ಶ್ರೀಮತಿ ಮೋಹಿನಿ ಕುಮಾರಿ ಯು
ಸಹ ಶಿಕ್ಷಕರು
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾಡಬೆಟ್ಟು
ಉಚ್ಚಿಲ ಸೋಮೇಶ್ವರ ಶ್ರೀ ಹರಿಯಪ್ಪ ಹಾಗೂ ಶ್ರೀಮತಿ ಸುಂದರಿ ದಂಪತಿಗಳ ಪುತ್ರಿಯಾಗಿ ದಿನಾಂಕ 21.10.1965 ರಂದು ಜನಿಸಿದ ಇವರು ಶಿಕ್ಷಕ ತರಬೇತಿಯನ್ನು ಕುಮುದಾ ಉಮಾ ಶಂಕರ ಶಿಕ್ಷಕರ ತರಬೇತಿ ಸಂಸ್ಥೆ ಕೊಕ್ಕರ್ಣೆ ಉಡುಪಿ ಇಲ್ಲಿ ಪೂರೈಸಿ, ದಿನಾಂಕ 01.06.1993 ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಂಜನಾಡಿ ಮಂಗಳೂರು ಇಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾಡಬೆಟ್ಟು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ನಾಗಪ್ರಭಾ ಎಂ
ಸಹ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ನಡುಪದವು
ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಶ್ರೀಯುತ ರಾಮಪ್ಪಯ್ಯ ಎಂ ಹಾಗೂ ಶ್ರೀಮತಿ ವಸಂತಿ ದಂಪತಿಗಳ ಪುತ್ರಿಯಾಗಿ ದಿನಾಂಕ 13.10.1965 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹಿ.ಪ್ರಾ.ಶಾಲೆ ಬರೆಂಗಾಯ ಹಾಗೂ ಸ.ಹಿ.ಪ್ರಾ.ಶಾಲೆ ನಿಡ್ಲೆ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ನಿಡ್ಲೆ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಕಾರಿ ಮಹಿಳೆಯರ ಶಿಕ್ಷಕ ತರಬೇತಿ ಸಂಸ್ಥೆ ಉಡುಪಿ ಇಲ್ಲಿ ಪೂರೈಸಿ ದಿನಾಂಕ 16.01.1996 ರಂದು ಸ.ಹಿ.ಪ್ರಾ.ಶಾಲೆ ಸಜೀಪನಡು ಬಂಟ್ವಾಳ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 09.10.2015 ರಲ್ಲಿ ಸ.ಹಿ.ಪ್ರಾ.ಶಾಲೆ ನಡುಪದವು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಜೂಲಿಯಾನ ಮೇಬಲ್ ಸಿಕ್ವೇರಾ
ಪ್ರಭಾರ ಮುಖ್ಯ ಶಿಕ್ಷಕರು
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೆಳುವಾಯಿ ಚರ್ಚ್
ಮೂಡುಬಿದಿರೆ
ದಿನಾಂಕ 18.10.1965 ರಂದು ಜನಿಸಿದ ಇವರು ದಿನಾಂಕ 07.08.1998 ರಂದು ಸೇವೆಗೆ ಸೇರಿದ ಇವರು 27 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಶೋಭಾ ಎಂ
ದ.ಕ.ಜಿ.ಪಂ.ಉ.ಪ್ರಾ.ಶಾಲೆ ಗಾಂಧಿ ನಗರ ಉರ್ವ ಮಂಗಳೂರು ಉತ್ತರ
ದಿನಾಂಕ 21.07.1994 ರಂದು ಸೇವೆಗೆ ಸೇರಿದ ಇವರು ಸುಮಾರು 36 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಅಹಲ್ಯ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಧ್ಯ ಮಂಗಳೂರು ಉತ್ತರ
ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಯೋಗೀಶ್ವರಿ ಪಿ
ಸಹ ಶಿಕ್ಷಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ
ಏನೆಕಲ್ಲು ಗ್ರಾಮದ ಪರಮಲೆ ಮನೆತನದ ಶ್ರೀ ಸುಂದರ ಗೌಡ ಹಾಗೂ ಶ್ರೀಮತಿ ದೇವಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು, ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಏನೆಕಲ್ಲು ಹಾಗೂ ಪ್ರೌಢ ಶಿಕ್ಷಣವನ್ನು ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರ್ವೋದಯ ಶಿಕ್ಷಕರ ತರಬೇತಿ ಸಂಸ್ಥೆ ವಿರಾಜಪೇಟೆ ಇಲ್ಲಿ ಪೂರೈಸಿ ದಿನಾಂಕ 02.08.1994 ರಂದು ಪುತ್ತೂರು ತಾಲೂಕಿನ ಸ.ಹಿ.ಪ್ರಾ.ಶಾಲೆ ಬೇರಿಕೆ ಪಡ್ನೂರು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಸವಣೂರು ಮೊಗರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಪಡ್ಪಿನಂಗಡಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿಗೆ ಹೆಚ್ಚುವರಿಯಾಗಿ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರತ್ನಾವತಿ ಕೆ
ಸಹ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ ಯೇನೆಕಲ್ಲು
ಅರಂತೋಡು ಗ್ರಾಮದ ಕರಿಂಬಿ ಮನೆ ದುಗ್ಗಪ್ಪ ಗೌಡ ಹಾಗೂ ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರಿಯಾಗಿ ದಿನಾಂಕ 30.10.1965 ರಂದು ಜನಿಸಿದ ಇವರು, ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಅರಂತೋಡು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು ಸುಳ್ಯ ಇಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ಸರಸ್ವತಿ ಶಿಕ್ಷಕ ತರಬೇತಿ ಸಂಸ್ಥೆ ಮಡಿಕೇರಿ ಮಡಿಕೇರಿಯಲ್ಲಿ ಪೂರೈಸಿ,ದಿನಾಂಕ 01.12.1998 ರಂದು ಸ.ಕಿ.ಪ್ರಾ.ಶಾಲೆ ಬಾನಡ್ಕ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 09.10.2007 ರಂದು ಸ.ಹಿ.ಪ್ರಾ.ಶಾಲೆ ಯೇನೆಕಲ್ಲು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಗೀತಾ ಕುಮಾರಿ
ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭಕ್ತಕೋಡಿ ಪುತ್ತೂರು ತಾಲೂಕು
ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಪ್ರಮೀಳಾ
ಸಹಶಿಕ್ಷಕಿ
ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಾವು ಪುತ್ತೂರು ತಾಲೂಕು
ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನ ಸುಖಮಯವಾಗಿರಲಿ ದೇವರು ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.