ದಿನಾಂಕ: 20.05.2024 ರಂದು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿರುವಂತೆ ವರ್ಗಾವಣೆಗೆ ಸಂಬಂಧಿಸಿದ ಪ್ರಮುಖ ಅಂಶಗಳು
- ಇ.ಇ.ಡಿ.ಎಸ್. ತಂತ್ರಾಂಶದಲ್ಲಿ ಯಾವುದೇ ಇಂದೀಕರಣ ಮಾಡಲು ದಿನಾಂಕ: 23.05.2024 ವರಗೆ ಡಿ.ಡಿ.ಒ, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಅವಕಾಶ ಕಲ್ಪಿಸಿದ್ದು, ಅದರನ್ವಯ ಸೂಕ್ತ ಕ್ರಮವಹಿಸುವುದು.
- ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಲು ದಿನಾಂಕ: 31.05.2024 ವರೆಗೆ ಅವಕಾಶ ಕಲ್ಪಿಸಿದ್ದು, ತಾಲ್ಲೂಕಿನ ಎಲ್ಲಾ ಶಿಕ್ಷಕರಿಗೆ ಮತ್ತು ಸಂಘಗಳ ಗಮನಕ್ಕೆ ಪ್ರಚಾರ ಮಾಡಲು ಕ್ರಮವಹಿಸುವುದು.
- ಶಿಕ್ಷಕರ ವರ್ಗಾವಣಾ ಅರ್ಜಿಯಲ್ಲಿ ಮಾಹಿತಿ ತಪ್ಪಾಗಿದ್ದಲ್ಲಿ ಸಂಭಂಧಿಸಿದ ಶಿಕ್ಷಕರು ಲಿಖಿತ ಮನವಿ ಸಲ್ಲಿಸಿದಲ್ಲಿ ಕ್ಷೇತೃಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಡಿಲೀಟ್ ಮಾಡಲು ಅವಕಾಶ ಕಲ್ಪಿಸಿದ್ದು ಸೂಕ್ತ ಕ್ರಮವಹಿಸುವುದು.
- ಈಗಾಗಲೇ ವಲಯ ವರ್ಗಾವಣೆಗೆ ಬಿಟ್ಟಿರುವ ಪಟ್ಟಿ ಅಂತಿಮವಲ್ಲ, ಶಿಕ್ಷಕರು, ಡಿ.ಡಿ.ಒ. ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸ್ವೀಕರಿಸಿರುವ ಆಕ್ಷೇಪಣೆಗಳನ್ವಯ ಪರಿಶೀಲಿಸಿ ಅಪ್‌ಡೇಟ್ ಮಾಡಿ ಪಟ್ಟಿಯನ್ನು ಬಿಡಲಾಗುವುದೆಂದು ತಿಳಿಸಿರುತ್ತಾರೆ.
- ವಲಯ ವರ್ಗಾವಣೆ ಪಟ್ಟಿಗೆ ಸೇರಿರುವ ಶಿಕ್ಷಕರಲ್ಲಿ 10 ವರ್ಷ ಪೂರ್ಣಗೊಂಡಿರುವ ಶಿಕ್ಷಕರನ್ನು ಪಟ್ಟಿಯಲ್ಲಿ ಸೇರಿಸಲಾಗುವುದೆಂದು ಹಾಗೂ ವಿನಾಯ್ತಿ ಕೋರುವ ಮಹಿಳಾ ಶಿಕ್ಷಕರಿಗೆ ಕಡ್ಡಾಯವಾಗಿ 50 ವರ್ಷ ಮತ್ತು ಪುರುಷ ಶಿಕ್ಷಕರಿಗೆ ಕಡ್ಡಾಯವಾಗಿ 55 ವರ್ಷಪೂರ್ಣಗೊಂಡಿರಬೇಕೆಂದು ತಿಳಿಸಿರುತ್ತಾರೆ.