ಪರಿಸರದ ಸುಸ್ಥಿರ ಬೆಳವಣಿಗೆಯಲ್ಲಿ ಶಾಲಾ ಮಕ್ಕಳ ಪಾತ್ರ ಪ್ರಮುಖವಾಗಿದೆ. ಶಾಲಾ ಹಂತದಲ್ಲಿ ಶಿಕ್ಷಕರು ಪರಿಸರ ಸಂರಕ್ಷಣೆಯ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆ ಮಾಡಲು ಪ್ರೇರೇಪಿಸಲು ವಾರ್ಷಿಕ ಯೋಜನಾ ಅನುಮೋದನ ಮಂಡಳಿಯಿಂದ ಪ್ರಾಥಮಿಕ ಶಾಲೆಗಳಿಗೆ ರೂ.2000/- ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.5000/- ಹಾಗೂ ಪ್ರೌಢಶಾಲೆಗಳಿಗೆ ರೂ.7500/- ಅನುದಾನ ಅನುಮೋದನೆಯಾಗಿರುತ್ತದೆ.
ಯೋಜನೆಯ ಗುರಿಗಳು ಮತ್ತು ಉದ್ದೇಶಗಳು: –
ಪರಿಸರ ಸುಧಾರಣೆಗಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು.
ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಪರಿಸರ ಸಂರಕ್ಷಣೆಯ ಜವಬ್ದಾರಿಯನ್ನು ಅವರಲ್ಲಿ ಮೂಡಿಸುವುದು.
ವಿದ್ಯಾರ್ಥಿಗಳಲ್ಲಿ ಮರುಬಳಕೆ ಬಗ್ಗೆ , ಪರಿಸರ ಸ್ನೇಹಿ ಅಭ್ಯಾಸ ಬೆಳೆಸುವುದು.
ಗಿಡಮರಗಳನ್ನು ಬೆಳೆಸುವುದರ ಮೂಲಕ ಸುತ್ತಲಿನ ಪರಿಸರ ಹಸಿರಾಗಿಡಲು ಪ್ರೇರೇಪಿಸುವುದು.
ಕಾರ್ಯಕ್ರಮಗಳು
- ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ದತ್ತು ನೀಡಿ ಪೋಷಿಸಲು ಪ್ರೇರೇಪಿಸುವುದು.
- ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು.
- ಪ್ಲಾಸ್ಟಿಕ್ ಬಳಕೆ ತ್ಯಜಿಸುವುದು,ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿ ಮಾಡುವುದು.
- ಮಕ್ಕಳಲ್ಲಿ ಸಮತೋಲನ ಆಹಾರ ಬಳಕೆಯ ಅಭ್ಯಾಸ ಮೂಡಿಸುವುದು.
- ಅಡುಗೆ ಮನೆಯಿಂದ ಹೊರಹೋಗುವ ನೀರಿನಿಂದ ಕೈತೋಟ ನಿರ್ಮಾಣ.
*ತ್ಯಾಜ್ಯ ವಿಲೇವಾರಿ ಬಗ್ಗೆ ಅರಿವು ಮೂಡಿಸಿ,ಶಾಲೆಯನ್ನು ಸ್ವಚ್ಛವಾಗಿಡುವುದು. - ಹವಮಾನ ವೈಪರೀತ್ಯದಿಂದ ಉಂಟಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸುವುದು.
- ಘೋಷಣೆಗಳೊಂದಿಗೆ ಜಾಥಾ ಹೊರಡುವುದು. ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು
- ನೀರಿನ ಮಿತಬಳಕೆ ಹಾಗೂ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು.
- ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ ಸ್ಪರ್ಧೆ, ಕವನ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರ ರಚನೆ, ವ್ಯಂಗ್ಯಚಿತ್ರ, ರಸಪ್ರಶ್ನೆ, ಚರ್ಚಾ ಸ್ಪರ್ಧೆ ಘೋಷವಾಕ್ಯ ರಚಿಸುವ ಏರ್ಪಡಿಸುವುದು.
- ಶಕ್ತಿ ಉಳಿತಾಯದ ಬಗ್ಗೆ ಅರಿವು ಮೂಡಿಸುವುದು.
- ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು.
*ವನ ಭೇಟಿ ಪ್ರಕೃತಿ ನಡಿಗೆ ಏರ್ಪಡಿಸುವುದು.
ಅನುದಾನ ಬಳಕೆಯ ವಿವರ