Udise Plus ನಲ್ಲಿ ಈ ವರೆಗೆ ಇರುತ್ತಿದ್ದ Passwordಗಳನ್ನು ನೆನಪಿಟ್ಟುಕೊಳ್ಳಲು ಕಷ್ಟ ಆಗುತ್ತಿತ್ತು. ಈಗ ನಮಗೆ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ Password ಗಳನ್ನು Set ಮಾಡಿಕೊಳ್ಳಲು ಅವಕಾಶವಿದೆ.
Step 1
ಮೊದಲಿಗೆ ಯಾವುದಾದರೂ browser ಬಳಸಿ UDISE PLUS ಎಂದು Type ಮಾಡಬೇಕು. ಅಲ್ಲಿ ನೀಡಲಾದ ಮೊದಲನೆ option ಮೇಲೆ click ಮಾಡಬೇಕು.
Step 2
ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಬಲಬದಿಯಲ್ಲಿ ಇರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಬೇಕು.
Step 3
Login for all modules ಎಂಬ option ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
step 4
ಮುಂದಿನ ಪುಟದಲ್ಲಿ ಕೆಲವು optionಗಳು ಕಾಣಿಸುತ್ತವೆ. ಅಲ್ಲಿ student module ನಲ್ಲಿ State ಎಂಬ option ಕಾಣಿಸುತ್ತದೆ. ಅದರಲ್ಲಿ ಕರ್ನಾಟಕ ಎಂದು select ಮಾಡಿ Go ಎಂದು ಕೊಡಬೇಕು.
Step 5
Login page ಕಾಣಿಸಿತ್ತದೆ. ಅಲ್ಲಿ Forgot Password ಎಂಬಲ್ಲಿ ಕ್ಲಿಕ್ ಮಾಡಬೇಕು.
Step 6
User ID ಎಂಬಲ್ಲಿ dise code ಹಾಗೂ registered ಮೊಬೈಲ್ ನಂಬರ್ ಇರುವಲ್ಲಿ UDISE ಗೆ ಲಿಂಕ್ ಆದ ಮೊಬೈಲ್ ನಂಬರ್ ನಮೂದಿಸಿ. Capcha ವನ್ನು ಸರಿಯಾಗಿ ಹಾಕಿ Verify ಎಂದು ಕೊಡಬೇಕು.
step 7
Registered mobile ನಂಬರ್ ಗೆ OTP ಬರುತ್ತದೆ ಅದನ್ನು ನಮೂದಿಸಬೇಕು.ನಂತರ ನಮಗೆ ಬೇಕಾದ Password set ಮಾಡಬೇಕು. Password Capital letter, Small letter ಹಾಗೂ Special character ( * @ & # – )ಗಳನ್ನು ಹೊಂದಿರಬೇಕು. ಕನಿಷ್ಠ 8 ಅಕ್ಷರ ಗರಿಷ್ಠ 16 ಅಕ್ಷರಗಳನ್ನು ಹೊಂದಿರಬೇಕು. ನಂತರ confirm password ಕೊಡಬೇಕು. ಕೊನೆಯಲ್ಲಿ Password set successfully ಎಂದು ಬರುತ್ತದೆ.