ಸೇವಾ ನಿರತ ಪದವೀಧರ ಸಮಸ್ಯೆ ಪರಿಹರಿಸುವಂತೆ ತರಬೇತಿ ಬಹಿಷ್ಕರಿಸಿ ಹೋರಾಟಕ್ಕೆ ಕರೆಕೊಟ್ಟ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಸೇವಾ ನಿರತ ಪದವೀಧರ ಸಮಸ್ಯೆ ಪರಿಹರಿಸುವಂತೆ ತರಬೇತಿ ಬಹಿಷ್ಕರಿಸಿ ಹೋರಾಟಕ್ಕೆ ಕರೆಕೊಟ್ಟ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

20211003 174706 min
WhatsApp Group Join Now
Telegram Group Join Now

ಇವರಿಗೆ

ನಿರ್ದೇಶಕರು
ಡಿ ಎಸ್ ಇ ಆರ್ ಟಿ
ಬೆಂಗಳೂರು.

ವಿಷಯ :- ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿ ನಿಷ್ಠಾ3.0 ತರಬೇತಿಯನ್ನು ಬಹಿಷ್ಕರಿಸುವ ಕುರಿತು.

ಮಾನ್ಯರೇ,

2017 ರ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯ ಆಗಿದ್ದು ಈಗಾಗಲೇ ಹಲವು ಬಾರಿ ಕ.ರಾ.ಪ್ರಾ.ಶಾ.ಶಿ‌.ಸಂಘವು ಮನವಿ ಹಾಗೂ ಹಲವು ರೀತಿಯ ಹಕ್ಕೊತ್ತಾಯಗಳನ್ನು ಮಾಡಿರುತ್ತದೆ. ಅಷ್ಟೇ ಅಲ್ಲದೇ ಜೂನ್ 2021ರಲ್ಲಿ ನಮ್ಮ ಸಂಘವು ತಮ್ಮಲ್ಲಿ ಈ ಬಗ್ಗೆ ಪುನಃ ಮನವಿ ನೀಡಿ ಮೂರು ತಿಂಗಳ ಕಾಲಮಿತಿಯೊಳಗೆ ಪರಿಹರಿಸಲು ವಿನಂತಿಸಿಲಾಗಿತ್ತು, ಸಮಸ್ಯೆಗೆ ಪರಿಹಾರ ಸಿಗದೇ ಇದ್ದಲ್ಲಿ,ಸಂಘಟನೆಯ ಮುಂದಿನ ನಡೆಯ ಬಗ್ಗೆಯೂ ಕೂಡಾ ಅದರಲ್ಲಿ ಸೂಚಿಸಿರುತ್ತದೆ. ಸಂಘಟನೆ ಮನವಿ ಸಲ್ಲಿಸಿ ನಾಲ್ಕು ತಿಂಗಳಾದರೂ ಈ ವಿಷಯದಲ್ಲಿ ಯಾವುದೇ ಬದಲಾವಣೆಗಳಾಗಲಿ, ಸಮಸ್ಯೆಗೆ ಪರಿಹಾರವಾಗಲಿ ದೊರಕಿಲ್ಲ. ಹಾಗಾಗಿ ರಾಜ್ಯಾದ್ಯಂತ ಶಿಕ್ಷಕರೆಲ್ಲರೂ ಈ ಬಗ್ಗೆ ಮುಂದಿನ ನಡೆಯ ಬಗ್ಗೆ ಒತ್ತಡ ಹಾಕುತ್ತಿದ್ದು, ನಮ್ಮ ಸಂಘಟನೆಯು, ಪದವೀಧರ ಶಿಕ್ಷಕರ ಸಮಸ್ಯೆಯ ಪರಿಹಾರಕ್ಕಾಗಿ ಹಾಗೂ ಸೇವಾನಿರತ ಪದವೀಧರ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೂ ನಿಷ್ಠಾ 3.0 ತರಬೇತಿಯಲ್ಲಿ ಲಾಗಿನ್ ಆಗದೇ ತರಬೇತಿಯನ್ನು ಬಹಿಷ್ಕರಿಸಲು ತೀರ್ಮಾನಿಸಿದೆ. ಇಲಾಖೆಯಿಂದ ಈ ಬಗ್ಗೆ ಅತೀ ಶೀಘ್ರದಲ್ಲಿ ಪರಿಹಾರ ದೊರಕದೇ ಹೋದಲ್ಲಿ ಹಂತ ಹಂತವಾಗಿ ಹೋರಾಟಗಳನ್ನು ರೂಪಿಸುವ ನಿಲುವನ್ನು ಸಂಘಟನೆ ನಿರ್ಧರಿಸಿದೆ. ಈ ಹೋರಾಟಗಳಿಗೆ ಸಂಘಟನೆಯು ಜವಾಬ್ದಾರಿಯಾಗಿರದೆ ಇಲಾಖೆಯ ಅಧಿಕಾರಿಗಳಿಂದ ಸೇವಾನಿರತ ಪದವೀಧರ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕದೇ ಇರುವುದೇ ಕಾರಣವಾಗಿರುತ್ತದೆ

ನಮ್ಮ ಸಂಘಟನೆಯ ಈ ನಿರ್ಣಯವನ್ನು ತಮ್ಮ ಅವಗಾಹನೆಗೆ ಈ ಮೂಲಕ ಸಲ್ಲಿಸುತ್ತಿದ್ದು , ಸ್ಪಂದಿಸುತ್ತೀರಿ ಎಂಬ ಭರವಸೆಯೊಂದಿಗೆ

ಶಂಭುಲಿಂಗನಗೌಡ ಪಾಟೀಲ್.
ಅಧ್ಯಕ್ಷರು

ಚಂದ್ರಶೇಖರ ನುಗ್ಲಿ.
ಪ್ರಧಾನಕಾರ್ಯದರ್ಶಿ

ಹಾಗೂ ರಾಜ್ಯ ಪದಾಧಿಕಾರಿಗಳು

ಕ ರಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು

WhatsApp Group Join Now
Telegram Group Join Now
Sharing Is Caring:

Leave a Comment