ಕೋವಿಡ್- 19 ರೋಗದಿಂದ ಸೋಂಕಿತ ರಾಜ್ಯ ಸರ್ಕಾರಿ ನೌಕರರಿಗೆ ಸಂದರ್ಭಾನುಸಾರ ವಿಶೇಷ ಸಾಂದರ್ಭಿಕ ರಜೆಯನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರವು ಈ ಕೆಳಕಂಡಂತೆ ಮಂಜೂರು ಮಾಡಬಹುದಾಗಿದೆ.
- ಸರ್ಕಾರಿ ನೌಕರರ ಅಥವಾ ಆತನ ಕುಟುಂಬದ ಸದಸ್ಯರು ಕೋವಿಡ್ – 19 ಸಾಕ್ರಮಿಕ ರೋಗಕ್ಕೆ ಒಳಪಟ್ಟ ಸಂದರ್ಭದಲ್ಲಿ ಹಾಗೂ ಸರ್ಕಾರಿ ನೌಕರನು ವಾಸಿಸುವ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸಿ ಸಾರ್ವಜನಿಕ ಸಂಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸಿದ್ದಲ್ಲಿ ಅಂತಹ ಸರ್ಕಾರಿ ನೌಕರನಿಗೆ ಗರಿಷ್ಠ 7 ದಿನಗಳ (ಏಳು ದಿನಗಳು) ವಿಶೇಷ ಸಾಂದರ್ಭಿಕ ರಜೆಯನ್ನು ಮಜೂರು ಮಾಡಬಹುದು.
- ಸದರಿ ರಜೆಯ ಮೇಲಿರುವ ಸರ್ಕಾರಿ ನೌಕರನು ಕಚೇರಿಯ ತುರ್ತು ಕೆಲಸಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ದೂರವಾಣಿ, ಆನ್ ಲೈನ್ ಮೂಲಕ ನೀಡುವ ಸೂಚನೆಗಳನ್ನು ಪಾಲಿಸುವುದಕ್ಕೆ ಬದ್ಧನಾಗಿರತಕ್ಕದ್ದು.