ಓದುವ ಅಭಿಯಾನ 7 ನೇ ವಾರದ ಕಾರ್ಯಕ್ರಮಗಳು
ಓದುವ ಅಭಿಯಾನ upload ಮಾಡುವ ವಿಧಾನ
100 ದಿನಗಳ ಓದುವ ಆಂದೋಲನ ಸಂದರ್ಭದಲ್ಲಿ ಗಮನಹರಿಸಬೇಕಾದ ಅಂಶಗಳು
ಪುಸ್ತಕ ಪರಿಚಯ
🪀 ಮೊದಲ ಹಂತದಲ್ಲಿ ಶಾಲಾ ಗ್ರಂಥಾಲಯದಿಂದ ಮಕ್ಕಳಿಗೆ ಆಸಕ್ತಿ ಇರುವ ಪುಸ್ತಕಗಳನ್ನು ಅವರೇ ಆಯ್ಕೆ ಮಾಡಿ ಪರಿಚಯಿಸಲು ಅವಕಾಶ ನೀಡಿ.
🪀ತಾನು ಪರಿಚಯ ಮಾಡಬೇಕಾದ ಪುಸ್ತಕವನ್ನು ಮಗು 10ದಿನಗಳ ಮೊದಲೇ ಗ್ರಂಥಾಲಯದಿಂದ ಪಡೆಯುವಂತೆ ಮಾಡಿ.
🪀 ಹೆಚ್ಚಿನ ಮನೆಗಳಲ್ಲಿ ಗ್ರಂಥಾಲಯ ಸೌಲಭ್ಯವಿದ್ದು ಪೋಷಕರು ಮಗುವಿನ ಮಟ್ಟಕ್ಕೆ ಅನುಗುಣವಾದ ಪುಸ್ತಕ ಖರೀದಿ ಮಾಡಿರುತ್ತಾರೆ. ಇವುಗಳನ್ನು ಪರಿಚಯ ಮಾಡಲು ಅವಕಾಶ ನೀಡಿ.
🪀ಎರಡನೇ ಹಂತದಲ್ಲಿ ಮಗುವಿನ ಮಟ್ಟಕ್ಕೆ ಅನುಗುಣವಾದ ಪುಸ್ತಕವನ್ನು ಶಿಕ್ಷಕರು ನೀಡುವುದು.
🪀ಆಗಾಗ ಶಿಕ್ಷಕರು ತಾವು ಓದಿದ ಪುಸ್ತಕಗಳನ್ನು ಪ್ರಾರ್ಥನಾ ಅವಧಿಯಲ್ಲಿ ಪರಿಚಯ ಮಾಡಿ. ಇದು ಮಕ್ಕಳಿಗೆ ಪುಸ್ತಕ ಪರಿಚಯ ಮಾಡಲು ಮಾರ್ಗದರ್ಶನವಾಗುತ್ತದೆ.
ಗ್ರಂಥಾಲಯ ಬಳಕೆ
🪀 ಶಾಲಾ ಗ್ರಂಥಾಲಯದ ಎಲ್ಲಾ ಪುಸ್ತಕಗಳು ಮಕ್ಕಳಿಗೆ ದೊರಕುವಂತಾಗಲಿ. ಪುಸ್ತಕಗಳು ಹಾಳಾಗಲಿ ಹರಿದುಹೋಗಲಿ ಮಕ್ಕಳ ಕೈ ಸೇರಲಿ. ಏಕೆಂದರೆ ಕೆಲವು ಮನೆಗಳಲ್ಲಿ ಶಾಲೆಗಿಂತಲೂ ಆಕರ್ಷಕ ಹಾಗೂ ಆಸಕ್ತಿದಾಯಕವಾದ ಗ್ರಂಥಾಲಯ ಮಕ್ಕಳ ಮನೆಯಲ್ಲಿದೆ.
🪀ಪೋಷಕರಿಗೆ ಮಗುವಿನ ಮಟ್ಟ ಅನುಸರಿಸಿ ಪುಸ್ತಕ ನೀಡಿ. ಪೋಷಕರು ಪುಸ್ತಕ ಓದಿ ಮಕ್ಕಳಿಗೆ ಪುಸ್ತಕದ ವಿಷಯಗಳನ್ನು ಪರಿಚಯ ಮಾಡಿಸಲಿ.