ಕರ್ನಾಟಕ ಸರ್ಕಾರದ ಪರಿಷಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಆಧಾರ್ ಸೀಡಿಂಗ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನವು 25 ಆಗಸ್ಟ್ 2025 ರಿಂದ 7 ಸೆಪ್ಟೆಂಬರ್ 2025ರವರೆಗೆ ನಡೆಯಲಿದೆ.
ಆಧಾರ್ ಸೀಡಿಂಗ್ ಏಕೆ ಅಗತ್ಯ?
ವಿದ್ಯಾರ್ಥಿಗಳು ಪಡೆಯುವ ವಿದ್ಯಾರ್ಥಿವೇತನ ಮತ್ತು ಸೌಲಭ್ಯಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ (DBT ಮೂಲಕ) ಜಮೆ ಮಾಡಲು ಆಧಾರ್ ಸಂಖ್ಯೆ ಖಾತೆಗೆ ಲಿಂಕ್ ಆಗಿರಬೇಕು. ಇದರಿಂದ:
ವಿಧ್ಯಾರ್ಥಿ ವೇತನ ಸಮಯಕ್ಕೆ ಖಾತೆಗೆ ಜಮೆಯಾಗುತ್ತದೆ
ನಕಲಿ ದಾಖಲೆಗಳ ಸಾಧ್ಯತೆ ಕಡಿಮೆಯಾಗುತ್ತದೆ
ಪಾರದರ್ಶಕತೆ ಮತ್ತು ಸುರಕ್ಷತೆ ಖಚಿತವಾಗುತ್ತದೆ
ಆಧಾರ್ ಸೀಡಿಂಗ್ ಮಾಡುವ ವಿಧಾನ
- www.npci.org.in ವೆಬ್ಸೈಟ್ಗೆ ತೆರಳಿ
- Consumer Tab ಆಯ್ಕೆಮಾಡಿ
- Bharat Aadhaar Seeding Enabler (BASE) ಆಯ್ಕೆ ಮಾಡಿ
- “Seeding/De-seeding” ಆಯ್ಕೆಮಾಡಿ
- ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ OTP ಬರುತ್ತದೆ. ಅದನ್ನು ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಿ
ಯಾರು ಭಾಗವಹಿಸಬೇಕು?
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು
ವೃತ್ತಿಪರ/ತಾಂತ್ರಿಕ ಕೋರ್ಸ್ ಕಲಿಯುತ್ತಿರುವವರು
ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳು
ಸಹಾಯಕ್ಕಾಗಿ ಸಂಪರ್ಕಿಸಬಹುದಾದವರು
ಜಿಲ್ಲಾ ಅಥವಾ ತಾಲೂಕು ಮಟ್ಟದ Tribal Welfare / Social Welfare Department ಕಚೇರಿಗಳು
ಅಧಿಕೃತ ವೆಬ್ಸೈಟ್: twd.karnataka.gov.in
ದೂರವಾಣಿ: +9180 22261789
ಪ್ರಮುಖ ಸೂಚನೆ
ಆಧಾರ್ ಸೀಡಿಂಗ್ ಮಾಡದಿದ್ದರೆ ಶಿಷ್ಯವೃತ್ತಿ ಹಣ ಖಾತೆಗೆ ಜಮೆಯಾಗುವುದಿಲ್ಲ. ಆದ್ದರಿಂದ ನಿಗದಿತ ದಿನಾಂಕದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.