ರಾಜ್ಯದ ಪ್ರಾಥಮಿಕ /ಪ್ರೌಢ ಶಾಲಾ ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆ ಸಂಬಂಧ ಪರಿಹಾರ ಕಂಡುಕೊಳ್ಳಲು ಸರಕಾರಿ ನೌಕರರ ಸಂಘದ ವತಿಯಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದು ದಯವಿಟ್ಟು ಮಾಹಿತಿ ನೀಡಿ

ರಾಜ್ಯದ ಪ್ರಾಥಮಿಕ /ಪ್ರೌಢ ಶಾಲಾ ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆ ಸಂಬಂಧ ಪರಿಹಾರ ಕಂಡುಕೊಳ್ಳಲು ಸರಕಾರಿ ನೌಕರರ ಸಂಘದ ವತಿಯಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದು ದಯವಿಟ್ಟು ಮಾಹಿತಿ ನೀಡಿ.

IMG 20210903 WA0022 min

ಮಾಹಿತಿ ನೀಡಲು ಅಂತಿಮ ದಿನಾಂಕ 10/09/21

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ರಾಜ್ಯದ ಪ್ರಾಥಮಿಕ /ಪ್ರೌಢ ಶಾಲಾ ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆ ಸಂಬಂಧಿಸಿದಂತೆ ಮಾಹಿತಿ ನೀಡುವ ಬಗ್ಗೆ

ಆತ್ಮೀಯ ಪ್ರಾಥಮಿಕ /ಪ್ರೌಢ ಶಾಲಾ ಶಿಕ್ಷಕ ಬಂಧುಗಳೇ

ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರು ಅಂತರ ಜಿಲ್ಲಾ ವರ್ಗಾವಣೆಯಿಂದ ವಂಚಿತರಾಗಿ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಇದರಿಂದ ಶಾಲಾ ಶೈಕ್ಷಣಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಸಂಘವು ಗಮನಿಸಿ ಒಂದು ಬಾರಿಗೆ ಶಿಕ್ಷಕರನ್ನು ಕೋರಿಕೆ ವರ್ಗಾವಣೆ ಮೇರೆಗೆ ಅವರವರ ಜಿಲ್ಲೆಗೆ ಅಂತರ ಜಿಲ್ಲಾ ವರ್ಗಾವಣೆಯಲ್ಲಿ ವರ್ಗಾಯಿಸಲು ಈಗಾಗಲೇ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಟನೆಗಳ ಸಹಕಾರದಿಂದ ಶಿಕ್ಷಕರುಗಳ ನಿಖರವಾದ ಮಾಹಿತಿಗಳನ್ನು ಪಡೆದು ಸಾಧ್ಯಸಾಧ್ಯತೆಗಳನ್ನು ಗಮನಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಿದ್ದು,ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂತರ ಜಿಲ್ಲಾ ವರ್ಗಾವಣೆ ವಂಚಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ದಿನಾಂಕ: 10-09-2021 ರ ಒಳಗೆ  ಈ ಕೆಳಕಂಡ ಲಿಂಕ್ ಬಳಸಿ ತಮ್ಮ ಮಾಹಿತಿಯನ್ನು ಸಲ್ಲಿಸಲು ಕೋರಿದೆ.

ನಿಖರ ಹಾಗೂ ವಾಸ್ತವಾಂಶದಿಂದ ಕೂಡಿದ ಶಿಕ್ಷಕರುಗಳ ಮಾಹಿತಿಯನ್ನು ಕ್ರೋಢಿಕರಿಸಿ ವೈಜ್ಞಾನಿಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು.

ಮಾಹಿತಿ ಸಲ್ಲಿಸಲು ಮೇಲಿನ ಬಟನ್ ಬಳಸಿ

????????????????????????????????????
ಶ್ರೀ ಸಿ ಎಸ್ ಷಡಾಕ್ಷರಿ
ರಾಜ್ಯಾಧ್ಯಕ್ಷರು
ಶ್ರೀ ಜಗದೀಶಗೌಡ ಪಾಟೀಲ
ಮಹಾ ಪ್ರಧಾನ ಕಾರ್ಯದರ್ಶಿಗಳು
ಶ್ರೀ ಶ್ರೀನಿವಾಸ್
ಖಜಾಂಚಿಗಳು

Sharing Is Caring:

Leave a Comment