ಸರಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚನೆ , ಸರಕಾರಿ ನೌಕರರ ಸಂಘದಿಂದ ಸಂಪೂರ್ಣ ಮಾಹಿತಿ ಇಲ್ಲಿದೆ

ವೇತನ ಆಯೋಗದ ಕುರಿತು ಮಾನ್ಯ ಮುಖ್ಯಮಂತ್ರಿಗಳ ಮಾತು

7TH PAY COMMISSION REVISED PBASIC SCALE

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರದನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಸುಧಾಕರ್‌ರಾವ್ ಭಾ.ಆ.ಸೇ., ಅವರನ್ನು 7ನೇ ವೇತನಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಇಂದು ಮಾನ್ಯ ಮುಖ್ಯಮಂತ್ರಿಗಳುಘೋಷಣೆಮಾಡಿರುತ್ತಾರೆ.

IMG 20221109 WA0127 1

ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದಂತೆ ಅಧ್ಯಯನ, ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಸುಧಾರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸಿ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿಗಳಾದ ಶ್ರೀ ಸುಧಾಕರ್‌ರಾವ್ ಭಾ.ಆ.ಸೇ., ರವರ ಅಧ್ಯಕ್ಷತೆಯಲ್ಲಿ ರಚಿಸುವುದಾಗಿ ತೀರ್ಮಾನಿಸಿಇಂದು ಮಾನ್ಯ ಮುಖ್ಯಮಂತ್ರಿಗಳು ದಾವಣಗೆರೆಯಲ್ಲಿ ಘೋಷಣೆ ಮಾಡಿರುತ್ತಾರೆ.

ನುಡಿದಂತೆ ನಡೆದು ನಿಗದಿತ ಅವಧಿಯಲ್ಲಿ ವೇತನ ಆಯೋಗ ರಚನೆ ಮಾಡಿದ ಸನ್ಮಾನ್ಯಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ ಎಸ್. ಬೊಮ್ಮಾಯಿರವರಿಗೆ ರಾಜ್ಯದ 6.00 ಲಕ್ಷ ಸರ್ಕಾರಿಅಧಿಕಾರಿ/ನೌಕರರರು, 3.40 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ ಮತ್ತು ವಿಶ್ವವಿದ್ಯಾಲಯ ಸಿಬ್ಬಂದಿಗಳುಹಾಗೂ 4.00 ಲಕ್ಷ ನಿವೃತ್ತ ನೌಕರರ ಪರವಾಗಿ ಸರ್ಕಾರಿ ನೌಕರರ ಸಂಘವು ಧನ್ಯವಾದಗಳನ್ನು ಸಲ್ಲಿಸುತ್ತದೆ.

ಈ ಕಾರ್ಯದಲ್ಲಿ ಸಹಕರಿಸಿದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪಅವರಿಗೆ ಸಂಘವು ವಂದನೆಗಳನ್ನು ಸಲ್ಲಿಸುತ್ತದೆ. ಹಾಗೂ ಸರ್ಕಾರದ ಸಚಿವರಿಗೆ ಹಾಗೂ ಸರ್ಕಾರದ ಉನ್ನತಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತದೆ.

ಹಾಗೂ ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವಸರ್ಕಾರದನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಸುಧಾಕರ್‌ ರಾವ್ ಭಾ.ಆ.ಸೇ., ಅವರನ್ನು ಸಂಘವು ಅಭಿನಂದಿಸಿ.ಸ್ವಾಗತಿಸುತ್ತೇವೆ.

ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ

> ಸಂಘದ ಹಕ್ಕೊತ್ತಾಯದ ನಿರೀಕ್ಷೆಯಂತೆ 7ನೇ ವೇತನ ಆಯೋಗವನ್ನು ರಚಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ರವರಿಗೆ ದಿನಾಂಕ: 10-II-2022 ರಂದು ಬೆಳಿಗ್ಗೆ 10.30ಕ್ಕೆ ಮಾನ್ಯ ಮುಖ್ಯಮಂತ್ರಿಗಳ ಸರ್ಕಾರದ ಅಧಿಕೃತ ನಿವಾಸ (ತಾಜ್ ವೆಸ್ಟ್ಎಂಡ್ ಹೋಟೆಲ್ ಪಕ್ಕ) ರೇಸ್ ಕೋರ್ಸ್ ರಸ್ತೆ, ಬೆಂಗಳೂರು ಇಲ್ಲಿ ಕೇಂದ್ರ ಸಂಘದಪದಾಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ, ತಾಲ್ಲೂಕು, ಯೋಜನಾ ಶಾಖೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ನಿಗಮ ಮಂಡಳಿಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳುಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಸ್ತ ಸರ್ಕಾರಿನೌಕರರು ಒಟ್ಟಾಗಿ ಅಭಿನಂದನೆಯನ್ನು ಸಲ್ಲಿಸಲಾಗುವುದು.

ಸಂಘದ ಮನವಿ ಹಾಗೂ ಸರ್ಕಾರದ ನಿರ್ಧಾರ:-

> ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸುವಂತೆ ಸಂಘವು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿತ್ತು. ಈ ಸಂಬಂಧ ಮಾನ್ಯ ಮುಖ್ಯ ಮಂತ್ರಿಗಳು ಬಜೆಟ್ ಮೇಲಿನ ಉತ್ತರ ನೀಡುವ ಸಂದರ್ಭದಲ್ಲಿ ಹಾಗೂ ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ ವೇತನ ಆಯೋಗ ರಚಿಸುವುದಾಗಿ ಘೋಷಿಸಿದ್ದರು.

ವೇತನ ಆಯೋಗದಿಂದ ನಿರೀಕ್ಷೆಗಳು:

• ಹಾಲಿ ಇರುವ ಮೂಲ ವೇತನಕ್ಕೆ ತುಟ್ಟಿಭತ್ಯೆಯನ್ನು ವಿಲೀನಗೊಳಿಸಿದ ನಂತರನಿಗದಿಯಾಗುವ ಮೂಲವೇತನಕ್ಕೆ ಶೇ.40% ಫಿಟ್‌ಮೆಂಟ್ ಸೌಲಭ್ಯವನ್ನು ಪಡೆಯುವುದು.

• ದಿನಾಂಕ: 01-07-2022 ರಿಂದ ಕಾಲ್ಪನಿಕವಾಗಿ ವೇತನ ಸೌಲಭ್ಯಗಳನ್ನು ಹಾಗೂದಿ: 01-01-2023 ರಿಂದ ಆರ್ಥಿಕ ಸೌಲಭ್ಯವನ್ನು ಪಡೆಯುವುದು.

• ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂವಿಶೇಷ ಭತ್ಯೆಗಳ ಪರಿಷ್ಕರಣೆ ಮಾಡುವುದು• ವಿವಿಧ ಇಲಾಖಾ ವೃಂದಗಳ ವೇತನ ಶ್ರೇಣಿಯಲ್ಲಿನ ತಾರತಮ್ಯಗಳನ್ನು ಸರಿಪಡಿಸುವುದು.

IMG 20221109 WA0119

ವೇತನ ಆಯೋಗದ ಜವಾಬ್ದಾರಿಗಳು:

• ಆಡಳಿತಾತ್ಮಕ ವಿಷಯಗಳ ಸುಧಾರಣೆ.• ಖಾಲಿಯಿರುವ ಹುದ್ದೆಗಳ ಭರ್ತಿ,

ನೇಮಕಾತಿ ಮತ್ತು ಮುಂಬಡ್ತಿ ನಿಯಮಗಳ ಸರಳೀಕರಣಕ್ಕೆ ಶಿಫಾರಸ್ಸು.

• ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಗೆ ಶಿಫಾರಸ್ಸು

.• ಅನವಶ್ಯಕ ವೆಚ್ಚಗಳಿಗೆ ಕಡಿವಾಣ

.• ಸರ್ಕಾರಿ ಕಛೇರಿಗಳಲ್ಲಿ ಮೂಲಭೂತ ಸೌಲಭ್ಯಗಳು ಹಾಗೂ ಮಹಿಳಾ ನೌಕರರ ಸಮಸ್ಯೆಗಳಸುಧಾರಣೆ.

• ಸರ್ಕಾರಿ ನೌಕರರಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು ಪೂರಕವಾದ ಯೋಜನೆಗಳು

• ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಗುಣಮಟ್ಟದ ಸೇವೆ ನೀಡಲು ನಿಯಮಾವಳಿಗಳಸರಳೀಕರಣ.

ಹಿಂದಿನ ವೇತನ ಸಮಿತಿ/ಆಯೋಗಗಳ ಮಾಹಿತಿ:

• 1956 ರಿಂದ ಕಾಲಕಾಲಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪರಿಷ್ಕರಿಸಲಾಗುತ್ತಿದೆ

• ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ 05 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡುವಸಂಪ್ರದಾಯವನ್ನು ಹೊಂದಿದೆ.

• 1986 ರಿಂದ ಈವರೆಗೆ 11 ವೇತನ ಆಯೋಗ/ಸಮಿತಿಗಳು ರಚನೆಯಾಗಿವೆ.

• ಈ ಹಿಂದಿನ ವೇತನ ಆಯೋಗಗಳು ನಿಗದಿತ ಅವದಿಯಲ್ಲಿ ರಚನೆಯಾಗಿರಲಿಲ್ಲ. ಆದರೆ ಇದೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರವು ಸಂಘದ ಮನವಿಯನ್ನು ಪುರಸ್ಕರಿಸಿ ನಿಗದಿತ ಐದು ವರ್ಷದಅವಧಿಯೊಳಗೆ ವೇತನ ಆಯೋಗವನ್ನು ದಿನಾಂಕ: 9-11-2022ರಂದು ರಚಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.

IMG 20221109 WA0120
IMG 20221109 WA0118
IMG 20221109 WA0121
IMG 20221109 WA0122
WhatsApp Group Join Now
Telegram Group Join Now
Sharing Is Caring:

Leave a Comment