ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ

ಗುರುಭ್ಯೋ ನಮಃ

WhatsApp Group Join Now
Telegram Group Join Now

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿ ಇಂದು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ವಿವರವನ್ನು ತಮ್ಮ ಮುಂದಿಡುತ್ತಿದ್ದೇವೆ.

IMG 20211130 WA0002 min

ಶ್ರೀಮತಿ ಮೂಕಾಂಬಿಕಾ.ಬಿ
ಸ.ಕಿ.ಪ್ರಾ.ಶಾಲೆ ಕಂಚಿನಡ್ಕ
ಬೆಳ್ತಂಗಡಿ ತಾಲೂಕು

20.11.1961ರಲ್ಲಿ ಕೃಷ್ಣ ಭಟ್ ಮೂಕಾಂಬಿಕಾ ರವರ ಮಗಳಾಗಿ ಜನಿಸಿದ ಇವರು 25.10.1982 ಸ.ಹಿ.ಪ್ರಾ.ಶಾಲೆ ಪಾಣಾಜೆಯಲ್ಲಿ ಸೇವೆಗೆ ಸೇರಿದರು. ಮುಂದೆ ಸ.ಹಿ.ಪ್ರಾ.ಶಾಲೆ ಬುಳೇರಿ, ಇಳಂತಿಲ, ಮೊಗ್ರು ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸ.ಕಿ.ಪ್ರಾ.ಶಾಲೆ ಕಂಚಿನಡ್ಕದಲ್ಲಿ ನಿವೃತ್ತರಾಗುತ್ತಿದ್ದಾರೆ. ಪತಿ ನಿವೃತ್ತ ಶಿಕ್ಷಕರಾದ ಸತ್ಯಶಂಕರ ಎನ್ ಭಟ್ ಮಕ್ಕಳಾದ ಸಂಧ್ಯಾ, ಕೃಷ್ಣ ಪ್ರಸಾದ್ ಮೊಮ್ಮಕ್ಕಳಾದ ಅಭಿಜ್ಞಾ, ಅಭಿಷ್ಟ ಇವರೊಂದಿಗೆ ಸಂತ್ರಪ್ತ ಜೀವನ ನಡೆಸುತ್ತಿರುವ ತಮ್ಮ ಮುಂದಿನ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211130 WA0001 min

ಶ್ರೀಮತಿ ವನಜ ಕುಮಾರಿ
ಸ.ಹಿ.ಪ್ರಾ ಶಾಲೆ ಕೊರಂಜ
ಬೆಳ್ತಂಗಡಿ ತಾಲೂಕು

04.11.1961 ರಲ್ಲಿ ಎಂ.ಎ ಸುವರ್ಣ ಹಾಗೂ ಪಾರ್ವತಿಯವರ ಮಗಳಾಗಿ ಬಂಟ್ವಾಳದ ಕಕ್ಕೆಪದವಿನಲ್ಲಿ ಜನಿಸಿದ ಇವರು 18.01.1996 ರಲ್ಲಿ ಸ.ಹಿ.ಪ್ರಾ ಶಾಲೆ ಪಡಂಗಡಿಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ, 1999 ರಿಂದ ಪ್ರಸ್ತುತ 2021 ರವರೆಗೆ ಸ.ಹಿ.ಪ್ರಾ ಶಾಲೆ ಕೊರಂಜದಲ್ಲಿ ಸೇವೆ ಸಲ್ಲಿಸಿ ಇದೀಗ 22 ವರ್ಷಗಳ ಸುದೀರ್ಘ ಸೇವಾ ಬದುಕಿನಿಂದ ನಿವೃತ್ತರಾಗುತ್ತಿದ್ದಾರೆ. ತಮಗೆ ನಿವೃತ್ತ ಜೀವನದ ಶುಭಾಶಯಗಳು.

IMG 20211130 085202 min

ಶ್ರೀಮತಿ ಪ್ರಭಾವತಿ
ಸ.ಹಿ.ಪ್ರಾ ಶಾಲೆ ಪುದು
ಬಂಟ್ವಾಳ ತಾಲೂಕು

ಪ್ರಭಾವತಿ ಇವರು ಮುಂಡಪ್ಪ ಮತ್ತು ಲೀಲಾವತಿ ಅವರ ಪುತ್ರಿಯಾಗಿ 1961 ರಲ್ಲಿ ಫರಂಗಿಪೇಟೆಯಲ್ಲಿ ಜನಿಸಿದರು. ಶ್ರೀರಾಮ ಅನುದಾನಿತ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು, ನಿತ್ಯ ಸಹಾಯ ಮಾತಾ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಬಲ್ಮಠದಲ್ಲಿ ಶಿಕ್ಷಕ ತರಬೇತಿ ಪೂರೈಸಿ, 08.02.1990 ರಲ್ಲಿ ಸ.ಕಿ.ಪ್ರಾ ಶಾಲೆ ಪಿಲಿಕಜೆ ಪುತ್ತೂರು ಇಲ್ಲಿ ಸೇವೆಗೆ ಸೇರಿದರು. ಮುಂದೆ ಅಮ್ಮೆಮ್ಮಾರ್ ಹಾಗೂ ಪುದು ಶಾಲೆಗಳಲ್ಲಿ ಸೇವೆ ಸಲ್ಲಿಸಿ ಇದೀಗ 31 ವರ್ಷಗಳ ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಪತಿ ಗಣೇಶ್ ಹಾಗೂ ಮಕ್ಕಳಾದ ಗಿರೀಶ್, ಕಾರ್ತಿಕ್, ನಿತ್ಯ ರೊಂದಿಗಿನ ನಿಮ್ಮ ನಿವೃತ್ತಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211130 085255 min

ಡಿ ಶಾರದಾ
ಸ.ಹಿ.ಪ್ರಾ ಶಾಲೆ ಹೂಹಾಕುವಕಲ್ಲು
ಬಂಟ್ವಾಳ ತಾಲೂಕು

ಶಂಕರನಾರಾಯಣ ಹಾಗೂ ಸುಂದರಿಯರ ಮಗಳಾಗಿ ಜನಿಸಿದ ಶಾರದಾರವರು ಪ್ರಾಥಮಿಕ ಶಿಕ್ಷಣವನ್ನು ಅನುದಾನಿತ ಶಾಲೆ ಕುಂಡಡ್ಕ ದಲ್ಲಿ ಪೂರೈಸಿ, ಪ್ರೌಢಶಿಕ್ಷಣವನ್ನು ವಿಠಲ ಬಾಲಿಕಾ ಪ್ರೌಢಶಾಲೆಯಲ್ಲಿ ಪಡೆದು, ಸಿಪಿಎಡ್ ತರಬೇತಿಯನ್ನು ದೈಹಿಕ ಶಿಕ್ಷಣ ಕಾಲೇಜು ಶ್ರವಣಬೆಳಗೊಳದಲ್ಲಿ ಪೂರೈಸಿ, 29.07.1985 ರಿಂದ ಸ.ಹಿ.ಪ್ರಾ ಶಾಲೆ ಬೆಳುವಾಯಿಯಲ್ಲಿ ಸೇವೆಗೆ ಸೇರಿದರು. ಮುಂದೆ ಮಾದರಿ ಶಾಲೆ ವಿಟ್ಲ, ಸಾಲೆತ್ತೂರು ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸ.ಹಿ.ಪ್ರಾ ಶಾಲೆ ಹೂಹಾಕುವ ಕಲ್ಲಿನಲ್ಲಿ ನಿವೃತ್ತರಾಗುತ್ತಿದ್ದಾರೆ. ಪತಿ ರಾಜೀವ ಹಾಗೂ ಇಬ್ಬರು ಮಕ್ಕಳೊಂದಿಗಿನ ತಮ್ಮ ಮುಂದಿನ ನಿವೃತ್ತ ಜೀವನ ಸುಖಕರವಾಗಿರಲಿ.

IMG 20211130 085221 min

ಶ್ರೀಮತಿ ಜ್ಯೋತಿ ಕೆ
ಸ.ಹಿ.ಪ್ರಾ ಶಾಲೆ ಕಲ್ಲರಕೋಡಿ
ಬಂಟ್ವಾಳ ತಾಲೂಕು

04.11.1961 ರಲ್ಲಿ ತಲಪಾಡಿಯಲ್ಲಿ ಜನಿಸಿದ ಇವರು ಕುಂಜತ್ತಾರುವಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಉಚ್ಚಿಲ ಸೋಮೇಶ್ವರದಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಟಿ. ಸಿ. ಎಚ್ ಪದವಿಯನ್ನು ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ಸಂಸ್ಥೆ ಕೊಕ್ಕರ್ಣೆಯಲ್ಲಿ ಪಡೆದರು. 06.03.1996 ರಲ್ಲಿ ಸ.ಕಿ.ಪ್ರಾ.ಶಾಲೆ ಮಲ್ಲಡ್ಕದಲ್ಲಿ ಸೇವೆಗೆ ಸೇರಿದರು. ಮುಂದೆ ಸ.ಹಿ.ಪ್ರಾ ಶಾಲೆ ಕಲ್ಲರಕೋಡಿಗೆ ವರ್ಗಾವಣೆಗೊಂಡು ಇದೀಗ ಇದೇ ಶಾಲೆಯಲ್ಲಿ ನಿವೃತ್ತರಾಗುತ್ತಿದ್ದಾರೆ. ಪತಿ ಗಿರೀಶ ಹಾಗೂ ಇಬ್ಬರು ಮಕ್ಕಳೊಂದಿಗಿನ ತಮ್ಮನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

ಈ ತಿಂಗಳು ಸೇವಾ ನಿವೃತ್ತಿ ಹೊಂದುತ್ತಿರುವ ತಮಗೆ ದೇವರು ಆಯುರಾರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಸಾವಿರಾರು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಮೂಡಿಸಿದ ತಮ್ಮ ಬಾಳಿನಲ್ಲಿ ಸುಖದ ಬೆಳಕು ಮೂಡಲಿ ಎಂದು ಹಾರೈಸುತ್ತೇವೆ.

WhatsApp Group Join Now
Telegram Group Join Now
Sharing Is Caring:

Leave a Comment