ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆ ಆಗುವ ಮೂಲಕ ವಿಶೇಷ ಸಾಧನೆ ಮಾಡಿ ಎಲ್ಲರ ಅಭಿಮಾನಕ್ಕೆ ಸಾಕ್ಷಿ ಆಗಿದ್ದಾರೆ ಸರಕಾರಿ ಶಾಲೆಯ ವಿದ್ಯಾರ್ಥಿನಿ.ಹೌದು ಕನ್ಯಾಡಿ || ಸ.ಹಿ.ಪ್ರಾ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶೌರ್ಯ ಎಸ್.ವಿ. ರವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆಯಾಗುವ ಮೂಲಕ ಊರಿಗೆ ಹೆತ್ತವರಿಗೆ ಕೀರ್ತಿ ತಂದು ಕೊಟ್ಟಿದ್ದಾಳೆ. ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯಾದ ಮಹಾತ್ಮ ಗಾಂಧಿ ಕ್ವಿಝ್ ನಲ್ಲಿ ಭಾಗವಹಿಸಿ ಶೇ. 87 ಅಂಕ ಗಳಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆಯಾಗಿದ್ದಾರೆ. ಶೌರ್ಯ ಎಸ್.ವಿ. ರವರು ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಕುಸುಮಾ ಸುರೇಶ್ ಗೌಡರವರ ಪುತ್ರಿ. ಈಕೆ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ 25 ಪ್ರಮಾಣ ಪತ್ರಗಳನ್ನು ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. 12 ವರ್ಷದ ಬಾಲಕಿ 25 ಪ್ರಮಾಣಪತ್ರಗಳನ್ನು ಗಳಿಸಿರುವುದು ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿದೆ.ಬಾಲ್ಯದಿಂದಲೇ ಚೂಟಿ ಆಗಿರುವ ಶೌರ್ಯರಿಗೆ ಈ ಅವಾರ್ಡ್ ನಂತೆ ಇನ್ನಷ್ಟು ದೊಡ್ಡ ಪ್ರಶಸ್ತಿಗಳು ಆಕೆಯ ಪಾಲಾಗಲಿ ಎಂಬುದೇ ನಮ್ಮ ಆಶಯ.
ವಿದ್ಯಾರ್ಥಿನಿ ಸಾಧನೆಗೆ ಕಾರಣ ಕರ್ತರಾದ ಶಾಲಾ ಶಿಕ್ಷಕರಿಗೆ ಮತ್ತು ಪೋಷಕರಿಗೆ ವಿಶೇಷ ಅಭಿನಂದನೆಗಳು