NPS ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಮತ್ತು ಕುಟುಂಬ ಪಿಂಚಣಿ ಸೌಲಭ್ಯ ವಿಸ್ತರಿಸುವ ಬಗ್ಗೆ ಮಾಹಿತಿ.
ಪ್ರಿಯ ಮಿತ್ರರೇ,
ಕರ್ನಾಟಕ ಸರ್ಕಾರವು NPS ನೌಕರರಿಗೆ ಮರಣ ಮತ್ತು ನಿವೃತ್ತಿ ಉಪಧನ(DCRG)ವನ್ನು ಆದೇಶ ಹೊರಡಿಸಿದ್ದು,ನಾವೆಲ್ಲರೂ ಸ್ವಾಗತಿಸೋಣ.
ಇದು NPS ನೌಕರರ ಫ್ರೀಡಂ ಪಾರ್ಕ್ ಚಲೋ,ರಕ್ತಕೊಟ್ಟೇವು ಪಿಂಚಣಿ ಬಿಡೇವು ,ಬೆಳಗಾವಿ ಚಲೋ ಹೋರಾಟಗಳ ಫಲವೆಂದರೆ ತಪ್ಪಾಗಲಾರದು.
ಹೋರಾಟಗಳನ್ನು ಮಾಡದೇ ಪಿಂಚಣಿ ಪಡೆಯುವುದು ದುಸ್ಸಾಧ್ಯ ಎಂಬ ಮಾತನ್ನು ಒತ್ತಿಹೇಳುತ್ತಾ,
ಸದರಿ ಆದೇಶದಲ್ಲಿ ತಿದ್ದುಪಡಿ ತಂದು NPS ಶಾಸನ ರಾಜ್ಯದಲ್ಲಿ ಅನುಷ್ಠಾನಗೊಂಡ ದಿನದಿಂದಲೇ DCRG ಅನ್ವಯವಾಗುವಂತೆ ತಿದ್ದುಪಡಿ ಮಾಡುವುದರ ಬಗ್ಗೆ ನಿರಂತರ ಆಂದೋಲನಗಳನ್ನು
ಕ.ರಾ.ಸ.ನೌ.ಸಂಘ
ಹಾಗೂ NPS ವಿರುದ್ಧ ಹೋರಾಟ ಮಾಡುತ್ತಿರುವ ಸಂಘಟನೆಗಳು,ನಮ್ಮ ಶಿಕ್ಷಕರ ಸಂಘಟನೆಗಳೊಂದಾಗಿ
ನಿಶ್ಚಿತ ಪಿಂಚಣಿ ಪಡೆಯುವ ದೀರ್ಘಪ್ರಯಾಣಕ್ಕೆ ಈ ಆದೇಶವನ್ನು ಪ್ರಥಮ ಸೋಪಾನವಾಗಿಸೋಣ
ಎಂಬ ಕಳಕಳಿಯೊಂದಿಗೆ.