ಈಗಾಗಲೇ ಶಿಕ್ಷಕರ ಹೆಚ್ಚುವರಿ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ರಾಜ್ಯಾದ್ಯಂತ ಕಳೆದ ಮೂರು ವರ್ಷಗಳಿಂದ ಮುಖ್ಯ ಗುರುಗಳ ಬಡ್ತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ರಾಜ್ಯಾದ್ಯಂತ 8000 ಮುಖ್ಯ ಗುರುಗಳ ಹುದ್ದೆಗಳು ಖಾಲಿ ಇದ್ದು ಇದರಲ್ಲಿ ಸಹ ಶಿಕ್ಷಕರು ಪ್ರಭಾರಿ ಮುಖ್ಯಗುರುಗಳು ಇರುವ ಶಾಲೆಗಳಲ್ಲಿ ಶಿಕ್ಷಕರು ಹೆಚ್ಚುವರಿಯಾಗಿದ್ದು, ಇದರಿಂದ ಸರಕಾರಿ ಶಾಲೆಯಲ್ಲಿ ಕೇವಲ ಇಬ್ಬರೇ ಶಿಕ್ಷಕರು ಉಳಿಯುತ್ತಾರೆ. ಅಂದರೆ ಮುಖ್ಯ ಗುರುಗಳ ಹುದ್ದೆ ಮಂಜೂರಾಗಿದ್ದು, ಕಾರ್ಯವನ್ನು ನಿರ್ವಹಿಸದೆ ಇರುವ ಶಾಲೆಗಳಲ್ಲಿ ಇರುವ ಸಹ ಶಿಕ್ಷಕರಲಿ ಒಬ್ಬ ಸಹ ಶಿಕ್ಷಕರು ಪ್ರಭಾರಿ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಸದರಿ ಶಾಲೆಯಲ್ಲಿ ಒಬ್ಬ ಸಹ ಶಿಕ್ಷಕರನ್ನು ಹೆಚ್ಚುವರಿ ಮಾಡುವುದರಿಂದ ಆ ಶಾಲೆಯಲ್ಲಿರುವ ಇನ್ನೊಬ್ಬ ಶಿಕ್ಷಕರು ಕೂಡ ಪ್ರಭಾರಿಯಾಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಿಂದ ಇಡೀ ಶಾಲೆಯ ಶೈಕ್ಷಣಿಕ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ. ಕಾರಣ ಮುಖ್ಯ ಗುರುಗಳ ಹುದ್ದೆ ಮಂಜುರಾಗಿದ್ದು ಅಲ್ಲಿ ಯಾವುದೇ ಶಿಕ್ಷಕರು ಕರ್ತವ್ಯವನ್ನು ನಿರ್ವಹಿಸದೇ ಇದ್ದಲ್ಲಿ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ಸಿಗುವವರೆಗೂ ಆ ಶಾಲೆಯಲ್ಲಿ ಹೆಚ್ಚುವರಿ ಆದ ಶಿಕ್ಷಕರನ್ನು ಕೈಬಿಡಬೇಕು. ಇದರಿಂದ ಅಂದಾಜು 1500 ಶಾಲೆಗಳು ಉಳಿಯುತ್ತವೆ.
- ಹೆಚ್ಚುವರಿ ಶಿಕ್ಷಕರೆಂದು ಗುರುತಿಸಲು 2024ರ ಡಿಸೆಂಬರ್ ದಾಖಲಾತಿಯನ್ನು ಹಾಗೂ ಜೂನ್ ಜುಲೈ ತಿಂಗಳಲ್ಲಿ ಝೀರೋ ಎನ್ರೋಲ್ಮೆಂಟ್ ಇದ್ದರೆ ಮತ್ತೆ 2012 ಡಿಸೆಂಬರ್ ನಲ್ಲಿ ಮಕ್ಕಳ ಸಂಖ್ಯೆ ಇದ್ದಾಗೆ ಹೆಚ್ಚುವರಿ ಮಾಡಿದ್ದೀರಿ ಅದೇ ರೀತಿ ಜೂನ್ ಜುಲೈ ತಿಂಗಳಲ್ಲಿ ದಾಖಲಾತಿ ಹೆಚ್ಚಾಗಿದ್ದರೆ ಮಾತ್ರ ಅಂತಹ ದಾಖಲಾತಿ ಪರಿಗಣಿಸದೆ ಶಿಕ್ಷಕರನ್ನು ಹೆಚ್ಚುವರಿ ಮಾಡಿದ್ದು ಇದು ದ್ವಿಗುಣ ನೀತಿಯಾಗಿದ್ದು ಇದರಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿದೆ ಕಾರಣಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೆ ಅಂತಹ ದಾಖಲೆಗಳೊಂದಿಗೆ ಶಿಕ್ಷಕರನ್ನು ಹೆಚ್ಚುವರಿಯಿಂದ ಕೈ ಬಿಡಬೇಕು.
- ಆಗಷ್ಟು ತಿಂಗಳಲ್ಲಿ ನಿವೃತ್ತಿ ಹೊಂದುತ್ತಿರುವ ಶಾಲೆಗಳಲ್ಲಿ ಹೆಚ್ಚುವರಿ ಯಾಗುತ್ತಿದ್ದಾರೆ. ಅಂತಹ ಶಾಲೆಗಳಲ್ಲಿ ನಿವೃತ್ತಿಯಾಗುವ ಹುದ್ದೆಯನ್ನು ಹೆಚ್ಚುವರಿ ಮಾಡಬೇಕಾಗಿ ವಿನಂತಿ.
- ಹೆಚ್ಚುವರಿ ಪ್ರಕ್ರಿಯೆ ಸಿ.ಆರ್.ಪಿ./ಬಿ.ಆರ್.ಪಿ/ ಇ ಸಿ ಓ ಕೌನ್ಸೆಲಿಂಗ್ ನಲ್ಲಿ ಶಿಕ್ಷಕರಿಗೆ ಎಲ್ಲಾ PST ಹುದ್ದೆಗಳನ್ನು ತೋರಿಸಬೇಕಾಗಿ ವಿನಂತಿ.
- ಹೆಚ್ಚುವರಿ ಯಾಗಿರುವ ಹಿಂದಿ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಎಲ್ಲಾ PST ಹಾಗೂ GPT ಹುದ್ದೆಗಳನ್ನು ನೀಡಬೇಕಾಗಿ ವಿನಂತಿ.
- ಹೆಚ್ಚುವರಿ ಆಗಿರುವ ಶಿಕ್ಷಕರು ಸಿ.ಆರ್.ಪಿ. /ಬಿ.ಆರ್.ಪಿ./ಇ.ಸಿ.ಒಗಳಾಗಿ ಪರೀಕ್ಷೆ ಬರೆದು ಅರ್ಹರಾಗಿದ್ದು ಅಂತವರು ಹೆಚ್ಚುವರಿ ಪ್ರಕ್ರಿಯೆಗೆ ಒಳಪಟ್ಟರು ಸಿ.ಆರ್.ಪಿ/ ಬಿ.ಆರ್.ಪಿ/ಇ.ಸಿ.ಓ ಹುದ್ದೆಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಕಾಗಿ ಈ ಮೂಲಕ ವಿನಂತಿ.

