ಗೆ
ಮಾನ್ಯ ಜಂಟಿ ನಿರ್ದೇಶಕರು,
ಮಧ್ಯಾಹ್ನದ ಉಪಹಾರ ಯೋಜನೆ,
ಬೆಂಗಳೂರು.
ಸನ್ಮಾನ್ಯರೇ,
ವಿಷಯ: ಮಧ್ಯಾಹ್ನದ ಉಪಹಾರ ಯೋಜನೆಗೆ ಸಂಬಂಧಿಸಿದಂತೆ ಸಾದಿಲ್ವಾರು ವೆಚ್ಚ ಹಾಗೂ ಅಡುಗೆ ತಯಾರಿಕಾ ವೆಚ್ಚವನ್ನು ಮರು ಪರಿಷ್ಕರಿಸಿ, ಹೆಚ್ಚಿಸುವ ಕುರಿತು.
ಉಲ್ಲೇಖ: ಸಂಖ್ಯೆ: ಎಂಡಿ/ಮ.ಉ.ಯೋ./ಅಡುಗೆ ತಯಾರಿಕಾ ವೆಚ್ಚ01/2021-22
ದಿನಾಂಕ: 23-06-2020
ಮೇಲಿನ ವಿಷಯದನ್ವಯ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, 2020-21ನೇ
ಸಾಲಿನ ಮಧ್ಯಾಹ್ನದ ಉಪಹಾರ ಯೋಜನೆಯಡಿ ನೀಡುವ ಅಡುಗೆ ತಯಾರಿಕಾ ವೆಚ್ಚವನ್ನು ರಾಜ್ಯ ಸರ್ಕಾರವೂ ಮೇಲಿನ ಉಲ್ಲೇಖದಂತೆ ಪರಿಷ್ಕರಿಸಿ ಆದೇಶಿಸಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ
ಸಂಬಂಧಿಸಿದಂತೆ ಈಗ ಶಾಲೆಗಳಿಗೆ ನೀಡುತ್ತಿರುವ ಸಾದಿಲ್ವಾರು ವೆಚ್ಚ ಹಾಗೂ ಅಡುಗೆ ತಯಾರಿಕಾ
ವೆಚ್ಚವೂ ಬಹಳಷ್ಟು ಕಡಿಮೆಯಾಗಿದ್ದು, ಜೊತೆಗೆ ಮಾರುಕಟ್ಟೆಯಲ್ಲಿ ಅಡುಗೆ ತಯಾರಿಕೆಯ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಕಾರಣ ಮಾನ್ಯರವರು ಸಾದಿಲ್ವಾರು ವೆಚ್ಚ ಹಾಗೂ
ಅಡುಗೆ ತಯಾರಿಕಾ ವೆಚ್ಚವನ್ನು ಪುನರ್ ಪರಿಶೀಲಿಸಿ, ಮೊತ್ತವನ್ನು ಪರಿಷ್ಕರಿಸಿ ಹೆಚ್ಚಿಸಬೇಕೆಂದು ಈ
ಮೂಲಕ ತಮ್ಮಲ್ಲಿ ಒತ್ತಾಯಿಸುತ್ತೇವೆ.