FLN ಕಲಿಕಾ ಹಬ್ಬ ಯಾರಿಗೆ?1 ರಿಂದ 5 ನೇ ತರಗತಿಯ ಎಲ್ಲಾ ಶಾಲೆಗಳಿಂದ ಆಯ್ದ 100ರ ರಿಂದ 110 ಮಕ್ಕಳಿಗೆ ( ಎಷ್ಟು ಸಾಧ್ಯವೋ ಅಷ್ಟು 345 ನೇ ತರಗತಿ ಮಕ್ಕಳನ್ನು ಆಯ್ಕೆಮಾಡಿ)ಮಕ್ಕಳ ಆಯ್ಕೆ ಹೇಗೆ?
- ಪ್ರತಿ ಶಾಲೆಯ ದಾಖಲಾತಿ FLN ಮಕ್ಕಳನ್ನು ಗಮನದಲ್ಲಿ ಇರಿಸಿ CRP ಗಳೇ ನಿಗದಿಪಡಿಸಿ ಲಿಂಗ ಆಧರಿಸಿ ಆಯ್ಕೆ ಇಲ್ಲದಿದ್ದರೂ ಗಂಡು ಹೆಣ್ಣು ಮಕ್ಕಳಿಗೆ ಸಮಾನ ಪ್ರಾಮುಖ್ಯತೆ ನೀಡಿ
- ಯಾವ ಮಕ್ಕಳ ಆಯ್ಕೆ ಮಾಡುವುದು?
- FLN ಗೆ ಒಳಪಟ್ಟು ಶಾಲಾ ಹಂತದಲ್ಲಿ ಚಟುವಟಿಕೆ ಮೂಲಕ ಪ್ರಗತಿ ಸಾಧಿಸಿರುವ ಸಾಧಿಸುತ್ತಿರುವ ಮಕ್ಕಳು
- RP ಆಯ್ಕೆ ಹೇಗೆ?

- ಕ್ಯಾಲಿಗ್ರಫಿ ವಿಷಯಕ್ಕಾಗಿ ಚಿತ್ರಕಲಾ ಶಿಕ್ಷಕರ/ ಪರಿಣಿತಿ ಶಿಕ್ಷಕರು/ ಕೈಬರಹ ಅಂದವಾಗಿ ಬರೆಯುವ ಕೌಶಲ್ಯ ಹೊಂದಿರುವ ಹಳೆ ವಿದ್ಯಾರ್ಥಿ ಶಿಕ್ಷಕರು ಒಬ್ಬರನ್ನು ಆಯ್ಕೆ ಮಾಡಿ
- ಕಥೆ ಹೇಳುವ ಕಟ್ಟುವ ವಿಷಯಕ್ಕಾಗಿ ವಿಶೇಷ ಶಿಕ್ಷಕರಿರಲಿ
- ಒಟ್ಟು 6 ಜನ RP ಗಳಿರಲಿ
ಚಟುವಟಿಕೆ -ಗಟ್ಟಿ ಓದು - ದಿನಪತ್ರಿಕೆ ಬಳಸಿ ಗಟ್ಟಿಯಾಗಿ ಒದಗಿಸುವುದು

- * ಫ್ಲಾಶ್ ಕಾರ್ಡ್ ರಚಿಸಿ ಅದರಲ್ಲಿ ಶಬ್ದಗಳನ್ನು ಬರೆದು ಓದಿಸುವುದು
- ನಲಿ ಕಲಿ ವಾಚಕ ಬಳಸುವುದು
- ವಿವಿಧ ಎಲೆ ಹಾಳೆ ಆಕೃತಿ ಮೇಲೆ ಒತ್ತಕ್ಷರ ಶಬ್ದ ಬರೆದು ಗಟ್ಟಿಯಾಗಿ ಒದಗಿಸುವುದು
- ಅದೇ ತರಗತಿ ಗೋಡೆ ಮೇಲೆ ಬರೆದಿರುವ ಉಕ್ತಿಗಳನ್ನು ಒದಗಿಸುವುದು
- ಗ್ರಂಥಾಲಯ ಪುಸ್ತಕ ಸಂಗ್ರಹ ಮಾಡಿ ಒದಗಿಸುವುದು
ಚಟುವಟಿಕೆ -ಕಥೆ ಹೇಳುವುದು
* ಮಕ್ಕಳಿಂದ ಸೃಜನಾತ್ಮಕ ಕಥೆ ಹೇಳಿರುವುದು

- ವಿವಿಧ ಶಬ್ದ ಹಾಗೂ ಚಿತ್ರಗಳನ್ನು ನೀಡಿ ಅವುಗಳನ್ನು ಬಳಸಿ ಕಥೆ ರಚಿಸಲು ಹೇಳುವುದು. ಉದಾ. ಹುಲಿ. ಸಿಂಹ ಜಿಂಕೆ ಕಾಡು ಇವುಗಳ ಚಿತ್ರಗಳನ್ನು ಕೆ.ಜಿ. ಕಾರ್ಡಿಗೆ ಅಂಟಿಸಿ ನೀಡುವುದು ವಿವಿಧ ಶಬ್ದಗಳನ್ನು ಫ್ಲಾಶ್ ಕಾರ್ಡ್ ಮೇಲೆ ಬರೆದು ನೀಡುವುದು ವಿವಿಧ ಪ್ರಾಣಿಗಳ ಮುಖವಾಡ ಇಟ್ಟು ಬಳಸಲು ಹೇಳುವುದು
- ಸ್ಥಳೀಯ ಹಿರಿಯರನ್ನು ಆಹ್ವಾನಿಸಿ ಕಥೆ ಹೇಳಿರುವುದು
ಕೈಬರಹ ಸುಧಾರಣೆ

- ಸ್ಥಳೀಯ ಅಥವಾ ನುರಿತ ಶಿಕ್ಷಕರಿಂದ ಕೈ ಬರಹ ಸುಧಾರಣೆ ವಿವರ ತಿಳಿಸುವುದು
- Copy book ಹಾಳೆ ಬಳಸಿ ಬರೆಸುವುದು
- ಮರಳು ಅಕ್ಕಿ ಮೇಲೆ ಅಕ್ಷರ ಬರಹ ಮಾಡಿಸುವುದು
- ಸಂತೋಷದಾಯಕ ಗಣಿತ
- ಗಣಿತದ ಮೂಲ ಕ್ರಿಯೆಗಳನ್ನು ಕಲಿಸಲು ವಿವಿಧ ತಂತ್ರಗಳನ್ನು ಬಳಸುವುದು

- ವಿವಿಧ ಆಕಾರದ ಆಕೃತಿಗಳನ್ನು ಹರಡಿ ಅವುಗಳನ್ನು ವಿಂಗಡಿಸುವ ಹೊಂದಿಸುವ ಆಟ ಆಡಿಸುವುದು
- ಉದಾ ಒಂದು ಗುಂಪು ವೃತ್ತಾಕಾರದ ವಸ್ತು ಇನ್ನೊಂದು ಗುಂಪು ಆಯತಕಾರ ಹೀಗೆ ಕೊಟ್ಟಿರುವ ವಸ್ತುಗಳಲ್ಲಿ ವಿಂಗಡಿಸಲು ಹೇಳುವುದು ಅಥವಾ ಸಂಗ್ರಹ ಮಾಡಲು ಹೇಳುವುದು
- ವೇದಗಣಿತ ಪರಿಚಯ
ಉದಾ 55×6 ಗುಣಿಸಲು. 5×6 30 ಇವುಗಳ ಮೊತ್ತವನ್ನು ಮದ್ಯದಲ್ಲಿ ಬೇರೆ 3+0=3. 3. 0 ನಡುವೆ ಮೊತ್ತ 3 ಬರೆದರೆ 330 ಹೀಗೆ - ವಿವಿಧ ಕಲಿಕೋಪಕರಣ ಬಳಸಿ ಸಂಕಲನ ವ್ಯವಕಲನ ಕಲಿಸುವಿಕೆಯ
- ಕ್ಲಸ್ಟರ್ ನ ಶಾಲೆಗಳಲ್ಲಿ ಬಳಸಿರುವ ಉಪಯುಕ್ತ ವಿಭಿನ್ನ ಪಾಠೋಪಕರಣ ಪರಿಚಯ ಉತ್ತಮ
ಮೆಮೋರಿ ಪರೀಕ್ಷೆ

- ವಿವಿಧ ವಸ್ತುಗಳನ್ನು ಟೇಬಲ್ ಮೇಲಿಟ್ಟು ನೋಡಲು ಹೇಳಿ 5 ನಿಮಿಷದ ನಂತರ ಅದರ ಮೇಲೆ ಬಟ್ಟೆ ಹಾಕಿ ಅವುಗಳನ್ನು ನೆನಪು ಮಾಡಿಕೊಂಡು ಬರೆಯಲು ಹೇಳುವುದು
- ಸಂಖ್ಯೆಗಳನ್ನು ವೃತ್ತಾಕಾರದ ಕಾರ್ಯಗಳಲ್ಲಿ ಬರೆದು ಅವುಗಳನ್ನು ಉಲ್ಟಾ ಹಾಕಿ ಕ್ರಮವಾಗಿ ತೆಗೆಯಲು ಹೇಳುವುದು
- ಕರಿಹಲಗೆ ಮೇಲೆ ಶಬ್ದ/ ಅಕ್ಷರ/ಅಂಕಿ/ ಚಿತ್ರ ಬರೆದು ಅವುಗಳನ್ನು ಒಂದೊಂದಾಗಿ ಅಳಿಸಿ ನಂತರ ಎಲ್ಲವನ್ನೂ ಬರೆಯಲು ಹೇಳುವುದು
ರಸಪ್ರಶ್ನೆ ಚಟುವಟಿಕೆ - ಭಾಷಾಜ್ಞಾನ ಆಧಾರಿತ ಸುತ್ತು
- ಪರಿಸರ ಅಧ್ಯಯನ ಸುತ್ತು
- ಸಂಖ್ಯಾ ಜ್ಞಾನ ಆಧಾರಿತ ಸುತ್ತು
- ಸಹ ಸಂಬಂದ ಸುತ್ತು
