕ್ಷಕರು ಸೂಕ್ತ ಮುನ್ನೆಚ್ಚರಿಕೆ ವಹಿಸತಕ್ಕದ್ದು.• ಮೊಟ್ಟೆಯನ್ನು ವಿತರಿಸುವಾಗ ಬೇಯಿಸಿದ ಮೊಟ್ಟೆಯನ್ನೇ ವಿತರಿಸಬೇಕು. ಮೊಟ್ಟೆ ಬೇಯಿಸಲು ಪ್ರತ್ಯೇಕಸ್ವಚ್ಛವಾದ ಪಾತ್ರೆಯನ್ನು ಬಳಸತಕ್ಕದ್ದು. ಬೇಯಿಸಿದ ಮೊಟ್ಟೆಯ ಸಿಪ್ಪೆ ಸುಲಿದು ಸಂಗ್ರಹಿಸಿಟ್ಟುವಿಲೇವಾರಿ ಮಾಡಲು ಪ್ರತ್ಯೇಕ ಪಾತ್ರೆಯನ್ನು ಬಳಸುವಂತೆ ಅಡುಗೆ ಸಿಬ್ಬಂದಿಯವರಿಗೆ ಸೂಚಿಸಿದೆ.
- ಮೊಟ್ಟೆಯ ಮತ್ತು ಬಾಳೆಹಣ್ಣಿನ ಸಿಪ್ಪೆ ತ್ಯಾಜ್ಯವನ್ನು ಒಂದೇ ಕಡೆ ಸಂಗ್ರಹಿಸಿಟ್ಟು, ನಂತರ ಸೂಕ್ತವಿಧಾನದಲ್ಲಿ ವಿಲೇವಾರಿ ಮಾಡಲು ಅಗತ್ಯ ವ್ಯವಸ್ಥೆಯನ್ನು ಶಾಲೆಯ ಮುಖ್ಯ ಶಿಕ್ಷಕರು ಹಾಗು ಮುಖ್ಯಅಡುಗೆಯವರು ಕೈಗೊಳ್ಳತಕ್ಕದ್ದು.
4.ದಾಖಲೆ ನಿರ್ವಹಣೆ :
- ಜೂನ್ -2023ರಿಂದ ಮೊಟ್ಟೆ / ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಿಸುವ ಕಾರ್ಯಕ್ರಮಆರಂಭಗೊಳ್ಳುವ ಮೊದಲ ವಾರದಲ್ಲಿ ಮೊದಲ ಹಂತದ ಚಟುವಟಿಕೆಯಾಗಿ, ಶಾಲೆಯ ತರಗತಿವಾರುಎಲ್ಲಾ ವಿದ್ಯಾರ್ಥಿಗಳ ದೇಹದ ತೂಕ ಮತ್ತು ಎತ್ತರವನ್ನು ಅಳತೆ ಮಾಡಿ (Body Height and Weight -Physical Measurement) ದಾಖಲೆಯನ್ನು ಒಂದು ವಹಿಯಲ್ಲಿ ನಿರ್ವಹಿಸುವುದು. ಪ್ರತಿ ತಿಂಗಳ ಕೊನೆಯದಿನಾಂಕದಂದು ಒಂದು ಬಾರಿ ಮೆಷರ್ಮೆಂಟ್ ಮಾಡಿ ರೀಡಿಂಗ್ ತೆಗೆದುಕೊಂಡು, ನಂತರ ಕಾರ್ಯಕ್ರಮಅನುಷ್ಠಾನದ ಅಂತ್ಯದಲ್ಲಿ ಕೊನೆಯ ಚಟುವಟಿಕೆಯಾಗಿ 29ನೇ ಮಾರ್ಚ್-2024 ಮುಗಿದ ಮರುದಿನಅಂತಿಮವಾಗಿ ಮೆಷರ್ಮೆಂಟ್ ಮಾಡಿ ರೀಡಿಂಗ್ ತೆಗೆದುಕೊಳ್ಳುವುದು. ಆರಂಭದ ದಿನ ಮತ್ತು ಕೊನೆಯದಿನದ ಮೆಷರ್ಮೆಂಟ್ ರೀಡಿಂಗ್‌ನ್ನು ಹೋಲಿಕೆ ಮಾಡಿ ನೋಡಿ ಪ್ರಗತಿ ವಿಶ್ಲೇಷಣೆ ಮಾಡಿ ಪ್ರತಿವಿದ್ಯಾರ್ಥಿಯಲ್ಲಿ ಆಗಿರಬಹುದಾದ ಭೌತಿಕ ಬೆಳವಣಿಗೆಯಲ್ಲಾದ ಬದಲಾವಣೆ ಕುರಿತಂತೆ ಅಭಿಪ್ರಾಯದಾಖಲಿಸುವುದು. ಈ ಜವಾಬ್ದಾರಿಯನ್ನು ಆಯಾ ಶಾಲೆಯ ದೈಹಿಕ ಶಿಕ್ಷಕರಿಗೆ, ದೈಹಿಕ ಶಿಕ್ಷಕರು ಇಲ್ಲದಶಾಲೆಗಳಲ್ಲಿ ಆಯಾ ತರಗತಿ ಶಿಕ್ಷಕರಿಗೆ ನೀಡಲಾಗಿದ್ದು, ದಾಖಲೆ ನಿರ್ವಹಿಸುವಂತೆ ಸೂಚಿಸಿದೆ.
- ಪ್ರತಿ ವಾರಕ್ಕೆ ವಿತರಣೆಗೆ ಅಗತ್ಯವಿರುವ ಪ್ರಮಾಣದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಅಥವಾ ಶೇಂಗಾಚಿಕ್ಕಿಯನ್ನು ಮುಂಗಡವಾಗಿ ಪ್ರಾಮಾಣೀಕೃತವಾದ ಸ್ಥಳೀಯ ಮಾರುಕಟ್ಟೆಯ ಅಂಗಡಿ, ವ್ಯಾಪಾರಿ ಸಂಸ್ಥೆ,ಸಮೀಪದ ವ್ಯಾಪಾರಿ ಕೇಂದ್ರ, ಮೊಟ್ಟೆ/ಬಾಳೆಹಣ್ಣು ಮಾರಾಟ ಮಾಡುವ ರೈತರು, ಶೇಂಗಾ ಚಿಕ್ಕಿತಯಾರಿಸುವ ಗೃಹ ಉದ್ಯೋಗ, ಸ್ತ್ರೀ ಶಕ್ತಿ ಕೇಂದ್ರ, ಮುಂತಾದ ಆಹಾರ ತಯಾರಿಕ ಘಟಕಗಳಿಂದ, ಮುಕ್ತಮಾರುಕಟ್ಟೆಯಲ್ಲಿ ಅರ್ಹ ವರ್ತಕರಿಂದ ಗುಣಮಟ್ಟ ಖಾತ್ರಿಪಡಿಸಿಕೊಂಡು ಖರೀದಿಸುವುದು. ಈ ಸಂಬಂಧಅಧಿಕೃತ ಬಿಲ್ಲು ಪಡೆದು ವೋಚರ್ ದಾಖಲೆಗಳನ್ನು ಕಡ್ಡಾಯವಾಗಿ ಇಟ್ಟು ನಿರ್ವಹಿಸುವುದು
- ವಿತರಣೆ ಪೂರ್ವದಲ್ಲಿ ಮೊಟ್ಟೆಯನ್ನು ತಿನ್ನುವ ವಿದ್ಯಾರ್ಥಿ ಫಲಾನುಭವಿಗಳು ಮತ್ತು ಮೊಟ್ಟೆಯನ್ನು ತಿನ್ನದೇ ಬಾಳೆಹಣ್ಣನ್ನು ತಿನ್ನುವ ವಿದ್ಯಾರ್ಥಿ ಫಲಾನುಭವಿಗಳು, ಬಾಳೆಹಣ್ಣು ತಿನ್ನದೇ ಇರುವವವರಿಗೆ ಶೇಂಗಾ ಚಿಕ್ಕಿ ತಿನ್ನುವ ಫಲಾನುಭವಿಗಳು ಎಂಬುದಾಗಿ ಆಯಾ ವಿದ್ಯಾರ್ಥಿಗಳ ಮತ್ತು ಪೋಷಕರ ಒಪ್ಪಿಗೆ ಪಡೆದು ತರಗತಿವಾರು ಆಯಾ ತರಗತಿ ಶಿಕ್ಷಕರು ಕಡ್ಡಾಯವಾಗಿ ಗುರುತಿಸಿ, ಪ್ರತ್ಯೇಕವಾದ ಫಲಾನುಭವಿಗಳಪಟ್ಟಿ ದಾಖಲೆಯನ್ನು ಸಿದ್ಧಪಡಿಸಿಕೊಂಡು ಇದರಂತೆ, ವಿತರಣೆಯ ಅಗತ್ಯ ಕ್ರಮವನ್ನು ನಿರ್ವಹಿಸುವುದು.ಸ್ವೀಕೃತಿ ದಾಖಲೆ ನಿರ್ವಹಿಸುವುದು.ಮೊಟ್ಟೆ ಮತ್ತು ಬಾಳೆ ಹಣ್ಮನ್ನು ಅಥವಾ ಶೇಂಗಾ ಚಿಕ್ಕಿಯನ್ನು ಖರೀದಿಸಿದ ಲೆಕ್ಕಪತ್ರವಿವರಗಳನ್ನು, ಬಿಲ್ಲು -ವೋಚರ್ ದಾಖಲೆಗಳ ವಿವರಗಳನ್ನು ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲಿ ಸಿದ್ಧಪಡಿಸಿ ದಾಖಲೆ ನಿರ್ವಹಿಸಿ ಮೇಲಾಧಿಕಾರಿಗಳ ತಪಾಸಣೆಯ ಸಂದರ್ಭದಲ್ಲಿ ಹಾಜರುಪಡಿಸತಕ್ಕದ್ದು.ಹಾಗೂ ಪ್ರತಿ ಮಾಹೆಯಲ್ಲಿ ಶಾಲಾ ಹಂತದ ಖರೀದಿ ಸಮಿತಿ ಸಭೆ ಸೇರಿದಾಗ ಪರಿಶೀಲನೆಗೆ ಹಾಜರುಪಡಿಸಿ,ದೈನಂದಿನ ಹಾಜರಾತಿಯಂತೆ ತರಗತಿವಾರು ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆ, ಖರೀದಿ, ವಿತರಣೆಯವೆಚ್ಚದ ವಿವರ ಸಲ್ಲಿಸಿ ನಡಾವಳಿಯೊಂದಿಗೆ ದೃಢೀಕರಣ ಸಹಿ ಪಡೆದು ಶಾಲಾ ಹಂತದಲ್ಲಿ ಇಟ್ಟುನಿರ್ವಹಿಸುವುದು ಹಾಗೂ ಇದರ ಪ್ರತಿಯನ್ನು ಸಂಬಂಧಿಸಿದ ತಾಲೂಕು ಪಂಚಾಯತ್ ಅಕ್ಷರದಾಸೋಹಸಹಾಯಕ ನಿರ್ದೇಶಕರ ಕಛೇರಿಗೆ ಪ್ರತಿ ಮಾಹೆ ಮಕ್ಕಳ ಹಾಜರಾತಿಯ ದೃಢೀಕರಣ ದಾಖಲೆ ಹಾಗೂಮಾಸಿಕ ಉಪಯೋಗಿತಾ ಪ್ರಮಾಣ ಪತ್ರದೊಂದಿಗೆ ನಿಗದಿತ ನಮೂನೆಯಲ್ಲಿ ಮುಖ್ಯ ಶಿಕ್ಷಕರುತಪ್ಪದೇ ಸಲ್ಲಿಸುವಂತೆ ಸೂಚಿಸಿದೆ.ವಿತರಣೆಯ ನಿಗದಿತ ದಿನದಂದು ಹಾಜರಾಗಿರುವ ಪ್ರತಿ ವಿದ್ಯಾರ್ಥಿ ಫಲಾನುಭವಿಗೆ ವಿತರಿಸಿದಮೊಟ್ಟೆ/ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ಪೌಷ್ಟಿಕ ಆಹಾರದ ಸ್ವೀಕೃತಿಗಾಗಿ ಪ್ರತ್ಯೇಕ ಸ್ವೀಕೃತಿ ವಹಿ (Student Beneficiary Register for Egg Distribution / Banana fruitDistribution) ಆಯಾ ತರಗತಿಯಲ್ಲಿಟ್ಟು ಸಹಿ ಪಡೆದು ದಾಖಲೆ ನಿರ್ವಹಿಸುವ ಜವಾಬ್ದಾರಿಯನ್ನು ಆಯಾಶಾಲೆಯ ತರಗತಿ ಶಿಕ್ಷಕರಿಗೆ ನೀಡಲಾಗಿದೆ. ಸದರಿ ತರಗತಿವಾರು ಫಲಾನುಭವಿ ಸ್ವೀಕೃತಿ ಸಹಿ-ವಹಿದಾಖಲೆಯನ್ನು ದೃಢೀಕರಣದೊಂದಿಗೆ ಮೇಲಾಧಿಕಾರಿಗಳ ತಪಾಸಣೆಯ ಸಂದರ್ಭದಲ್ಲಿ, ಖರೀದಿಸಮಿತಿಯ ಪರಿಶೀಲನೆಗೆ ಹಾಗೂ ತಾಲ್ಲೂಕು ಪಂಚಾಯತಿಗೆ ಸಲ್ಲಿಸುವ ಬಿಲ್ಲು ಲೆಕ್ಕ ವಿವರಗಳೊಂದಿಗೆಮುಖ್ಯಶಿಕ್ಷಕರು ಹಾಜರುಪಡಿಸತಕ್ಕದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ಆರೋಪಗಳು ಬಾರದಂತೆಜವಾಬ್ದಾರಿ ವಹಿಸುವುದು ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಸಮಿತಿ ರವರಿಗೆ ಇರುತ್ತದೆ.
5.ಪರಿಣಾಮಕಾರಿ ಮೇಲ್ವಿಚಾರಣೆ, ಸೂಕ್ಷ್ಮ ಪರಿಶೀಲನೆ ಮತ್ತು ವರದಿ:•
ಶಾಲಾ ಹಂತದ ಖರೀದಿ, ಸಂರಕ್ಷಣೆ ಮತ್ತು ವಿತರಣೆ, ನಿಗದಿತ ದಿನಗಳಂದು ವಿದ್ಯಾರ್ಥಿ ಫಲಾನುಭವಿಗಳಹಾಜರಾತಿ ಸಂಖ್ಯೆ ಹಾಗೂ ಬಿಸಿಯೂಟದೊಂದಿಗೆ ಫಲಾನುಭವಿಗಳ ಪೌಷ್ಟಿಕ ಆಹಾರ ಸ್ವೀಕೃತಿ, ಗುಣಮಟ್ಟ,ಸ್ವಚ್ಛತೆ ಮತ್ತು ವಿತರಣೆಯ ಪ್ರಮಾಣ ಇತ್ಯಾದಿ ಅಂಶಗಳ ಕುರಿತಾಗಿ ಆಯಾ ತಾಲ್ಲೂಕಿನಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಬಿ.ಆರ್.ಸಿ. ಅಧಿಕಾರಿಗಳು ಜಂಟಿಯಾಗಿ ಒಂದು ಟೀಂ ನಲ್ಲಿ, ತಾಲ್ಲೂಕುಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರುಜಂಟಿಯಾಗಿ ಮತ್ತೊಂದು ಟೀಂನಲ್ಲಿ ಇವರೊಂದಿಗೆ ಸಂಬಂಧಿಸಿದ ಕ್ಲಸ್ಟರ್ ಸಿ.ಆರ್.ಪಿ.ಗಳು ಸಹ ಹಾಜರಿದ್ದು,ಆಗಾಗ್ಗೆ , ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಮೇಲ್ವಿಚಾರಣೆ (Monitoring andSupervision) ಹಾಗೂ ಮಾರ್ಗದರ್ಶನ ಕೈಗೊಳ್ಳುವ ಕ್ರಮಕ್ಕಾಗಿ ಸೂಚಿಸಿದೆ.ಕ್ಲಸ್ಟರ್ ವಲಯದ ಶಾಲೆಗಳಿಗೆ ಸಿ.ಆರ್.ಪಿ.ಗಳು ನಿಯಮಿತವಾಗಿ ಭೇಟಿ ನೀಡಿ ಮೊಟ್ಟೆ/ಬಾಳೆಹಣ್ಣು ಪೌಷ್ಟಿಕಆಹಾರವಾಗಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ನಿಗದಿತ ದಿನಗಳಲ್ಲಿ ದೈನಂದಿನ ಹಾಜರಾತಿಯಂತೆವಿದ್ಯಾರ್ಥಿ ಫಲಾನುಭವಿಗಳಿಗೆ ಇಲಾಖೆಯ ಮಾರ್ಗಸೂಚಿಯಂತೆ ಸಮರ್ಪಕವಾಗಿ ವಿತರಿಸುತ್ತಿರುವಕ್ರಮವನ್ನು ತಪ್ಪದೇ ಪರಿಶೀಲಿಸಬೇಕು (Monitoring and Supervision) ಹಾಗೂ ಈ ಬಗ್ಗೆ ಭೇಟಿ ವರದಿಯನ್ನುಅಂಕಿ-ಅಂಶಗಳು, ಅಭಿಪ್ರಾಯಗಳೊಂದಿಗೆ ಕ್ಷೇತ್ರಶಿಕ್ಷಣಾಧಿಕಾರಿಯವರಿಗೆ ಮತ್ತು ಒಂದು ಪ್ರತಿಯನ್ನು ತಾಲ್ಲೂಕುಪಂಚಾಯತ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ತಪ್ಪದೇ ಸಲ್ಲಿಸುವ ಕ್ರಮಕ್ಕಾಗಿ ಸೂಚಿಸಿದೆ..
- ಕಾರ್ಯಕ್ರಮ ಅನುಷ್ಠಾನಗೊಳಿಸಿದ ಜೂನ್ -2023 ರಿಂದ ಪ್ರಾರಂಭಿಸಿ ಮಾರ್ಚ್- 2024ರ ಅಂತ್ಯದವರೆಗಿನವಿತರಣೆಯ ಅವಧಿಯವರೆಗೆ ಪ್ರತಿ ಮಾಹೆಗಳ ಕೊನೆಯ ದಿನಾಂಕದಂದು ತಾವು ಭೇಟಿ ನೀಡಿದ ಶಾಲೆಗಳ ಪ್ರಗತಿಪರಿಶೀಲನೆಯ ವರದಿಯನ್ನು ಪರಿಶೀಲಿಸಿದ ಶಾಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನ, ಪ್ರಗತಿ, ಪರಿಣಾಮಗಳಕುರಿತಾಗಿ, ಅಂಕಿ ಅಂಶಗಳೊಂದಿಗೆ ಶಾಲಾವಾರು ಕ್ರೋಢೀಕರಿಸಿ, ಸಿದ್ಧಪಡಿಸಿ ಸಂಬಂಧಿಸಿದ ತಾಲ್ಲೂಕಿನಕ್ಷೇತ್ರಶಿಕ್ಷಣಾಧಿಕಾರಿ ಮತ್ತು ಬಿ.ಅರ್.ಸಿ. ಜಂಟಿಯಾಗಿ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ಉಪನಿರ್ದೇಶಕರು(ಆಡಳಿತ)ರವರಿಗೆ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತುಅಕ್ಷರದಾಸೋಹ ಸಹಾಯಕ ನಿರ್ದೇಶಕರು ಜಂಟಿಯಾಗಿ ಒಂದು ಪ್ರತಿಯನ್ನು ಸಂಬಂಧಿಸಿದ ಜಿಲ್ಲೆಯ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರ ಪ್ರಗತಿ ಪರಿಶೀಲನೆಗೆ ಕಡ್ಡಾಯವಾಗಿ ಸಲ್ಲಿಸುವುದು
- ಆಯಾ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ರವರು ಹಾಗೂ ಜಿಲ್ಲಾ ಪಂಚಾಯತ್ ಕಛೇರಿಯ ಶಿಕ್ಷಣಾಧಿಕಾರಿಯವರು (ಅಕ್ಷರದಾಸೋಹ ಕಾರ್ಯಕ್ರಮ) ರವರು ಈ ವರದಿಗಳನ್ನು ಪರಿಶೀಲಿಸಿಕ್ರೋಢೀಕರಿಸಿ,ವಿಶ್ಲೇಷಿಸಿ,ತಾಲ್ಲೂಕುವಾರು, ಶಾಲಾವಾರು ವಿತರಣೆಯ ಪ್ರಗತಿಯ ಅಂಕಿ-ಅಂಶಗಳ ಕ್ರೂಢೀಕರಣಮತ್ತು ಅಭಿಪ್ರಾಯಗಳೊಂದಿಗೆ, ಸಂಬಂಧಿಸಿದ ವಿಭಾಗಗಳ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು (ಕಲಬುರ್ಗಿ ಅವರ ಆಯುಕ್ತರ ಕಛೇರಿ ಮತ್ತು ಧಾರವಾಡ ಅವರ ಆಯುಕ್ತರ ಕಛೇರಿ) ಮತ್ತುವಿಭಾಗೀಯ ಸಹನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಪ್ರತ್ಯೇಕವಾಗಿ ವರದಿಸಲ್ಲಿಸುವಂತೆ ಸೂಚಿಸಿದೆ.ಇದರ ಒಂದು ಪ್ರತಿಯನ್ನು ನಿರ್ದೇಶಕರು, ಪ್ರಧಾನಮಂತ್ರಿ ಪೋಷಣ್ ಶಕ್ತಿನಿರ್ಮಾಣ್ – ಮಧ್ಯಾಹ್ನ ಉಪಹಾರ ಯೋಜನೆ, ಶಾಲಾ ಶಿಕ್ಷಣ ಇಲಾಖೆ ಇವರ ಮಾಹಿತಿಗೆ ಹಾಗೂ ಮುಂದಿನವಿಶ್ಲೇಷಣೆಗಾಗಿ ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಮೂಲಕ ಪ್ರತಿಮಾಹೆ ಸಲ್ಲಿಸುವಂತೆ ಸೂಚಿಸಿದೆ.ಮೇಲ್ಕಂಡ ಮಾರ್ಗಸೂಚಿಯಂತೆ ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಿ ಸೂಕ್ತ ಮೇಲ್ವಿಚಾರಣೆಯೊಂದಿಗೆ ಯಶಸ್ವಿಗೊಳಿಸುವಂತೆ ಹಾಗೂ ಅಂತಿಮವಾಗಿ ಈ ಕಛೇರಿಗೆ ಸಮಗ್ರವಾಗಿ ವರಗಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ,ಕಲಬುರ್ಗಿ ಮತ್ತು ಧಾರವಾಡ ಹಾಗೂ ವಿಭಾಗೀಯ ಸಹನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಇವರಿಗೆತಿಳಿಸಿದೆ. ಹಾಗೂ ಸಂಬಂಧಿಸಿದ ಜಿಲ್ಲೆಗಳ ಎಲ್ಲಾ ಹಂತದ ಅಧಿಕಾರಿಗಳು ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಸೂಕ್ತ ಕಾರ್ಯ ಸಮನ್ವಯತೆಯೊಂದಿಗೆ ಭಾಗವಹಿಸಿ ಸರ್ಕಾರದ ಆಶಯದಂತೆ ಮಕ್ಕಳಲ್ಲಿರುವ ಅನಿಮೀಯ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಿ ಉತ್ತಮ ಆರೋಗ್ಯ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.