ಶಿಕ್ಷಕರ ವರ್ಗಾವಣಾ ವಿಧೇಯಕ ತಿದ್ದುಪಡಿ ಇಂದು ವಿಧಾನಸಭೆಯಲ್ಲಿ ಇದೀಗ ತಾನೇ ಅಂಗೀಕಾರಗೊಂಡಿದೆ.
ತಿದ್ದುಪಡಿ ವಿಧೇಯಕವನ್ನು ಮಂಡಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಬಿ.ಸಿ. ನಾಗೇಶ್ ಸಾಹೇಬರಿಗೆ ತುಂಬು ಹೃದಯದ ಧನ್ಯವಾದಗಳು ಈ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಶಂಭುಲಿಂಗನಗೌಡ ಪಾಟೀಲ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ನುಗ್ಗಲಿ ಹಾಗೂ ರಾಜ್ಯ ಕೋಶಾಧ್ಯಕ್ಷರಾದ ಶ್ರೀ ಸುರೇಶ ಶೆಡಶಾಳ ಅವರು ತಿದ್ದುಪಡಿ ವಿಧೇಯಕ ಮಂಡನೆಯಾಗುವ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಶಿಕ್ಷಕರ ವರ್ಗಾವಣೆ : ಮತ್ತಷ್ಟು ನೆಮ್ಮದಿಯ ಬದಲಾವಣೆಗಳು.
ಆತ್ಮೀಯ ಶಿಕ್ಷಕ ಬಂಧುಗಳೇ,
ಇಂದು ಮಾನ್ಯ ಶಿಕ್ಷಣ ಸಚಿವರಿಂದ ಸದನದಲ್ಲಿ ಮಂಡಿಸಲ್ಪಟ್ಟು,ಅನುಮೋದನೆಗೊಂಡ ‘ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ (ತಿದ್ದುಪಡಿ)ಯು, ವರ್ಗಾವಣೆ ಆಕಾಂಕ್ಷಿಗಳಿಗೆ ಮತ್ತಷ್ಟು ನೆಮ್ಮದಿಯನ್ನು ತಂದುಕೊಟ್ಟಿದೆ.
🙂🙂🙂 25%ಗೂ ಅಧಿಕ ಖಾಲಿ ಹುದ್ದೆ ಇರುವ ಶೈಕ್ಷಣಿಕ ಬ್ಲಾಕ್ (ತಾಲೂಕು) ನ ಶಿಕ್ಷಕರಿಗೆ ನಿಬಂಧನೆಗಳೊಂದಿಗೆ ವರ್ಗಾವಣೆಗೆ ಅವಕಾಶ
🎯 ಒಂದೇ ವೃಂದ & ತಾಲೂಕಿನಲ್ಲಿ 10 ವರ್ಷ ಸೇವೆ ಸಲ್ಲಿಸಿದವರಿಗೆ,
ಅಥವಾ
🎯 ಒಂದೇ ತಾಲೂಕಿನಲ್ಲಿ ವಿವಿಧ ವೃಂದ (AM,HM) ಗಳಲ್ಲಿ 15 ವರ್ಷ ಸೇವೆ ಸಲ್ಲಿಸಿದವರಿಗೆ ಅವಕಾಶ
🙂 ಕನಿಷ್ಠ ಸೇವಾವಧಿ:”ಪ್ರಸ್ತುತ ಶಾಲೆಯಲ್ಲಿ 3 ವರ್ಷ ಸೇವೆ ಸಲ್ಲಿಸಿರಬೇಕು” ಎಂಬ ನಿಯಮವನ್ನು ಸುಧಾರಿಸಿ, ಹೆಚ್ಚುವರಿ ಮಾಡಿದ ಸಂದರ್ಭದಲ್ಲಿ ಹಿಂದಿನ ಶಾಲಾ ಸೇವೆಯನ್ನು ಪರಿಗಣಿಸುವುದು.
🙂 ನಿರ್ದಿಷ್ಟ ಹುದ್ದೆಗಳ ಆಧ್ಯತಾ ಪಟ್ಟಿಯನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸುವುದು.
🙂 ವರ್ಗಾವಣೆ ಮಿತಿಯಿಂದ
(೧) ತೀವ್ರತರ ಖಾಯಿಲೆ ಪ್ರಕರಣ,
(೨) ವಿಕಲ ಚೇತನ ಪ್ರಕರಣ,
(೩) 12 ವರ್ಷ ವಯಸ್ಸಿನೊಳಗಿನ ಮಕ್ಕಳುಳ್ಳ ವಿಧವೆ,ವಿಧುರ, ವಿಚ್ಛೇದಿತ ಪ್ರಕರಣ,
(೪) ಸೈನಿಕ ಪ್ರಕರಣ,
(೫) ಪರಸ್ಪರ ವರ್ಗಾವಷೆ ಪ್ರಕರಣಗಳನ್ನು ಹೊರತುಪಡಿಸಿ ಲೆಕ್ಕ ಹಾಕುವುದು.
IMP
🙂 ಕಲ್ಯಾಣ ಕರ್ನಾಟಕ ಭಾಗ & EBBS ಗಳಿಗೆ ಇತರೆ ಘಟಕಗಳಿಂದ ವರ್ಗಾವಣೆ ಮಿತಿ ಮೀರಿದ್ದಾಗ್ಯೂ ವರ್ಗಾವಣೆ ನೀಡಬಹುದು.
🙂🙂 ಪರಸ್ಪರ ವರ್ಗಾವಣೆ
🎯 ಆರಂಭಿಕ ಏಳು ವರ್ಷಗಳ ಸೇವೆ ಆಗಿದ್ದರೆ ಮಾತ್ರ ಪರಸ್ಪರ ವರ್ಗಾವಣೆ ಎಂಬ ನಿಯಮ ಸಡಿಲಿಸಿ ಐದಯ ವರ್ಷಕ್ಕೆ ಇಳಿಸಲಾಗಿದೆ.
🙂 ಖಾಲಿ ಹುದ್ದೆ ಲೆಕ್ಕ ಹಾಕುವಾಗ ಪ್ರತ್ಯೇಕ ವೃಂದ (SHM,HM,AM,PET)ವಾರು ಲೆಕ್ಕ ಹಾಕುವ ಬದಲಾಗಿ ಎಲ್ಲಾ ಪ್ರಾಥಮಿಕ ವೃಂದಗಳ ಆಧಾರದ ಮೇಲೆ ಲೆಕ್ಕ ಹಾಕುವುದು.
🙂🙂 *ಪತಿ-ಪತ್ನಿ ಪ್ರಕರಣದಡಿ ಕೋರಿಕೆ ವರ್ಗಾವಣೆ ಸಂಬಂಧಿಸಿದಂತೆ ~ಸಂಗಾತಿ ಇರುವ ತಾಲೂಕಿಗೆ ಮಾತ್ರ ವರ್ಗಾವಣೆ ನೀಡುವುದು~ ಎಂಬುದರ ಬದಲಾಗಿ, *ಸಂಗಾತಿ ಕಾರ್ಯ ನಿರ್ವಹಿಸುವ ತಾಲೂಕು ಇರುವ ಜಿಲ್ಲೆಯ ಯಾವುದೇ ಬ್ಲಾಕ್‌ಗೆ ವರ್ಗಾವಣೆ ಹೊಂದಲು ಅವಕಾಶ ನೀಡಲಾಗಿದೆ*.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನ ಮತ್ತು ಮಾನ್ಯ ಶಿಕ್ಷಣ ಸಚಿವರಿಗಿರುವ ಶಿಕ್ಷಕರ ಮೇಲಿನ ಕಳಕಳಿಯ ಫಲವಾಗಿ ವರ್ಗಾವಣೆಯು ಶಿಕ್ಷಕರಲ್ಲಿ ನೆಮ್ಮದಿ ಉಂಟು ಮಾಡಿದೆ.😌😌
ಸೂಚನೆ: ಈ ಲೇಖನದಲ್ಲಿ ಇರುವ ಅಂಶಗಳು ಪಾರಿಭಾಷಿಕದ ಯಥಪ್ರಕಾರವಾಗಿರದೆ, ಒಂದು ಕಿರುನೋಟವಾಗಿದೆ. ಪೂರ್ಣ ಪ್ರಮಾಣದ ಅರ್ಥಗ್ರಹಣಕ್ಕಾಗಿ ಮೂಲ ವಿಧೇಯಕವನ್ನು ಅನುಸರಿಸುವುದು.
✒️ ಶಿವಾನಂದ ಬಿಬಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು
KSPSTA, ವಿಜಯನಗರ