2022-23 ನೇ ಸಾಲಿನ ಮುಕ್ತಾಯ ಹಂತದಲ್ಲಿ ನಿರ್ವಹಿಸಬೇಕಾದ ಅಂಶಗಳು

2022-23 ನೇ ಸಾಲಿನ ಮುಕ್ತಾಯ ಹಂತದಲ್ಲಿ ನಿರ್ವಹಿಸಬೇಕಾದ ಅಂಶಗಳು

WhatsApp Group Join Now
Telegram Group Join Now

1. ಉಲ್ಲೇಖ-2ರಂತೆ 5 ಮತ್ತು 8ನೇ ತರಗತಿಯ SA-2 ಮೌಲ್ಯಾಂಕನ ಸೇರಿದಂತೆ ಉಳಿದ 1 ರಿಂದ 9ನೇತರಗತಿಗಳ ಫಲಿತಾಂಶವನ್ನು ನಿಗಧಿಪಡಿಸಿದಂತೆ ದಿನಾಂಕ:08.04.2023ರಂದು ಪ್ರಾಥಮಿಕಶಾಲಾ ವಿಭಾಗ ಹಾಗೂ ದಿನಾಂಕ:10.04.2023ರಂದು ಪ್ರೌಢ ಶಾಲಾ ಹಂತದಲ್ಲಿಸಮುದಾಯದತ್ತಾ ಶಾಲೆ/ಪೋಷಕರ ಸಭೆ ಕರೆದು ಪ್ರಕಟಣೆ ಮಾಡುವುದು.

2. ಶಾಲಾ ಸ್ಥಳೀಯ ರಜೆಗಳಿಗೆ ಸಂಬಂಧಿಸಿದಂತೆ ಶಾಲಾವಾರು ನಿರ್ದಿಷ್ಟಪಡಿಸಿದ ದಿನಾಂಕಗಳನ್ನುಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವಭಾವಿಯಾಗಿ ಜೂನ್-2023ರ ಮೊದಲನೇ ವಾರದಲ್ಲಿಅನಮೋದನೆ ನೀಡುವುದು. ಅನುಮೋದಿಸಿದ ದಿನಾಂಕಗಳಿಗೆ
ಮಾತ್ರ ಸ್ಥಳೀಯ ರಜೆ ನೀಡುವುದು.

3. ಉಲ್ಲೇಖ-2ರಲ್ಲಿ ನಿಗಧಿಪಡಿಸಿದಂತೆ 10.04.2023ಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲುಮುಕ್ತಾಯವಾಗುತ್ತಿದ್ದು, 1 ರಿಂದ 9ನೇ ತರಗತಿವರೆಗೆ ಮೌಲ್ಯಾಂಕನ ಪರೀಕ್ಷೆಗಳನ್ನುಪೂರ್ಣಗೊಳಿಸಿದ್ದು, ಅದರ ಮೌಲ್ಯಮಾಪನವನ್ನು ಪೂರ್ಣಗೊಳಿಸಿ ಫಲಿತಾಂಶವನ್ನು ಶೇ 100ಅಂಕಗಳಿಗೆ ಕ್ರೋಢೀಕರಿಸಿ ನಿಯಮಾನುಸಾರ ಗ್ರೇಡ್ ದಾಖಲಿಸಿ SATS ನಲ್ಲಿದಿನಾಂಕ:25.04.2023ರೊಳಗಾಗಿ ಇಂದೀಕರಿಸತಕ್ಕದ್ದು.

4.ದಿನಾಂಕ:14.04.2023 ರಂದು ಡಾ|| ಬಿ.ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಎಲ್ಲಾಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ಎಸ್.ಡಿ.ಎಂ.ಸಿ/ಖಾಸಗಿ ಶಾಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿಯವರು ಮತ್ತು ಮಕ್ಕಳೊಂದಿಗೆ ಉತ್ತಮಪೂರ್ವ ತಯಾರಿಯೊಂದಿಗೆ ಕಡ್ಡಾಯವಾಗಿ ಆಚರಿಸತಕ್ಕದ್ದು.

5. 2023-24ನೇ ಸಾಲಿಗೆ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಮೊದಲನೇಜೊತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳುಈಗಾಗಲೇ ಸಂಬಂಧಿಸಿದ ತಾಲ್ಲೂಕುಗಳಿಗೆ ಸರಬರಾಜು ಆಗುತ್ತಿದ್ದು, ಇವುಗಳನ್ನು ಮೊದಲನೇಹಂತದಲ್ಲಿ ದಿನಾಂಕ: 10.04.2023ರೊಳಗೆ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರಮುಖಾಂತರ ಮಕ್ಕಳಿಗೆ ತಲುಪಿಸತಕ್ಕದ್ದು, ತದನಂತರ ಹಂತ ಹಂತವಾಗಿ ಮಕ್ಕಳಿಗೆ ತಲುಪಿಸಿ ಶಾಲಾ ಪ್ರಾರಂಭೋತ್ಸವದಂದು ಸಮವಸ್ತ್ರ ಧರಿಸಿ ಪಠ್ಯಪುಸ್ತಕಗಳೊಂದಿಗೆ ಶಾಲೆಗೆ ಹಾಜರಾಗಲು ಕ್ರಮವಹಿಸುವುದು.

6.ದಿನಾಂಕ:11.04.2023ರಿಂದ ದಿನಾಂಕ:28.05.2023ರ ವರೆಗೆ ಶಾಲೆಗಳಿಗೆ ಬೇಸಿಗೆ ರಜೆಘೋಷಣೆಯಾಗಿರುವುದರಿಂದ ಶಾಲಾ ಮುಖ್ಯಸ್ಥರು ಶಾಲಾ ದಾಸ್ತಾನು ಮತ್ತು ದಾಖಲೆಗಳನ್ನುಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ ಮದ್ಯಾಹ್ನದ ಬಿಸಿಯೂಟದ ಸಾಮಾಗ್ರಿಗಳನ್ನುಸುರಕ್ಷಿತವಾಗಿ ಸಂಗ್ರಹಿಸಿಡುವುದು ಹಾಗೂ ವಿಧಾನ ಸಭಾ ಚುನಾವಣಾ ಕಾರ್ಯಕ್ಕೆ ಮತಗಟ್ಟೆಕೇಂದ್ರಗಳನ್ನಾಗಿ ಶಾಲೆಗಳನ್ನು ಬಳಸುವುದರಿಂದ ಸಹಕರಿಸಲು ಸೂಚಿಸಿದೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ನಿರ್ವಹಿಸಬೇಕಾದ ಅಂಶಗಳು

1. ಮಕ್ಕಳ ಶಾಲಾ ಪ್ರವೇಶಾತಿಯನ್ನು/ದಾಖಲಾತಿಯನ್ನು ದಿನಾಂಕ:31.05.2023ರಿಂದ ಶಾಲಾ ಪ್ರಾರಂಭೋತ್ಸವದೊಂದಿಗೆ ಆರಂಭಿಸಿ ದಿನಾಂಕ:30.06.2023ರೊಳಗೆ ಮುಕ್ತಾಯಗೊಳಿಸತಕ್ಕದ್ದು

2. ಕಳೆದ ಸಾಲುಗಳಲ್ಲಿ ಕೋವಿಡ್-19 ರ ಪ್ರತಿಕೂಲ ಸನ್ನಿವೇಶ ಹಾಗೂ ಕಲಿಕೆಗೆ ಪೂರಕ ವಾತಾವರಣ ಲಭ್ಯವಾಗದ ಮಕ್ಕಳು ನಿರಂತರವಾಗಿ ಶಾಲೆಗೆ ಗೈರು ಹಾಜರಾಗಿರುವುದು ಮತ್ತುಶಾಲೆ ಬಿಟ್ಟ ಮಕ್ಕಳನ್ನು ಕಡ್ಡಾಯವಾಗಿ ಹಾಜರಾತಿ ಅಧಿಕಾರಿ (ಶಿಕ್ಷಣ ಸಂಯೋಜಕರು)ಯೊಂದಿಗೆ ಸಂಪರ್ಕದಲ್ಲಿದ್ದು, ದಾಖಲಾತಿ ಆಂದೋಲನದ ಮುಖಾಂತರ ವ್ಯಾಪಕ ಪ್ರಚಾರಕೈಗೊಂಡು ಶಾಲಾ ಮುಖ್ಯವಾಹಿನಿಗೆ ತರುವುದು.

3. ಕ್ರಿಸ್‌ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾಉಪನಿರ್ದೇಶಕರು (ಆಡಳಿತ) ರವರಿಗೆ ಸಲ್ಲಿಸಿದಲ್ಲಿ ಈ ಬಗ್ಗೆ ಆಯಾ ಉಪನಿರ್ದೇಶಕರು (ಆಡಳಿತ)ರವರು ಈ ಕುರಿತು ಪರಿಶೀಲಿಸಿ ನಿರ್ಧರಿಸುವುದು. ಸದರಿ ಡಿಸೆಂಬರ್ ಮಾಹೆಯಲ್ಲಿ ನೀಡುವ ಕ್ರಿಸ್ಮಸ್ ರಜಾ ಅವಧಿಯನ್ನು ಅಕ್ಟೋಬರ್ ಮಾಹೆಯ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿಸರಿದೂಗಿಸಿಕೊಳ್ಳಲು ಕ್ರಮವಹಿಸತಕದ್ದು.

4. ರಾಜ್ಯ/ಜಿಲ್ಲಾ ಕಛೇರಿಗಳಿಂದ ನಿಯೋಜಿಸಿದ ಜಿಲ್ಲಾ ಮತ್ತು ತಾಲೂಕು ನೋಡಲ್ ಅಧಿಕಾರಿಗಳು,ಕ್ಲಸ್ಟರ್ ಹಂತದ ಸಿ.ಆರ್.ಪಿ ಗಳು ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ, ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ರವರುಗಳು ತಮ್ಮ ತಮ್ಮ ವ್ಯಾಪ್ತಿಗನುಗುಣವಾಗಿ ಕ್ರಿಯಾಶೀಲ ಮೇಲ್ವಿಚಾರಣೆ ಮತ್ತು ಶೈಕ್ಷಣಿಕ ಉಸ್ತುವಾರಿ ಕ್ರಿಯಾ ಯೋಜನೆಯನ್ನು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಸೂಚಿಸಿದಂತೆ ತಯಾರಿಸಿಕೊಂಡು ಶಾಲೆಗಳಪ್ರಾರಂಭ, ಪೂರ್ವ ತಯಾರಿ, ಶಾಲೆಗಳ ಪ್ರಾರಂಭದ ಸಮಯದಲ್ಲಿ ಇರುವ ಶಿಕ್ಷಕರ ಕೊರತೆ ಹಾಗೂ ಇಲಾಖಾ ಪ್ರೋತ್ಸಾಹದಾಯಕ ಯೋಜನೆಗಳಾದ ಮದ್ಯಾಹ್ನ ಉಪಹಾರ ಯೋಜನೆ ,ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ ವಿತರಣೆ ಹಾಗೂ ಶಾಲೆಗಳಲ್ಲಿ ಉತ್ತಮ ವಾರ್ಷಿಕಕ್ರಿಯಾ ಯೋಜನೆಯೊಂದಿಗೆ ಮಕ್ಕಳ ದಾಖಲಾತಿ ಅಭಿವೃದ್ಧಿಪಡಿಸಲು ಮಿಂಚಿನ ಸಂಚಾರ ಕೈಗೊಂಡು ಉಸ್ತುವಾರಿ ಮಾಡುವುದು.

5. ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಡ ಹಬ್ಬವಾದ ಕರ್ನಾಟಕ ರಾಜ್ಯೋತ್ಸವ ಮತ್ತು ಇತರ ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಯಾದಿನಗಳಂದು ಗೌರವಪೂರ್ವಕವಾಗಿ ಆಚರಿಸತಕ್ಕದ್ದು.

6. ನಿಗಧಿಪಡಿಸಿದ ಶೈಕ್ಷಣಿಕ ಕರ್ತವ್ಯದ ಅವಧಿಗಳು ಕಡಿಮೆಯಾಗದಂತೆ ಮುಷ್ಕರ ಇನ್ನಿತರೆ ಅನಿರೀಕ್ಷಿತ ಕಾರಣಗಳಿಂದಾಗಿ ಶಾಲೆಗೆ ರಜೆ ಘೋಷಣೆಯಾದಲ್ಲಿ ಆ ಅವಧಿಯ ಶಾಲಾ ಕರ್ತವ್ಯದದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣದಿನ ಶಾಲೆಗಳನ್ನು ನಡೆಸಿ, ಶಾಲಾ ಕರ್ತವ್ಯದ ದಿನಗಳನ್ನು ಸರಿದೂಗಿಸಿಕೊಳ್ಳಲು ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳುಕ್ರಮವಹಿಸುವುದು.

7. ಪರೀಕ್ಷಾ ದಿನಗಳು, ಮೌಲ್ಯಾಂಕನ ದಿನಗಳು, ಹಾಗೂ ಪೂರಕ ಶೈಕ್ಷಣಿಕ ಚಟುವಟಿಕೆ ನಡೆಸುವದಿನಗಳನ್ನು ಕೂಡ ಶಾಲಾ ಕರ್ತವ್ಯದ ದಿನವೆಂದು ನಿಗದಿತ ಅವಧಿಗಳಲ್ಲಿ ಪರಿಗಣಿಸುವುದು.

8. 2023-24ನೇ ಶೈಕ್ಷಣಿಕ ಸಾಲಿಗೆ ವಾರ್ಷಿಕ ಪಠ್ಯವಸ್ತುವನ್ನು ರಾಜ್ಯಾದ್ಯಂತ ಏಕರೂಪದಲ್ಲಿ ಅಳಡಿಸಿಕೊಳ್ಳಲು ಸಲಹಾತ್ಮಕವಾಗಿ ಮಾಹವಾರು, ಪಾಠ ಹಂಚಿಕೆ ಮಾಡಿ, ನಿಗಧಿಪಡಿಸಿದ್ದು,ಅದರಂತೆ FA-1 FA-2 FA-3 FA-4 ಮತ್ತು SA-1 SA-2 ಪರೀಕ್ಷೆಗಳನ್ನು ನಿಗಧಿಪಡಿಸಿದಪಠ್ಯವಸ್ತುಗನುಗುಣವಾಗಿ ನಿರ್ವಹಿಸತಕ್ಕದ್ದು.

9. ಸದರಿ ಸುತ್ತೋಲೆಯೊಂದಿಗೆ 2023-24ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನುಸಿದ್ಧಪಡಿಸಿ ಅನುಬಂಧ-1ರಲ್ಲಿ ಪೂರೈಸಿದೆ. ಅದರಂತೆ ಶಾಲಾ/ಕ್ಲಸ್ಟರ್/ತಾಲ್ಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಅನುಪಾಲನೆ ಮಾಡತಕ್ಕದ್ದು.

10. ಕಳೆದ ಸಾಲಿನಲ್ಲಿ 5 ಮತ್ತು 8ನೇ ತರಗತಿಗಳಿಗೆ SA-2 ಮೌಲ್ಯಂಕನಾ ನಿರ್ವಹಿಸಿದ್ದು, ಪ್ರಸ್ತುತ 2023-24ನೇ ಸಾಲಿನ ಪ್ರಕ್ರಿಯೆ ನಿರ್ವಹಣೆ ಕುರಿತು ಪ್ರತ್ಯೇಕವಾಗಿ ಕ್ರಮವಹಿಸಿ ತಿಳಿಸಲಾಗುವುದು.

WhatsApp Group Join Now
Telegram Group Join Now
Sharing Is Caring:

Leave a Comment