ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಮಂಗಳೂರು – ದಕ್ಷಿಣ ಕನ್ನಡ ಇವರು 9ನೇ ತರಗತಿ ಇಂಗ್ಲಿಷ್ ದ್ವಿತೀಯ ಭಾಷೆ ವಿಷಯಕ್ಕೆ ಸಿದ್ಧಪಡಿಸಿರುವ ಕಲಿಕಾ ಫಲ ಆಧಾರಿತ ಮೌಲ್ಯಾಂಕನ ಪ್ರಶ್ನಾ ಕೋಶವನ್ನು (Learning Outcomes Based Assessment – LBA Question Bank, 2026-27) ಶಿಕ್ಷಕರ ಅನುಕೂಲಕ್ಕಾಗಿ KSPSTADK ಇಲ್ಲಿ ಒದಗಿಸುತ್ತಿದೆ. ಈ ಸಂಪನ್ಮೂಲದಲ್ಲಿ 8 ಗದ್ಯ ಹಾಗೂ ಪದ್ಯ ಘಟಕಗಳು ಮತ್ತು ಪೂರಕ ಓದು (Supplementary Reading) ವಿಭಾಗ ಸೇರಿದಂತೆ ಒಟ್ಟು 9 ಘಟಕಗಳ ಪ್ರಶ್ನೆಗಳು ಮತ್ತು ಉತ್ತರಗಳನ್ನು ಪ್ರತ್ಯೇಕ PDF ಫೈಲ್‌ಗಳಾಗಿ ಘಟಕವಾರು ವಿಂಗಡಿಸಲಾಗಿದೆ. ಪ್ರತಿ ಘಟಕದಲ್ಲಿ ಕಠಿಣತೆಯ ಮಟ್ಟದ ನೀಲನಕ್ಷೆ (Easy, Average, Difficult), ಬಹು ಆಯ್ಕೆ ಪ್ರಶ್ನೆಗಳು, ವ್ಯಾಕರಣ ಆಧಾರಿತ ಪ್ರಶ್ನೆಗಳು (question tags, infinitives, prepositions, articles, reported speech, passive voice, language functions), ಸಂದರ್ಭ ಸಹಿತ ವಿವರಣೆ, ಚಿತ್ರ ಆಧಾರಿತ ಬರವಣಿಗೆ, ಪ್ರೊಫೈಲ್ ರೈಟಿಂಗ್, ಕವನದ ಸಾರಾಂಶ ಹಾಗೂ ದೀರ್ಘ ಉತ್ತರದ ಪ್ರಶ್ನೆಗಳು ಸೇರಿವೆ. ಪ್ರತಿ ಪ್ರಶ್ನೆಗೂ ಕಲಿಕಾ ಫಲದ ಸಂಖ್ಯೆಯನ್ನು (LO) ನಮೂದಿಸಲಾಗಿದೆ. ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ, ರಚನಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಮಾಪನಗಳಿಗೆ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಳಗಿನ ಬಟನ್‌ಗಳ ಮೂಲಕ ತಮಗೆ ಬೇಕಾದ ಘಟಕದ ಪ್ರಶ್ನೆಗಳು ಮತ್ತು ಉತ್ತರಗಳ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
Units Covered (9)
| # | Prose / Poetry | Index says Q | Actual Q | Index says A | Actual A |
|---|---|---|---|---|---|
| 1 | The Enchanted Pool / Upagupta | 1–9 ✅ | 1–9 | 72–78 | 74–80 |
| 2 | The Three Questions / Gratefulness | 10–16 ✅ | 10–16 | 79–83 | 80–84 |
| 3 | My Beginning / A Girl Called Golden | 21–28 | 16–25 | 91–96 | 84–91 |
| 4 | Whatever We Do / The Wonderful Words | 16–24 | 25–31 | 83–91 | 91–95 |
| 5 | Justice Above Self / Justice | 29–38 | 32–41 | 97–104 | 95–102 |
| 6 | The Noble Bishop / Nobleness Enkindleth Nobleness | 39–47 | 41–51 | 105–112 | 102–108 |
| 7 | The Will of Sacrifice / The Song of Freedom | 48–55 | 51–62 | 112–122 | 108–117 |
| 8 | To My Countrymen / It Never Comes Again | 56–64 | 62–71 | 122–129 | 117–123 |
| 9 | Supplementary Reading | 64–71 | 71–73 | 130–137 | 123–128 |
KSPSTADK · Study Materials
9ನೇ ತರಗತಿ ಇಂಗ್ಲಿಷ್ (ದ್ವಿತೀಯ ಭಾಷೆ) LBA ಪ್ರಶ್ನಾ ಕೋಶ
ಘಟಕವಾರು ಪ್ರಶ್ನೆಗಳು ಮತ್ತು ಉತ್ತರಗಳು — 9 ಘಟಕಗಳು (PDF ಉಚಿತ ಡೌನ್‌ಲೋಡ್)