ಈ ದಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಾನ್ಯ ಆಯುಕ್ತರನ್ನು ಭೇಟಿಯಾಗಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು
1)ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ b.ed ಆಧಾರದ ಮೇಲೆ ಸಹಶಿಕ್ಷಕರು ಗ್ರೇಡ್-2 ವೃಂದಕ್ಕೆ ಭಡ್ತಿ ನೀಡುವಂತೆ
2)ಅಂಗವಿಕಲ ನೌಕರರಿಗೆ/ ಸಿಬ್ಬಂದಿಗಳಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ರಾಜ್ಯ ವ್ಯಾಪ್ತಿ ಏಕರೂಪದ ಆದೇಶ ಹೊರಡಿಸುವ ಕುರಿತು
3)ಶಾಲೆಗಳಿಗೆ ತಕ್ಷಣ ಬೇಸಿಗೆ ರಜೆ ಘೋಷಣೆ ಮಾಡುವ ಕುರಿತು
4)ಜಂಟಿ ಸಮಾಲೋಚನಾ ಸಮಿತಿಯನ್ನು ರಚಿಸಿ ಆದೇಶವನ್ನು ಹೊರಡಿಸುವ ಕುರಿತು
ರಾಜ್ಯದ ಸಮಸ್ತ ಶಿಕ್ಷಕರ ಆದ್ಯ ಗಮನಕ್ಕೆ
ಇಂದು ಮಾನ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ ಅನ್ಬುಕುಮಾರ IAS ಅವರನ್ನು ಹಾಗೂ ಮಾನ್ಯ ನಿರ್ದೇಶಕರಾದ ಶ್ರೀ ಪ್ರಸನ್ನ್ ಕುಮಾರ ಅವರನ್ನು ಬೇಟಿ ಮಾಡಲಾಯಿತು.
ಈ ಕೆಳಗಿನ ಅಂಶಗಳನ್ನು ಚರ್ಚಿಸಲಾಯಿತು
???? ಬೇಸಿಗೆ ರಜೆಯನ್ನು ಘೋಷಿಸುವ ಬಗ್ಗೆ ವಿನಂತಿಸಲಾಯಿತು. 2 – 3 ಈ ಕುರಿತು ಸ್ಪಷ್ಟ ಸುತ್ತೊಲೆ ಹೊರಡಿಸಲಾಗುವುದು ಎಂದು ತಿಳಿಸಿದರು.
???? ವರ್ಗಾವಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ವಿನಂತಿಸಲಾಗಿದ್ದು ಸುಗ್ರೀವಾಜ್ಞೆಯ ಮೂಲಕ ಮಾಡಿಕೊಡಲಾಗುದೆಂದು ತಿಳಿಸಿದರು.
???? ಬೆಂಗಳೂರಿನಲ್ಲಿ ಕೋವಿಡ್ ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸುವಾಗ ಅವರ ಸ್ವಂತ ವಾರ್ಡಗಳಲ್ಲಿ ನಿಯೋಜನೆ ಮಾಡಲು ವಿನಂತಿಸಲಾಗಿದ್ದು, ಕಳೆದ ವರ್ಷದಂತೆ ಕ್ರಮ ತೆಗೆದುಕೊಳ್ಳಲಾಗುವುದು.
???? ಪ್ರಾಥಮಿಕ ಶಾಲಾ ಶಿಕ್ಷಕರಿಗೆ B.Ed ಆಧಾರದ ಮೇಲೆ ಪ್ರೌಢಶಾಲೆಗೆ ಈ ಹಿಂದಿನಂತೆ (ಗ್ರೇಡ್ – 2) ಗೆ ಬಡ್ತಿ ಕೊಡುವ ಬಗ್ಗೆ ಚರ್ಚಿಸಿ ಈ ಹಿಂದಿನಂತೆ ಬಡ್ತಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.