ಮಧ್ಯಾವಧಿಯ ರಜೆ ಅಥವಾ ಬೇಸಿಗೆ ರಜೆಯ ಪ್ರಾರಂಭದ ಹಿಂದಿನ ದಿನ ಹಾಗೂ ರಜೆ ಮುಗಿದು ಶಾಲೆ
ಪ್ರಾರಂಭವಾದ ದಿವಸ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವ ಕುರಿತು ಸ್ಪಷ್ಠೀಕರಣ
ಮಧ್ಯಾವಧಿಯ ರಜೆ ಅಥವಾ ಬೇಸಿಗೆ ರಜೆಯ ಪ್ರಾರಂಭದ ಹಿಂದಿನ ದಿನ
ಹಾಗೂ ರಜೆ ಮುಗಿದು ಶಾಲೆ ಪ್ರಾರಂಭವಾದ ದಿನ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕೆ ಅಥವಾ ದೀರ್ಘರಜೆಯ
ಪ್ರಾರಂಭದ ಹಿಂದಿನ ದಿನ ಅಥವಾ ರಜೆ ಮುಗಿದು ಶಾಲೆ ಪುನರಾರಂಭದ ದಿನ ಇವೆರಡರಲ್ಲಿ ಒಂದು ದಿನ ಹಾಜರಿದ್ದರೆ
ಸಾಕೇ ಎನ್ನುವ ಬಗ್ಗೆ ಶಿಕ್ಷಕರಲ್ಲಿ ಗೊಂದಲವಿದ್ದು ಈ ಬಗ್ಗೆ ಸ್ಪಷ್ಠೀಕರಣ ನೀಡುವಂತೆ ಮೇಲಿನ ಉಲ್ಲೇಖಿತ ಪತ್ರದಲ್ಲಿ ಶ್ರೀ ರಾಮಕೃಷ್ಣ ಶಿರೂರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ (ರಿ) ಬೆಂಗಳೂರು, ಮೂಡಬಿದ್ರೆ
ತಾಲ್ಲೂಕು, ಆದ ನೀವು ಮನವಿಯನ್ನು ಸಲ್ಲಿಸಿರುತ್ತೀರಿ ಅದರನ್ವಯ ಈ ಕೆಳಗಿನಂತೆ ಸ್ವಪೀಕರಣ ನೀಡಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮದನ್ವಯ ಮಧ್ಯಾವಧಿಯ ರಜೆಯ ಅಥವಾ ಬೇಸಿಗೆ ರಜೆಯ ಪ್ರಾರಂಭದ
ಹಿಂದಿನ ದಿನ ಹಾಗೂ ರಜೆ ಕಳೆದು ಶಾಲೆ ಪ್ರಾರಂಭದ ದಿನ ಶಿಕ್ಷಕರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಗಲೇಬೇಕು, ಒಂದು
ವೇಳೆ ಅನಿವಾರ್ಯವಾಗಿ ಈ ದಿನಗಳಂದು ಗೈರುಹಾಜರಾದಲ್ಲಿ ಈ ದಿನಗಳಂದು ಅವರ ಖಾತೆಯಲ್ಲಿರುವ ಗಳಿಕೆ ರಜೆ
ಪರಿವರ್ತಿತ ರಜೆಯನ್ನು ಬಳಸಬಹುದಾಗಿದೆ. ಸಾಂದರ್ಭಿಕ ರಜೆಯನ್ನು ಹಾಕಲು ಅವಕಾಶವಿರುವುದಿಲ್ಲ. ಗಳಿಕೆ ರಜೆ/ಪರಿವರ್ತಿತ ರಜೆಯನ್ನು ದೀರ್ಘವಧಿ ರಜೆಯ ಪ್ರಾರಂಭದ ಹಿಂದಿನ ದಿನ ಬಳಸಿದಲ್ಲಿ ದೀರ್ಘವಧಿ ರಜೆ ಮುಗಿದು
ಶಾಲಾ ಪುನರಾರಂಭದ ದಿನ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ದೀರ್ಘವಧಿ ರಜೆಯು ಸೇರಿದಂತೆ
ಕರ್ತವ್ಯಕ್ಕೆ ಹಾಜರಾಗುವ ದಿನಾಂಕದವರೆಗೆ ಗಳಿಕೆ ರಜೆ/ಪರಿವರ್ತಿತ ರಜೆಯೆಂದು ಪರಿಗಣಿಸಲ್ಪಡುತ್ತದೆ.
ದೀರ್ಘವಧಿ ರಜೆಯ ಪ್ರಾರಂಭದ ಹಿಂದಿನ ದಿನ ಗಳಿಕೆರಜೆ/ಪರಿವರ್ತಿತರಜೆ ಬಳಸಿದಲ್ಲಿ ದೀರ್ಘವಧಿ ರಜೆ ಮುಗಿದು
ಶಾಲೆ ಪುನರಾರಂಭದ ದಿನ ಕರ್ತವ್ಯಕ್ಕೆ ಹಾಜರಾಗಿದ್ದರೆ ದೀರ್ಘವಧಿ ರಜೆಯ ಪ್ರಾರಂಭದ ಹಿಂದಿನ ದಿನ ಮಾತ್ರ ಗಳಿಕೆ ರಜೆ/
ಪರಿವರ್ತಿತ ರಜೆಯೆಂದು ಪರಿಗಣಿಸಲ್ಪಡುತ್ತದೆ
ದೀರ್ಘವಧಿ ರಜೆಯ ಪ್ರಾರಂಭದ ಹಿಂದಿನ ದಿನ ಕರ್ತವ್ಯಕ್ಕೆ ಹಾಜರಾಗಿದ್ದು ದೀರ್ಘವಧಿ ರಜೆಯು
ಮುಗಿದು ಶಾಲೆ ಪುನರಾರಂಭದ ದಿವಸ ಗಳಿಕೆ ರಜೆ/ಪರಿವರ್ತಿತ ರಜೆ ಬಳಿಸಿದರೆ ಆ ಒಂದು ದಿವಸ ಮಾತ್ರ
ಗಳಿಕೆರಜೆ/ಪರಿವರ್ತಿತ ರಜೆಯೆಂದು ಪರಿಗಣಿಸಲ್ಪಡುತ್ತದೆ ಹಾಗೂ ದೀರ್ಘವಧಿರಜೆಯು ಗಳಿಕೆ ರಜೆ/ಪರಿವರ್ತಿತ ರಜೆಯೆಂದು
ಪರಿಗಣಿಸಲ್ಪಡುವುದಿಲ್ಲ.