ಶಿಕ್ಷಕರ ಸಂಘದ ವತಿಯಿಂದ ನೂತನ ಉಪನಿರ್ದೇಶಕರಿಗೆ ಸ್ವಾಗತ ಮತ್ತು ನಿಕಟಪೂರ್ವ ಉಪನಿರ್ದೇಶಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ

IMG 20220101 WA0008 min

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ , ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಹಾಗೂ ಅನುದಾನಿತ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಜಂಟಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಗಳಿಗೆ ಅಭಿನಂದನಾ ಸಮಾರಂಭ ಇಂದು ಬಿ ಆರ್ ಸಿ ಗಾಂಧಿ ನಗರ ಮಂಗಳೂರಿನಲ್ಲಿ ನಡೆಯಿತು.

IMG 20220102 WA0006
IMG 20220101 WA0012 min
IMG 20220101 WA0010 min


ಉಡುಪಿ ಜಿಲ್ಲೆಯ ಉಪನಿರ್ದೇಶಕರಾಗಿ ವರ್ಗಾವಣೆ ಗೊಂಡ ಮಲ್ಲೇಸ್ವಾಮಿ ಇವರಿಗೆ ಗೌರವ ಸಲ್ಲಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ಶ್ರೀ ಸುಧಾಕರ್ ಇವರನ್ನು ಅಭಿನಂದಿಸಲಾಯಿತು. ಡಯಟ್ ಮಂಗಳೂರು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ರಾಜಲಕ್ಷ್ಮಿ ಇವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಡಯಟ್ ಉಡುಪಿಗೆ ವರ್ಗಾವಣೆಗೊಂಡ ಶ್ರೀ ಗೋವಿಂದ ಮಡಿವಾಳ ಇವರನ್ನು ಅಭಿನಂದಿಸಲಾಯಿತು.

IMG 20220101 WA0013 min

IMG 20220101 WA0009 min

ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸ್ಟ್ಯಾನಿ ತಾವ್ರೊ, ಮಾರ್ಕ್ ಮೆಂಡೋನಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಕಾರ್ಯದರ್ಶಿ ವಿಮಲ್ ನೆಲ್ಯಾಡಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆಎಂಕೆ ಮಂಜನಾಡಿ, ಮಂಗಳೂರು ಉತ್ತರದ ಸಮನ್ವಯಾಧಿಕಾರಿ ಉಸ್ಮಾನ್ ಉಪಸ್ಥಿತರಿದ್ದರು.

IMG 20220101 WA0011 min

ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳು ತಾಲೂಕು ಅಧ್ಯಕ್ಷರು ಹಾಗೂ ವಿವಿಧ ಪ್ರತಿನಿಧಿಗಳು ಉಪಸ್ಥಿತರಿದ್ದರು.

IMG 20220102 WA0008
Sharing Is Caring:

Leave a Comment