ಆತ್ಮೀಯ ಶಿಕ್ಷಕ ಮಿತ್ರರೇ,
ನೀವು ವೇತನ ಪಡೆಯುತ್ತಿರುವ ಬ್ಯಾಂಕ್ಗಳಲ್ಲಿ PMJJBY ಮತ್ತು PMSBY ವಿಮಾಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಿ. ಇದರ ಮಾಹಿತಿಗಳನ್ನು HRMS ನಲ್ಲಿ ಇಂದೀಕರಿಸಲು ಅವಕಾಶ ಕಲ್ಪಿಸಲಾಗಿದೆ.ಅಲ್ಲದೆ ನೀವು ವೇತನ ಪಡೆಯುತ್ತಿರುವ ಖಾತೆಯನ್ನು ವೇತನ ಖಾತೆಯಾಗಿ ಪರಿವರ್ತಿಸಿ ಬ್ಯಾಂಕ್ ಗಳು ನೀಡುವ ವೇತನ ಖಾತೆಯ ಸೌಲಭ್ಯಗಳನ್ನು ಪಡೆದುಕೊಳ್ಳಿ
ಎಲ್ಲಾ ಉದ್ಯೋಗಿಗಳು ಮತ್ತು ಡಿಡಿಓಗಳು ಗಮನಿಸಬೇಕಾದ ಪ್ರಮುಖ ವಿಷಯ :
- ಎಲ್ಲಾ ಪ್ರಮುಖ ಬ್ಯಾಂಕ್ಗಳಲ್ಲಿ ಒದಗಿಸುತ್ತಿರುವ ವೇತನ ಖಾತೆಯ ಯೋಜನೆಯ ಲಾಭವನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆ ಯೋಜನೆಯಡಿ ಮಾರ್ಪಡಿಸಲು
ಈ ಮೂಲಕ ತಿಳಿಸಿದೆ. - ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:06/09/2023 ರನ್ವಯ, ಪ್ರತಿ ಉದ್ಯೋಗಿಗಳಿಗೆ ಎರಡು ಅಮೂಲ್ಯವಾದ ವಿಮಾ ಯೋಜನೆಗಳಾದ – ಪ್ರಧಾನ ಮಂತ್ರಿ
ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY ಯನ್ನು ತೆರೆಯಲು ಕೋರಲಾಗಿದೆ. ಈ ಯೋಜನೆಯನ್ನು ತಮ್ಮ ವೇತನ
ಖಾತೆ ಬ್ಯಾಂಕ್ ಮುಖಾಂತರ ಪಡೆಯಬಹುದಾಗಿದೆ. ಹೆಚ್ಚಿನ ವಿವರಕ್ಕಾಗಿ https://www.jansuraksha.gov.in/ ಲಿಂಕ್ ಅನ್ನು ಪ್ರವೇಶಿಸಿ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ)
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ವಾರ್ಷಿಕ ರೂ.436/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ
ಪಾವತಿಸಲ್ಪಡುತ್ತದೆ) ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2.00 ಲಕ್ಷಗಳ ವಿಮಾ ಮೊತ್ತದ ನೆರೆವು. ಈ ಯೋಜನೆಯು 18 ರಿಂದ 50
ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ)
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಇದು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ರೂ. 20/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ
ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ. ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ. 2.00ಲಕ್ಷಗಳು ಹಾಗೂ ಶಾಶ್ವತ
ಭಾಗಶಃ ಅಂಗವೈಕಲ್ಯಕ್ಕೆ ರೂ.1.00 ಲಕ್ಷಗಳ ವಿಮಾ ಮೊತ್ತದ ನರೆವು ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ. ಇವೆರಡು ಭಿಮಾ ಯೋಜನೆಗಳು
ನಿಮ್ಮ ಕುಟುಂಬಕ್ಕೆ ಬಹಳ ಉಪಯುಕ್ತವಾಗುವುದು.
- ಆರ್ಥಿಕ ಇಲಾಖೆ ಪತ್ರ ಸಂಖ್ಯೆ.: FD-CAM/160/2023 ದಿನಾಂಕ:02/11/2023 ರನ್ವಯ, ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ ವಿಮಾ ವಿವರಗಳನ್ನು ಹೆಚ್ಆರ್ಎಂಎಸ್ ಇಎಸ್ಎಸ್ ಲಾಗಿನ್ https://hrmsess.karnataka.gov.in/ನ ಪೋರ್ಟಲ್ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅದರಂತೆ ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು
ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್ಎಸ್ ಪೋರ್ಟಲ್ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಸದರಿ ಪ್ರಗತಿಯನ್ನು ಅಪರ ಮುಖ್ಯ
ಕಾರ್ಯದರ್ಶಿಗಳು, ಆರ್ಥಿಕ ಇಲಾಖೆರವರು ವೀಕ್ಷಿಸುತ್ತಿರುತ್ತಾರೆ. - ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್ಡೇಟ್ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು
ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು. - ಎಲ್ಲಾ ಉದ್ಯೋಗಿಗಳು ESS ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು, ತಮ್ಮದೇ ಆದ ಪಾವತಿ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್ಲೋಡ್
ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಬೇಕು. ತಮ್ಮ ಎಲ್ಲಾ ಉದ್ಯೋಗಿಗಳು 1ನೇ ಜನವರಿ 2024 ರ ಮೊದಲು ಈ ಪೋರ್ಟಲ್ನಲ್ಲಿ
ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.
ಬ್ಯಾಂಕ್ ಖಾತೆಯನ್ನು ವೇತನ ಖಾತೆಯಾಗಿ ಪರಿವರ್ತಿಸುವುದರ ಪ್ರಯೋಜನಗಳು
- Zero balance account and free unlimited
transactions across ATMs of any Bank. - Complimentary Personal Accident Insurance
(Death) cover up to Rs. 20 Lakhs. - Complimentary Air Accident Insurance (Death)
cover up to Rs. 30 Lakhs. - Avail of Personal Loans, Home Loans, Car
Loans and Education Loans at attractive rates
and upto 50% off on processing fees. - Upto 25% off on locker charges
- Avail of Auto-Sweep to create e-MODS (Multi
Option Deposits) and earn higher interest. - Avail of Demat & Online Trading A/c at the
time of on-boarding itself. - Free issuance of Drafts, Multi City Cheques,
SMS Alerts. Free online NEFT/RTGS. - Overdraft equivalent to 2 Months Net Salary
(Currently available for select customers only) - Earn points on various transactions through
our loyalty program SBI Rewardz. - Host of regular offers on Debit Cards and
YONO by SBI - SBI Rishtey (Family Savings Account): For
family members of Salary Package Customer
with differential benefits
Note 1: Benefits under salary package are subject to
classification of Savings Bank Account to respective
Salary Package and Variant in banks system. All Customers Drawing Salary through SBI Accounts are
required to apply along with proof of Salary and
Proof of employment to their home branch for
conversion of savings account to respective Salary
Package/Variant (Conversion Forms).
Note 2: In case, monthly salary is not credited into
the account for more than 3 consecutive months,
the special features offered under Salary Package
will stand withdrawn and the account shall be
treated as Normal Savings Account under our
standard charges structure, and all charges shall be
levied and applied as applicable to normal savings
accounts.