ಶಿಕ್ಷಣ ಸಚಿವಾಲಯ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭಾರತ ಸರ್ಕಾರ ಶಾಲಾ ಶಿಕ್ಷಣದಲ್ಲಿ ಸಮುದಾಯ ಸ್ವಯಂಸೇವಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕೊಡುಗೆ ಸೇವೆಗಳನ್ನು ಗುರುತಿಸಿ ಶಾಲೆಗಳಿಗೆ ಸದುಪಯೋಗವಂತೆ ಮಾಡಲು ವಿದ್ಯಾಂಜಲಿ 2.0 ಕಾರ್ಯಕ್ರಮವನ್ನು ಪೋರ್ಟಲನ್ನು ಅಭಿವೃದ್ಧಿ ಪಡಿಸಿದೆ. ಈ ಕಾರ್ಯಕ್ರಮವು ಶಾಲೆಗಳೊಂದಿಗೆ ಸಮುದಾಯ ಸ್ವಯಂಸೇವಕರು ಸ್ವಯಂ ಸೇವಾ ಸಂಸ್ಥೆಗಳು ಸ್ವಯಂ ಪ್ರೇರಿತ ಸೇವೆಗಳು ಹಾಗೂ ಕೊಡುಗೆಗಳನ್ನು ಒಟ್ಟುಗೂಡಿಸುವ ವೇದಿಕೆಯಾಗಿದೆ.
ಶಿಕ್ಷಾ ಸಪ್ತಾಹದ ಅಂಗವಾಗಿ 28/07/2024 ರಂದು ಸಮುದಾಯ ಪಾಲ್ಗೊಳ್ಳುವಿಕೆ ದಿನದಂದು ಈ ಕೆಳಕಂಡ ಚಟುವಟಿಕೆಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲು ಸೂಚಿಸಿದೆ.
- ಶಾಲಾ ನಾಮ ಫಲಕದಲ್ಲಿ ಬಹಳ ಸಕ್ರಿಯವಾಗಿ ಶಾಲಾ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಸ್ವಯಂಸೇವಕರುಗಳ ಹೆಸರುಗಳನ್ನು ಬರೆಯುವುದು
- ಶಾಲಾ ಅಭಿವೃದ್ಧಿಗೆ ಕೊಡುಗೆ ನೀಡಿರುವ ದಾನಿಗಳಿಗೆ ಶಿಕ್ಷಕರು/ವಿದ್ಯಾರ್ಥಿಗಳು ಅಭಿನಂದನಾ ಪತ್ರವನ್ನು ಬರೆಯುವುದು.
- ಸಮುದಾಯದಲ್ಲಿ ವಿದ್ಯಾಂಜಲಿಯ ಬಗ್ಗೆ ಜಾಗೃತಿ ಮೂಡಿಸಲು ಬೀದಿ ನಾಟಕ, ಕರಪತ್ರ ಬರೆಯುವುದು, ಜಾಥಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
- ” ಬನ್ನಿ ಸ್ವಯಂಸೇವಕರಾಗೋಣ ” ಎಂಬ ಅಭಿಯಾನವನ್ನು ಎಸ್ ಡಿ ಎಂ ಸಿ ಅವರ ಜೊತೆಗೂಡಿ ಸಂಘಟಿಸುವುದು.
- ಸ್ಥಳೀಯ ಮಾಧ್ಯಮಗಳಲ್ಲಿ, ಪತ್ರಿಕೆ, ಟಿವಿ ಮುಂತಾದ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಚಾರ ಕೈಗೊಳ್ಳುವಂತೆ ಕಾರ್ಯಕ್ರಮವನ್ನು ಆಯೋಜಿಸುವುದು.
- ಈಗಾಗಲೇ ವಿದ್ಯಾಂಜಲಿ ಪ್ರಚಾರಕ್ಕಾಗಿ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಾಮಫಲಕಗಳನ್ನು ಬರೆಸಲಾಗಿದೆ ಇವುಗಳನ್ನು ಆ ದಿನ ಪ್ರಚಾರಪಡಿಸುವುದು.
- ಈ ಸಪ್ತಾಹದ ಪ್ರತಿಯಾಗಿ ಈವರೆಗೂ ವಿದ್ಯಾಂಜಲಿ ಪೋರ್ಟಲ್ ನಲ್ಲಿ ನೋಂದಣಿ ಆಗದಿರುವ ಶಾಲೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವುದು ಜಿಲ್ಲೆಯ ವಿದ್ಯಾಂಜಲಿ ನೋಡಲ್ ಅಧಿಕಾರಿಯ ಕರ್ತವ್ಯವಾಗಿದೆ.
- 28/07/2024ರಂದು ಶಾಲೆಗಳಲ್ಲಿ ನಡೆಸಲಾದ ಕಾರ್ಯಕ್ರಮಗಳ ಬಗ್ಗೆ ವರದಿಯನ್ನು ಹಾಗೂ ಫೋಟೋಗಳನ್ನು sskmedia2023@gmail.comನಲ್ಲಿ upload ಮಾಡಲು ತಿಳಿಸಿದೆ.