ದಕ್ಷಿಣ ಕನ್ನಡ ಜಿಲ್ಲೆ ಶಾಲಾ ಪ್ರಾರಂಭದ ಬಗ್ಗೆ ಮಾಹಿತಿ ಇಲ್ಲಿದೆ

ದಕ್ಷಿಣ ಕನ್ನಡ ಜಿಲ್ಲೆ ಶಾಲಾ ಪ್ರಾರಂಭದ ಬಗ್ಗೆ ಮಾಹಿತಿ ಇಲ್ಲಿದೆ.

IMG 20210913 WA0003 min

ಈ ದಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ, ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ‍ಮತ್ತು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಶಾಲಾರಂಭದ ಬಗ್ಗೆ ಚಚಿ೯ಸಲಾಯಿತು.

ರಾಜ್ಯ ಸಕಾ೯ರದ SOP ಮತ್ತು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ದಿನಾಂಕ 17.09.2021 ರಿಂದ 8 ರಿಂದ 10 ನೇ ತರಗತಿಗಳನ್ನು ಮತ್ತು ದಿನಾಂಕ 20.09.2021 ರಿಂದ 6 ರಿಂದ 7 ನೇ ತರಗತಿಗಳನ್ನು ಆರಂಭಿಸಲು ಮಾನ್ಯ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುತ್ತಾರೆ. ಈ ಬಗ್ಗೆ ಶಾಲಾ ಹಂತದಲ್ಲಿ ಸರಿಯಾದ ಪೂರ್ವಸಿದ್ಧತೆ ಮಾಡಲು ತಿಳಿಸಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಶಾಲೆಗಳಿಗೆ ತಿಳಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಯಿತು. ಇಲಾಖೆಯಿಂದ ಅಧಿಕೃತ ಆದೇಶ ಸದ್ಯದಲ್ಲೇ ಹೊರಬೀಳಲಿದೆ

ಅಧ್ಯಕ್ಷರು/ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ದಕ್ಷಿಣ ಕನ್ನಡ ಜಿಲ್ಲೆ

Sharing Is Caring:

Leave a Comment