ಪ್ರಸಕ್ತ ಸಾಲಿನಲ್ಲಿ National Scholarship Portal ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಮುಖ ಅಂಶಗಳು.

WhatsApp Group Join Now
Telegram Group Join Now

ಪ್ರಸಕ್ತ ಸಾಲಿನಲ್ಲಿ NSP scholarship Portal ನಲ್ಲಿ ಅರ್ಜಿ ಸಲ್ಲಿಸಲು OTR ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ.

NSP OTR, ವಿದ್ಯಾರ್ಥಿಯ ಶೈಕ್ಷಣಿಕ ವೃತ್ತಿಜೀವನದ ಅವಧಿಗೆ ಮಾನ್ಯವಾಗಿರುವ ಒಂದು ವಿಶಿಷ್ಟವಾದ 14-ಅಂಕಿಯ ಸಂಖ್ಯೆ. ಆಧಾರ್/ಆಧಾರ್ ದಾಖಲಾತಿ ID (EID) ಗೆ ಅನುಗುಣವಾಗಿ ನೀಡಲಾಗುತ್ತದೆ. OTR ಸಂಖ್ಯೆಯನ್ನು ಒಮ್ಮೆ ರಚಿಸಲಾಗುತ್ತದೆ ಮತ್ತು ವಿದ್ಯಾರ್ಥಿಯ ಸಂಪೂರ್ಣ ಶೈಕ್ಷಣಿಕ ವೃತ್ತಿಜೀವನಕ್ಕೆ ಮಾನ್ಯವಾಗಿರುತ್ತದೆ, ಎಲ್ಲಾ ಸಂಪರ್ಕಿತ ಸೇವೆಗಳಿಗೆ ಸ್ಥಿರವಾದ ಗುರುತಿಸುವಿಕೆಯನ್ನು ಒದಗಿಸುತ್ತದೆ.

OTR ನಂಬರ್ ಪಡೆಯಲು Reference number ಅಗತ್ಯವಾಗಿದೆ.

Step 1
Play store ನಲ್ಲಿ Nsp OTR app download ಮಾಡಿಕೊಳ್ಳಿ.

Step 2
App ತೆರೆದಾಗ Login– register—ekyc by faceauth ಎಂಬ ಮೂರು option ಕಾಣಿಸುತ್ತದೆ.

1000792479

Step 3
Register ಮೇಲೆ click ಮಾಡಿ. Guidlines ಬರುತ್ತದೆ box ಮೇಲೆ click ಮಾಡಿ Next ಕೊಡಿ. ನಂತರ ಮೊಬೈಲ್ ಸಂಖ್ಯೆ ನಮೂದಿಸಿ. OTP ಬರುತ್ತದೆ ಅದನ್ನು ನಮೂದಿಸಿ. ನಂತರ ಮಗುವಿನ ಆಧಾರ್ ಸಂಖ್ಯೆ ನಮೂದಿಸಿ. ಆಧಾರ್ ಲಿಂಕ್ ಆದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ ಕೊಟ್ಟಿರುವ capcha ನಮೂದಿಸಿ verify ಕೊಟ್ಟಾಗ ಮಗುವಿನ ಆಧಾರ್ ಮಾಹಿತಿ ಸಿಗುತ್ತದೆ.

Step 4
ತಂದೆಯ ಹೆಸರು, ತಾಯಿಯ ಹೆಸರು, email address ನಮೂದಿಸಿ capcha ನಮೂದಿಸಿ submit ಕೊಟ್ಟಾಗ reference ನಂಬರ್ ಸಿಗುತ್ತದೆ. ನಿಮ್ಮ ಮೊಬೈಲ್ ಗೆ SMS ಮೂಲಕವು ಕಳುಹಿಸಲಾಗುತ್ತದೆ.

1000792508

NSP OTR app ನಲ್ಲಿರುವ ekyc faceauth ಎಂಬಲ್ಲಿ click ಮಾಡಿ. ಅಲ್ಲಿ ಮೊದಲಿಗೆ reference number ಎಂದು ಇರುವಲ್ಲಿ reference no ನಮೂದಿಸಿ. OTP ಬರುತ್ತದೆ.

1000792512

OTP ನಮೂದಿಸಿ capcha ನಮೂದಿಸಿದಾಗ ಮಗುವಿನ ಮಾಹಿತಿ ಬರುತ್ತದೆ. Proceed to face authentication ಎಂಬಲ್ಲಿ click ಮಾಡಿ. Face authentication ಮಾಡಲು Adhar faceRD ಎಂಬ Appನ್ನು ಮೊದಲೇ download ಮಾಡಿಕೊಳ್ಳುವುದು ಅಗತ್ಯ.

1000792511

ಮಗುವಿನ ಮುಖವನ್ನು ಫ್ರೇಮ್ ಗೆ ಸರಿಯಾಗಿ ಇಟ್ಟು ಫೋಟೋ click ಮಾಡಬೇಕು. ಸರಿಯಾಗಿ click ಆದರೆ successful ಎಂದು ಬರುತ್ತದೆ. ಜೊತೆಗೆ 14 ಅಂಕಿಗಳ OTR ಸಂಖ್ಯೆ ಬರುತ್ತದೆ.

ಈ OTR ಸಂಖ್ಯೆಯನ್ನು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸಬೇಕಾಗುತ್ತದೆ.

WhatsApp Group Join Now
Telegram Group Join Now
Sharing Is Caring:

Leave a Comment