ಮೂಡಂಬೈಲು ಶಾಲೆ ,ಬಂಟ್ವಾಳ ತಾಲೂಕಿಗೆ ರಾಷ್ಟ್ರ ಪ್ರಶಸ್ತಿಯ ಗೌರವ

IMG 20220118 WA0001 min
WhatsApp Group Join Now
Telegram Group Join Now

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೂಡಂಬೈಲು ,ಇದು ಬಂಟ್ವಾಳ ತಾಲ್ಲೂಕು ,ಪುಣಚ ಗ್ರಾಮದ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆ.ಈ ಶಾಲೆಗೆ 2021-22 ನೇ ಸಾಲಿನ Wipro Earthian ಸುಸ್ಥಿರ ಶಿಕ್ಷಣ ಕಾರ್ಯಕ್ರಮದ ಮೂಲಕ ನಡೆಸಲಾದ ಯೋಜನಾ ಸ್ಪರ್ಧೆ(Project Competition) ನಲ್ಲಿ 2021-22 ನೇ ಸಾಲಿನ National Winners ಆಗಿ ಆಯ್ಕೆಯಾಗಿದ್ದಾರೆ.


      ಈ project competition ನಲ್ಲಿರಾಷ್ಟ್ರಮಟ್ಟದಲ್ಲಿ ಒಟ್ಟು 20 ಶಾಲೆಗಳನ್ನು  National Winners ಎಂದು ಈ ಬಾರಿ ಆಯ್ಕೆ ಮಾಡಲಾಗಿದೆ. ಈ 20 ಶಾಲೆಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಾಲೆ ನಮ್ಮೆಲ್ಲರ ಹೆಮ್ಮೆಯ ಶಾಲೆ ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ ಮೂಡಂಬೈಲು. ನಗದು ಬಹುಮಾನ ಹಾಗೂ ಮೂರು ವರ್ಷ ಸುಸ್ಥಿರ ಅಭಿವೃದ್ಧಿಗೆ Wipro ಸಂಸ್ಥೆ ನೆರವು ನೀಡಲಿದೆ.


     ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯೊಂದು ಈ ಸಾಧನೆ ಮಾಡಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ.
    ಏನಿದು wipro earthian?
Wipro Earthian ಎಂಬುದು ಸುಸ್ಥಿರ ಬದುಕಿಗಾಗಿ ಶಿಕ್ಷಣ ಎಂಬ ಚಟುವಟಿಕಾಧಾರಿತ ಯೋಜನಾ ಕಾರ್ಯ.

ಸುಸ್ಥಿರತೆ ಮತ್ತು ತ್ಯಾಜ್ಯ

ಸುಸ್ಥಿರತೆ ಮತ್ತು ನೀರು

ಸುಸ್ಥಿರತೆ ಮತ್ತು ಜೀವವೈವಿಧ್ಯ 

ಈ ಮೂರು ವಿಷಯಗಳಿಂದ ಶಾಲೆಗಳು ಆಯ್ಕೆ ಮಾಡಬಹುದು.

ಈ ಯೋಜನಾ ಕಾರ್ಯ ಹೇಗೆ ಮಾಡಬೇಕೆಂಬ ಕೈಪಿಡಿಯನ್ನು Wipro ಸಂಸ್ಥೆ ಒದಗಿಸುತ್ತದೆ. ಈ ಕೈಪಿಡಿಯಲ್ಲಿ ನೀಡಲಾದ ಚಟುವಟಿಕೆಗಳನ್ನು ಶಾಲೆಯ 4-6 ಮಕ್ಕಳ ಒಂದು ಗುಂಪಿನಿಂದ ಮಾಡಿಸಬೇಕು.ಇದರಲ್ಲಿ ಮಕ್ಕಳು ಮಾಡಿ ಅನುಭವಿಸುವ ಚಟುವಟಿಕೆ, ಕ್ಷೇತ್ರಕಾರ್ಯ, ಸಂದರ್ಶನ ಮೊದಲಾದವು ಇರುತ್ತವೆ. ಈ ಎಲ್ಲಾ ಚಟುವಟಿಕೆಗಳನ್ನು ಮಾಡಿದ ನಂತರ ತಾವೇನು ಕಲಿತೆವು ಎಂಬುದನ್ನು ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಬರೆಯಬೇಕು ಮತ್ತು ಈ ಎಲ್ಲಾ ಕಲಿಕೆಗಳನ್ನು ಪ್ರಬಂಧ ರೂಪದಲ್ಲಿ ಬರೆಯಬೇಕು. ಇದು ಈ project work ಮಾಡುವ ವಿಧಾನ.

2021 ಸೆಪ್ಟೆಂಬರ್ – ಅಕ್ಟೋಬರ್‌ ತಿಂಗಳಲ್ಲಿ ಈ ಚಟುವಟಿಕೆಯನ್ನು ಮಾಡಲಾಗಿತ್ತು. ಶಾಲೆಗಳ ಇಕೋಕ್ಲಬ್‌ ಮೂಲಕ ಈ ಚಟುವಟಿಕೆಯನ್ನು ಕೈಗೊಳ್ಳಲಾಗಿತ್ತು. CPR ಪರಿಸರ ಶಿಕ್ಷಣ ಕೇಂದ್ರವು ಈ ಯೋಜನೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಕಾಲಕಾಲಕ್ಕೆ  webinar ಮೂಲಕ ಮಾರ್ಗದರ್ಶನ ನೀಡಿತ್ತು.ವರದಿಯನ್ನು ಪ್ರಾದೇಶಿಕ ಭಾಷೆಯಾದ ಕನ್ನಡ ಅಥವಾ English ನಲ್ಲಿ ಬರೆಯಬಹುದಿತ್ತು.ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ ಮೂಡಂಬೈಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಬರೆದ ವರದಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದೆ.ಕರ್ನಾಟಕದಿಂದ ಕನ್ನಡ ಭಾಷೆಯಲ್ಲೆ ಬರೆದ ವರದಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ.


 
ಚಟುವಟಿಯನ್ನು ಮಾಡಿದ ರೀತಿ, ಅದರಿಂದ ಉಂಟಾದ ಮಕ್ಕಳ ಕಲಿಕೆ, ಆ ಕಲಿಕೆಯನ್ನು ಅಭಿವ್ಯಕ್ತಿ ಮಾಡುವಲ್ಲಿನ ಕ್ರಿಯಾತ್ಮಕತೆ ಮತ್ತು ಅನುಭವಗಳ ಮೂಲಕ ಪಡೆದುದನ್ನು ಪ್ರಬಂಧ ರೂಪಕ್ಕೆ ಇಳಿಸುವುದು ಇದರ ಮುಖ್ಯ ಉದ್ದೇಶ. ಆ ಮೂಲಕ ಅನುಭವ ಕೇಂದ್ರಿತ ಕಲಿಕೆಯಾಗಿ ಮಕ್ಕಳ ವ್ಯಕ್ತಿತ್ವ ನಿರ್ಮಾಣವೇ ಇದರ ಗುರಿ.
ಜಿಲ್ಲಾ ಹಂತ,ರಾಜ್ಯ ಹಂತ ಮತ್ತು ರಾಷ್ಟ್ರ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.ರಾಷ್ಟ್ರ ಹಂತದಲ್ಲಿ 20 ಯೋಜನೆಗಳನ್ನು ವಿಜೇತರು ಎಂದೂ ಇನ್ನೂ 20 ಶಾಲೆಗಳನ್ನು ಅತ್ಯುತ್ತಮ ಯೋಜನೆ ಎಂದು ಆಯ್ಕೆ ಮಾಡಲಾಗುತ್ತದೆ.
    ಕರ್ನಾಟಕದಿಂದ ವಿಜೇತರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡಂಬೈಲು ಆಯ್ಕೆಯಾದರೆ ಅತ್ಯುತ್ತಮ ಯೋಜನೆಯು St.Joseph’s High School ಬಜ್ಪೆ ಆಯ್ಕೆಯಾಗಿದೆ.
ಈ ಎರಡೂ ಶಾಲೆಗಳೂ ದಕ್ಷಿಣ ಕನ್ನಡ ಜಿಲ್ಲೆಯವು ಎಂಬುದು ನಮಗೆಲ್ಲಾ ಹೆಮ್ಮೆಯ ಸಂಗತಿ.

WhatsApp Group Join Now
Telegram Group Join Now
Sharing Is Caring:

Leave a Comment