ಗುರುಭ್ಯೋ ನಮಃ
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
‘ಗು’ ಎಂದರೆ ಅಂಧಕಾರ ‘ರು’ಎಂದರೆ ದೂರವಾಗಿಸುವುದು. ಗುರುಗಳು ನಮ್ಮ ಜೀವನದಲ್ಲಿನ ವಿಕಾರಗಳನ್ನು ಅಜ್ಞಾನವನ್ನು ದೂರ ಮಾಡಿ ಜೀವನವನ್ನು ಆನಂದದಿಂದ ಹೇಗೆ ಬದುಕಬೇಕೆಂದು ನಮಗೆ ಕಲಿಸುತ್ತಾರೆ. ತಮ್ಮ ಸೇವಾವಧಿಯಲ್ಲಿ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಿ ಸಾರ್ಥಕ್ಯವನ್ನು ಪಡೆದು ಈ ತಿಂಗಳು ನಿವೃತ್ತರಾಗುತ್ತಿರುವ ಶಿಕ್ಷಕ/ಕಿಯರ ಪರಿಚಯವನ್ನು ತಮ್ಮ ಮುಂದಿಡುತ್ತಿದ್ದೇವೆ.
ಶ್ರೀಮತಿ ಸುಜಾತ
ಸಹಶಿಕ್ಷಕಿ ಸ.ಉ.ಪ್ರಾ.ಶಾ.ಕೆಮ್ಮಾಯಿ ಪುತ್ತೂರು ತಾಲೂಕು ದ.ಕ.
ಶಿಕ್ಷಕಿ ವೃತ್ತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ತಾವು 05-07-1991ರಂದು ಸ.ಹಿ.ಪ್ರಾ.ಶಾಲೆ ಸಬಳೂರು ಇಲ್ಲಿ ಕರ್ತವ್ಯಕ್ಕೆ ಸೇರ್ಪಡೆ ಗೊಂಡರು.ನಂತರ 1996ರಲ್ಲಿ ಸ.ಹಿ.ಪ್ರಾ.ಶಾ.ಶಾಂತಿನಗರ ನೆಕ್ಕಿಲಾಡಿ ಗ್ರಾಮ ಇಲ್ಲಿಗೆ ವರ್ಗಾವಣೆ ಯಲ್ಲಿ ತೆರಲಿದರು.ಅಲ್ಲಿ ಸುದೀರ್ಘ ಸೇವೆ ಸಲ್ಲಿಸಿ 2006ರಲ್ಲಿ ಸ.ಉ.ಹಿ.ಪ್ರಾ.ಶಾಲೆ ಕೆಮ್ಮಾಯಿ ಕೃಷ್ಣನಗರ ಪುತ್ತೂರು ಇಲ್ಲಿಗೆ ವರ್ಗಾವಣೆಯಲ್ಲಿ ಬಂದು ನಲಿಕಲಿ ಶಿಕ್ಷಕಿಯಾಗಿ ಮಕ್ಕಳ ಪ್ರೀತಿಗೆ ಪಾತ್ರರಾದ ತಾವು ದಿನಾಂಕ 31-05-2021ರಂದು ಶಿಕ್ಷಕ ವೃತ್ತಿಗೆ 30ವರುಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಯಾಗುವರು.
ಅಪಾರ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿ ಹರಸಿದ ತಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಶಾಂತಿ ಸಮೃದ್ಧಿ ಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಸೆಲಿನ್ ಡಿ.ಸೋಜ
ಸಹಶಿಕ್ಷಕಿ ಸ.ಉ.ಪ್ರಾ.ಶಾ.ಹಾರಾಡಿ ಪುತ್ತೂರು ತಾಲೂಕು.
1998ರಲ್ಲಿ ಸ.ಹಿ.ಪ್ರಾ.ಶಾಲೆ ಕೋಡಿಂಬಾಡಿ ಇಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದ ತಾವು ಬಳಿಕ ಸ.ಉ.ಪ್ರಾ.ಶಾಲೆ ಹಾರಾಡಿ ಇಲ್ಲಿಗೆ ವರ್ಗಾವಣೆಗೊಂಡು ಇಂದು ಇದೇ ಶಾಲೆಯಿಂದಲೇ ನಿವೃತ್ತಿಯಾಗುತ್ತಿರುವ ತಾವು ಸುಮಾರು 23 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅವರ ಬಾಳಿಗೆ ಬೆಳಕಾಗಿದಿರಿ. ತಮ್ಮ ನಿವೃತ್ತ ಬದುಕು ಸುಖ, ನೆಮ್ಮದಿ, ಸಮೃದ್ಧಿ, ಶಾಂತಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಐರಿಸ್ ದೇವ ಪ್ರಸನ್ನಿ
ಸಹಶಿಕ್ಷಕಿ ಸ.ಹಿ.ಪ್ರಾ.ಶಾಲೆ ಭಕ್ತಕೋಡಿ ಪುತ್ತೂರು ತಾಲೂಕು.
01-07-1991ರಲ್ಲಿ ಸ.ಹಿ.ಪ್ರಾ.ಶಾಲೆ ಕೊಡಮಣ್ಣು ಬಂಟ್ವಾಳ ತಾಲೂಕು ಇಲ್ಲಿ ಶಿಕ್ಷಕಿ ವೃತ್ತಿ ಸೇವೆಗೆ ಸೇರಿದ ತಾವು ಬಳಿಕ ಸ. ಹಿ.ಪ್ರಾ.ಶಾಲೆ ಕಂಡತ್ತಪಳ್ಳಿ ಮಂಗಳೂರು ಉತ್ತರ ಇಲ್ಲಿ ಸಹಶಿಕ್ಷಕಿಯಾಗಿ ತದನಂತರ ಕಾಪಿಕಾಡ್ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಯಾಗಿ, ನಂತರ ಸ.ಹಿ.ಪ್ರಾ.ಶಾಲೆ ಬೈಕಂಪಾಡಿ ಮಂಗಳೂರು ಇಲ್ಲಿಗೆ ವರ್ಗಾವಣೆಗೊಂಡರು. ದಿನಾಂಕ:06-04-2016ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಗೊಂಡ ತಾವು ಸ.ಹಿ.ಪ್ರಾ.ಶಾಲೆ ಭಕ್ತಕೋಡಿ ಪುತ್ತೂರು ತಾಲೂಕು ಇಲ್ಲಿ ಸೇವೆ ಸಲ್ಲಿಸಿರುತ್ತೀರಿ. ಸುಮಾರು 30 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅವರ ಬದುಕಿಗೆ ಬೆಳಕಾಗಿದಿರಿ.ತಮ್ಮ ನಿವೃತ್ತಿ ಬದುಕು ಸುಖ ನೆಮ್ಮದಿ ಸಮೃದ್ಧಿ ಶಾಂತಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಧನಲಕ್ಷ್ಮಿ
ಮುಖ್ಯಗುರುಗಳು ಸ.ಉ.ಪ್ರಾ.ಶಾಲೆ ಏಕತ್ತಡ್ಕ
ಶಾಲಾ ದಿನದಿಂದಲೂ ಸಾಂಸ್ಕೃತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿಭಾವಂತರಾದ ತಾವು ಶಿಕ್ಷಕ ವೃತ್ತಿಯನ್ನು ಪ್ರೀತಿಯಿಂದ ಒಪ್ಪಿಕೊಂಡು ದಿನಾಂಕ:26-08-1991ರಂದು ಸ.ಮಾ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ ಇಲ್ಲಿ ಸೇವಾ ವೃತ್ತಿ ಬದುಕಿಗೆ ಸೇರಿದರು. ನಂತರ 1998ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಆರ್ಯಾಪು ಇಲ್ಲಿಗೆ ವರ್ಗಾವಣೆ ಗೊಂಡು ತದನಂತರ 2015ರಲ್ಲಿ ಸ.ಹಿ.ಪ್ರಾ.ಶಾಲೆ ಪರ್ಲಡ್ಕ ಇಲ್ಲಿ ವರ್ಗಾವಣೆ ಬಯಸಿ ಸೇವೆಗೆ ಸೇರಿದರು.2018ರಲ್ಲಿ ಸ.ಉ.ಹಿ.ಪ್ರಾ.ಶಾಲೆ ಏಕತ್ತಡ್ಕ ಪುತ್ತೂರು ಇಲ್ಲಿಗೆ ವರ್ಗಾವಣೆಗೊಂಡ ತಾವು ಇದುವರೆಗೂ ದಿನಾಂಕ:31-05-2021ತನಕ ಸೇವೆ ಸಲ್ಲಿಸಿದರು. ಸುಮಾರು 30 ವರ್ಷಗಳ ಸುದೀರ್ಘ ಧನಿವಿಲ್ಲದೇ ದುಡಿದ ತಾವು ಅಪಾರ ವಿದ್ಯಾರ್ಥಿ ಬಳಗವನ್ನು ಬೆಳಗಿಸಿದ ಕೀರ್ತಿಗೆ ಪಾತ್ರರಾಗಿದ್ದೀರಿ. ಸದಾ ನಗುಮುಖದಿಂದಿರುವ ತಾವು ಗಣಿತ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರ ಮೆಚ್ಚುಗೆಯನ್ನು ಗಳಿಸಿರುವಿರಿ. ತಮ್ಮ ನಿವೃತ್ತಿ ಜೀವನವು ಸುಖ, ನೆಮ್ಮದಿ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಶಾಂತಿ ವಿ ಭಟ್
ಮುಖ್ಯ ಶಿಕ್ಷಕರು ಸ.ಉ.ಪ್ರಾ ಶಾಲೆ ನೇರ್ಲ ಕಡಬ ತಾಲೂಕು
ಉತ್ತರ ಕನ್ನಡ ಜಿಲ್ಲೆಯವರಾದ ಶಾಂತಿ ವಿ ಭಟ್ ತಮ್ಮ ಶಿಕ್ಷಣವನ್ನು ಅಲ್ಲೇ ಪೂರೈಸಿ 1982 ರಲ್ಲಿ ಸ.ಹಿ.ಪ್ರಾ ಶಾಲೆ ತುಂಬೆಬೀಡು ಉ.ಕ ಇಲ್ಲಿ ಸರಕಾರಿ ಸೇವೆಗೆ ಸೇರಿದರು. ನಂತರದಲ್ಲಿ ಹೊನ್ನಾವರದ ಹೆಬ್ಬಾರ್ನಕೆರೆ ಶಾಲೆಯಿಂದ ಕಡಬ ತಾಲೂಕಿನ ಸ.ಹಿ.ಪ್ರಾ ಶಾಲೆ ಕಡಬಕ್ಕೆ ವರ್ಗಾವಣೆಗೊಂಡು ಬಂದರು. ನಂತರದಲ್ಲಿ ಪಡುಬೆಟ್ಟು, ನೆಲ್ಯಾಡಿ, ರೆಂಜಿಲಾಡಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸ.ಉ.ಪ್ರಾ.ಶಾಲೆ ನೇರ್ಲದಲ್ಲಿ ಇದೀಗ ನಿವೃತ್ತರಾಗುತ್ತಿದ್ದಾರೆ. ಗೈಡ್ಸ್ ನಲ್ಲಿ ಹಿಮಾಲಯನ್ ವುಡ್ ಬ್ಯಾಚ್ ಪಡೆದಿರುವ ಇವರು ತಮ್ಮ ಅನೇಕ ಮಕ್ಕಳನ್ನು ರಾಜ್ಯ ಹಾಗೂ ರಾಷ್ಟ್ರಪತಿ ಪುರಸ್ಕಾರ ಪಡೆಯುವಂತೆ ತರಬೇತುಗೊಳಿಸಿದವರು. ಯೋಗ ಶಿಕ್ಷಕಿಯಾಗಿಯೂ ಮಕ್ಕಳನ್ನು ತರಬೇತುಗೊಳಿಸಿರುವ ಇವರು ‘ಜನ ಮೆಚ್ಚಿದ ಶಿಕ್ಷಕಿ ‘ಪ್ರಶಸ್ತಿ ಹಾಗೂ ಈ ವರ್ಷದ ಮಹಿಳಾ ದಿನಾಚರಣೆಯಂದು ‘ಅನುಪಮಾ ಸೇವಾ ಪುರಸ್ಕಾರ’ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಜೆಸಿ ಸಂಸ್ಥೆಯಲ್ಲಿಯೂ ತೊಡಗಿಕೊಂಡಿರುವ ಇವರು ತಮ್ಮ ಅಧಿಕಾರವಧಿಯಲ್ಲಿ ಉತ್ತಮ ಜೇಸಿರೇಟ್ ಅಧ್ಯಕ್ಷ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಶಾಲೆಯ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಅವಿರತ ಸೇವೆ ಸಲ್ಲಿಸಿದ ಇವರಿಗೆ ಇವರ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಕುಶಾಲಪ್ಪ ಗೌಡ ಬಿ
ಸ.ಹಿ.ಪ್ರಾ ಶಾಲೆ ಕೊಯಿಲ ಕೆ.ಸಿ ಫಾರ್ಮ್
1982ರಲ್ಲಿ ಮಂಗಳೂರಿನಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು 01-12-1998 ರಲ್ಲಿ ಸ.ಹಿ.ಪ್ರಾ ಶಾಲೆ ಕೊಯಿಲ ಕೆ.ಸಿ ಫಾರ್ಮ್ ಇಲ್ಲಿ ಸೇವೆಗೆ ಸೇರಿದರು. ನಂತರ ಗಂಡಿಬಾಗಿಲು ಶಾಲೆಗೆ ವರ್ಗಾವಣೆಗೊಂಡು ಈ ಶಾಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ‘ಜನ ಮೆಚ್ಚಿದ ಶಿಕ್ಷಕ’ ಪ್ರಶಸ್ತಿಗೆ ಭಾಜನರಾದರು. ಮುಂದಕ್ಕೆ ಮುಖ್ಯ ಗುರುಗಳಾಗಿ ಬಡ್ತಿ ಹೊಂದಿ ಇವರು ಸ.ಹಿ.ಪ್ರಾ ಶಾಲೆ ಕುಂತೂರು ಇಲ್ಲಿಗೆ ಪದೋನ್ನತಿ ಗೊಂಡರು. ಅಲ್ಲಿಂದ ವರ್ಗಾವಣೆಗೊಂಡು ಸ.ಹಿ.ಪ್ರಾ ಶಾಲೆ ಕೊಯಿಲದಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿಯಾಗುತ್ತಿದ್ದಾರೆ. ಪತ್ನಿ ಶಿಕ್ಷಕಿ ಪುಷ್ಪಾವತಿ ಎಂ, ಮಕ್ಕಳಾದ ಸ್ವರ್ಣ ಪಿ, ಸ್ವಾತಿ ಪಿ ಅಳಿಯ ಸೌರಭ ಕುಮಾರ್ ಚಾರಿಯಾರೊಂದಿಗಿನ ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಸಚಿದೇವಿ
ಸ.ಹಿ.ಪ್ರಾ ಶಾಲೆ ನೂಜಿಬಾಳ್ತಿಲ
ಕಾರ್ಕಳದ ಕುಮಾರಯ್ಯ ಪೂವಣಿ ಮತ್ತು ವಿಜಯಮ್ಮ ದಂಪತಿಗಳ ಮಗಳಾಗಿ ಜನಿಸಿದ ಸಚಿದೇವಿ ಬಾಲ್ಯದ ವಿದ್ಯಾಭ್ಯಾಸವನ್ನು ಕಾರ್ಕಳದಲ್ಲಿ ಪೂರೈಸಿ, ಶಿವಮೊಗ್ಗದಲ್ಲಿ ಟಿ.ಸಿ.ಹೆಚ್ ತರಬೇತಿ ಪಡೆದು 12-08-1998 ರಲ್ಲಿ ಕಡಬ ತಾಲೂಕಿನ ಕೋಡಿಂಬಾಳ ಶಾಲೆಗೆ ಸೇವೆಗೆ ಸೇರಿದರು. ನಂತರ ಸ.ಹಿ.ಪ್ರಾ ಶಾಲೆ ನೂಜಿಬಾಳ್ತಿಲಕ್ಕೆ ವರ್ಗಾವಣೆಗೊಂಡು ತಮ್ಮ 23 ವರ್ಷಗಳ ಸೇವೆಯಿಂದ ಇದೀಗ ನಿವೃತ್ತರಾಗುತ್ತಿದ್ದಾರೆ. ಪತಿ ಜಿನೇಂದ್ರ ಜೈನ್, ಮಕ್ಕಳಾದ ಪವನ್ ಕುಮಾರ್, ಪ್ರತಿಭಾ ಕುಮಾರ್ ರೊಂದಿಗೆ ಸುಖೀ ಜೀವನ ನಡೆಸುತ್ತಿರುವ ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು.
ಶ್ರೀ ತುಕಾರಾಮ ಗೌಡ
ಸ.ಉ.ಪ್ರಾ. ಶಾಲೆ ಬಿಳಿನೆಲೆ ಕೈಕಂಬ
06-02-1990 ರಲ್ಲಿ ಪುತ್ತೂರು ತಾಲೂಕಿನ ಇಡ್ಯಡ್ಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದ ಇವರು ಕ್ಲಸ್ಟರ್ CRP ಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸ.ಉ.ಪ್ರಾ ಶಾಲೆ ಬಿಳಿ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ತಾವು ಸೇವೆ ಸಲ್ಲಿಸಿದ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ ಇವರು ಪುತ್ತೂರು ತಾಲೂಕು ಶಿಕ್ಷಕರ ಸಂಘದ ಪ್ರತಿನಿಧಿಯಾಗಿಯೂ ಶಿಕ್ಷಕರ ಸೇವೆಗೈದವರು. ಕಡಬ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾದ ಇವರು ಪ್ರಸ್ತುತ ಕಡಬ ತಾಲೂಕು ಶಿಕ್ಷಕ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ನಿವೃತ್ತ ಜೀವನ ಸುಖಕರವಾಗಿರಲಿ.
ಶ್ರೀಮತಿ ಚಿತ್ರಾಕ್ಷಿ
ಸ.ಹಿ.ಪ್ರಾ ಶಾಲೆ ಕೊಲ್ಲೂರು ಮಂಗಳೂರು ಉತ್ತರ
ಸ.ಹಿ.ಪ್ರಾ ಶಾಲೆ ಕರ್ನಿರೆ ಇಲ್ಲಿ ದಿನಾಂಕ 08-02-1996ರಲ್ಲಿ ಸೇವೆಗೆ ಸೇರಿದ ಚಿತ್ರಾಕ್ಷಿ ಯವರು ಪ್ರಸ್ತುತ ಸ.ಹಿ.ಪ್ರಾ ಶಾಲೆ ಕೊಲ್ಲೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ತಿಂಗಳು ತಮ್ಮ 25 ವರ್ಷಗಳ ದೀರ್ಘ ವೃತ್ತಿಬದುಕಿನಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಗೀತಾ ಎಸ್
ಸ.ಹಿ.ಪ್ರಾ ಶಾಲೆ ಬೆಂಗ್ರೆ ಕಸಬ ಮಂಗಳೂರು ಉತ್ತರ
01-07-1991ರಲ್ಲಿ ಸರಕಾರಿ ಸೇವೆಗೆ ಸೇರಿದ ಗೀತಾ ಎಸ್ ಇವರು ಸ.ಕಿ.ಪ್ರಾ ಶಾಲೆ ಹೆಣ್ಣೂರ ಪದವು, ಸ್ಯಾಂಡ್ ಪಿಟ್, ತೋಟ ಬೆಂಗ್ರೆ ಇಲ್ಲಿ ಸೇವೆ ಸಲ್ಲಿಸಿ ಇದೀಗ ಸ.ಹಿ.ಪ್ರಾ ಶಾಲೆ ಬೆಂಗ್ರೆ ಕಸಬದಲ್ಲಿ ತಮ್ಮ 35 ವರ್ಷಗಳ ವೃತ್ತಿ ಜೀವನದಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸಿಸಿಲಿಯ ಪೆರಿಸ್
ಸ.ಹಿ.ಪ್ರಾ ಶಾಲೆ 2 block ಮಂಗಳೂರು ಉತ್ತರ
ಸಿಸಿಲಿಯ ಪೆರಿಸ್ ಇವರು ಮಂಗಳೂರು ಉತ್ತರ ವಲಯದ ಸ.ಹಿ.ಪ್ರಾ ಶಾಲೆ ಸೆಕೆಂಡ್ ಬ್ಲಾಕ್ ಇಲ್ಲಿ 04-08-1998 ರಲ್ಲಿ ಸೇವೆಗೆ ಸೇರಿ ಅದೇ ಶಾಲೆಯಲ್ಲಿ 23 ವರ್ಷಗಳ ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು.
ಶ್ರೀಮತಿ ತೆರೆಜ್ ಸೋಜಾ
ಸ.ಹಿ.ಪ್ರಾ ಶಾಲೆ ಪಂಜಿಮೊಗರು ಮಂಗಳೂರು ಉತ್ತರ
20-05-1961 ರಲ್ಲಿ ಜನಿಸಿದ ತೆರೆಜ್ ಸೋಜಾ ರವರು 10-08-1998 ಅಲ್ಲಿ ಸ.ಹಿ.ಪ್ರಾ ಶಾಲೆ ಕುತ್ತೆತ್ತೂರು ಮಂಗಳೂರು ಉತ್ತರದಲ್ಲಿ ಸೇವೆಗೆ ಸೇರಿದರು. ಅಲ್ಲಿಂದ ಸ.ಹಿ.ಪ್ರಾ ಶಾಲೆ ಪಂಜಿಮೊಗರುವಿಗೆ ವರ್ಗಾವಣೆಗೊಂಡು ಈಗ ಇಲ್ಲಿ ತಮ್ಮ 23 ವರ್ಷಗಳ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಭಾರತಿ
ಸ.ಕಿ.ಪ್ರಾ ಶಾಲೆ ತಣ್ಣೀರುಬಾವಿ ಮಂಗಳೂರು ಉತ್ತರ
ದಿನಾಂಕ 18-11-1998 ರಲ್ಲಿ ಸ.ಕಿ.ಪ್ರಾ. ಶಾಲೆ ತಣ್ಣೀರುಬಾವಿ ಮಂಗಳೂರು ಉತ್ತರ ವಲಯದಲ್ಲಿ ಸೇವೆಗೆ ಸೇರಿದ ಭಾರತಿ ಇವರು ಅದೇ ಶಾಲೆಯಲ್ಲಿ ತಮ್ಮ ಇಪ್ಪತ್ತಮೂರು ವರ್ಷಗಳ ಸುದೀರ್ಘ ವೃತ್ತಿ ಬದುಕಿನಿಂದ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಇವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಕ್ಯಾಥರಿನ್ ಡಿಸೋಜ
ಸ.ಹಿ.ಪ್ರಾ ಶಾಲೆ ಕಣ್ಣೂರು ಮುಸ್ಲಿಂ ಮಂಗಳೂರು ದಕ್ಷಿಣ
ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಪಿನ್ ಡಿಸೋಜ ಇವರ ಮಗಳಾಗಿ 25-11-1961 ರಲ್ಲಿ ಜನಿಸಿದ ಕ್ಯಾಥರಿನ್ ಡಿಸೋಜ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿ 12-01-1996 ರಲ್ಲಿ ಸರ್ಕಾರಿ ಸೇವೆಗೆ ಸೇರಿದರು. ಬಂಟ್ವಾಳ ತಾಲೂಕಿನ ಪಾಣೆಲ ಬರಿಕೆ, ಅಮ್ಮೆಮ್ಮಾರ್, ತಲೆಮೊಗರು ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮಂಗಳೂರು ದಕ್ಷಿಣದ ಸ.ಹಿ.ಪ್ರಾ ಶಾಲೆ ಕಣ್ಣೂರು ಮುಸ್ಲಿಂ ಇಲ್ಲಿ ವೈಯಕ್ತಿಕ ಕಾರಣಗಳಿಂದ ತಮ್ಮ 25 ವರ್ಷಗಳ ಸೇವೆಯಿಂದ ಸ್ವಯಂ ನಿವೃತ್ತರಾಗಲಿದ್ದಾರೆ. ಕರಕುಶಲ ವಸ್ತುಗಳ ತಯಾರಿಕೆಯ ಹವ್ಯಾಸ ಇರುವ ಇವರು ಅನೇಕ ಮಕ್ಕಳು ಹಾಗೂ ಶಿಕ್ಷಕರಿಗೆ ತರಬೇತಿಯನ್ನು ನೀಡಿದ್ದಾರೆ. ಕರಕುಶಲ ತಯಾರಿ ಸ್ಪರ್ಧೆಯಲ್ಲಿ 9 ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಇವರು ಬೋಧನೋಪಕರಣಗಳ ತಯಾರಿಕೆಯಲ್ಲಿ ರಾಜ್ಯ ಮಟ್ಟದವರೆಗೂ ಸ್ಪರ್ಧಿಸಿದ್ದಾರೆ. ಇವರು ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಮೇರಿ ಸಿ
ಸ.ಕಿ.ಪ್ರಾ ಶಾಲೆ ಅತಿಕಾರಿಬೆಟ್ಟು ಮಂಗಳೂರು ದಕ್ಷಿಣ
ದಿನಾಂಕ 11-12-2003 ರಲ್ಲಿ ಸ.ಹಿ.ಪ್ರಾ ಶಾಲೆ ಇಂದಬೆಟ್ಟು ಇಲ್ಲಿ ಸೇವೆಗೆ ಸೇರಿದ ಇವರು ಮುಂದಕ್ಕೆ ಅತಿಕಾರಿಬೆಟ್ಟು, ಕಕ್ವ,
ಲಿಂಗಪ್ಪಯ್ಯನಕಾಡು,ಕಿಲ್ಪಾಡಿ,ಮುಲ್ಕಿ ಸದಾಶಿವನಗರ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಈಗ ಹದಿನೆಂಟು ವರ್ಷಗಳ ಸೇವೆಯಿಂದ ಸ.ಹಿ.ಪ್ರಾ ಶಾಲೆ ಅತಿಕಾರಿಬೆಟ್ಟುವಿನಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ.
ಶ್ರೀಮತಿ ಪೂರ್ಣಿಮಾ ಬಾಯ್
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಚ್ಚಿಲ್ ಮಂಗಳೂರು ದಕ್ಷಿಣ
ಕೆ ಪಾಂಡುರಂಗ ಶೆಣೈ,ನಿರುಪಮಾ ಶೆಣೈ ಇವರ ಮಗಳಾಗಿ ಜನಿಸಿದ ಪೂರ್ಣಿಮಾ ಇವರು ತಮ್ಮ ಶಿಕ್ಷಣವನ್ನು ಉಡುಪಿ ಜಿಲ್ಲೆಯ ಮುದರಂಗಡಿಯಲ್ಲಿ ಪೂರೈಸಿ, ಅದಮಾರು ಜೂನಿಯರ್ ಕಾಲೇಜಿನಲ್ಲಿ ಇಂಟರ್ನ್ಶಿಪ್ ಕೋರ್ಸ್ ಮುಗಿಸಿ 25-10-1992 ರಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸೇವೆಗೆ ಸೇರಿದರು. ಸ.ಹಿ.ಪ್ರಾ ಶಾಲೆ ಪಲಿಮಾರು, ಬೈಕಂಪಾಡಿ ಮುಸ್ಲಿಂ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಮಂಗಳೂರು ದಕ್ಷಿಣ ವಲಯದ ಸ.ಹಿ.ಪ್ರಾ ಶಾಲೆ ವಳಚ್ಚಿಲ್ ನಲ್ಲಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಮರಿಯಾ ಟಿ ಡಿ ಕುನ್ನ
ಸ.ಕಿ.ಪ್ರಾ.ಶಾಲೆ ನಡಿಗುಡ್ಡೆ ಬೆಳುವಾಯಿ ಮೂಡುಬಿದಿರೆ ತಾಲೂಕು
ಮೂಡಬಿದ್ರೆ ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡಿಗುಡ್ಡೆ ಬೆಳುವಾಯಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ಮರಿಯ ಟಿ.ಡಿ ಕುನ್ನಾ ಈ ತಿಂಗಳು ತಮ್ಮ ಸೇವೆಯಿಂದ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಶಾಲೆಯ ಹಾಗೂ ಮಕ್ಕಳ ಪ್ರಗತಿಗಾಗಿ ಶ್ರಮಿಸಿದ ಇವರಿಗೆ ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಶಾಂತಕುಮಾರಿ
ಸ.ಉ.ಪ್ರಾ ಶಾಲೆ ಇರಾ ಬಂಟ್ವಾಳ ತಾಲೂಕು
ಇವರು ದಿನಾಂಕ 22.05.1961 ರಂದು ಜನಿಸಿದರು. ಇವರು 20.01.1999 ರಲ್ಲಿ ಕಡಬ ತಾಲ್ಲೂಕಿನ ದೇರಾಜೆ ಶಾಲೆಯಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು ನಂತರ ವರ್ಗಾವಣೆಗೊಂಡು ಮಂಗಳೂರು ತಾಲ್ಲೂಕಿನ ಬೋಳಿಯಾರು ಶಾಲೆಗೆ 15.08 2007 ಕ್ಕೆ ಸೇರ್ಪಡೆಗೊಂಡರು. ನಂತರ ಪುನಃ ವರ್ಗಾವಣೆಗೊಂಡು ಬಂಟ್ವಾಳ ತಾಲೂಕಿನ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಇರಾ ಇಲ್ಲಿಗೆ 21.06.2012 ಕ್ಕೆ ಸೇರಿರುತ್ತಾರೆ. ಇವರು ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯಲ್ಲಿ ವಾಸ್ತವ್ಯವನ್ನು ಹೊಂದಿರುತ್ತಾರೆ. ಇವರ ನಿವೃತ್ತಜೀವನ ಶುಭಕರವಾಗಿರಲಿ.
ಶ್ರೀಮತಿ ಅಮ್ಮಣಿ
ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೂರ್ಯ ಬಂಟ್ವಾಳ ತಾಲೂಕು
ಶ್ರೀಮತಿ ಅಮ್ಮಣಿ ಇವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಉಳಿಯ ಎಂಬ ಮನೆಯಲ್ಲಿ ದಿ. ದುಗಪ್ಪಗೌಡ ಮತ್ತು ತಂಗಮ್ಮ ಎಂಬ ದಂಪತಿಗಳ 3 ನೇ ಮಗಳಾಗಿ ದಿನಾಂಕ 01/ 06/ 1961 ರಲ್ಲಿ ಜನಿಸಿದ್ದಾರೆ .ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗುತ್ತಿಗಾರಿನಲ್ಲಿ ,ಶಿಕ್ಷಕ ತರಬೇತಿಯನ್ನು K.U.T.T.I ಕೊಕ್ಕರ್ಣೆಯಲ್ಲಿ ಪಡೆದಿರುತ್ತಾರೆ .ದಿನಾಂಕ 17-12-1998 ರಂದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೂರ್ಯ ಇಲ್ಲಿ ಸೇವೆಪ್ರಾರಂಭಿಸಿ ಸುದೀರ್ಘ 22 ವರ್ಷಗಳ ಕಾಲ ಒಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿದ್ದಾರೆ. ಸೇವಾದಳ ತರಬೇತಿ ಪಡೆದು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ. ಶಿಕ್ಷಕ ವೃತ್ತಿ ಪವಿತ್ರವಾದ್ದು ಎನ್ನುವ ನಂಬಿಕೆ ಹೊಂದಿರುವ ಇವರು ಅದೆಷ್ಷೊ ಮಕ್ಕಳಲ್ಲಿ ಮಕ್ಕಳಾಗಿ ಬೆರತು ಅವರ ಜೀವನದ ಬೆಳಕಾಗಿದ್ದಾರೆ. ಇವರು ಕುಶಾಲಪ್ಪ ಗೌಡ ಮತ್ತು ಇಬ್ಬರು ಪುತ್ರಿಯರೊಂದಿಗೆ ಸುಖಮಯ ಜೀವನ ನಡೆಸುತ್ತಿದ್ದಾರೆ. ಇವರ ಮುಂದಿನ ನಿವೃತ್ತ ಜೀವನ ಸುಖಮಯವಾಗಿರಲಿ.
ಶ್ರೀ ಮೋಹನ ಪಿ.ಎಂ
ಸ.ಉ.ಪ್ರಾ.ಶಾಲೆ ಸಜಿಪನಡು ಬಂಟ್ವಾಳ ತಾಲೂಕು
ಇವರು ದಿನಾಂಕ 28-10-1982 ರಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ಇವರು ಮುಂಡೂರು ಬರಿಮಾರು, ನೇರಳೆ ಕಟ್ಟೆಯಲ್ಲಿ ಸಹ ಶಿಕ್ಷಕರಾಗಿ ,ಪಾಟ್ರಕೋಡಿ ,ಅಳಕೆ ಮಜಲು , ಗಡಿಯಾರ, ಕದಿಲ , ಮುರ , ರಾಗಿಕುಮೇರಿ , ಮಿತ್ತೂರು ಇಲ್ಲಿ ಮುಖ್ಯಶಿಕ್ಷಕರಾಗಿ ಸ.ಉ.ಪ್ರಾ.ಶಾಲೆ ಸಜಿಪನಡು ಇಲ್ಲಿ ಪದವೀಧರೇತರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ನಿವೃತ್ತಿ ಹೊಂದಲಿದ್ದಾರೆ. ಸುದೀರ್ಘ 39 ವರ್ಷಗಳ ಸೇವೆಯಲ್ಲಿ ವಿದ್ಯಾರ್ಥಿಗಳ ಅಕ್ಷರ ಬೀಜ ವನ್ನು ಬಿತ್ತಿದ್ದಾರೆ. ಇವರ ಮುಂದಿನ ನಿವೃತ್ತಿ ಜೀವನ ಸುಖಮಯವಾಗಿರಲಿ.
ಶ್ರೀಮತಿ ಲೀಲಾ .ಎನ್
ಸ.ಹಿ.ಪ್ರಾ ಶಾಲೆ ಶಂಭೂರು ಬಂಟ್ವಾಳ ತಾಲೂಕು
ಇವರು ದಿನಾಂಕ:- 01-06-1961 ರಂದು
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಈಶ್ವರ ಪುರುಷ ಮತ್ತು ವಿಮಲ ದಂಪತಿಗಳಿಗೆ ಮಗಳಾಗಿ ಜನಿಸಿದರು .ಇವರು ಸ.ಹಿ.ಪ್ರಾ.ಶಾಲೆ ಶಿಶಿಲ, ಬೆಳ್ತಂಗಡಿಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಸ.ಹಿ.ಪ್ರಾ.ಶಾಲೆ ನಂದಾವರಕ್ಕೆ ವರ್ಗಾವಣೆಗೊಂಡು , ಸ.ಹಿ.ಪ್ರಾ.ಶಾಲೆ ಸಜಿಪನಡುನಲ್ಲಿ ಮುಖ್ಯಶಿಕ್ಷಕರಾಗಿ ಬಡ್ತಿಹೊಂದಿ ಸ.ಹಿ.ಪ್ರಾ.ಶಾಲೆ ಶಂಭೂರು ಬಂಟ್ವಾಳ ತಾಲೂಕು ಇಲ್ಲಿ 15 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿದ್ದಾರೆ . ಸುದೀರ್ಘ 41 ವರ್ಷಗಳ ಸೇವೆ ಸಲ್ಲಿಸಿದ್ದ ಇವರು ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಕಬ್ ವಿಭಾಗದಲ್ಲಿ ಹಿಮಾಲಯ ವುಡ್ ಬ್ಯಾಡ್ಜ ತರಬೇತಿ ಪಡೆದು 25 ವರ್ಷಗಳ ಕಾಲ ಕಬ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅದೆಷ್ಟೊ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಇವರು ಇದೀಗ ನಿವೃತ್ತಿ ಹೊಂದಲಿದ್ದಾರೆ. ಪತಿ ವಿಶ್ವನಾಥ ಮತ್ತು ಮೂವರು ಮಕ್ಕಳೊಂದಿಗೆ ಪಾಣಿಮಂಗಳೂರಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಮುಂದಿನ ನಿವೃತ್ತಿ ಜೀವನ ಸುಖಮಯವಾಗಿರಲಿ.
ಶ್ರೀ ಲಕ್ಷಣ್ ದಾಸ್ ನಾಯ್ಕ ಬಾಳೆಪುಣಿ
ಸ.ಉ.ಪ್ರಾ.ಶಾಲೆ ಮಂಕುಡೆ ಬಂಟ್ವಾಳ ತಾಲೂಕು
ಇವರು ದಿನಾಂಕ 24-11-1998ರಂದು ಸ.ಹಿ.ಪ್ರಾ.ಶಾಲೆ ತಾಳಿತ್ತನೂಜಿ ಬಂಟ್ವಾಳ ತಾಲೂಕು ಇಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ , ಸ.ಉ.ಪ್ರಾ.ಶಾಲೆ ಮಂಕುಡೆ ಇಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿದ್ದಾರೆ.
ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು.
ಶ್ರೀ ಮುದರ ಬೈರ .ಎಸ್
ಸ.ಮಾ.ಹಿ.ಪ್ರಾ.ಶಾಲೆ ಒಕ್ಕೊತ್ತೂರ ಬಂಟ್ವಾಳ
ಇವರು ರಾಮ ಬೈರ್.ಎಸ್ ಹಾಗೂ ಸುಬ್ಬಮ್ಮ ದಂಪತಿಗಳಿಗೆ ಬಂಟ್ವಾಳ ತಾಲೂಕಿನ ಅಡ್ಡನಡ್ಕ ಸಮೀಪದ ಸಾಯ ಎಂಬಲ್ಲಿ 03-05-1961 ರಲ್ಲಿ ಸುಪುತ್ರನಾಗಿ ಜನಿಸಿದರು. ಇವರು ದಿನಾಂಕ 12-07-1985 ರಲ್ಲಿ ಬೆಳ್ತಂಗಡಿ ತಾಲೂಕಿನ ಬಡಕೋಡಿಯಲ್ಲಿ ಸೇವೆ ಆರಂಭಿಸಿ ಮಂಟ ಕುಕ್ಕಾಜೆ, ಚಂದಳಿಕೆಯಲ್ಲಿ ಸಹ ಶಿಕ್ಷಕರಾಗಿ ನಿಡ್ಡಳ್ಳಿ, ತೋಟತ್ತಾಡಿ , ಹಾರಾಡಿ , ಇಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ಬೆಳ್ತಂಗಡಿ ಯಲ್ಲಿ ಸಿ.ಆರ್.ಪಿ ಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸ.ಮಾ.ಹಿ.ಪ್ರಾ.ಶಾಲೆ ಒಕ್ಕೊತ್ತೂರ ಬಂಟ್ವಾಳ ತಾಲೂಕು ಇಲ್ಲಿ ಸೇವಾ ನಿವೃತ್ತಿ ಹೊಂದಲಿದ್ದಾರೆ. ಸುದಿರ್ಘ 36 ವರ್ಷಗಳ ಕಾಲ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಅಕ್ಷರ ದೀವಿಗೆಯನ್ನು ಬೆಳಗಿಸಿದ್ದಾರೆ . ನಿವೃತ್ತಿ ಜೀವನದ ಶುಭಾಶಯಗಳು.
ಶ್ರೀಮತಿ ರಮ ಕೆ
ಸ.ಹಿ.ಪ್ರಾ.ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು
ಇವರು ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆ ಎಂಬಲ್ಲಿ 10/05/1961 ರಲ್ಲಿ ದಿ.ಅನಂತಯ್ಯ ಹಾಗೂ ದಿ.ಯಮುನಮ್ಮ ಇವರ ಮಗಳಾಗಿ ಜನಿಸಿದರು .ಇವರು ಸರ್ವೋದಯ ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆ ವಿರಾಜಪೇಟೆ ಇಲ್ಲಿ ತರಬೇತಿ ಪಡೆದು , ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ.ಶಾಲೆ ಮಂಚಿ ಕುಕ್ಕಾಜೆ ಇಲ್ಲಿ ಶಿಕ್ಷಕ ವೃತ್ತಿ ಪ್ರಾರಂಬಿಸಿ 12 ವರ್ಷಗಳ ನಂತರ ಸ.ಹಿ.ಪ್ರಾ.ಶಾಲೆ ಕಲ್ಮಂಜ ಇಲ್ಲಿ ವರ್ಗಾವಣೆಗೊಂಡು 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಒಟ್ಟಾರೆ 30 ವರ್ಷಗಳ ಸುದಿರ್ಘ ಸೇವೆಯೊಂದಿಗೆ ನಿವೃತ್ತಿ ಹೊಂದಲಿದ್ದಾರೆ. ಇವರ ಸೇವಾವಧಿಯಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬುಲ್ ಬುಲ್ ತರಬೇತಿ ನೀಡಿದ್ದಾರೆ . ಪ್ರಸ್ತುತ ಚಿಗುರುಪಾದೆಯಲ್ಲಿ ಪತಿ ಹಾಗೂ ಇಬ್ಬರು ಸುಪುತ್ರರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಮುಂದಿನ ನಿವೃತ್ತಿ ಜೀವನ ಸಂತಸದಾಯಕವಾಗಿರಲಿ.
ಶ್ರೀಮತಿ ಕೋಮಲ
ಸ ಕಿ ಪ್ರಾ ಶಾಲೆ ಬೊಳುಬೈಲು ಸುಳ್ಯ
ಕಾಸರಗೋಡು ಜಿಲ್ಲೆಯ ಬೇಡಡ್ಕ ಗ್ರಾಮದ ಕುಂದಂಗೋಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಬಂದಡ್ಕ ದಲ್ಲಿ ಪ್ರೌಢ ಶಿಕ್ಷಣ ಪಡೆದು ಮಡಿಕೇರಿಯ ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು ಕೇರ್ಪಳ, ಗಾಂಧಿನಗರದಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ 1999ರಲ್ಲಿ ಸರ್ಕಾರಿ ಸೇವೆಗೆ ಸೇರಿದರು. ದೇವರಕಾನ ,ಅಯ್ಯನ ಕಟ್ಟೆಯಲ್ಲಿ ಸೇವೆ ಸಲ್ಲಿಸಿ ಇದೀಗ ಸ.ಕಿ.ಪ್ರಾ ಶಾಲೆ ಬೊಲುಬೈಲು ನಲ್ಲಿ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಲೋಕನಾಥ
ಸ.ಹಿ.ಪ್ರಾ ಶಾಲೆ ಶೇಣಿ ಸುಳ್ಯ ತಾಲೂಕು
1998ರಲ್ಲಿ ಸ.ಹಿ.ಪ್ರಾ ಶಾಲೆ ಇಂದ್ರಾಜೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಇವರು ಅಮರ ಪಡ್ನೂರು, ದೇರಾಜೆ ಶಾಲೆಯಲ್ಲಿ ಕಾರ್ಯನಿರ್ವಹಿಸಿ ಇದೀಗ ಸ.ಹಿ.ಪ್ರಾ ಶಾಲೆ ಶೇಣಿಗೆಯಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಜಾನಪದ ಗೀತೆ, ನಾಡಗೀತೆ ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಇವರು ಅನೇಕ ಗಾಯನ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದಾರೆ. ಶಿಕ್ಷಕಿ ಹೇಮಲತಾ ಹಾಗೂ ಇಬ್ಬರು ಮಕ್ಕಳೊಂದಿಗಿನ ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ.
ಕಮಲಾಕ್ಷಿ ಪಿ
ಸರಕಾರಿ ಮಾದರಿ ಶಾಲೆ ಗುತ್ತಿಗಾರು ಸುಳ್ಯ
1-6-1961ರಲ್ಲಿ ಜನಿಸಿದ ಇವರು ನೆಲ್ಯಾಡಿ, ಪುತ್ತೂರು, ಮಂಗಳೂರಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆ ಮಂಗಳೂರಿನಲ್ಲಿ TCH ಪದವಿ ಪಡೆದು 02-08-1985 ರಲ್ಲಿ ಸ.ಹಿ.ಪ್ರಾ.ಶಾಲೆ ಕೊಂಬಾರಿನಲ್ಲಿ ಸೇವೆಗೆ ಸೇರಿದರು. ಸ.ಹಿ.ಪ್ರಾ ಶಾಲೆ ಗೋಳಿತೊಟ್ಟು ಇಲ್ಲಿಗೆ ಮುಖ್ಯ ಶಿಕ್ಷಕರಾಗಿ ಬಡ್ತಿಗೊಂಡು ಪ್ರಸ್ತುತ ಸರಕಾರಿ ಮಾದರಿ ಹಿ. ಪ್ರಾ ಶಾಲೆ ಗುತ್ತಿಗಾರು ಇಲ್ಲಿ ಈ ತಿಂಗಳು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಇವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದೇವೆ.
ಶ್ರೀ ಚಿನ್ಮಯ ಗೌಡ
ಸಹಿಪ್ರಾ ಶಾಲೆ ಮೇಲಿನಡ್ಕ
01-06-1961ರಂದು ಜನಿಸಿದ ಚಿನ್ಮಯ ಗೌಡರು 17-8-1988ರಲ್ಲಿ ಸೇವೆಗೆ ಸೇರಿ ಶೃಂಗೇರಿಯ ಮೇಲ್ ಕೊಟ್ನವಳ್ಳಿ, ಬಂಟ್ವಾಳದ ಬೋರಾಪುರ, ಬೆಳ್ತಂಗಡಿಯ ತೋಟತ್ತಾಡಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಸ.ಹಿ.ಪ್ರಾ ಶಾಲೆ ಮೇಲಿನಡ್ಕದಲ್ಲಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗಿನ ಇವರ ನಿವೃತ್ತ ಜೀವನ ಸುಖಕರವಾಗಿರಲಿ.
ಶ್ರೀಮತಿ ವಿಮಲ ಕುಮಾರಿ
ಸ.ಹಿ.ಪ್ರಾ ಶಾಲೆ ಕಳೆಂಜ
01-06-1961ರಲ್ಲಿ ಜನಿಸಿದ ವಿಜಯಕುಮಾರಿ ಇವರು 11-01-1996 ರಲ್ಲಿ ಶಿಕ್ಷಕ ವೃತ್ತಿಗೆ ಸ.ಹಿ.ಪ್ರಾ ಶಾಲೆ ಕಳೆಂಜದಲ್ಲಿ ಸೇರಿ 25 ವರ್ಷಗಳ ಸುದೀರ್ಘ ಸೇವೆಯನ್ನು ಇದೇ ಶಾಲೆಯಲ್ಲಿ ಸಲ್ಲಿಸಿ ಇದೀಗ ನಿವೃತ್ತರಾಗುತ್ತಿದ್ದಾರೆ. ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದೇವೆ.
ಶ್ರೀ ಕರುಣಾಕರ್ ಜೆ ಉಚ್ಚಿಲ್
ಸ.ಉ.ಪ್ರಾ ಶಾಲೆ ಕುವೆಟ್ಟು
ಬೆಳ್ತಂಗಡಿ ತಾಲೂಕಿನ ವಿವಿಧ ಶಾಲೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಪ್ರಸ್ತುತ ಸ.ಉ.ಪ್ರಾ. ಶಾಲೆ ಕುವೆಟ್ಟು ಇಲ್ಲಿ ಮುಖ್ಯಗುರುಗಳಾಗಿರುವ ಕರುಣಾಕರ್ ಜಿ ಉಚ್ಚಿಲ್ ಅವರು ತಮ್ಮ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಹಾರೈಕೆಗಳು.
ರಘುನಾಥ ಕಾಯಾರ
ಮುಖ್ಯ ಗುರುಗಳು ನೆಟ್ಟಾರಾಸುಳ್ಯ ತಾಲೂಕು
ಗುರುಭ್ಯೋ ನಮಃ
ಸಾವಿರಾರು ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿದ ತಮ್ಮೆಲ್ಲರ ಜೀವನವು ಸುಖ,ಶಾಂತಿ, ಸಮೃದ್ಧಿಯಿಂದ ಕೂಡಿರಲಿ. ಆ ದೇವರು ಆರೋಗ್ಯ ಮತ್ತು ಐಶ್ವರ್ಯವನ್ನು ನಿಮಗೆ ದಯಪಾಲಿಸಲಿ. ನಿಮ್ಮೆಲ್ಲರ ಸಾರ್ಥಕ ಸೇವೆಗೆ ಗೌರವಪೂರ್ವಕ ಅಭಿನಂದನೆಗಳು…..????????????????????????????